ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ಸಾಗಾಟ: ಮೂರು ಆರೋಪಿತರ ಬಂಧನ
ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ಸಾಗಾಟ ಮಾಡುವಾಗ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲೋಟಗಿ ರಸ್ತೆಯಲ್ಲಿ ನಡೆದಿದೆ.
ಮುಜಾಮಿಲ್ ಮಕಾನದರ, ಶಿರಾಜ್ ತಾಂಬೋಳಿ, ಗಾಲೀಬ್ ಮಿಟ್ಟೆ, ಗಣು ದೇವಕತೆ ಬಂಧಿತ ಆರೋಪಿಗಳು.
ಬಂಧಿತರು 27,260 ಮೌಲ್ಯದ 9 ಕ್ವಿಂಟಾಲ್ 40 ಕೆಜಿ ಪಡಿತರ ಅಕ್ಕಿಯನ್ನು ಒಂದು ಲಕ್ಷ ಮೌಲ್ಯದ ಟಂಟಂ ವಾಹನದಲ್ಲಿ ಸಾಗಾಟ ಮಾಡುವಾಗ ಪೊಲೀಸರು ದಾಳಿಗೈದು ಅಕ್ಕಿ ಹಾಗೂ ವಾಹನವನ್ನು ಜಪ್ತಿಗೈದಿದ್ದಾರೆ. ಈ ಕುರಿತು ಇಂಡಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7