ಬೆಳಗಾವಿ: ಹೆಸ್ಕಾಂ ಮೇಲಿಂದ ಮೇಲೆ ಶಟ್ ಡೌನ್ ಆಗುವ ಕಾರಣದಿಂದ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯೆಯ ಉಂಟಾಗುವುದರಿಂದ ಹಿಡ್ಕಲ್ ನಿಂದ ಬೆಳಗಾವಿ ನಗರಕ್ಕೆ ಸರಬರಾಜು ಆಗುವ ಸುಮಾರು 20 ವರ್ಷಗಳ ಹಳೆಯ ಕಚ್ಚಾ ನೀರಿನ ಕೊಳವೆಯ ಮೇಲೆ ಒತ್ತಡ ಉಂಟಾಗಿ ಅಂಕಲಗಿ ಹತ್ತಿರ ಇರುವ ಸ್ಕೂರ ವಾಲ್ವ್ ಒಡೆದು ಹೋಗಿರುವುದೂರಿಂದ, ಬೆಳಗಾವಿ ನಗರಕ್ಕೆ 2 ದಿನಗಳವರೆಗೆ ನೀರು ಸರಬರಾಜು ಮಾಡುವಲ್ಲಿ ವ್ಯತ್ಯೆಯ ಉಂಟಾಗಿದ್ದು, ಸದರಿ ತುರ್ತು ದುರಸ್ಥಿ ಕಾರ್ಯವು 24 ಘಂಟೆಯಲ್ಲಿ ಪೂರ್ಣಗೊಂಡಿದ್ದು, ಈಗಾಗಲೇ ಬೆಳಗಾವಿ ನಗರಕ್ಕೆ ಎಂದಿನಂತೆ ನೀರು ಸರಬರಾಜು ಪ್ರಾರಂಭವಾಗಿರುತ್ತದೆ.