ತಾಳಿಕೋಟಿ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಜಮಾದಾರ್ ಜುಬೇದಾ ಹುಸೇನ ಬಾಷಾ ಅಧ್ಯಕ್ಷರಾಗಿ ಹಾಗೂ ಕಾಂಗ್ರೆಸ್ ನಲ್ಲೇ ಗುರ್ತಿಸಿಕೊಂಡಿದ್ದ, ಪುರಸಭೆ ಸದಸ್ಯೆ ಕುಂಬಾರ್ ಭಾಗವ್ವ ಅವಮಣ್ಣ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಕೀರ್ತಿ ಚಾಲಕ ತಿಳಿಸಿದ್ದಾರೆ.
ಪಟ್ಟಣದ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಲು ಚುನಾವಣೆ ಆಯೋಗ ಫೆಬ್ರವರಿ 10 ರಂದು ದಿನಾಂಕ ನಿಗದಿ ಪಡಿಸಿತು.
ಸರ್ಕಾರ ಪ್ರಕಟಿಸಿರುವ ಮೀಸಲಾತಿ ಪ್ರಕಾರ ಸಾಮಾನ್ಯ ಮಹಿಳೆ ಅಧ್ಯಕ್ಷ ಸ್ಥಾನ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಸ್ಥಾನವನ್ನು ಮೀಸಲಿರಿಸಿದ್ದು,ಪಟ್ಟಣದ 20 ನೇ ವಾರ್ಡಿನ ಕಾಂಗ್ರೆಸ್ ಬೆಂಬಲಿತ ಪುರಸಭೆ ಸದಸ್ಯೆ ಜಮಾದಾರ್ ಜುಬೇದಾ ಹುಸೇನ ಬಾಷಾ ಅಧ್ಯಕ್ಷರಾಗಿ ಹಾಗೂ 14 ನೇವಾರ್ಡಿನ ಕುಂಬಾರ್ ಭಾಗವ್ವ ಅವಮಣ್ಣ ಉಪಾಧ್ಯಕ್ಷರಾಗಿ ಆವಿರೋಧವಾಗಿ ಆಯ್ಕೆಯಾಗಿದ್ದಾರೆ, ಅಧ್ಯಕ್ಷ ಸ್ಥಾನಕ್ಕೆ 20 ನೇ ವಾರ್ಡಿನ ಕಾಂಗ್ರೆಸ್ ಬೆಂಬಲಿತ್ ಸದಸ್ಯ ಜಮಾದಾರ್ ಜುಬೇದಾ ಹುಸೇನ್ ಭಾಷಾ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 14ನೇ ವಾರ್ಡ ನ್ ಸದಸ್ಯ ಕುಂಬಾರ ಭಾಗವ್ವ ಅವಮಣ್ಣ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಅವಿರೋಧ ಆಯ್ಕೆ ಮಾಡಲಾಯಿತು
23 ಪುರಸಭಾ ಸದಸ್ಯರನ್ನು ಹೊಂದಿರುವ ತಾಳಿಕೋಟಿ ಪಟ್ಟಣ ಪುರಸಭೆಯಲ್ಲಿ ಕಾಂಗ್ರೆಸ್ 03, ಬಿಜೆಪಿ 03, ಜಿಡಿಎಸ್ 1, ಪಕ್ಷೇತರರು 16 ಒಟ್ಟು 23 ಮಂದಿ ಸದಸ್ಯರು ಇದ್ದಾರೆ. ಇದರಲ್ಲಿ 17 ಸದಸ್ಯರು ಹಾಜರಿದ್ದರು,6 ಸದಸ್ಯರು ಗೈರಾಗಿದ್ದರು. ತಹಶೀಲ್ದಾರ್ ಕೀರ್ತಿ ಚಾಲಕ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಸದಸ್ಯರೊಂದಿಗೆ ಪುರಸಭೆ ಮುಂಭಾಗದಲ್ಲಿ ಶಾಸಕರು ಸಿ ಎಸ್ ನಾಡಗೌಡ ಸಂಭ್ರಮಿಸಿದರು.