ಹುಕ್ಕೇರಿ : ಗಡಿಭಾಗದಲ್ಲಿ ಕನ್ನಡ ಕೇಲಸ ಮಾಡುವವರಿಗೆ ಗೌರವಿಸಿ – ಭಾವಿ ಸಮ್ಮೆಳನಾದ್ಯಕ್ಷ ಚಂದ್ರಶೇಖರ ಶ್ರೀಗಳು
ಗಡಿಭಾಗದಲ್ಲಿ ಕನ್ನಡ ಕೇಲಸವಾಗಬೇಕು ಮತ್ತು ಗಡಿಭಾಗದಲ್ಲಿ ಕನ್ನಡ ಉಳಿಸಿದವರಿಗೆ ಗೌರವ ಲಭಿಸಬೇಕು ಎಂದು ಭಾವಿ ಹುಕ್ಕೇರಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನ ಅದ್ಯಕ್ಷರಾದ ಚಂದ್ರಶೇಖರ ಮಹಾಸ್ವಾಮಿಗಳು ಅಭಿಪ್ರಾಯ ಪಟ್ಟರು.
ಹುಕ್ಕೇರಿ ತಾಲೂಕಿನ ಯಮಕನಮರ್ಡಿ ನಗರದಲ್ಲಿ ಫೆಬ್ರುವರಿ 23 ರಂದು ಜರಗಲಿರುವ ಹುಕ್ಕೇರಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ 12 ನೇ ಸಮ್ಮೇಳನದ ಸರ್ವಾದ್ಯಕ್ಷರಾಗಿ ಆಯ್ಕೆ ಯಾದ ಹಿನ್ನೆಲೆಯಲ್ಲಿ ಯಮಕನಮರ್ಡಿ ಯುವ ಮುಖಂಡ ಕಿರಣ ರಜಪೂತ ನೇತೃತ್ವದಲ್ಲಿ ಕ ಸಾ ಪ ಅದ್ಯಕ್ಷ ಪ್ರಕಾಶ ಅವಲಕ್ಕಿ ಮತ್ತು ಪದಾಧಿಕಾರಿಗಳು ಶ್ರೀಗಳಿಗೆ ಅವ್ಹಾನ ಪತ್ರಿಕೆ ನೀಡಿ ಆಮಂತ್ರಿಸಿದರು.
ಆಮಂತ್ರಣ ಸ್ವೀಕರಿಸಿ ಮಾತನಾಡಿದ ಹುಕ್ಕೇರಿಶ ಹುಕ್ಕೇರಿ ತಾಲೂಕು ಅನ್ಯ ರಾಜ್ಯಗಳಿಗೆ ಹೊಂದಿ ಕೊಂಡಿರುವದರಿಂದ ಗಡಿಭಾಗದಲ್ಲಿ ಕನ್ನಡ ಕೇಲಸವಾಗಬೇಕು ಮತ್ತು ಅವರಿಗೆ ಗೌರವಿಸುವ ಕಾರ್ಯ ನಮ್ಮದಾಗಬೇಕು ಸಚಿವ ಸತೀಶ ಜಾರಕಿಹೊಳಿ ಕ್ಷೇತ್ರದಲ್ಲಿ ಸಂಚರಿಸುವಾಗ ಗಡಿ ಗ್ರಾಮಗಳಲ್ಲಿಯ ಜನರು ಮರಾಠಿ ಭಾಷೆಯಲ್ಲಿ ಮನವಿ ನೀಡಿದಾಗ ಸಚಿವರು ನಯವಾಗಿ ನೀನು ಕರ್ನಾಟಕ ಸರಕಾರಕ್ಕೆ ಮನವಿ ನೀಡಬೇಕಾದರೆ ಕನ್ನಡದಲ್ಲಿ ಮನವಿ ನೀಡಬೇಕು ಎಂದು ಹೇಳಿದ್ದಾರೆ, ಅಂತವರ ಕ್ಷೇತ್ರದಲ್ಲಿ ಕನ್ನಡ ಹಬ್ಬ ನಡೆಯುತ್ತಿರುವದು ಸಂತೋಷ ಎಂದರು.