Breaking News

ವಿದ್ಯುತ್​ ದೀಪಗಳಿಂದ ಅಲಂಕಾರಗೊಂಡ ಸುತ್ತ-ಮುತ್ತ ಲೈಟಿಂಗ್ಸ್:

Spread the love

ಬೆಳಗಾವಿ: ನೂರು ವರ್ಷಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮುಖ್ಯ ದ್ವಾರಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.‌ ಈಗ ಶತಮಾನೋತ್ಸವಕ್ಕೆ ಬೆಳಕಿನ‌ ಸ್ವರ್ಗವೇ ಧರೆಗೆ ಇಳಿದಿದೆ.‌ ಈ ದೃಶ್ಯ ವೈಭವ ಕಣ್ತುಂಬಿಕೊಂಡು ಜನ‌ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

1924 ಡಿ.26, 27ರಂದು ಬೆಳಗಾವಿ ಟಿಳಕವಾಡಿಯಲ್ಲಿ ಮಹಾತ್ಮ ಗಾಂಧೀಜಿ‌ ಅಧ್ಯಕ್ಷತೆಯಲ್ಲಿ 39ನೇ ಕಾಂಗ್ರೆಸ್ ಅಧಿವೇಶನ‌ ನಡೆದಿತ್ತು.‌ ಆ ವೇಳೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ವಿಜಯನಗರ ಸಾಮ್ರಾಜ್ಯ ಕುರುಹುವಿಗಾಗಿ “ವಿಜಯನಗರ” ಎಂದು ನಾಮಕರಣ ಮಾಡಲಾಗಿತ್ತು.‌ ಅಲ್ಲೇ ಒಂದು ಬಾವಿಯನ್ನು ತೋಡಿ ಅದಕ್ಕೆ “ಪಂಪಾ ಸರೋವರ” ಎಂದು ಕರೆಯಲಾಗಿತ್ತು. ಇನ್ನು ವಿರೂಪಾಕ್ಷ ಗೋಪುರ ನಿರ್ಮಿಸಲಾಗಿತ್ತು. ಈ ಗೋಪುರವನ್ನು ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿತ್ತು. ಈಗ ಅದನ್ನೇ ಪ್ರೇರಣೆಯಾಗಿಟ್ಟುಕೊಂಡ ರಾಜ್ಯ ಸರ್ಕಾರ, ಇಡೀ ಬೆಳಗಾವಿಯನ್ನು ಮಿರ ಮಿರ ಮಿಂಚುವಂತೆ ಮಾಡಿದೆ.

ಬೆಳಗಾವಿ ನಗರದ 104 ಕಿ.ಮೀ., 90 ವೃತ್ತಗಳಲ್ಲಿ ಸುಮಾರು 2 ಲಕ್ಷ ಎಲ್ಇಡಿ ಬಲ್ಬ್​ಗಳು ಸೇರಿ ಅತ್ಯಾಧುನಿಕ ಆಕರ್ಷಕ ದೀಪಗಳಿಂದ ಅಲಂಕಾರಗೊಳಿಸಲಾಗಿದೆ. ಬರೀ ದೀಪಾಲಂಕಾರಕ್ಕೆ ಅಂದಾಜು 8 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ವ್ಯಯಿಸಿದೆ. ಬುಧವಾರ ಮಧ್ಯರಾತ್ರಿವರೆಗೂ ಜನ ಈ‌‌ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಂಡರು.

ಚಿಕ್ಕ ಮಕ್ಕಳು, ವೃದ್ಧರು ಆದಿಯಾಗಿ ಕುಟುಂಬ ಸಮೇತರಾಗಿ ಇಡೀ ಕುಂದಾನಗರಿಯನ್ನು ಪ್ರದಕ್ಷಿಣೆ ಹಾಕಿದರು. ರಾಣಿ ಚನ್ನಮ್ಮ ವೃತ್ತದಲ್ಲಿ ಮಧ್ಯರಾತ್ರಿ 12 ಗಂಟೆವರೆಗೂ ಜನ ಜಮಾಯಿಸಿದ್ದರು. ಬೆಳಕಿನ ಚಿತ್ತಾರದಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.


Spread the love

About Laxminews 24x7

Check Also

ಶಾಸಕ ಭರಮಗೌಡ (ರಾಜು) ಕಾಗೆಗೆ ಒಲಿದು ಬಂದ ಅದೃಷ್ಟ

Spread the love  ಸಚಿವ ಸತೀಶ್ ಜಾರಕಿಹೊಳಿಯವರ ಮಧ್ಯಸ್ಥಿಕೆಯಲ್ಲಿ ನಡೆದ ಕಾಗವಾಡ ಕ್ಷೇತ್ರದ ಅವಿರೋಧ ಆಯ್ಕೆ- ಶಾಸಕ ಬಾಲಚಂದ್ರ ಜಾರಕಿಹೊಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ