Breaking News

ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡ ದರ್ಶನ್

Spread the love

ಮೈಸೂರು: ನಟ ದರ್ಶನ್ ಅವರಿಂದು ನಗರದ ಖಾಸಗಿ ಆಸ್ಪತ್ರೆಗೆ ಆಗಮಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವಾಪಸ್‌ ತಮ್ಮ ತೋಟದ ಮನೆಗೆ ಮರಳಿದರು. ಕಾಲು ನೋವಿನಿಂದಾಗಿ ಕಷ್ಟಪಟ್ಟು ದರ್ಶನ್ ನಡೆಯುತ್ತಿರುವ ದೃಶ್ಯ ಕಂಡುಬಂತು.

ದರ್ಶನ್ ಆಗಮಿಸುವ ಮಾಹಿತಿ ತಿಳಿದು ಆಸ್ಪತ್ರೆ ಎದುರು ಜಮಾಯಿಸಿದ ಅಭಿಮಾನಿಗಳು, ‘ಡಿ ಬಾಸ್‌, ಡಿ ಬಾಸ್‌’ ಎಂದು ಘೋಷಣೆ ಕೂಗಿದರು.ಚಾಮುಂಡೇಶ್ವರಿ ತಾಯಿಗೆ ಹರಕೆ ತೀರಿಸಿದ ಪತ್ನಿ: ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರು ನಿನ್ನೆ (ಸೋಮವಾರ) ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಅಧಿದೇವತೆಗೆ ವಿಶೇಷ ಪೂಜೆ ಸಲ್ಲಿಸಿ, ಹರಕೆ ತೀರಿಸಿದರು. ದರ್ಶನ್‌ ತಾಯಿ ಮೀನಾ ತೂಗುದೀಪ, ಸಹೋದರ ದಿನಕರ್‌ ಜೊತೆಗಿದ್ದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ದರ್ಶನ್‌, ನ್ಯಾಯಾಲಯದ ಅನುಮತಿ ಪಡೆದು ಜನವರಿ 5ರವರೆಗೆ ಮೈಸೂರಿಗೆ ಆಗಮಿಸಿದ್ದಾರೆ. ತಮ್ಮ ಒಡೆತನದ ತೂಗುದೀಪ ಫಾರಂ ಹೌಸ್​ನಲ್ಲಿ ಅವರು ವಾಸ್ತವ್ಯ ಹೂಡಿದ್ದಾರೆ.


Spread the love

About Laxminews 24x7

Check Also

ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು!

Spread the love ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು! ಯಮಕನಮರಡಿ ವಿಧಾನಸಭಾ ಕ್ಷೇತ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ