Breaking News

ಇಂದು ಡಾ.ಬಿ ಆರ್ ಅಂಬೇಡ್ಕರ್ ಅವರ ಪುಣ್ಯತಿಥಿ

Spread the love

ಇಂದು ಡಾ.ಬಿ ಆರ್ ಅಂಬೇಡ್ಕರ್ ಅವರ ಪುಣ್ಯತಿಥಿ

ಡಾ. ಬಿ ಆರ್ ಅಂಬೇಡ್ಕರ್ ಅವರ ಚಿಂತನೆಗಳಿಂದ ನಮಗೆಲ್ಲರಿಗೂ ಕೂಡ ಸ್ಫೂರ್ತಿಯ ಸೆಲೆ, ಆದರ್ಶ ವ್ಯಕ್ತಿ. ಅಸಮಾನತೆ ವಿರುದ್ಧ ಗಟ್ಟಿ ಧ್ವನಿಯೆತ್ತಿದ ಮಾನವತಾವಾದಿ. ನ್ಯಾಯ ಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ಸಮಾಜ ಸುಧಾಕರಾಗಿ ಈ ಸಮಾಜಕ್ಕೆ ನೀಡಿದ ಕೊಡುಗಗಳು ಅಗಾಧವಾದದ್ದು. ಡಿಸೆಂಬರ್‌ 6 ಸಂವಿಧಾನಶಿಲ್ಪಿ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ 68ನೇ ಪುಣ್ಯ ತಿಥಿ. ಈ ದಿನವನ್ನು ‘ಮಹಾಪರಿನಿರ್ವಾಣ ದಿನ’ವನ್ನಾಗಿ ಆಚರಿಸಲಾಗುತ್ತಿದ್ದು, ಈ ದಿನದ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.ಭಾರತ ಕಂಡ ಮಹಾನ್‌ ವ್ಯಕ್ತಿ ಡಾ. ಬಿ.ಆರ್‌. ಅಂಬೇಡ್ಕರ್‌. ಯುವ ಸಮುದಾಯಕ್ಕೆ ತನ್ನ ಚಿಂತನೆಗಳಿಂದಲೇ ಸ್ಫೂರ್ತಿ ಹಾಗೂ ಆದರ್ಶ ವ್ಯಕ್ತಿಯೆನಿಸಿಕೊಂಡಿದ್ದಾರೆ. ಸಮಾಜ ಸುಧಾರಕರಾಗಿದ್ದು, ದಲಿತ ಬೌದ್ಧ ಚಳುವಳಿಯನ್ನು ಮುನ್ನಡೆಸುವ ಮೂಲಕ ಪ್ರೇರಣೆಯಾದ ವ್ಯಕ್ತಿಯಾಗಿದ್ದಾರೆ. ಅದಲ್ಲದೇ, ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರು ದಲಿತ ಕುಟುಂದಲ್ಲಿ ಜನಿಸಿದ್ದರಿಂದ ಅಸ್ಪೃಶ್ಯತೆ ನೋವು ಮಾತ್ರ ಇವರನ್ನು ಬಿಡಲಿಲ್ಲ. ಹೀಗಾಗಿ ಅಂಬೇಡ್ಕರ್ ಅವರು ಮಹಿಳೆಯರು ಹಕ್ಕುಗಳು, ಶೋಷಿತ ವರ್ಗಗಳ ಹಕ್ಕಿಗಾಗಿ ಹೋರಾಡಿದ ಮಹಾನ್ ವ್ಯಕ್ತಿ. ಡಿಸೆಂಬರ್ 6 ರಂದು ಅಂಬೇಡ್ಕರ್ ಅವರ ಪುಣ್ಯ ತಿಥಿಯಾಗಿದ್ದು, ಈ ದಿನವನ್ನು ಮಹಾಪರಿನಿರ್ವಾಣ ದಿನ’ವನ್ನಾಗಿ ಆಚರಿಸಲಾಗುತ್ತದೆ.

ಮಹಾಪರಿನಿರ್ವಾಣ ದಿನದ ಆಚರಣೆಯ ಹಿನ್ನಲೆಯೇನು?

ಡಾ. ಬಿ ಆರ್ ಅಂಬೇಡ್ಕರ್ ಅವರು ಸರಿಸುಮಾರು ಒಂದು ವರ್ಷಗಳ ಕಾಲ ಬೌದ್ಧ ಧರ್ಮವನ್ನು ಅಧ್ಯಯನ ಮಾಡಿದ ನಂತರದಲ್ಲಿ 1956ರ ಅಕ್ಟೋಬರ್‌ 14ರಂದು 5,00,000 ಬೆಂಬಲಿಗರೊಂದಿಗೆ ಅಂಬೇಡ್ಕರ್‌ ಬೌದ್ಧಧರ್ಮಕ್ಕೆ ಮತಾಂತರಗೊಂಡರು. ಡಾ. ಬಿ ಆರ್ ಅಂಬೇಡ್ಕರ್‌ ಅವರು ತಮ್ಮ ́ಬುದ್ಧ ಮತ್ತು ಅವರ ಧಮ್ಮ’ ಗ್ರಂಥವನ್ನು ಪೂರ್ಣಗೊಳಿಸಿದ ಕೆಲವೇ ಕೆಲವು ದಿನಗಳಲ್ಲಿ ದೆಹಲಿಯಲ್ಲಿ ತಮ್ಮ ನಿವಾಸದಲ್ಲಿ ಡಿಸೆಂಬರ್‌ 6, 1956 ರಲ್ಲಿ ಮರಣ ಹೊಂದಿದರು. ಆದರೆ, ಅಂಬೇಡ್ಕರ್‌ ಅವರ ಪಾರ್ಥೀವ ಶರೀರವನ್ನು ಮುಂಬೈನ ದಾದರ್‌ ಚೌಪಾಟಿಯಲ್ಲಿ ಬೌದ್ಧ ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು.

ಆದರೆ ಅನುಯಾಯಿಗಳು, ಅಂಬೇಡ್ಕರ್ ಅವರನ್ನು ಭಗವಾನ್ ಬುದ್ಧನಂತೆಯೇ ಪ್ರಭಾವಶಾಲಿಯಾದ ವ್ಯಕ್ತಿ. ಶುದ್ಧ ಮನಸ್ಸಿನ ಹಾಗೂ ದೇವರಿಂದ ಆಶೀರ್ವಾದ ಹೊಂದಿದವರು. ಸಮಾಜದಲ್ಲಿನ ಅವರ ಮಹಾನ್ ಕಾರ್ಯಗಳಿಂದಾಗಿ ಅವರಿಗೆ ಯಾವುದೇ ಕರ್ಮದ ಋಣ ಉಳಿದಿಲ್ಲ ಎಂದು ನಂಬಿದ್ದ ಕಾರಣ ಅಂಬೇಡ್ಕರ್ ಅವರ ಪುಣ್ಯತಿಥಿಯನ್ನು ಮಹಾಪರಿನಿರ್ವಾಣ ದಿನ ಅಥವಾ ದಿವಸ್ ಎಂದು ಕರೆದರು. ಅಂದಿನಿಂದ ಡಾ. ಬಿ ಆರ್ ಅಂಬೇಡ್ಕರ್ ಅವರ ಪುಣ್ಯ ತಿಥಿಯನ್ನು ಮಹಾಪರಿನಿರ್ವಾಣ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನದಂದು ದೇಶದಾದಂತ್ಯ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಭಾರತೀಯ ಸಂವಿಧಾನ ಪಿತಾಮಹ ಅಂಬೇಡ್ಕರ್‌ ಅವರಿಗೆ ಗೌರವ ಸಲ್ಲಿಸಲಾಗುತ್ತದೆ.


Spread the love

About Laxminews 24x7

Check Also

ಎಲ್ಲಾ ಶಾಸಕರು ಪಂಚಮಸಾಲಿ ‌ಮೀಸಲಾತಿ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಇಲ್ಲವಾದ್ರೆ ಜನರಿಂದ ನೀವು ದೂರವಾಗು ಕಾಲ ಬರಲಿದೆ.

Spread the love2A ಮೀಸಲಾಗಿಗೆ ಆಗ್ರಹಿಸಿ ಪಂಚಮಸಾಲಿ ‌ಶ್ರೀ‌ಹೋರಾಟಕ್ಕೆ ಕರೆ. ಡಿಸೆಂಬರ್ ‌10ರಂದು ಬೆಳಗಾವಿ ನಗರಕ್ಕೆ ಟ್ರ್ಯಾಕ್ಟರ್, ಕ್ರೂಸರ್ ನಿಷೇಧ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ