ಬೆಂಗಳೂರು: ರಾಜ್ಯದ 3 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಪ್ರಚಾರದಲ್ಲಿ ರಾಜಕೀಯ ಪಕ್ಷಗಳ ಮೇಲಾಟ ಒಂದಡೆಯಾಗಿದ್ದರೆ, ಈ 3 ಕ್ಷೇತ್ರಗಳಲ್ಲಿ ಚುನಾವಣೆ ಅಕ್ರಮಗಳ ಭರಾಟೆಯೂ ಜೋರಾಗಿದೆ.
ಚುನಾವಣೆ ಘೋಷಣೆಯಾದ ದಿನದಿಂದ ಇಲ್ಲಿವರೆಗೆ 3 ಕ್ಷೇತ್ರಗಳಲ್ಲಿ ನಗದು ಹಣ, ಅಕ್ರಮ ಮದ್ಯ, ಉಚಿತ ಉಡುಗೊರೆ ಸೇರಿದಂತೆ 33.33 ಕೋಟಿ ರೂ.
ಮೊತ್ತದ ಚುನಾವಣೆ ಅಕ್ರಮಗಳನ್ನು ಜಪ್ತಿ ಮಾಡಲಾಗಿದ್ದು, ಈ ಅಕ್ರಮಗಳಲ್ಲಿ ಚನ್ನಪಟ್ಟಣದ್ದೇ ಸಿಂಹಪಾಲು ಇದ್ದು, 30 ಕೋಟಿ ರೂ.ಗೂ ಅಧಿಕ ಅಕ್ರಮಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಇದರಲ್ಲಿ 29 ಕೋಟಿ ರೂ. ಮೌಲ್ಯದ ಅಕ್ರಮ ಮದ್ಯವೇ ಇದೆ.
Laxmi News 24×7