ಬೆಂಗಳೂರು : ನಾಳೆ ಈ ವರ್ಷದ ಮೊದಲ ಸೂರ್ಯ ಗ್ರಹಣಕ್ಕೆ ಸಾಕ್ಷಿಯಾಗಲಿದೆ ನಭೋಮಂಡಲ. 18 ವರ್ಷದ ಬಳಿಕ ಈ ಗ್ರಹಣ ಸಂಭವಿಸುತ್ತಿದ್ದು, ಚೂಡಾಮಣಿ ಸೂರ್ಯ ಗ್ರಹಣ ಎಂದು ಕರೆಯುತ್ತಾರೆ. ಗ್ರಹಣಕ್ಕೆ ರಾಜ್ಯದ ಬೇರೆ ಬೇರೆ ದೇವಸ್ಥಾನಗಳು ಹೇಗೆ ತಯಾರಿ ನಡೆಸಿವೆ ಎಂಬುದರ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..!
ಮಣ್ಣೆತ್ತಿನ ಅಮಾವಾಸ್ಯೆ ದಿನ ರಾಹುಗ್ರಸ್ಥ ಸೂರ್ಯ ಗ್ರಹಣ ಸಂಭವಿಸಲಿದೆ. ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗ್ರಹಣ ಸಂಬಂಧ ವಿಶೇಷ ಪೂಜೆಗಳನ್ನು ಹಮ್ಮಿಕೊಂಡಿಲ್ಲ. ಕುದ್ರೋಳಿ ಗೋಕರ್ಣನಾಥ ದೇಗುಲದಲ್ಲಿ ವಿಶೇಷ ಪೂಜೆ ಇಟ್ಟುಕೊಳ್ಳಲಾಗಿದೆ. ಭಕ್ತರಿಗೆ ದರ್ಶನಕ್ಕೂ ಅವಕಾಶ ಮಾಡಿಕೊಡಲಾಗುತ್ತದೆ.
ನಾಡದೇವತೆ ಮೈಸೂರಿನ ಚಾಮುಂಡೇಶ್ವರಿ ದೇಗುಲದಲ್ಲಿಯೂ ವಿಶೇಷ ಪೂಜೆ ಇರುವುದಿಲ್ಲ. ಗ್ರಹಣ ಕಾಲದಲ್ಲಿ ಬಂದ್ ಆಗಿರುತ್ತದೆ. ಗ್ರಹಣ ಮೋಕ್ಷದ ನಂತರ ತೆರೆಯಲಾಗುತ್ತದೆ.
ಬೆಂಗಳೂರಿನ ಬುಲ್ ಟೆಂಪಲ್‌ನಲ್ಲಿ ಗ್ರಹಣದ ಬಳಿಕ ರುದ್ರಾಭಿಷೇಕ ನಡೆಯಲಿದೆ. ಸಂಜೆ 5 ಗಂಟೆ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.
ಉತ್ತರ ಭಾರತದ ಕಡೆ ಸೂರ್ಯ ಗ್ರಹಣ ಎಫೆಕ್ಟ್ ಹೆಚ್ಚಾಗಿದೆ ಎಂದು ಗವಿ ಗಂಗಾಧರೇಶ್ವರ ದೇವಸ್ಥಾನದ ಅರ್ಚಕ ಸೋಮಸುಂದರ್ ದೀಕ್ಷಿತ್ ಹೇಳಿದ್ದಾರೆ. ಗ್ರಹಣ ಪ್ರಯುಕ್ತ ವಿಶೇಷ ಪೂಜೆ ಇಟ್ಟುಕೊಳ್ಳಲಾಗಿದೆ
Laxmi News 24×7