Breaking News
Home / Uncategorized / ಅರ್ಧ ಹುಬ್ಬಳ್ಳಿಗೇ ಹಬ್ಬಿದ ಕೊರೋನಾ: ಜನತೆಯಲ್ಲಿ ಹೆಚ್ಚಿದ ಆತಂಕ

ಅರ್ಧ ಹುಬ್ಬಳ್ಳಿಗೇ ಹಬ್ಬಿದ ಕೊರೋನಾ: ಜನತೆಯಲ್ಲಿ ಹೆಚ್ಚಿದ ಆತಂಕ

Spread the love

ಹುಬ್ಬಳ್ಳಿ : ಧಾರವಾಡ ಜಿಲ್ಲೆಯಲ್ಲಿ ಶುಕ್ರವಾರ ದೃಢಪಟ್ಟ 19 ಕೊರೋನಾ ಪ್ರಕರಣಗಳ ಪೈಕಿ 13 ಸೋಂಕಿತರು ಹುಬ್ಬಳ್ಳಿ ಮೂಲದವರು. ಇದರಿಂದಾಗಿ ಅರ್ಧ ಹುಬ್ಬಳ್ಳಿಗೇ ಕೊರೋನಾ ಹಬ್ಬಿದಂತಾಗಿದ್ದು, ವಾಣಿಜ್ಯನಗರಿಯನ್ನು ಅಕ್ಷರಶಃ ತಲ್ಲಣಗೊಳಿಸಿದೆ.

19 ಜನರಲ್ಲಿ 6 ಜನ ಮಾತ್ರ ಕ್ವಾರಂಟೈನ್‌ನಲ್ಲಿದ್ದವರು. 13 ಜನ ಹೋಂ ಕ್ವಾರಂಟೈನ್‌ ಅಥವಾ ಬಿಂದಾಸ್‌ ಆಗಿ ಓಡಾಡಿಕೊಂಡಿದ್ದವರಿಗೆ ಕೊರೋನಾ ದೃಢಪಟ್ಟಿದೆ. ಇದರಲ್ಲಿ ನಾಲ್ಕು ಜನರಿಗೆ ಕೆಮ್ಮು, ನೆಗಡಿ, ತೀವ್ರ ಜ್ವರದ ಕಾರಣದಿಂದಾಗಿ ಪಾಸಿಟಿವ್‌ ಪತ್ತೆಯಾಗಿದೆ. ಇವರಾರ‍ಯರು ಕ್ವಾರಂಟೈನ್‌ನಲ್ಲಿ ಇರಲಿಲ್ಲ. ಒಬ್ಬರು ಕೃಷಿ ಕಾರ್ಮಿಕರ ನಗರದ ನಿವಾಸಿಯಾದರೆ, ಮತ್ತೊಬ್ಬರು ಸಾಯಿನಗರ, ಮಗದೊಬ್ಬರು ನೇಕಾರನಗರ, ನಾಲ್ಕನೆಯವರು ಉಣಕಲ್‌ ಪ್ರದೇಶಗಳಿಗೆ ಸೇರಿದವರು. ಇವರೆಲ್ಲರೂ ಪ್ರತ್ಯೇಕ ಬಡಾವಣೆಗಳ ನಿವಾಸಿಗಳಾಗಿದ್ದು, ಹೀಗಾಗಿ ಸಹಜವಾಗಿ ಇವರೊಂದಿಗೆ ಸಾಕಷ್ಟುಜನ ಸಂಪರ್ಕ ಹೊಂದಿರುತ್ತಾರೆ.
ಹುಬ್ಬಳ್ಳಿ: ಕೊರೋನಾ ವಾರಿಯರ್‌ ಉಪಾಹಾರದಲ್ಲಿ ಮತ್ತೆ ಹುಳು, ಪೌರಕಾರ್ಮಿಕರ ಆಕ್ರೋಶ

ಇನ್ನು ಮಹಾರಾಷ್ಟ್ರದಿಂದ ಬಂದಿದ್ದ ತಾಯಿ- ಮಗಳು ರವಿನಗರದಲ್ಲಿ ಹೋಂ ಕ್ವಾರಂಟೈನ್‌ನಲ್ಲಿ ಇದ್ದರು. ಇವರು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಸಹ ಇರಲಿಲ್ಲ. ಕೋಲಾರ ಹಾಗೂ ಬೆಂಗಳೂರು ಪ್ರಯಾಣದ ಹಿನ್ನೆಲೆಯ ಒಬ್ಬರು, ತಮಿಳುನಾಡು ಪ್ರಯಾಣದ ಹಿನ್ನೆಲೆಯ ಇಬ್ಬರಿಗೆ ಕೊರೋನಾ ದೃಢಪಟ್ಟಿದೆ. ಈ ಇಬ್ಬರು ಗಣೇಶಪೇಟೆ ಕರ್ವೆ ಪ್ಲಾಜಾ ನಿವಾಸಿಗಳು. ಇವರು ಹೋಂ ಕ್ವಾರಂಟೈನನಲ್ಲಿ ಇದ್ದರು. ಚಿತ್ರದುರ್ಗ ಜಿಲ್ಲೆಯ ಪ್ರಯಾಣದ ಹಿನ್ನೆಲೆಯುಳ್ಳ ನವನಗರದ ನಿವಾಸಿಯೊಬ್ಬರಿಗೆ ಕೊರೋನಾ ದೃಢಪಟ್ಟಿದೆ. ಈ ಎಲ್ಲರೂ ಹೋಂ ಕ್ವಾರಂಟೈನ್‌ನಲ್ಲಿದ್ದವರು. ಇನ್ನೂ ಭೈರಿದೇವರಕೊಪ್ಪದ 6 ತಿಂಗಳ ಬಾಲಕಿಗೆ ಬಂದಿದೆ. ಈ ಮಗುವಿನ ತಾಯಿಗೆ ಇತ್ತೀಚಿಗೆ ದೃಢಪಟ್ಟಿತ್ತು. ಇದೀಗ ಮಗುವಿಗೆ ಕಂಡು ಬಂದಿದೆ.

ಜಿಲ್ಲಾಡಳಿತ ವೈಫಲ್ಯ:

ಇವತ್ತು ದೃಢಪಟ್ಟವರ ಪೈಕಿ ಬಹುತೇಕರು ಹೋಂ ಕ್ವಾರಂಟೈನ್‌ನಲ್ಲೇ ಇದ್ದವರು. ಧಾರವಾಡ ಜಿಲ್ಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನನಲ್ಲೇ ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ಸಾಂಸ್ಥಿಕ ಕ್ವಾರಂಟೈನ್‌ನಿಂದಲೇ ಸಾಕಷ್ಟುಜನ ಪರಾರಿಯಾಗಿ ಹೊರಗೆಲ್ಲ ಸುತ್ತಾಡಿದ ಪ್ರಕರಣಗಳು ಸಾಕಷ್ಟಿವೆ. ಇನ್ನೂ ಹೋಂ ಕ್ವಾರಂಟೈನ್‌ನಲ್ಲಿ ಹೇಳುವವರು ಇರಲ್ಲ ಕೇಳುವವರಿರಲ್ಲ. ಸಾಕಷ್ಟು ಜನರೊಂದಿಗೆ ಸಂಪರ್ಕ ಹೊಂದಿರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಕೊರೋನಾ ಪ್ರಕರಣಗಳು ಇನ್ನಷ್ಟುಜಾಸ್ತಿಯಾಗುವ ಸಾಧ್ಯತೆ ಇದೆ.

ಇನ್ನೂ ಇವೆಲ್ಲ ಪ್ರಕರಣಗಳಿಂದಾಗಿ ನೇಕಾರನಗರ, ಸಾಯಿನಗರ, ಉಣಕಲ್‌, ಕೃಷಿ ಕಾರ್ಮಿಕರ ನಗರ, ಆನಂದನಗರ, ರವಿನಗರ, ಗಣೇಶಪೇಟೆ, ನವನಗರ, ಭೈರಿದೇವರಕೊಪ್ಪ ಹೀಗೆ ಬರೋಬ್ಬರಿ 9ಕ್ಕೂ ಹೆಚ್ಚು ಪ್ರದೇಶಗಳು ಸೀಲ್‌ಡೌನ್‌ ಆಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಅರ್ಧ ಹುಬ್ಬಳ್ಳಿಗೇ ಕೊರೋನಾ ಹಬ್ಬಿದಂತಾಗಿದೆ. ಇದು ವಾಣಿಜ್ಯನಗರಿಯನ್ನು ಅಕ್ಷರಶಃ ತಲ್ಲಣಗೊಳಿಸಿದಂತಾಗಿದೆ.

ಇನ್ನಾದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್‌ ಧರಿಸುವಿಕೆ ಕಡ್ಡಾಯವಾಗಬೇಕಿದೆ. ಸಾರ್ವಜನಿಕರು ಕಾಯಿಲೆಯ ಗಂಭೀರತೆ ಅರಿತುಕೊಳ್ಳಬೇಕು. ಜಿಲ್ಲಾಡಳಿತವೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂಬುದು ನಾಗರಿಕರ ಆಗ್ರಹ.


Spread the love

About Laxminews 24x7

Check Also

ಪಂಚಾಯತ್‌ಗಳ ಬಲವರ್ಧನೆಗೆ ರಾಜ್ಯ ಸರಕಾರ ಚಿತ್ತ ಹರಿಸಲಿ

Spread the love ರಾಜ್ಯದಲ್ಲಿ ಜುಲೈ ಒಂದರಿಂದ ಅನ್ವಯವಾಗುವಂತೆ ಜನನ ಮತ್ತು ಮರಣ ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ಗ್ರಾಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ