ಅವಳಿ ಮಕ್ಕಳನ್ನು ಹೊಂದುವುದು ಅಪರೂಪ. ಆದರೆ ಭಾರತದ ಹಳ್ಳಿಯೊಂದರಲ್ಲಿ ಅವಳಿ ಮಕ್ಕಳ ಜನನ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿರುವ ಕೊಡಿನ್ಹಿ ಗ್ರಾಮವನ್ನು ಅವಳಿಗಳ ಗ್ರಾಮ ಎಂದೂ ಕರೆಯುತ್ತಾರೆ.
ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿ 1000 ಮಕ್ಕಳಲ್ಲಿ ಕೇವಲ 9 ಅವಳಿ ಮಕ್ಕಳು ಜನಿಸುತ್ತಾರೆ.
ಆದರೆ ಕೇರಳದ ಈ ಹಳ್ಳಿಯಲ್ಲಿ ಪ್ರತಿಯೊಂದು ಮನೆಯಲ್ಲೂ ಅವಳಿ ಮಕ್ಕಳಿದ್ದಾರೆ. 2008ರ ಮಾಹಿತಿ ಪ್ರಕಾರ ಎರಡು ಸಾವಿರ ಜನಸಂಖ್ಯೆಯ ಈ ಗ್ರಾಮದಲ್ಲಿ ಅವಳಿ ಮಕ್ಕಳ ಸಂಖ್ಯೆ 400.
ವಿಜ್ಞಾನಿಗಳಿಂದಲೂ ಬಿಡಿಸಲಾಗದ ರಹಸ್ಯ!
ಕೋಡಿನ್ಹಿ ಗ್ರಾಮದಲ್ಲಿ ಅವಳಿ ಮಕ್ಕಳ ಸಂಖ್ಯೆ ಹೆಚ್ಚಿರುವುದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡಲು ವಿಜ್ಞಾನಿಗಳಿಂದ ಸಹ ಸಾಧ್ಯವಾಗಿಲ್ಲ.
ಇದರಿಂದಾಗಿ ಈ ಗ್ರಾಮ ನಿಗೂಢವಾಗಿಯೇ ಉಳಿದಿದೆ. ಈ ಅವಳಿ ಗ್ರಾಮದಲ್ಲಿ ಟ್ವಿನ್ಸ್ ಅಂಡ್ ಕಿನ್ ಅಸೋಸಿಯೇಷನ್ ಕೂಡ ರಚನೆಯಾಗಿದ್ದು, ಅವಳಿ ಮಕ್ಕಳಿಗೆ ಆರ್ಥಿಕ ನೆರವು ನೀಡುತ್ತದೆ.
ಕೇರಳದ ಈ ಹಳ್ಳಿಗೆ ಪ್ರವೇಶಿಸುತ್ತಿದ್ದಂತೆ ನೀಲಿ ಬಣ್ಣದ ಬೋರ್ಡ್ ಗಮನಸೆಳೆಯುತ್ತದೆ. ದೇವರ ಅವಳಿ ಗ್ರಾಮಕ್ಕೆ ಸುಸ್ವಾಗತ ಎಂದು ಇಲ್ಲಿ ಬರೆಯಲಾಗಿದೆ.
ಕೇವಲ 2 ಸಾವಿರ ಜನಸಂಖ್ಯೆಯಿರುವ ಗ್ರಾಮದಲ್ಲಿ 400 ಅವಳಿಗಳಿರುವುದು ದಾಖಲೆಯೇ ಸರಿ. ಈ ಗ್ರಾಮದ ಹೆಸರಲ್ಲಿ ಗಿನ್ನಿಸ್ ವಿಶ್ವ ದಾಖಲೆ ಕೂಡ ಸೃಷ್ಟಿಯಾಗಿದೆ.
ಇಲ್ಲಿನ ನಿವಾಸಿಗಳ ಪ್ರಕಾರ ಕಳೆದ ಮೂರು ತಲೆಮಾರುಗಳಿಂದ ಇಲ್ಲಿ ಹೆಚ್ಚು ಅವಳಿ ಮಕ್ಕಳು ಜನಿಸುತ್ತಿದ್ದಾರೆ. ಮೊದಲ ಬಾರಿಗೆ 1949ರಲ್ಲಿ ಅವಳಿಗಳ ಜನನವಾಗಿತ್ತು ಎಂದು ಹೇಳಲಾಗುತ್ತದೆ.