ಮೊದಲ ಪ‍್ರಯತ್ನದಲ್ಲೇ ಗೆದ್ದಿದ್ದೀರಿ. ಹೇಗೆನಿಸುತ್ತಿದೆ?
ತುಂಬಾ ಖುಷಿಯಾಗಿದೆ. ಚುನಾವಣೆ ಪ್ರಚಾರಕ್ಕೆ ಕಡಿಮೆ ಸಮಯವಿತ್ತು. ಆದರೆ, ಪಕ್ಷದ ನಾಯಕರು, ಕಾರ್ಯಕರ್ತರು ಒಗ್ಗಟ್ಟಿನಿಂದ ದುಡಿದು, ಮತದಾರರ ಮನೆ-ಮನೆಗೆ ತಲುಪಿದರು.
ಅಲ್ಲದೆ, ಪ್ರತಿಪಕ್ಷದವರು ತೋರಿಸಿದ ಹಣ ಬಲ ಮತ್ತು ಅಧಿಕಾರದ ಬಲವನ್ನು ಮತದಾರರೂ ತಿರಸ್ಕರಿಸಿದರು.
ಈ ಚುನಾವಣೆಯಷ್ಟೇ ಅಲ್ಲ. ಹಿಂದಿನ ಎಲ್ಲ ಲೋಕಸಭೆ ಚುನಾವಣೆಗಳಲ್ಲೂ ಬೆಳಗಾವಿ ಕ್ಷೇತ್ರದ ಎಲ್ಲ ಭಾಷೆಗಳ, ಎಲ್ಲ ಸಮುದಾಯಗಳ ಮತದಾರರು, ರಾಷ್ಟ್ರೀಯತೆಗೆ ಮಹತ್ವ ಕೊಟ್ಟು ಮತ ಚಲಾಯಿಸಿದ್ದಾರೆ. ಈ ಬಾರಿಯೂ ಅದು ಮುಂದುವರಿದ ಕಾರಣ, ನನಗೆ ಗೆಲುವು ದಕ್ಕಿತು.