Breaking News

ಭೂ ಸವಕಳಿ ತಡೆಗೆ ಗಿಡಗಳ ನೆಡಿ: ಸಹಾಯಕ ಕೃಷಿ ನಿರ್ದೆಶಕ ಜೀವನಸಾಬ

Spread the love

ಳವಂಡಿ: ರೈತರು ಭೂ ಸವಕಳಿ ತಡೆಯಲು ಗಿಡಗಳನ್ನು ನೆಡಬೇಕು ಹಾಗೂ ಜಮೀನಿನ ಮಣ್ಣು ಹಳ್ಳ ಕೊಳ್ಳ ಸೇರದಂತೆ ತಡೆಯಬೇಕು. ಫಲವತ್ತಾದ ಹಾಗೂ ಪೋಷಕಾಂಶಗಳನ್ನು ಹೊಂದಿದ ಭೂಮಿಯಿಂದ ಮಾತ್ರ ಸಮೃದ್ದ ಬೆಳೆ ಬೆಳೆಯಬಹುದು. ಕಾರಣ ರೈತರು ಭೂಸವಕಳಿ ತಡೆಯಲು ಬದು ನಿರ್ಮಾಣದ ಜೊತೆಗೆ ಗಿಡಗಳನ್ನು ನೆಡಿ ಎಂದು ಸಹಾಯಕ ಕೃಷಿ ನಿರ್ದೆಶಕ ಜೀವನಸಾಬ ಕುಷ್ಟಗಿ ಹೇಳಿದರು.

ಭೂ ಸವಕಳಿ ತಡೆಗೆ ಗಿಡಗಳ ನೆಡಿ: ಸಹಾಯಕ ಕೃಷಿ ನಿರ್ದೆಶಕ ಜೀವನಸಾಬ

ಸಮೀಪದ ಬೆಳಗಟ್ಟಿ ಗ್ರಾಮದಲ್ಲಿ ಜಿಪಂ ಕೊಪ್ಪಳ, ಜಲಾನಯನ ಅಭಿವೃದ್ದಿ ಇಲಾಖೆ, ಕೃಷಿ ಇಲಾಖೆ, ವಿಶ್ವ ಬ್ಯಾಂಕ ನೆರವಿನ ರಿವಾರ್ಡ ಜಲಾನಯನ ಅಭಿವೃದ್ದಿ ಯೋಜನೆಯಡಿ ರೈತರಿಗೆ ವಿವಿಧ ಸಸಿಗಳನ್ನು ವಿತರಣೆ ಮಾಡಿ ಇತ್ತೀಚೆಗೆ ಮಾತನಾಡಿದರು.

ಕೃಷಿಯ ಸುಸ್ಥಿರತೆಗಾಗಿ ನವೀನ ತಂತ್ರಜ್ಞಾನದ ಮೂಲಕ ಜಲಾನಯನ ಪ್ರದೇಶವನ್ನು ಪುನಶ್ಚೇತನಗೊಳಿಸುವದು ಹಾಗೂ ಮಣ್ಣಿನ ವಿಧ, ಮಣ್ಣಿನ ರಚನೆ, ಭೂ ಸವಕಳಿ ತಡೆಯುವದು , ಜಮೀನುಗಳಲ್ಲಿ ಬದು ನಿರ್ಮಾಣ, ಅಚಗಟ್ಟೆ ನಿರ್ಮಾಣ ಮಾಡುವದು, ಜಮೀನು ಸಮತಟ್ಟು ಆಗಿ ನೀರು ನಿಲ್ಲವಂತೆ ಮಾಡುವದು ರಿವಾರ್ಡ ಯೋಜನೆಯ ಮೂಲ ಉದ್ದೇಶವಾಗಿದೆ, ಜೊತೆಗೆ ಜಲಾನಯನ ವ್ಯಾಪ್ತಿಯ ರೈತರು ಬದುಗಳಲ್ಲಿ ಗಿಡಗಳನ್ನು ನೆಡಲು ಸಹ ಅನೂಕೂಲ ಮಾಡಿಕೊಡಲಾಗುತ್ತಿದೆ. ಗಿಡ ನೆಡುವದರಿಂದ ಆರ್ಥಿಕ ಲಾಭ ಕೂಡ ಆಗಲಿದೆ ಎಂದರು.


Spread the love

About Laxminews 24x7

Check Also

ಬಿಜೆಪಿ-ಜೆಡಿಎಸನಲ್ಲಿ ಅಸಮಾಧಾನಗೊಂಡ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ ಏನಂದ್ರು??

Spread the loveಜ್ಯಾತ್ಯಾತೀತವಾಗಿ ಕಾಂಗ್ರೆಸ್ ಸಿದ್ಧಾಂತಗಳನ್ನು ಒಪ್ಪಿ ಬರುವ ಕಾರ್ಯಕರ್ತರಿಗೆ ಪಕ್ಷದಲ್ಲಿ ಸ್ವಾಗತವಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ