ಧಾರವಾಡ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಘೋಷವಾಕ್ಯ ‘ಶೈಕ್ಷಣಿಕ ಬಲವರ್ಧನೆ ವರ್ಷ’ ಇದಕ್ಕೆ ಅನುಗುಣವಾಗಿ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸರಕಾರಿ ಶಾಲೆಯ 7 ಮತ್ತು 8 ನೇ ವರ್ಗದ ಮಕ್ಕಳಿಗೆ ಇಂಗ್ಲೀಷ್ ವಿಷಯದ ಪಾಠ ಬೋಧನೆ ಮಾಡಿದರು.
ನಗರದ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಸರಕಾರಿ ಉರ್ದು ಮತ್ತು ಕನ್ನಡ ಪ್ರಾಥಮಿಕ, ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ 8 ನೇ ತರಗತಿ ಇಂಗ್ಲೀಷ್ ಭಾಷಾ ವಿಷಯ ಪಾಠ ಬೋಧಿಸುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ವಿಶಿಷ್ಟವಾಗಿ ಚಾಲನೆ ನೀಡಿದರು.
8ನೇ ವರ್ಗದ ಇಂಗ್ಲೀಷ್ ಪಠ್ಯದ ದಿ ಸ್ವಾನ್ ಆಯಂಡ್ ದ ಪ್ರಿನ್ಸಸ್ ಎಂಬ ಬುದ್ಧನ ಕುರಿತ ಜಾನಪದ ನಾಟಕ ಬೋಧಿಸಿದರು. ವಿದ್ಯಾರ್ಥಿಗಳನ್ನು ವೇದಿಕೆಗೆ ಕರೆದು ಅವರನ್ನೇ ನಾಟಕದ ಪಾತ್ರದಾರಿಗಳನ್ನಾಗಿ ಮಾಡಿ, ತಾವೂ ಸೂತ್ರದಾರರಾಗಿ ಶಿಕ್ಷಕ ವೃತ್ತಿಯಲ್ಲಿ ಇರುವವರಿಗೆ ಮಾದರಿ ಆಗುವಂತೆ ಪಠ್ಯ ಬೋಧನೆ ಮಾಡಿದರು.