ರಾಯಚೂರು: ನಗರದ ಮಹಾವೀರ ವೃತ್ತದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಗಿಗಾ ಬೈಟ್ ಎನ್ನುವ ಎಲೆಕ್ಟ್ರಿಕ್ ಬೈಕ್ ಗಳ ಅಂಗಡಿಗೆ ಬೆಂಕಿ ಬಿದ್ದು ಹೊತ್ತಿ ಉರಿದಿದೆ. ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು ಕ್ಷಣಾರ್ಧದಲ್ಲಿ ಎಲ್ಲ ವಸ್ತುಗಳು ಸುಟ್ಟು ಭಸ್ಮವಾಗಿದೆ. ಘಟನೆಯಲ್ಲಿ ಲಕ್ಷಾಂತರ ಮೌಲ್ಯದ ಹಾನಿಯಾಗಿದೆ.
ಘಟನೆಯಲ್ಲಿ ಮೂರು ಎಲೆಕ್ಟ್ರಿಕ್ ವಾಹನಗಳು, ಎರಡು ಬೈಕ್ ಗಳು ಸುಟ್ಟು ಕರಕಲಾಗಿವೆ. ಎರಡು ಅಂತಸ್ತಿನ ಕಟ್ಟಡದಲ್ಲಿ ದಟ್ಟ ಹೊಗೆ ಆವರಿಸಿದ್ದು, ಅಕ್ಕಪಕ್ಕದ ಅಂಗಡಿಗಳಿಗೂ ಬೆಂಕಿ ಹರಡಿಕೊಂಡಿದೆ. ಕಟ್ಟಡದೊಳಗೆ ಕಾರ್ಮಿಕರು ಸಿಲುಕಿಕೊಂಡಿದ್ದರು. ಶ್ರೀನಿವಾಸ ಎನ್ನುವ ಕಾರ್ಮಿಕ ಮೇಲಿನಿಂದ ಜಿಗಿದಿದ್ದು, ಕಾಲಿಗೆ ಪೆಟ್ಟಾಗಿದೆ. ಅಮೃತಾ ಎನ್ನುವ ಮಹಿಳೆ ಕೂಡ ತಪ್ಪಿಸಿಕೊಂಡಿದ್ದಾಳೆ. ವರುಣ ಎನ್ನುವವರಿಗೆ ಸೇರಿದ ಅಂಗಡಿ ಎಂದು ತಿಳಿದು ಬಂದಿದೆ.