Breaking News

ಈ ದೇಶವನ್ನು ಎಂದಿಗೂ ‘ಹಿಂದೂ ರಾಷ್ಟ’ವನ್ನಾಗಿ ಮಾಡಲು ಸಾಧ್ಯವಿಲ್ಲ : ಸಿಎಂ

Spread the love

ಬೆಂಗಳೂರು : ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ. ಮೋದಿ ಹಿಂದೂ ರಾಷ್ಟ್ರ ಮಾಡ್ತೀವಿ ಅಂತಾರೆ ಇದು ಕನಸಿನ ಮಾತು. ಈ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಸಾಧ್ಯವಿಲ್ಲ ಎಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನೆಹರು ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.

BREAKING : ಈ ದೇಶವನ್ನು ಎಂದಿಗೂ 'ಹಿಂದೂ ರಾಷ್ಟ'ವನ್ನಾಗಿ ಮಾಡಲು ಸಾಧ್ಯವಿಲ್ಲ : ಸಿಎಂ ಸಿದ್ದರಾಮಯ್ಯ

ಚುನಾವಣೆಯಲ್ಲಿ ಸೋಲುತ್ತೇವೆ ಅನ್ನೋದು ಮೋದಿಗೆ ಖಾತ್ರಿಯಾಗಿದೆ. ಮೋದಿ ವಿಕಸಿತ ಭಾರತ ಮಾಡಲು ದೇವರೇ ಕಳಿಸಿದ್ದಾನೆ.ಅಂತಾರೆ ಅದಕ್ಕಾಗಿ ಹಿಂದೂ ಮುಸ್ಲಿಮರನ್ನು ಡಿವೈಡ್ ಮಾಡಿ ಮಾತನಾಡುತ್ತಾರೆ. ಚುನಾವಣಾ ಭಾಷಣಗಳಲ್ಲಿ ಮುಸ್ಲಿಮರ ವಿರುದ್ಧ ಮಾತನಾಡುತ್ತಾರೆ.ನರೇಂದ್ರ ಮೋದಿ ಏನು ದೇವರ ಅವತಾರನ?

ಸೋಲುವ ಭಯದಲ್ಲಿ ನರೇಂದ್ರ ಮೋದಿ ಏನೇನೋ ಮಾತನಾಡುತ್ತಿದ್ದಾರೆ.2047 ರ ತನಕ ಸೇವೆ ಮಾಡಲು ದೇವರು ಕಳುಹಿಸಿದ್ದಾನೆ ಅಂತಾರೆ. ಪ್ರಧಾನಿ ಮೋದಿಗೆ ಬಹುತ್ವದಲ್ಲಿ ನಂಬಿಕೆಯೇ ಇಲ್ಲ. ಬಿಜೆಪಿಯವರು ಪದೇ ಪದೇ ವಿಕಸಿತ ಭಾರತ ಎಂದು ಹೇಳುತ್ತಾರೆ. ಆದರೆ ವಿಕಸಿತ ಭಾರತ ಬಿಜೆಪಿಯವರ ನೈಜ ವಿಚಾರ ಅಲ್ಲ.

ವಿಕಸಿತ ಭಾರತ ಆಗೋದು ಬಿಜೆಪಿಯವರಿಗೆ ಬೇಕಾಗಿಲ್ಲ ಬಿಜೆಪಿ ಹಿಡನ್ ಅಜೆಂಡ ದೇಶವನ್ನು ಹಿಂದೂ ರಾಷ್ಟ್ರ ಮಾಡುವುದು ಈ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಆಗಲ್ಲ ಈ ದೇಶ ಬಹುತ್ವ ರಾಷ್ಟ್ರ ಎಲ್ಲ ವರ್ಗದ ಜನರು ಇಲ್ಲಿ ಇದ್ದಾರೆ ಎಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು


Spread the love

About Laxminews 24x7

Check Also

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

Spread the love ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ