Breaking News

ಏಕಾಏಕಿ ಮಳೆಗೆ ತುಂಬಿ ಹರಿದ ಲಕ್ಷ್ಮೀ ಹಳ್ಳ: ಕೊಚ್ಚಿ ಹೋದ 2 ಕಾರು, 1 ಪಿಕಪ್‌ ವಾಹನ

Spread the love

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದ ಲಕ್ಷ್ಮೀ ಹಳ್ಳ ಏಕಾಏಕಿ ತುಂಬಿ ಹರಿದ ಪರಿಣಾಮ 2 ಕಾರು, 1 ಪಿಕಪ್‌ ವಾಹನ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದೆ. ಭಾರಿ ಮಳೆಯಿಂದ ಅವಾಂತರಗಳು ಸಂಭವಿಸಿದ್ದು, ರೈತ ಉತ್ಪಾದಕರ ಕೇಂದ್ರದ ಮೇಲ್ಚಾವಣಿ ಹಾರಿ ಹೋಗಿದೆ.
ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದಲ್ಲಿ ಅವಾಂತರ ಸಂಭವಿಸಿದೆ. 250ಕ್ಕೂ ಹೆಚ್ಚು ರಸಗೊಬ್ಬರದ ಮೂಟೆಗಳು ಹಾನಿ ಆಗಿವೆ.

ಏಕಾಏಕಿ ಮಳೆಗೆ ತುಂಬಿ ಹರಿದ ಲಕ್ಷ್ಮೀ ಹಳ್ಳ: ಕೊಚ್ಚಿ ಹೋದ 2 ಕಾರು, 1 ಪಿಕಪ್‌ ವಾಹನ

ಬೆಳಗಾವಿ, : ರಾಜ್ಯದಲ್ಲಿ ಕಳೆದ ಕೆಲವು ದಿನಗಳಲ್ಲಿ ಬಹುತೇಕ ಕಡೆ ವ್ಯಾಪಕ ಮಳೆಯಾಗುತ್ತಿದೆ (rain). ಆ ಮೂಲಕ ಮಳೆರಾಯ ಜೋರಾಗಿ ಅಬ್ಬರಿಸುತ್ತಿದ್ದಾನೆ. ಇಂದು ಕೂಡ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದ(Sankeshwar)ಲಕ್ಷ್ಮೀ ಹಳ್ಳ ಏಕಾಏಕಿ ತುಂಬಿ ಹರಿದ ಪರಿಣಾಮ 2 ಕಾರು, 1 ಪಿಕಪ್‌ ವಾಹನ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದೆ. ವಾಹನ ಸವಾರರು ಪರದಾಡಿದ್ದಾರೆ. ಇನ್ನು ಸಂಕೇಶ್ವರದ ಲಕ್ಷ್ಮೀ ದೇವಸ್ಥಾನದ ಆವರಣಕ್ಕೂ ನೀರು ನುಗ್ಗಿದೆ. ಹಳ್ಳದ ನೀರು ಮನೆಗಳಿಗೆ ನುಗ್ಗುವ ಆತಂಕದಲ್ಲಿ ಸ್ಥಳೀಯರಿದ್ದಾರೆ.

ಹಾರಿ ಹೋದ ರೈತ ಉತ್ಪಾದಕರ ಕೇಂದ್ರದ ಮೇಲ್ಚಾವಣಿ

ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಅವಾಂತರಗಳು ಸಂಭವಿಸಿದ್ದು, ರೈತ ಉತ್ಪಾದಕರ ಕೇಂದ್ರದ ಮೇಲ್ಚಾವಣಿ ಹಾರಿ ಹೋಗಿದೆ. ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದಲ್ಲಿ ಅವಾಂತರ ಸಂಭವಿಸಿದೆ. 250ಕ್ಕೂ ಹೆಚ್ಚು ರಸಗೊಬ್ಬರದ ಮೂಟೆಗಳು ಹಾನಿ ಆಗಿವೆ. ಮನೋಹರ ದಿನ್ನಮನಿ ಎಂಬುವವರಿಗೆ ಸೇರಿದ್ದ ಶೆಡ್ ಹಾರಿ ಹೋಗಿದೆ. ಸದಾಶಿವ ನಗರದಲ್ಲಿ ರಸ್ತೆಯಲ್ಲಿ ಮರ ಬಿದಿದ್ದು, ಒಂದು ಬದಿಯಲ್ಲಿ ಮಾತ್ರ ವಾಹನಗಳು ಓಡಾಡುತ್ತಿವೆ.


Spread the love

About Laxminews 24x7

Check Also

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

Spread the love ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ