Breaking News

ಉದ್ಯೋಗ ಅರಸಿ ಬಂದಿದ್ದ ಕಲಬುರಗಿಯ ಯುವಕ ಆತ್ಮಹತ್ಯೆ

Spread the love

ಹದೇವಪುರ: ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಕಲಬುರಗಿ ಮೂಲದ ಯುವಕನೊರ್ವ ಬಿಲ್ಡಿಂಗ್ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಅಂಬೇಡ್ಕರ್ ನಗರ ಗುಟ್ಟದಲ್ಲಿ ಜರುಗಿದೆ. ಜೇವರ್ಗಿ ಬುಟ್ನಾಳ್ ನ ಅರುಣ್ ಕುಮಾರ್ (28)ಆತ್ಮಹತ್ಯೆ ಮಾಡಿಕೊಂಡ ಯುವಕ.

Bengaluru; ಉದ್ಯೋಗ ಅರಸಿ ಬಂದಿದ್ದ ಕಲಬುರಗಿಯ ಯುವಕ ಆತ್ಮಹತ್ಯೆ

ಇಂಜಿನಿಯರಿಂಗ್ ಪದವಿ ಪೂರೈಸಿರುವ ಅರುಣ್ ಉದ್ಯೋಗ ಆರಸಿ ಮೂರು ದಿನಗಳ ಹಿಂದೆ ನಗರಕ್ಕೆ ಆಗಮಿಸಿದ್ದ. ವೈಟ್ ಫೀಲ್ಡ್ ಸಮೀಪದ ಅಂಬೇಡ್ಕರ್ ನಗರದ ಗುಟ್ಟದಲ್ಲಿರುವ ಪಿಜಿ ಯಲ್ಲಿ ತನ್ನ ಸ್ನೇಹಿತ ತಂಗಿದ್ದ ಪಿಜಿಯಲ್ಲಿಯೇ ಇದ್ದ.ಗುರುವಾರ ಬೆಳಗ್ಗೆ ಸುಮಾರು 10.40 ರ ವೇಳೆ ಟೆರೇಸ್ ಮೇಲೆ ಹೋಗಿ ಮೊಬೈಲ್ ಫೋನ್ ಹಾಗೂ ಚಪ್ಪಲಿ ಯನ್ನು ಅಲ್ಲಿಯೇ ಬಿಟ್ಟು ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೇಲಿಂದ ಬಿದ್ದ ರಭಸಕ್ಕೆ ಮುಖಕ್ಕೆ, ಕೈ ಮತ್ತು ಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಈ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮ ಹತ್ಯೆಗೆ ನಿಖರವಾದ ಮಾಹಿತಿಯು ತನಿಖೆ ನಂತರ ತಿಳಿದು ಬರಲಿದೆ. ಶವವನ್ನು ವೈದೇಹಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.


Spread the love

About Laxminews 24x7

Check Also

ಕೇಂದ್ರದ ದ್ವೇಷ ರಾಜಕಾರಣ ಖಂಡಿಸಿ ಕಾಂಗ್ರೆಸ್ ನಾಯಕರಿಂದ ಸುವರ್ಣಸೌಧ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ

Spread the loveಬೆಳಗಾವಿ: ಕೇಂದ್ರ ಸರ್ಕಾರ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ