Breaking News

ರೇವಣ್ಣಗೆ ನ್ಯಾಯಾಂಗ ಬಂಧನ, ಸೆಂಟ್ರಲ್ ಜೈಲಿಗೆ ಶಿಫ್ಟ್

Spread the love

ಬೆಂಗಳೂರು: ಶಾಸಕ ಹೆಚ್ ಡಿ ರೇವಣ್ಣನ (HD Revanna) ಸ್ಥಿತಿಯನ್ನು ಹೇಗೆ ವ್ಯಾಖ್ಯಾನಿಸಬೇಕೆಂದು ಅರ್ಥವಾಗುತ್ತಿಲ್ಲ.

ಕೇವಲ ಹೊಳೆನರಸೀಪುರ (Holenarasipur) ಮಾತ್ರವಲ್ಲ ಹಾಸನದಲ್ಲೂ ಕಳೆದ 4 ದಶಕಗಳಿಂದ ದೊರೆಯಂತೆ ಮೆರೆದ 66-ವರ್ಷ ವಯಸ್ಸಿನ ರೇವಣ್ಣ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಇವತ್ತು ಜೈಲು ಪಾಲಾಗಿದ್ದಾರೆ.

ಅವರ ಜಾಮೀನು ಅರ್ಜಿಯನ್ನು (bail petition) ವಜಾಗೊಳಿಸಿದ ನಗರದ 17 ನೇ ಎಸಿಎಂಎಂ ನ್ಯಾಯಾಲಯ ಮೇ 14ರವರೆಗೆ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದೆ. ಇಂದು ಸಾಯಂಕಾಲ ಅವರನ್ನು ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಯಿತು.

ರೇವಣ್ಣರನ್ನು ಜೈಲಿಗೆ ಶಿಫ್ಟ್ ಮಾಡುವಾಗ ಮುಂಜಾಗ್ರತೆ ಮತ್ತು ಭದ್ರತೆಯ ದೃಷ್ಟಿಯಿಂದ ಜೈಲಿನ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಐವರು ಪೊಲೀಸ್ ಇನ್ಸ್ ಪೆಕ್ಟರ್ ಗಳಿಂದ ಭದ್ರತೆ ಒದಗಿಸಲಾಗಿದೆ ಏತನ್ಮಧ್ಯೆ, ಮೇ7 ರಂದು ಸ್ವದೇಶಕ್ಕೆ ಮರಳುವರೆಂದು ಎನ್ನಲಾಗಿದ್ದ ಅವರ ಮಗ ಪ್ರಜ್ವಲ್ ರೇವಣ್ಣ ಇದುವರೆಗೆ ಪತ್ತೆಯಿಲ್ಲ ಮತ್ತು ಎಲ್ಲಿದ್ದಾರೆ ಅನ್ನೋದು ಗೊತ್ತಾಗಿಲ್ಲ.


Spread the love

About Laxminews 24x7

Check Also

ಸೋರುತಿಹುದು ಬೆಳಗಾವಿ ತಹಶೀಲ್ದಾರರ ಕಾರ್ಯಾಲಯ… ದಾರು ಗಟ್ಟಿ ಮಾಡುವವರಾರಯ್ಯಾ???

Spread the love ಸೋರುತಿಹುದು ಬೆಳಗಾವಿ ತಹಶೀಲ್ದಾರರ ಕಾರ್ಯಾಲಯ… ದಾರು ಗಟ್ಟಿ ಮಾಡುವವರಾರಯ್ಯಾ??? ಸೋರುತಿಹುದು ಬೆಳಗಾವಿ ತಹಶೀಲ್ದಾರರ ಕಾರ್ಯಾಲಯ… ದಾರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ