Breaking News

ಕಾಂಗ್ರೆಸ್​ ಕಾರ್ಯಕರ್ತೆಯ ಅವಹೇಳನ ಆರೋಪ; ಸೂಲಿಬೆಲೆ ವಿರುದ್ಧ ಎಫ್​ಐಆರ್​

Spread the love

ಶಿವಮೊಗ್ಗ : ಸಾಮಾಜಿಕ ಜಾಲತಾಣದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ಅವಹೇಳನಕಾರಿ ಕಾಮೆಂಟ್ ಮಾಡಿದ್ದಾರೆ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ಉಪಾಧ್ಯಕ್ಷೆ ಸೌಗಂಧಿಕ ರಘುನಾಥ್ ಅವರು ಆರೋಪಿಸಿ ದೂರು ನೀಡಿದ್ದರು.

ಈ ದೂರಿನ ಮೇರೆಗೆ ಸೂಲಿಬೆಲೆ ವಿರುದ್ಧ ವಿನೋಬಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೆ ತಿಂಗಳ 23 ರಂದು ಚಂದ್ರಯಾನ -3 ಯಶಸ್ವಿಗೆ ಪೂಜೆ ಮಾಡಿಸಿ ಫೋಟೋ ಹಾಕಿ ಎಂದು ಪೋಸ್ಟ್ ಹಾಕಿದ್ದ ಸೂಲಿಬೆಲೆ ಪೋಸ್ಟ್​ಗೆ ಸೌಗಂಧಿಕ ರಘುನಾಥ್ ತಮ್ಮ ಅಧಿಕೃತ ಖಾತೆಯಿಂದ ಕಾಮೆಂಟ್ ಮಾಡಿ, ದೇವಸ್ಥಾನಕ್ಕೆ ಪೂಜೆ ಮಾಡೋದು ತಪ್ಪಲ್ಲ, ಆದರೆ ಫೊಟೋ ಹಾಕಿ ಅಂತ ಹೇಳಿರೋದು ತಪ್ಪು. ವಿಜ್ಞಾನಿಗಳ ಪರಿಶ್ರಮ ಫಲಿಸಲಿ ಎಂದು ಬೇಡಿಕೊಂಡರೆ ಸಾಕು ಎಂದು ಕಾಮೆಂಟ್ ಮಾಡಿದ್ದರು. ಈ ಕಾಮೆಂಟ್​ಗೆ ಸೂಲಿಬೆಲೆಯವರು ಅವಹೇಳನಕಾರಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ದೂರು ನೀಡಿದ್ದರು.

ಈ ಕುರಿತು ಮಾತನಾಡಿರುವ ಸೌಗಂಧಿಕಾ ರಘುನಾಥ್ ದೇಶ, ಭಾಷೆ, ಧರ್ಮದ ಹೆಸರಲ್ಲಿ ಧರ್ಮದ ಹೆಸರಲ್ಲಿ ಬಾಷಣ ಮಾಡುವ ವ್ಯಕ್ತಿ ಈಗ ಹೆಣ್ಣುಮಕ್ಕಳ ನಿಂದನೆಗೆ ಇಳಿದಿದ್ದಾರೆ. ಯಾವ ಹೆಣ್ಣಿಗೂ ಕೂಡ ಈತರದ ಮಾತುಗಳನ್ನ ಆಡಬಾರದು, ಅವರ ಮನೆಯಲ್ಲಿರುವ ತಾಯಿ ಕೂಡ ಹೆಣ್ಣು ಎನ್ನುವುದನ್ನು ಮರೆಯಬಾರದು. ಹಾಗಾಗಿ ಅಂತವರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

 


Spread the love

About Laxminews 24x7

Check Also

ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ

Spread the love ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕೊಳವಿ ಗ್ರಾಮದ ನಮ್ಮೂರ ಸರಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ