ಬೆಳಗಾವಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಜಿಲ್ಲಾಡಳಿತದ ವತಿಯಿಂದ ಭವ್ಯವಾಗಿ ಆಯೋಜಿಸಲಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ರಕ್ಷೆ ಸ್ವೀಕರಿಸಿದೆ. ನಂತರ ನಡೆದ ಪಥಸಂಚಲನದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರು ಭಾಗವಹಿಸಿ, ಕನ್ನಡದ ವೈಭವ, ಏಕತೆ ಮತ್ತು ಗೌರವವನ್ನು ಹೊಳೆಯುವ ರಾಜ್ಯೋತ್ಸವದ ಸಂದೇಶವನ್ನು ಜನತೆಗೆ ನೀಡಿದರು. ಈ ವೇಳೆ ಬೆಳಗಾವಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಎಲ್ಲಾ ಪುರಸ್ಕೃತರನ್ನು ಸನ್ಮಾನಿಸಿ, ಅವರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. …
Read More »Monthly Archives: ನವೆಂಬರ್ 2025
ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ ಜೆ.ಎಂ.ಕಾಲೆಮಿರ್ಚಿ ಪುಂಡ ಎಂಇಎಸ್ ಮುಖಂಡನ ಜೊತೆಗೆ ಸೆಲ್ಪಿ
ಕರ್ನಾಟಕ ರಾಜ್ಯೋತ್ಸವದಲ್ಲಿ ಕರಾಳ ದಿನಾಚರಣೆ ಮಾಡಲು ಎಂಇಎಸ್ ಗೆ ಅನುಮತಿ ಕೊಡುವುದಿಲ್ಲ ಎಂದು ರಾತ್ರೋರಾತ್ರಿ ಈ ಮೊದಲು ಅನುಮತಿ ಕೊಡುತ್ತಿದ್ದ ಜಿಲ್ಲಾಡಳಿತದ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಈಗ ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ ಜೆ.ಎಂ.ಕಾಲೆಮಿರ್ಚಿ ಪುಂಡ ಎಂಇಎಸ್ ಮುಖಂಡನ ಜೊತೆಗೆ ಸೆಲ್ಪಿ ತೆಗೆದುಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ. ಕರಾಳ ದಿನಾಚರಣೆಯ ಬಂದೋಬಸ್ತಕ್ಕೆ ಹೋಗಿದ್ದ ಸಿಪಿಐ ಜೆ.ಎಂ.ಕಾಲೆಮಿರ್ಚೆ ಪುಂಡ ಎಂಇಎಸ್ ಮುಖಂಡ ಶುಭಂ ಸೇಳಕೆ ಜೊತೆಗೆ ಸಲುಗೆಯಿಂದ ಮಾತನಾಡಿಸಿ ಕೊನೆಗೆ ಹೋಗುವಾಗ …
Read More »ಲಿಂಗಾಯತರ ಬಗ್ಗೆ ಅವಹೇಳನಕಾರಿ ಮಾತು: ಕನೇರಿ ಸ್ವಾಮೀಜಿ ಮತ್ತೊಂದು ಶಾಕ್ ಕೊಟ್ಟ ಕೋರ್ಟ್
ಬೆಂಗಳೂರು, (ಅಕ್ಟೋಬರ್ 31): ಲಿಂಗಾಯತ ಮಠಗಳ ಒಕ್ಕೂಟದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿಗೆ (kaneri math kadasiddeshwara swamiji) ಕೋರ್ಟ್ ಮಧ್ಯಂತರ ನಿರ್ಬಂಧಕಾಜ್ಞೆ ವಿಧಿಸಿದೆ. ಮಹಾರಾಷ್ಟ್ರದಲ್ಲಿ ಲಿಂಗಾಯತ ಸ್ವಾಮೀಜಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ಲಿಂಗಾಯತ ಮಠಗಳ ಒಕ್ಕೂಟ ದಾಖಲಿಸಿದ ಮಾನನಷ್ಟ ಮೊಕ್ಕದಮೆ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 31ನೇ ಸಿಸಿಹೆಚ್ ಕೋರ್ಟ್, ಅವಹೇಳನಕಾರಿ ಹೇಳಿಕೆ ನೀಡದಂತೆ ಕಾಡಸಿದ್ದೇಶ್ವರ ಸ್ವಾಮೀಜಿಗೆ ನಿರ್ಬಂಧಿಸಿ ಮಧ್ಯಂತರ ಆದೇಶ ಹೊರಡಿಸಿದೆ.ಅವಹೇಳನಕಾರಿ ಹೇಳಿಕೆ …
Read More »ಪತಿಗೆ ಹೊಡೆದು ಶೌಚಾಲಯ ಗುಂಡಿಗೆ ಹಾಕಿದ್ದ ಪತ್ನಿ
ಚಾಮರಾಜನಗರ: ಪ್ರಿಯಕರನ ಜೊತೆ ಸೇರಿ ತನ್ನ ಪತಿಗೆ ಹೊಡೆದು ಶೌಚಾಲಯ ಗುಂಡಿಗೆ ಹಾಕಿದ್ದ ಪತ್ನಿ ಹಾಗೂ ವ್ಯಕ್ತಿಗೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಗುಂಡಿಮಾಳ ಗ್ರಾಮದ ನಂದಿನಿ ಹಾಗೂ ಈತನ ಪ್ರಿಯಕರ ದಿನಕರ್ ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿಗಳು. ಹನೂರು ತಾಲೂಕಿನ ಗುಂಡಿಮಾಳ ಗ್ರಾಮದ ರಾಜಶೇಖರ್ ಎಂಬಾತನ ಪತ್ನಿ ನಂದಿನಿಯು ದಿನಕರ್ ಎಂಬಾತನ ವಿವಾಹೇತರ ಸಂಬಂಧ ಇರಿಸಿಕೊಂಡಿದ್ದಳು. …
Read More »ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ.
ಸವದತ್ತಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಸವದತ್ತಿ ತಾಲ್ಲೂಕಿನ ಬಸಿಡೋಣಿ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಮಾರ್ಗದರ್ಶಕರಾದ ರಾದ ಸಂತೋಷ ಜಾರಕಿಹೊಳಿ …
Read More »ರಸ್ತೆಗುಂಡಿ ಮುಚ್ಚಲು ನೀಡಿದ್ದ ಗಡುವು ಅಂತ್ಯ: ‘Please ask D.K.Shivakumar’ ಎಂದ ಸಿದ್ದರಾಮಯ್ಯ
ಬೆಂಗಳೂರು: ರಾಜಧಾನಿಯಲ್ಲಿ ಹಾಳಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳಿಗೆ ನೀಡಿದ್ದ ಗಡುವು ಇಂದಿಗೆ (ಶುಕ್ರವಾರ) ಕೊನೆಗೊಂಡಿದೆ. ಡೆಡ್ ಲೈನ್ ಬಗೆಗಿನ ಮಾಧ್ಯಮಗಳ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಪ್ಲೀಸ್ ಆಸ್ಕ್ ಡಿ.ಕೆ.ಶಿವಕುಮಾರ್ (ದಯವಿಟ್ಟು ಡಿಕೆಶಿ ಅವರನ್ನು ಕೇಳಿ) ಎಂದು ಹೇಳಿ ನಿರ್ಗಮಿಸಿದ್ದಾರೆ. ವಿಧಾನಸೌಧದ ಬಳಿ ಇಂದು ಮಾಧ್ಯಮಗಳ ಪ್ರಶ್ನೆಗೆ ಅವರು ಉತ್ತರಿಸಿದರು. ನಗರದಲ್ಲಿ ಬಾಯ್ತೆರೆದಿದ್ದ ರಸ್ತೆಗುಂಡಿಗಳನ್ನು ಮುಚ್ಚುವ ಸಂಬಂಧ ಸಿದ್ದರಾಮಯ್ಯ ಅವರು ಎರಡು ಬಾರಿ ನಗರ …
Read More »ನಮ್ಮಲ್ಲಿ ರಿಕವರಿ ಆಧಾರಿತವಾಗಿ ಕಬ್ಬಿನ ಹಣ ಕೊಡಲಾಗುತ್ತದೆ: ಸಚಿವ ಶಿವಾನಂದ ಪಾಟೀಲ್
ಹಾವೇರಿ: ಮಹಾರಾಷ್ಟ್ರದಲ್ಲಿ ಹೈಯೆಸ್ಟ್ ರಿಕವರಿ ಜಿಲ್ಲೆಗಳಿವೆ. ಹೀಗಾಗಿ, ಅಲ್ಲಿ ಕಬ್ಬಿಗೆ ಹೆಚ್ಚು ದರ ಸಿಗುತ್ತೆ. ನಮ್ಮಲ್ಲಿ ರಿಕವರಿ ಆಧಾರಿತವಾಗಿ ಹಣ ಕೊಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನಿಸ್ಸೀಮ ಆಲದಕಟ್ಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಮಾದರಿಯಲ್ಲಿ ಕಬ್ಬಿಗೆ ಬೆಲೆ ನಿಗದಿ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದರು. ಎಲ್ಲಿ ರಿಕವರಿ ಕಡಿಮೆ ಇರುತ್ತೋ ಅಲ್ಲಿ ಕಡಿಮೆ ದರ ಸಿಗುತ್ತೆ, ಕೃಷ್ಣ ನದಿ ಬೆಲ್ಟ್ನಲ್ಲಿ …
Read More »ಅದ್ಧೂರಿ ಕರ್ನಾಟಕ ರಾಜ್ಯೋತ್ಸವಕ್ಕೆ ಸಿಂಗಾರಗೊಂಡ ಬೆಳಗಾವಿ: ಮಧ್ಯರಾತ್ರಿಯಿಂದಲೇ ಸಂಭ್ರಮಾಚರಣೆ
ಬೆಳಗಾವಿ: ಅದ್ಧೂರಿ ಕರ್ನಾಟಕ ರಾಜ್ಯೋತ್ಸವಕ್ಕೆ ಬೆಳಗಾವಿಯಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಲ್ಲಿನ ರಾಣಿ ಚನ್ನಮ್ಮ ವೃತ್ತ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಇಂದು ಮಧ್ಯರಾತ್ರಿಯಿಂದಲೇ ಸಂಭ್ರಮಾಚರಣೆ ಆರಂಭವಾಗಲಿದೆ. 12 ಗಂಟೆ ಆಗುತ್ತಿದ್ದಂತೆ ಬೃಹತ್ ಸಿಡಿಮದ್ದು ಪ್ರದರ್ಶನ ನಡೆಯಲಿದ್ದು, ಕನ್ನಡಾಭಿಮಾನಿಗಳು ಕುಣಿದು ಕುಪ್ಪಳಿಸಲು ಸಜ್ಜಾಗಿದ್ದಾರೆ. ನಗರ ರಾಣಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಧರ್ಮವೀರ ಸಂಭಾಜಿ ವೃತ್ತ, ಕಾಕತಿ ವೇಸ್, ಕಾಲೇಜು ರಸ್ತೆ, ಅಂಬೇಡ್ಕರ್ ಮಾರ್ಗ, ಡಾ.ರಾಜ್‌ಕುಮಾರ್ ಮಾರ್ಗ, ಜಿಲ್ಲಾಧಿಕಾರಿ ಕಚೇರಿ, ಮಹಾನಗರ …
Read More »ಯುಟ್ಯೂಬರ್ ಸಮೀರ್ ವಿರುದ್ಧದ ಎಫ್‌ಐಆರ್; ವಿಚಾರಣಾ ಪೀಠದ ಕುರಿತು ಸ್ಪಷ್ಟನೆ ಕೇಳಿದ ಹೈಕೋರ್ಟ್
ಬೆಂಗಳೂರು : ಬೆಳ್ತಂಗಡಿ ವಿದ್ಯಾರ್ಥಿನಿ ಕೊಲೆ ಪ್ರಕರಣ ಸಂಬಂಧ ಶ್ರೀಕ್ಷೇತ್ರ ಧರ್ಮಸ್ಥಳ, ಅದರ ಧರ್ಮಾಧಿಕಾರಿ, ಮತ್ತವರ ಕುಟುಂಬದ ವಿರುದ್ಧ ಪರೋಕ್ಷವಾಗಿ ಆರೋಪಗಳನ್ನು ಮಾಡಿ ತನ್ನ ಯೂಟ್ಯೂಬ್ ಚಾನಲ್ನಲ್ಲಿ ವಿಡಿಯೋ ಪ್ರಸಾರ ಮಾಡಿದ ಪ್ರಕರಣ ಸಂಬಂಧ ಎಂ. ಡಿ. ಸಮೀರ್ ವಿರುದ್ಧ ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ವಿಚಾರಣಾ ವ್ಯಾಪ್ತಿ ಕುರಿತು ಸ್ಪಷ್ಟನೆ ನೀಡಲು ರಿಜಿಸ್ಟ್ರಾರ್ ಜನರಲ್ ಕಚೇರಿಗೆ ಹೈಕೋರ್ಟ್ ಸೂಚನೆ ನೀಡಿದೆ. ತನ್ನ ವಿರುದ್ಧ 2025ರ ಮಾರ್ಚ್ …
Read More »ಅಮೆರಿಕದ ಮನೆಯಿಂದ ವಿಡಿಯೋ ಕಾನ್ಫರೆನ್ಸ್ನಲ್ಲಿ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಮಹಿಳೆಯೊಬ್ಬರಿಗೆ ಹೈಕೋರ್ಟ್ ಅನುಮತಿ
ಬೆಂಗಳೂರು: ಕೌಟುಂಬಿಕ ದೌರ್ಜನ್ಯ ಆರೋಪ ಪ್ರಕರಣವೊಂದರಲ್ಲಿ ಅಮೆರಿಕದ ನಿವಾಸದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್ನ ಮುಖ್ಯ ವಿಚಾರಣೆಯಲ್ಲಿ ತನ್ನ ಹೇಳಿಕೆ ದಾಖಲಿಸಲು ಮತ್ತು ಪತಿಯನ್ನು ಪಾಟಿ ಸವಾಲಿಗೆ ಗುರಿಪಡಿಸಲು ಮಹಿಳೆಯೊಬ್ಬರಿಗೆ ಹೈಕೋರ್ಟ್ ಅನುಮತಿ ನೀಡಿ ಆದೇಶಿಸಿದೆ. ವಿಡಿಯೋ ಕಾನ್ಫರೆನ್ಸ್ ಅಧಿನಿಯಮಗಳು-2020ರ ನಿಯಮ 5.3.1 ಸಡಿಲಿಸಿ ಅಮೆರಿಕದ ಮನೆಯಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಚಾರಣೆಗೆ ಹಾಜರಾಗಲು ತನಗೆ ಅನುಮತಿ ನೀಡುವಂತೆ ಕೋರಿ ಮಹಿಳೆಯೊಬ್ಬರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. …
Read More »
Laxmi News 24×7