Breaking News

Daily Archives: ಸೆಪ್ಟೆಂಬರ್ 8, 2025

ದಾವಣಗೆರೆಯಲ್ಲಿ ನಿಲ್ಲದ ಬೀದಿ ನಾಯಿಗಳ ಹಾವಳಿ

ದಾವಣಗೆರೆ: ಜಿಲ್ಲೆಯಲ್ಲಿ ಬೀದಿ ನಾಯಿಗಳ ಉಪಟಳ ಮುಂದುವರೆದಿದ್ದು, ಐವರ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಿದ ಘಟನೆ ಹೊನ್ನಾಳಿ ತಾಲೂಕಿನ ಮಾವಿನ ಕೋಟೆ ಮತ್ತು ಸಾಸ್ವೆಹಳ್ಳಿಯಲ್ಲಿ ಭಾನುವಾರ ನಡೆದಿದೆ. ಮಾವಿನಕೋಟೆಯಲ್ಲಿ ಓರ್ವ ವೃದ್ಧ, ಮೂವರು ಮಕ್ಕಳು ಹಾಗೂ ಸಾಸ್ವೆಹಳ್ಳಿಯ ಓರ್ವ ಬಾಲಕನ ಮೇಲೆ ನಾಯಿಗಳು ದಾಳಿ ಮಾಡಿವೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.‌ ಬೀದಿ ನಾಯಿಗಳ ಸಂಖ್ಯೆ ಮೀತಿಮೀರುತ್ತಿದೆ. ಗ್ರಾಮ ಪಂಚಾಯತ್​ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂದು ಗ್ರಾಮ …

Read More »

ಲಿಂಗಾಯತ ಮತ್ತು ಮುಸ್ಲಿಂ ಧರ್ಮ ಒಂದೇ ಅನ್ನೋದು ತಪ್ಪು: ಪಂಡಿತಾರಾಧ್ಯಶ್ರೀ ಅಭಿಪ್ರಾಯ ವಿರೋಧಿಸಿದ ವಚನಾನಂದಶ್ರೀ

ಚಿತ್ರದುರ್ಗ, ಸೆಪ್ಟೆಂಬರ್ 7: ಲಿಂಗಾಯತ ಮತ್ತು ಮುಸ್ಲಿಂ ಧರ್ಮ ಒಂದೇ ಎಂಬರ್ಥದಲ್ಲಿ ಸಾಣೇಹಳ್ಳಿ ತರಳಬಾಳು ಮಠದ ಪಂಡಿತಾರಾಧ್ಯ ಶ್ರೀಗಳು (Taralabalu Mutt Seer) ನೀಡಿದ ಹೇಳಿಕೆಯನ್ನು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಬಲವಾಗಿ ವಿರೋಧಿಸಿದ್ದಾರೆ. ಲಿಂಗಾಯತ ತತ್ವವೇ ಬೇರೆ, ಮುಸ್ಲಿಂ ಧರ್ಮವೇ ಬೇರೆ. ಜನರಲ್ಲಿ ನಾಸ್ತಿಕವಾದ ವಿತ್ತಲು ಹೋಗಬೇಡಿ ಎಂದು ವಚನಾನಂದ ಶ್ರೀಗಳು ಆಗ್ರಹಿಸಿದ್ದಾರೆ. ಬಸವಣ್ಣ ಸಾಕಾರ ಮತ್ತು ನಿರಾಕಾರ ಈ ಎರಡೂ ತತ್ವಗಳನ್ನು ಒಪ್ಪಿಕೊಂಡವರು. ತಾವೆಲ್ಲಾ ಹಿಂದೂಗಳೇ. ಯಾವಾಗಲೂ …

Read More »

ಹೆಸರುಘಟ್ಟದಲ್ಲಿ ಕ್ವಾಂಟಮ್‌ ಸಿಟಿ ನಿರ್ಮಾಣಕ್ಕೆ 6.17 ಎಕರೆ ಮಂಜೂರು: ಸಚಿವ ಎನ್‌.ಎಸ್‌. ಭೋಸರಾಜು

ಬೆಂಗಳೂರು: ಅತ್ಯಾಧುನಿಕ ಪ್ರಯೋಗಾಲಯಗಳು, ಸ್ಟಾರ್ಟ್‌ಅಪ್‌ಗಳಿಗೆ ಇನ್ಕ್ಯೂಬೇಷನ್‌ ಸೌಲಭ್ಯಗಳು ಹಾಗೂ ಕೈಗಾರಿಕಾ-ಶೈಕ್ಷಣಿಕ ಸಹಭಾಗಿತ್ವಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ಹೊಂದಿರುವ ಕ್ಯೂ-ಸಿಟಿ (ಕ್ವಾಂಟಮ್‌ ಸಿಟಿ) ಸ್ಥಾಪನೆಗೆ ರಾಜ್ಯ ಸರ್ಕಾರ ಹೆಸರುಘಟ್ಟದಲ್ಲಿ 6.17 ಎಕರೆ ಜಾಗವನ್ನು ಮಂಜೂರು ಮಾಡಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌.ಎಸ್‌. ಭೋಸರಾಜು ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆಯನ್ನು ನೀಡಿರುವ ಅವರು, ಕ್ವಾಂಟಮ್ ಕಂಪ್ಯೂಟರ್ ಕ್ಷೇತ್ರದಲ್ಲಿ 2035 ರ ವೇಳೆಗೆ ಕರ್ನಾಟಕವನ್ನು 20 ಶತಕೋಟಿ ಡಾಲರ್ ಕ್ವಾಂಟಮ್ …

Read More »

SIT ಮುಂದೆ ಕೊನೆಗೂ ಬುರುಡೆ ರಹಸ್ಯ ಬಿಚ್ಚಿಟ್ಟ ಗಿರೀಶ್ ಮಟ್ಟಣ್ಣವರ್

ಮಂಗಳೂರು, ಸೆಪ್ಟೆಂಬರ್​ 07: ಧರ್ಮಸ್ಥಳ ಬುರುಡೆ ಪ್ರಕರಣದ (Dharmasthala Case) ಒಂದೊಂದೆ ಸತ್ಯಗಳು ಹೊರ ಬರುತ್ತಿವೆ.  ಇಷ್ಟು ದಿನ ಬುರುಡೆ ಕಥೆ ಕೇಳಿ ಗುಂಡಿ ತೋಡಿದ್ದ ಎಸ್​​ಐಟಿ ಅಧಿಕಾರಿಗಳಿಗೂ ಪಿತ್ತ ನೆತ್ತಿಗೇರಿತ್ತು. ತನಿಖೆ ವೇಳೆ ಒಬ್ಬೊಬ್ಬರದ್ದೂ ಒಂದೊಂದು ಹೇಳಿಕೆ ನೀಡಿದ್ದರು. ಜಯಂತ್​.ಟಿ ನೋಡಿದರೆ ನಾನು ಕೊಟ್ಟಿರೋದು ಅಲ್ಲ, ಗಿರೀಶ್ ಮಟ್ಟಣ್ಣನವರ್ (Girish Mattannavar)​​ ಬುರುಡೆ ಕೊಟ್ಟಿರೋದು ಅಂತಾ ಆರೋಪಿಸಿದ್ದರು. ಮೊನ್ನೆ ಗಿರೀಶ್​ ಮಣ್ಣನವರ್​​ನ ವಿಚಾರಣೆ ಮಾಡಿದರೆ ನನಗೇನೂ ಗೊತ್ತಿಲ್ಲ ಅಂದಿದ್ದರು. ಇದೀಗ ಸತತ ನಾಲ್ಕೈದು ದಿನಗಳ …

Read More »

ಸುದೀರ್ಘ ಅವಧಿಯ ಚಂದ್ರಗ್ರಹಣ ಗೋಚರ; ನಭೋ ಮಂಡಲದಲ್ಲಿ ಬೆಂಕಿಚೆಂಡು

ರಾತ್ರಿ 9.56ಕ್ಕೆ ಗ್ರಹಣದ ಸ್ಪರ್ಶಕಾಲ ಆರಂಭವಾಗಿ ಮಧ್ಯರಾತ್ರಿ 1.26ಕ್ಕೆ ಚಂದ್ರನಿಗೆ ಗ್ರಹಣ ಮೋಕ್ಷವಾಯಿತು. ಆರಂಭದಿಂದ ಹಂತಹಂತವಾಗಿ ಚಂದ್ರನನ್ನು ಆವರಿಸಿಕೊಳ್ಳುತ್ತಾ ಭೂಮಿಯ ನೆರಳು ಸಾಗಿತ್ತು. ಸರಿಯಾಗಿ 11 ಗಂಟೆ 21 ನಿಮಿಷಕ್ಕೆ ಚಂದ್ರನನ್ನು ಅರ್ಧಭಾಗ ಆವರಿಸಿಕೊಂಡಿತು. ಆ ಬಳಿಕ ಸರಿಯಾಗಿ 11 ಗಂಟೆ 42 ನಿಮಿಷಕ್ಕೆ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಕ್ಷಣ ಬಂದೇಬಿಟ್ಟಿತು. ರಾತ್ರಿ 11.42ರ ವೇಳೆಗೆ ಸಂಪೂರ್ಣ ಗಾಢಕೆಂಪು ಬಣ್ಣಕ್ಕೆ ಚಂದಿರ ತಿರುಗಿದನು. ಈ ಮೂಲಕ ಸಂಪೂರ್ಣ ಚಂದ್ರಗ್ರಹಣ ಗೋಚರಿಸಿತು.ಕರ್ನಾಟಕದಲ್ಲಿ …

Read More »

ರಾಷ್ಟ್ರೀಯ ಮಟ್ಟದಲ್ಲಿ ದ್ವಿಭಾಷಾ ಪದ್ಧತಿ ಬಗ್ಗೆ ಚಿಂತನೆ ನಡೆದಿತ್ತು: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದ್ವಿಭಾಷಾ ಪದ್ಧತಿ ಹಾಗೂ ಇವಿಎಂ ನಿಷೇಧ ವಿಷಯವಾಗಿ ಮಹತ್ವದ ಹೇಳಿಕೆ ನೀಡಿದ್ದಾರೆ‌. ಈ ಕುರಿತು ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ದ್ವಿಭಾಷಾ ಪದ್ಧತಿ ಜಾರಿಗೆ ಸಂಬಂಧಿಸಿದ ಚರ್ಚೆಯನ್ನು ಸ್ವಾಗತಿಸಿದರು. ಇದರ ಜಾರಿಗೆ ಸಂಬಂಧಿಸಿದ ನಿರ್ಧಾರವು ಸರ್ಕಾರ ಮತ್ತು ಇಲಾಖೆಗಳ ವಿಚಾರ ಎಂದು ಹೇಳಿದರು. ತಮಿಳುನಾಡು, ಕೇರಳದಲ್ಲಿ ಈ ವ್ಯವಸ್ಥೆಗೆ ವಿರೋಧವಿದ್ದರೂ ರಾಷ್ಟ್ರೀಯ ಮಟ್ಟದಲ್ಲಿ ದ್ವಿಭಾಷಾ ಪದ್ಧತಿ ಅಳವಡಿಕೆ ಬಗ್ಗೆ …

Read More »

ಶಿರಸಿಯ ಬೆಣ್ಣೆ ಹೊಳೆ ಜಲಪಾತದಲ್ಲಿ ಕೊಚ್ಚಿ ಹೋದ ವಿದ್ಯಾರ್ಥಿ: ಸಂಡೂರಲ್ಲಿ ಯುವಕ ನೀರುಪಾಲು

ಶಿರಸಿ/ಬಳ್ಳಾರಿ: ರಜೆ ಇದೆ ಎಂದು ಜಲಪಾತಕ್ಕೆ ತೆರಳಿದ್ದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಬಿದ್ದು ಕೊಚ್ಚಿಕೊಂಡು ಹೋಗಿದ್ದು, ಇನ್ನೋರ್ವ ವಿದ್ಯಾರ್ಥಿ ಅದೃಷ್ಟವಶಾತ್ ಪಾರಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಣ್ಣೆ ಹೊಳೆ ಜಲಪಾತದಲ್ಲಿ ನಡೆದಿದೆ.‌ ಶಿರಸಿಯ ಅರಣ್ಯ ಮಹಾವಿದ್ಯಾಲಯದ ಮೂರನೇ ವರ್ಷದ ನಾಲ್ವರು ಪದವಿ ವಿದ್ಯಾರ್ಥಿಗಳು ಭಾನುವಾರ ರಜೆಯಿರುವ ಕಾರಣ ಜಲತಾಪಕ್ಕೆ ತೆರಳಿದ್ದರು. ಎಚ್ಚರಿಕೆಯ ನಾಮಫಲಕ ಆರಂಭದಲ್ಲೇ ಇದ್ದರೂ ಅದನ್ನು ನಿರ್ಲಕ್ಷಿಸಿ ಜಲಪಾತಕ್ಕೆ ತೆರಳಿದ್ದಾರೆ. ಇವರಲ್ಲಿ ಕಾಲು ತೊಳೆಯಲು ಓರ್ವ ವಿದ್ಯಾರ್ಥಿ …

Read More »

ಡಿಜೆ ಬದಲಿಗೆ ಭಕ್ತರಿಗೆ ಹೋಳಿಗೆ ಊಟ ವಿತರಿಸಿದ ಗಣಪತಿ ಮಂಡಳಿ

ಹಾವೇರಿ : ಉತ್ತರ ಕರ್ನಾಟಕದ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿದರೆ ಸಮಿತಿಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತವೆ. ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಭಕ್ತರ ಮನಸ್ಸನ್ನು ಸಮಿತಿಗಳು ಸೆಳೆಯುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ಗಣೇಶ ಮಂಡಳಿಗಳು ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸುತ್ತಿವೆ. ಗಣೇಶ ಸಮಿತಿ ಸದಸ್ಯರು ಭಕ್ತರ ದಾನಿಗಳನ್ನು ಕರೆದು ಅನ್ನಪ್ರಸಾದ ನೀಡಲು ಆರಂಭಿಸಿ ದಶಕಗಳಾಗಿವೆ. ಡಿಜೆ ಬದಲು ಹೋಳಿಗೆ ಊಟ: ಕೆಲ ವರ್ಷಗಳಿಂದ ಗಣೇಶನ ಆಗಮನ ಮತ್ತು ನಿಮಜ್ಜನಕ್ಕೆ ಡಿಜೆ …

Read More »

ಗೋಪಾಡಿ ಬೀಚ್‌ನಲ್ಲಿ ಪ್ರವಾಸಕ್ಕೆ ಬಂದಿದ್ದ ಮೂವರು ನೀರಿನಲ್ಲಿ ಮುಳುಗಿ ಸಾವು,

ಉಡುಪಿ: ಸಮುದ್ರಕ್ಕೆ ಈಜಲು ಹೋದ ನಾಲ್ವರ ಪೈಕಿ ಮೂವರು ಮೃತಪಟ್ಟಿದ್ದು, ಓರ್ವ ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ಕುಂದಾಪುರ ತಾಲೂಕಿನ ಗೋಪಾಡಿ ಬೀಚ್‌ನಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಬೆಂಗಳೂರಿನಿಂದ 10 ಮಂದಿ ಯುವಕರ ತಂಡ ಗೋಪಾಡಿಗೆ ಬಂದಿದ್ದು, ಅದರಲ್ಲಿ ಏಳು ಮಂದಿ ಸಮುದ್ರಕ್ಕೆ ಇಳಿದು ನೀರಿನಲ್ಲಿ ಆಡುತ್ತಿದ್ದರು. ಈ ವೇಳೆ ನಾಲ್ವರು ಅಲೆಗಳಿಗೆ ಸಿಲುಕಿ ನೀರು ಪಾಲಾಗಿದ್ದು, ಅವರಲ್ಲಿ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಓರ್ವನನ್ನು ಸ್ಥಳೀಯರು ರಕ್ಷಿಸಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು …

Read More »

ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡರಾ ರಶ್ಮಿಕಾ?

ದಕ್ಷಿಣ ಸಿನಿಮಾ ಮತ್ತು ಬಾಲಿವುಡ್‌ನಲ್ಲಿ ಹೆಸರು ಮಾಡಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna), ಒಂದಲ್ಲಾ ಒಂದು ಕಾರಣಕ್ಕಾಗಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಈಗ ನಟಿ ತಮ್ಮ ಖಾಸಗಿ ಜೀವನದ ಕಾರಣದಿಂದಾಗಿ ಸುದ್ದಿಗೆ ಬಂದಿದ್ದಾರೆ. ಪ್ರಸ್ತುತ, ರಶ್ಮಿಕಾ ಅವರ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಫೋಟೋದಲ್ಲಿ, ರಶ್ಮಿಕಾ ತಮ್ಮ ಬೆರಳಿನ ಉಂಗುರವನ್ನು ತೋರಿಸುತ್ತಿರುವುದು ಕಂಡುಬರುತ್ತದೆ… ರಶ್ಮಿಕಾ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಯೇ? ಅಭಿಮಾನಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಪ್ರಶ್ನೆ …

Read More »