ಧಾರವಾಡ- ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಖಾತ್ರಿ ಪಡಿಸಬೇಕು ಹಾಗೂ ರಾಜ್ಯದಲ್ಲಿನ 4,200 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಸಂಯೋಜನೆಯ ಹೆಸರಿನಲ್ಲಿ ಮುಚ್ಚುವು ನಿರ್ಧಾರದಿಂದ ಹಿಂದೆ ಸರಿಯಲು ಆಗ್ರಹಿಸಿ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ಎಐಡಿಎಸ್‌ಓ ಸಂಘನೆ ಮನವಿ ಮಾಡಿತ್ತು. ಎಐಡಿಎಸ್‌ಓ ಸಂಘಟನೆ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ಸಂಘಟನೆ ಪದಾಧಿಕಾರಿಗಳು ಮನವಿ ನೀಡಿದರು. ಬಳಿಕ ಮಾತನಾಡಿದ …
Read More »Daily Archives: ಫೆಬ್ರವರಿ 24, 2025
ಕನ್ನಡ ಕಡೆಗಣಿಸಿ ಮರಾಠಿಯಲ್ಲಿ ಮಾತ್ರ ಅಳವಡಿಸಿದ ನಾಮಫಲಕಗಳನ್ನು ತೆರವುಗೊಳಿಸಿದ ಕಿತ್ತೂರು ಕರ್ನಾಟಕ ಸೇನೆ.
ಕನ್ನಡ ಕಡೆಗಣಿಸಿ ಮರಾಠಿಯಲ್ಲಿ ಮಾತ್ರ ಅಳವಡಿಸಿದ ನಾಮಫಲಕಗಳನ್ನು ತೆರವುಗೊಳಿಸಿದ ಕಿತ್ತೂರು ಕರ್ನಾಟಕ ಸೇನೆ. ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಗಡಿ ಗ್ರಾಮ ಮಾಣಕಾಪೂರ ಗ್ರಾಮ ಪಂಚಾಯಿತಿಯಲ್ಲಿ ಕನ್ನಡ ಕಡೆಗಣಿಸಿ ಮರಾಠಿಯಲ್ಲಿ ಮಾತ್ರ ಅಳವಡಿಸಿದ ನಾಮಫಲಕಗಳನ್ನು ತೆರವುಗೊಳಿಸಿದ ಕಿತ್ತೂರು ಕರ್ನಾಟಕ ಸೇನೆ. ಮಾಣಕಾಪೂರ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಮತ್ತು ಆಡಳಿತ ಮಂಡಳಿ ಪಂಚಾಯಿತಿಯ ಪಿಡಿಓ, ಕಾರ್ಯದರ್ಶಿ, ಅಧ್ಯಕ್ಷ -ಉಪಾಧ್ಯಕ್ಷರಗಳ ಕೊಠಡಿಗಳಿಗೆ ಅಳವಡಿಸಿದ ನಾಮಫಲಕಳೆಲ್ಲವೂ ಮರಾಠಿಯಲ್ಲಿ …
Read More »ಬಸವ ತತ್ವ, ವಚನ ಸಂಸ್ಕೃತಿ, ಶರಣರ ಹೋರಾಟದ ಬಗ್ಗೆ ನಮ್ಮ ಸರ್ಕಾರಕ್ಕೆ ಪೂರ್ಣ ಬದ್ಧತೆ ಇದೆ: ಸಿ.ಎಂ.ಸಿದ್ದರಾಮಯ್ಯ
ಬಸವ ತತ್ವ, ವಚನ ಸಂಸ್ಕೃತಿ, ಶರಣರ ಹೋರಾಟದ ಬಗ್ಗೆ ನಮ್ಮ ಸರ್ಕಾರಕ್ಕೆ ಪೂರ್ಣ ಬದ್ಧತೆ ಇದೆ: ಸಿ.ಎಂ.ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿ ಆದಾಗ ಬಸವ ಜಯಂತಿಯಂದೇ ಪ್ರಮಾಣವಚನ ಸ್ವೀಕರಿಸಿದೆ: ಸಿಎಂ ಪಟ್ಟಭದ್ರರು ಬಹಿರಂಗವಾಗಿ ಬಸವಣ್ಣನವರನ್ನು ವಿರೋಧಿಸಲು ಸಾಧ್ಯವಿಲ್ಲ. ಅದಕ್ಕೇ ಆಂತರಿಕವಾಗಿ ವಿರೋಧಿಸುತ್ತಿದ್ದಾರೆ: ಸಿಎಂ ಪೂಜ್ಯರ ಬೇಡಿಕೆಗಳನ್ನು ಪರಿಶೀಲಿಸಿ ಹಂತ ಹಂತವಾಗಿ ಜಾರಿ: ಸಿ.ಎಂ ಬೆಂಗಳೂರು : ಬಸವ ತತ್ವ, ವಚನ ಸಂಸ್ಕೃತಿ, ಶರಣರ ಹೋರಾಟದ ಬಗ್ಗೆ ನಮ್ಮ ಸರ್ಕಾರಕ್ಕೆ ಪೂರ್ಣ …
Read More »ಸಾರ್ವಜನಿಕರನ್ನು ಆಕರ್ಷಿಸಿದ ನಿಯತ್ತಿನ ಪ್ರಾಣಿಗಳ ಪ್ರದರ್ಶನ
ಸಾರ್ವಜನಿಕರನ್ನು ಆಕರ್ಷಿಸಿದ ನಿಯತ್ತಿನ ಪ್ರಾಣಿಗಳ ಪ್ರದರ್ಶನ ನಿಯತ್ತಿಗೆ ಹೆಸರಾಗಿರುವ ಪ್ರಾಣಿ ಎಂದ್ರೆ ಶ್ವಾನ. ಶ್ವಾನ ಮನುಷ್ಯನ ಪ್ರೀತಿಯ ನಂಬಿಕಸ್ಥ ಪ್ರಾಣಿ. ಇತ್ತಿಚೆಗೆ ಶ್ವಾನಗಳ ಮೇಲಿನ ಪ್ರೀತಿ ಜನರಿಗೆ ಜಾಸ್ತಿಯಾಗತೊಡಗಿದೆ. ಅಲ್ಲದೇ ಶ್ವಾನ ಸಾಕುವದು ಪ್ರತಿಷ್ಠೆ ವಿಷಯವಾಗಿದೆ. ಶ್ವಾನಗಳ ಪ್ರದರ್ಶನ ನಡೆಯಿತು. ನೋಡುಗರ ಕಣ್ಮನ ಸೆಳೆಯಿತು. ವಿಜಯಪುರ ಜಿಲ್ಲಾ ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಇಲ್ಲಿನ …
Read More »40 ದಿನ ಹಾಸಿಗೆಯಲ್ಲಿದ್ದರೂ ಕ್ಷೇತ್ರದ ಕೆಲಸ ನಿಂತಿಲ್ಲ
40 ದಿನ ಹಾಸಿಗೆಯಲ್ಲಿದ್ದರೂ ಕ್ಷೇತ್ರದ ಕೆಲಸ ನಿಂತಿಲ್ಲ ನನಗೆ ಯಾವುದೇ ಭಾಷೆ, ಧರ್ಮದ ರಾಜಕಾರಣದಲ್ಲಿ ವಿಶ್ವಾಸವಿಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬೆಳಗಾವಿ : ಭೀಕರ ಅಪಘಾತ ನಡೆದರೂ ನಾನು ಬದುಕಿ ಬಂದಿದ್ದೇನೆ. ಇದಕ್ಕೆ ಕ್ಷೇತ್ರದ ಜನರ ಆಶಿರ್ವಾದವೇ ಕಾರಣ. ಅಪಘಾತದಿಂದ ಗಾಯಗೊಂಡು 40 ದಿನ ಹಾಸಿಗೆ ಹಿಡಿದಿದ್ದರೂ ಕ್ಷೇತ್ರದ ಕೆಲಸ ನಿಂತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ …
Read More »ಜಿಲ್ಲೆಯಲ್ಲಿ ಭಾಷೆಗೆ ಸಂಬಂಧಿಸಿದ ಎಲ್ಲ ತಂಟೆ ತಗಾದೆಗಳನ್ನು ತಮ್ಮ ಸರ್ಕಾರ ಕಿತ್ತುಹಾಕಿದೆ:ಹೆಬ್ಬಾಳ್ಕರ್
ಬೆಳಗಾವಿ: ಜಿಲ್ಲೆಯಲ್ಲಿ ಭಾಷೆಗೆ ಸಂಬಂಧಿಸಿದ ಎಲ್ಲ ತಂಟೆ ತಗಾದೆಗಳನ್ನು ತಮ್ಮ ಸರ್ಕಾರ ಕಿತ್ತುಹಾಕಿದೆ, ಯಾರೋ ನಾಲ್ಕೈದು ಪುಂಡರು ಕರ್ತವ್ಯನಿರತ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದಾಕ್ಷಾಣ ಅದು ಭಾಷೆಗೆ ಸಂಬಂಧಿಸಿದ ವಿವಾದ ಅಲ್ಲ, ಭಾಷೆಯ ಹೆಸರಲ್ಲಿ ರಾಜಕೀಯದ ಬೇಳೆ ಬೇಯಿಸಿಕೊಳ್ಳುವುದನ್ನು ತಾನು ಖಂಡಿಸುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ತಾನು ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಹಳಷ್ಟು ಜನ ಮರಾಠಿ ಭಾಷಿಕರಿದ್ದಾರೆ, ಅವರೆಲ್ಲ ಕನ್ನಡ …
Read More »ಕೊಪ್ಪಳದಲ್ಲಿ ಬಲ್ಡೋಟಾ ಸ್ಟೀಲ್ ಕಾರ್ಖಾನೆ ಆರಂಭಕ್ಕೆ ವಿರೋಧ: ದುಸ್ಥಿತಿ ಕಂಡು ಗವಿಸಿದ್ದೇಶ್ವರ ಸ್ವಾಮೀಜಿ ಕಣ್ಣೀರು
ಕೊಪ್ಪಳ, ಫೆಬ್ರವರಿ 24: ಕೊಪ್ಪಳ (Koppal) ನಗರಕ್ಕೆ ಹೊಂದಿಕೊಂಡು ಬಲ್ಡೋಟಾ ಸ್ಟೀಲ್ ಕಾರ್ಖಾನೆ ಸ್ಥಾಪನೆಗೆ ವಿರೋಧಿಸಿ ಸೋಮವಾರ (ಫೆ.24) ಕೊಪ್ಪಳ ಬಂದ್ ಕರೆ ನೀಡಲಾಗಿದೆ. ಬಂದ್ ಹಿನ್ನೆಲೆಯಲ್ಲಿ ಕೊಪ್ಪಳ ನಗರದ ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆ ನಡೆಯಿತು. ಈ ಸಭೆಯಲ್ಲಿ ಕೊಪ್ಪಳದ ಸುಪ್ರಸಿದ್ಧ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ (Abhinava Gavisiddeshwara Swamiji) ಕಣ್ಣೀರು ಹಾಕಿದ ಘಟನೆ ನಡೆಯಿತು. ಸಭೆಯಲ್ಲಿ ಈಗಾಗಲೇ ಇರೋ ಅನೇಕ ಸ್ಟೀಲ್ ಪ್ಯಾಕ್ಟರಿಗಳಿಂದ ಸುತ್ತಮುತ್ತಲಿನ ಜನರ ಮೇಲೆ …
Read More »ಗೃಹಜ್ಯೋತಿ ದುಡ್ಡು ಸರ್ಕಾರ ಕೊಡದಿದ್ರೆ ಜನರಿಂದಲೇ ವಸೂಲಿ?
ಬೆಂಗಳೂರು, ಫೆಬ್ರವರಿ 24: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆಗೆ ಶೀಘ್ರದಲ್ಲಿಯೇ ಎಸ್ಕಾಂಗಳು ಅಂತ್ಯ ಹಾಡಲಿವೆಯೇ? ಇಂತಹದೊಂದು ಅನುಮಾನಕ್ಕೆ ಕೆಲವು ವರದಿಗಳು ಕಾರಣವಾಗಿದ್ದು, ಇದರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗೃಹಜ್ಯೋತಿ ಹಣವನ್ನು ಸರ್ಕಾರ ಮುಂಚಿತವಾಗಿ ಪಾವತಿ ಮಾಡಬೇಕು. ಇಲ್ಲವಾದರೆ, ಆ ದುಡ್ಡನ್ನು ಜನರಿಂದಲೇ ವಸೂಲಿ ಮಾಡಲು ಅವಕಾಶ ಒದಗಿಸಬೇಕು ಎಂದು ಮನವಿ ಮಾಡಿ …
Read More »ಮಹಾಕುಂಭಕ್ಕೆ ಕರೆದೊಯ್ದು ಪತ್ನಿಯ ಕೊಂದು, ಮಕ್ಕಳ ಬಳಿ ನಿಮ್ಮಮ್ಮ ಕಳೆದುಹೋದ್ಲು ಎಂದಿದ್ದ ವ್ಯಕ್ತಿ,
ಪ್ರಯಾಗ್ರಾಜ್, ಫೆಬ್ರವರಿ 24: ಮಹಾಕುಂಭಮೇಳಕ್ಕೆಂದು ವ್ಯಕ್ತಿಯೊಬ್ಬ ಪತ್ನಿಯನ್ನು ಕರೆದೊಯ್ದು, ಕೊಲೆ ಮಾಡಿ, ಮಕ್ಕಳ ಬಳಿ ನಿಮ್ಮ ಅಮ್ಮ ಕಳೆದುಹೋಗಿದ್ದಾಳೆ ಎಂದು ಕಥೆ ಕಟ್ಟಿದ್ದ ವಿಚಾರ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳ ಅಂತಿಮ ಘಟ್ಟಕ್ಕೆ ತಲುಪಿದೆ. ಶಿವರಾತ್ರಿಯಂದು ಕೊನೆಗೊಳ್ಳಲಿದ್ದು ನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡಿ, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ. ದೆಹಲಿಯ ವ್ಯಕ್ತಿ ತನ್ನ ಪತ್ನಿಯೊಂದಿಗೆ ಮಹಾ ಕುಂಭದಲ್ಲಿ ಪವಿತ್ರ ಸ್ನಾನ ಮಾಡಲು ಪ್ರಯಾಗ್‌ರಾಜ್‌ಗೆ …
Read More »ಪ್ರಯಾಗ್ ರಾಜ ಕುಂಭಮೇಳಕ್ಕೆ ತೆರಳುವಾಗ;ಭೀಕರ ರಸ್ತೆ ಅಪಘಾತ ಗೋಕಾಕನ 6 ಜನ ಸ್ಥಳದಲ್ಲಿಯೇ ಸಾವು.
ಗೋಕಾಕ: ಮಧ್ಯಪ್ರದೇಶದ ಜಬಲ್ಪುರ ನಲ್ಲಿ ನಡೆದ ಅಪಘಾತ. ಜಬಲ್ಪುರ ಜಿಲ್ಲೆಯ ಖಿತೌಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ. ಇಂದು ನಸುಕಿನ ಜಾವ 5 ಗಂಟೆಗೆ ನಡೆದ ಅಪಘಾತ. KA49M5054 ಸಂಖ್ಯೆಯ ತೂಫಾನ್ ವಾಹನ ಅಪಘಾತ. ಪ್ರಯಾಗರಾಜ್ ದಿಂದ ಜಬಲ್ಪುರಗೆ ತೆರಳುವಾಗ ನಡೆದ ಅಪಘಾತ. ಚಾಲಕನ ನಿಯಂತ್ರಣ ತಪ್ಪಿ ಡಿವೈಡರಗೆ ಡಿಕ್ಕಿಯಾಗಿ ದುರ್ಘಟನೆ. ಆರು ಜನ ಸ್ಥಳದಲ್ಲಿಯೇ ಸಾವು ಇಬ್ಬರ ಸ್ಥಿತಿ ಗಂಭೀರ. ಗಾಯಗೊಂಡ ಇಬ್ಬರೂ ಜಬಲ್ಪುರ ಜಿಲ್ಲಾಸ್ಪತ್ರೆಗೆ ದಾಖಲು. …
Read More »