ಬೆಳಗಾವಿ: ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದರು. ಬೆಳಗಾವಿಯಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿಎಂ ಚೆನ್ನಾಗಿ ಸರ್ಕಾರ ನಡೆಸುತ್ತಿದ್ದಾರೆ. ಹಾಗಾಗಿ, ಅವರ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಗ್ಯಾರಂಟಿ ಸೇರಿದಂತೆ ಒಳ್ಳೆಯ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ. ಮುಂದೆ ಬಜೆಟ್ ಇದೆ, ಒಳ್ಳೆಯ ಬಜೆಟ್ ಅನ್ನು ಮುಖ್ಯಮಂತ್ರಿಗಳು ನೀಡಲಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, …
Read More »Daily Archives: ಫೆಬ್ರವರಿ 5, 2025
ಟಿಟಿಡಿ ಮಾದರಿಯಲ್ಲಿ ಯಲ್ಲಮ್ಮನ ಗುಡ್ಡ ಅಭಿವೃದ್ಧಿ : ಸಚಿವ ಹೆಚ್ ಕೆ ಪಾಟೀಲ
ಬೆಳಗಾವಿ: ಈ ಬಾರಿ ಭರತ ಹುಣ್ಣಿಮೆ ವೇಳೆ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಜಿಲ್ಲಾಡಳಿತದ ವತಿಯಿಂದ ಜನಸಂದಣಿ ನಿರ್ವಹಣೆಗೆ ಪಾರ್ಕಿಂಗ್, ಶೌಚಾಲಯ, ಎಲ್.ಇ.ಡಿ. ಸ್ಕ್ರೀನ್ ಅಳವಡಿಕೆ ಸೇರಿದಂತೆ ಸಕಲ ವ್ಯವಸ್ಥೆ ಕೈಗೊಳ್ಳಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಚಿವ ಹೆಚ್. ಕೆ. ಪಾಟೀಲ ಹೇಳಿದರು. ದಾಸೋಹ ಭವನಕ್ಕೆ ಒಂದು ತಿಂಗಳಲ್ಲಿ ಶಂಕುಸ್ಥಾಪನೆ; ಇಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ದಾಸೋಹ ಭವನ ಮತ್ತು ಮೇವು ದಾಸೋಹ ಭವನ ನಿರ್ಮಾಣಕ್ಕೆ ಒಂದು ತಿಂಗಳಿನಲ್ಲಿ …
Read More »ಶ್ರೀರಾಮುಲುಗೂ ವಿಜಯೇಂದ್ರ ಮುಂದುವರಿಯುವುದು ಬೇಕಿಲ್ಲ, ಅದನ್ನು ಚಾಣಾಕ್ಷತೆಯಿಂದ ಹೇಳುತ್ತಾರೆ!
ಕೋಲಾರ: ಹಿರಿಯ ಬಿಜೆಪಿ ನಾಯಕ ಬಿ ಶ್ರೀರಾಮುಲು ಅವರಿಗೂ ಬಿವೈ ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷನಾಗಿ ಮುಂದುವರಿಯುವುದು ಬೇಕಿಲ್ಲ, ಅದರೆ ಅದನ್ನು ಅವರು ಹೇಳುವ ರೀತಿ ಬೇರೆಯಾಗಿದೆ. ದೆಹಲಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ತನ್ನ ಹೆಸರು ಉಲ್ಲೇಖಿಸಿರುವುದಕ್ಕೆ ಹಿಗ್ಗಿರುವ ಅವರು ಯಡಿಯೂರಪ್ಪರನ್ನು ದಕ್ಷಿಣ ಭಾರತದ ಭೀಷ್ಮ ಮತ್ತು ತನ್ನ ತಂದೆಯ ಸಮಾನ ಹಾಗೂ ವಿಜಯೇಂದ್ರರನ್ನು ತಮ್ಮ ಕಿರಿಯ ಸಹೋದರ ಎನ್ನುತ್ತ ತಾವು ಯಡಿಯೂರಪ್ಪ ಕುಟುಂಬದ ಒಂದು ಭಾಗ ಎನ್ನುತ್ತಾರೆ. ಹಿಂದೆ ಯಡಿಯೂರಪ್ಪ ತಮ್ಮ …
Read More »ಎಂಆರ್ಪಿ ಬಾರ್ನಲ್ಲಿ ಹೆಚ್ಚಿನ ಹಣ ವಸೂಲಿ ಹಿನ್ನಲೆ ರೊಚ್ಚಿಗೆದ್ದ ಮದ್ಯಪ್ರಿಯರಿಂದ ಬಾರ್ ಮುಂದೆಯೇ ಪ್ರತಿಭಟನೆ
ಚಾಮರಾಜನಗರ, ಫೆಬ್ರವರಿ 05: ಎಂಆರ್ಪಿ ಬಾರ್ನಲ್ಲಿ ಹೆಚ್ಚಿನ ಹಣ ವಸೂಲಿ ಹಿನ್ನಲೆ ರೊಚ್ಚಿಗೆದ್ದ ಮದ್ಯಪ್ರಿಯರಿಂದ ಬಾರ್ ಮುಂದೆಯೇ ಪ್ರತಿಭಟನೆ ಮಾಡಿದ್ದಾರೆ. ಜಿಲ್ಲೆಯ ಯಳಂದೂರು ತಾಲೂಕಿನ ಯಳಂದೂರು ಪಟ್ಟಣದ ಶ್ರೀರಂಗ ವೈನ್ಸ್ ಮುಂದೆ ನಿನ್ನೆ ರಾತ್ರಿ ಹೈಡ್ರಾಮಾವೇ ನಡೆದಿದೆ. MRP ಬೋರ್ಡ್ ಹಾಕಿಕೊಂಡು ಮದ್ಯಪ್ರಿಯರ ಬಳಿ ದುಪ್ಪಟ್ಟು ಹಣ ವಸೂಲಿ ಮಾಡಲಾಗುತಿತ್ತು. ಹೀಗಾಗಿ ಕೈಯಲ್ಲಿ ಬಾಟಲಿ ಹಾಗೂ ಬಿಲ್ ಹಿಡಿದು ವೈನ್ಸ್ ಸ್ಟೋರ್ ಮಾಲೀಕರಿಗೆ ಹಿಗ್ಗಾ ಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ವಿಡಿಯೋ ನೋಡಿ.
Read More »ಥಿನ್ನರ್ ಸೇವಿಸಿ ಬಾಲಕ ಸಾವು
ರಾಯಚೂರು, ಫೆಬ್ರವರಿ 05: ಪೇಂಟ್‌ನಲ್ಲಿ ಬಳಸುವ ಥಿನ್ನರ್ ಸೇವಿಸಿ ಬಾಲಕ (Child) ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಹಿರೆಕೊಟ್ನೇಕಲ್‌ನಲ್ಲಿ ನಡೆದಿದೆ. ರಮೇಶ್ ನಾಯಕ್ ಪುತ್ರ ಶಿವಾರ್ಜುನ ನಾಯಕ್(3) ಮೃತ ಬಾಲಕ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಜಾತ್ರೆ ಸಂಭ್ರಮದಲ್ಲಿದ್ದ ಕುಟುಂಬದಲ್ಲಿದೀಗ ಸೂತಕದ ಛಾಯೆ ಆವರಿಸಿದೆ. ಗ್ರಾಮದಲ್ಲಿ ಜಾತ್ರೆ ಹಿನ್ನೆಲೆ ಮನೆಗೆ ಪೇಂಟಿಂಗ್ ಮಾಡಲಾಗುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಬಾಲಕ ಶಿವಾರ್ಜುನ ಥಿನ್ನರ್ ಸೇವಿಸಿದ್ದಾನೆ. ಈ ವೇಳೆ ಶಿವಾರ್ಜುನ ಅಸ್ವಸ್ಥಗೊಂಡಿದ್ದಾನೆ. ಕೂಡಲೇ …
Read More »