Breaking News

Daily Archives: ನವೆಂಬರ್ 16, 2024

ತಂದೆಯಿಂದ ಕಾಟ: ಬಾಲಕಿ ರಕ್ಷಿಸಿದ ಹೆಬ್ಬಾಳಕರ

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು, ಮದ್ಯವ್ಯಸನಿ ತಂದೆಯಿಂದ ತೊಂದರೆಗೆ ಒಳಗಾಗಿದ್ದ ಬಾಲಕಿಯೊಬ್ಬಳನ್ನು ಶುಕ್ರವಾರ ರಕ್ಷಿಸಿ, ಆಕೆಯ ಕಲಿಕೆಗೆ ಹಾಸ್ಟೆಲ್‌ ವ್ಯವಸ್ಥೆ ಮಾಡಿದರು. ತಾಲ್ಲೂಕಿನ ಹಿರೇಬಾಗೇವಾಡಿಯಲ್ಲಿ ಅಂಗನವಾಡಿ ಕಟ್ಟಡದ ಭೂಮಿಪೂಜೆಯಲ್ಲಿ ಪಾಲ್ಗೊಂಡಿದ್ದ ಸಚಿವೆ ಹೆಬ್ಬಾಳಕರ ಅವರನ್ನು ಭೇಟಿಯಾದ 12 ವರ್ಷದ ಬಾಲಕಿ ಸಮಸ್ಯೆ ಹೇಳಿ ಕಣ್ಣೀರು ಹಾಕಿದಳು. ಬಾಲಕಿಯ ಜೊತೆಗೆ ಅವಳ ಅಜ್ಜಿಯೂ ಪರಿಸ್ಥಿತಿ ಮನವರಿಕೆ ಮಾಡಿದರು. ‘ಅಪ್ಪ ಮದ್ಯವ್ಯಸನಿ ಆಗಿದ್ದು, ಅವ್ವನಿಗೆ ನಿತ್ಯವೂ …

Read More »

ಬಟ್ಟೆ ಹರಿದು ಮಹಿಳೆಯರ ಮೇಲೆ ಹಲ್ಲೆ: ದೂರು ದಾಖಲು

ಬೆಳಗಾವಿ: ಇಲ್ಲಿನ ವಡ್ಡರವಾಡಿ ಪ್ರದೇಶದಲ್ಲಿ ಮಹಿಳೆಯರಿಬ್ಬರನ್ನು ರಸ್ತೆಗೆ ಎಳೆದು ತಂದು ಬಟ್ಟೆ ಹರಿದು ಹಲ್ಲೆ ಮಾಡಿದ ಪ್ರಕರಣ ತಡವಾಗಿ ಗೊತ್ತಾಗಿದೆ. ಕಳೆದ ಸೋಮವಾರ (ನ.11) ರಾತ್ರಿ ಘಟನೆ ನಡೆದಿದೆ. ಶನಿವಾರ ಇದರ ವಿಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.   ಇಂದ್ರಾ ಅಷ್ಟೇಕರ್, ಹೂವಪ್ಪ ಅಷ್ಟೇಕರ್, ಮಣಿಕಂಠ ಅಷ್ಟೇಕರ್ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಆರೋಪಿಗಳು ಎಂದು ಮಾಳಮಾರುತಿ ಠಾಣೆಯಲ್ಲಿ ದೂರು ದಾಖಲಾಗಿದೆ. ವಡ್ಡರವಾಡಿಯ ಮಹಿಳೆಯೊಬ್ಬರನ್ನು ಮಹಾರಾಷ್ಟ್ರಕ್ಕೆ ಮದುವೆ ಮಾಡಿ ಕೊಡಲಾಗಿತ್ತು. ಅವರಿಗೆ …

Read More »

ಎಸ್‌ಡಿಎ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆಪ್ರಮುಖ ಆರೋಪಿ ತಹಶೀಲ್ದಾರ್‌ ಕಚೇರಿಗೆ ಹಾಜರು

ಬೆಳಗಾವಿ: ಎಸ್‌ಡಿಎ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ತಹಶೀಲ್ದಾರ್‌ ಬಸವರಾಜ ನಾಗರಾಳ ಶುಕ್ರವಾರ ಕಚೇರಿಗೆ ಬಂದು, ಕೆಲಸಕ್ಕೆ ಹಾಜರಾದರು. ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ತಹಶೀಲ್ದಾರ್‌ ಬಸವರಾಜ ನಾಗರಾಳ, ಎಫ್‌ಡಿಎ ಅಶೋಕ ಕಬ್ಬಲಿಗೇರ ಹಾಗೂ ಸೋಮು ದೊಡವಾಡಿ ಅವರಿಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ.   ‘ಯಾವುದೇ ಸರ್ಕಾರಿ ಅಧಿಕಾರಿ 48 ಗಂಟೆ ಜೈಲು ಸೇರಿದ್ದರೆ ಮಾತ್ರ ಅಮಾನ‌ತು ಮಾಡಲು ಅವಕಾಶವಿದೆ. ಹೀಗಾಗಿ, ತಹಶೀಲ್ದಾರ್‌ ಅಮಾನತು ಆಗಿಲ್ಲ. ಪ್ರಕರಣ …

Read More »

ಮಹಾರಾಷ್ಟ್ರದಲ್ಲಿ ಮೋದಿಗೆ ಮತ್ತೊಮ್ಮೆ ಸವಾಲೆಸೆದ ಸಿದ್ದರಾಮಯ್ಯ

ಮುಂಬೈ, ನವೆಂಬರ್‌ 16: ಅಬಕಾರಿ ಇಲಾಖೆಯಲ್ಲಿ 700 ಕೋಟಿ ಲಂಚ ಪಡೆದು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಚುನಾವಣೆ ನಡೆಸುತ್ತಿದೆ ಎನ್ನುವ ಹಸಿ ಹಸಿ ಸುಳ್ಳನ್ನು ಇದೇ ಮಹಾರಾಷ್ಟ್ರದಲ್ಲಿ ಮೋದಿ ಹೇಳಿದ್ದಾರೆ. ಮೋದಿಯವರೇ ನಾನು ನೀವು ಸುಳ್ಳು ಭಾಷಣ ಮಾಡಿದ ಮಹಾರಾಷ್ಟ್ರಕ್ಕೇ ಬಂದು ನಿಮಗೆ ನೇರ ಸವಾಲು ಹಕುತ್ತಿದ್ದೇನೆ. ನಿಮ್ಮ ಭಾಷಣದ ಸುಳ್ಳನ್ನು ಸಾಬೀತು ಮಾಡಿದರೆ ನಾನು ಆ ಕ್ಷಣವೇ ರಾಜಕೀಯ ನಿವೃತ್ತಿ ಪಡೆಯಲು ಸಿದ್ದ. ಇಲ್ಲದಿದ್ದರೆ ನೀವು ರಾಜಕೀಯ ನಿವೃತ್ತಿ ಘೋಷಿಸುತ್ತೀರಾ …

Read More »

ಪೊಲೀಸ್ ಕಮಿಷನರ್ ಮೊಬೈಲ್ ಸಂಖ್ಯೆ ಬಳಸಿ ನಕಲಿ ಕರೆ ಮಾಡಿ ಬೆದರಿಕೆ: ಕಿರಾತಕನ ಬಂಧನ

ಸಾಮಾನ್ಯವಾಗಿ ಯಾವುದೋ ಅನಾಮಧೇಯ ಕರೆ ಮಾಡಿ, ಹೊಸ ನಂಬರ್ ನಿಂದ ಕರೆ ಮಾಡಿ ಬೆದರಿಕೆ ಹಾಕಿರುವ ಪ್ರಕರಣಗಳನ್ನು ಕೇಳಿದ್ದೇವೆ. ಹೊಸ ತಂತ್ರಜ್ಞಾನ ಬಳಸಿ ಧ್ವನಿ ಬದಲಾಯಿಸಿ ಮಾತನಾಡುವುದು ಕೂಡ ನೋಡಿದ್ದೇವೆ. ಆದರೆ ಮೈಸೂರಿನಲ್ಲೊಬ್ಬ ಕಿರಾತಕ, ಪೊಲೀಸ್ ಕಮಿಷನರ್ ಮೊಬೈಲ್ ಸಂಖ್ಯೆಯನ್ನೇ ಬಳಸಿ ನಕಲಿ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತವಾದ ಪೊಲೀಸರು, ಕಿರಾತಕನ ಹೆಡೆಮುರಿ ಕಟ್ಟಿ ಬಂಧಿಸಿದ್ದಾರೆ. ನಾಗರಿಕರ ರಕ್ಷಣೆಗೆ ತಾವು ಸದಾ ಸಿದ್ಧ ಎಂದು …

Read More »

ಕಾರು ಅಡ್ದಗಟ್ಟಿ ಲಕ್ಷಾಂತರ ರೂಪಾಯಿ ಹಣದೊಂದಿಗೆ ಕಾರಿನ ಸಮೇತ ಪರಾರಿಯಾದ ದುಷ್ಕರ್ಮಿಗಳು

ಬೆಳಗಾವಿ: ಕಾರು ಅಡ್ಡಗಟ್ಟಿ ನಿಲ್ಲಿಸಿ ಪಿಸ್ತೂಲ್ ತೋರಿಸಿ 75 ಲಕ್ಷ ಹಣದೊಂದಿಗೆ ಕಾರಿನ ಸಮೇತ ದರೋಡೆಕೋರರ ಗ್ಯಾಂಗ್ ಪರಾರಿಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹರಗಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಹಾರಾಷ್ಟ್ರದ ಕೊಲ್ಲಾಪುರದಿಂದ ಕೇರಳಕ್ಕೆ ಹೊರಟಿದ್ದ ಇನೋವಾ ಕಾರನ್ನು ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳ ತಂಡ, ಬಳಿಕ ಕಾರು ಅಡ್ಡಗಟ್ಟಿ ನಿಲ್ಲಿಸಿದೆ. ಪಿಸ್ತೂಲು ತೋರಿಸಿ ಕಾರಿನಲ್ಲಿದ್ದವರನ್ನು ಕೆಳಗಿಳಿಸಿ ಕಾರಿನಲ್ಲಿದ್ದ 75 ಲಕ್ಷ ಹಣದ ಸಮೇತ ಎಸ್ಕೇಪ್ ಆಗಿದೆ. …

Read More »

ಶಾಲಾ ಬಸ್‌ ಪಲ್ಟಿ: ಅಪಾಯದಿಂದ ಮಕ್ಕಳು ಪಾರು

ಮೂಡಲಗಿ: ತಾಲ್ಲೂಕಿನ ಪಟಗುಂದ ಗ್ರಾಮ ಬಳಿಯಲ್ಲಿ ಶಾಲಾ ಬಸ್‌ ಪಲ್ಟಿಯಾಗಿದ್ದು ಬಸ್‌ನಲ್ಲಿದ್ದ 30ಕ್ಕೂ ಅಧಿಕ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಕೆಲವು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಶುಕ್ರವಾರ ಬೆಳಿಗ್ಗೆ ಜರುಗಿದೆ. ಗಾಯಗೊಂಡಿರುವ ಮಕ್ಕಳಿಗೆ ಮೂಡಲಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅವರ ಮನೆಗಳಿಗೆ ತಲುಪಿಸಿರುವ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ಇಲ್ಲಿಯ ಸಿ.ಎನ್.ಮುಗಳಖೋಡ ಶಾಲೆಯ ಬಸ್‌ ಮಕ್ಕಳನ್ನು ಕರೆದುಕೊಂಡು ಶಾಲೆಗೆ …

Read More »

ಕಾಂಗ್ರೆಸ್ ಶಾಸಕರು ಸ್ವಾಭಿಮಾನಿಗಳು: ಶಾಸಕ ಲಕ್ಷ್ಮಣ ಸವದಿ

ಕಾಗವಾಡ: ‘ಕಾಂಗ್ರೆಸ್ ಶಾಸಕರು ಮಾರಾಟಕ್ಕಿಲ್ಲ. ಅವರು ಸ್ವಾಭಿಮಾನಿಗಳು. ₹ 50 ಕೋಟಿ ಅಲ್ಲ, ₹ 100 ಕೋಟಿ ಕೊಟ್ಟರೂ ನಮ್ಮ ಶಾಸಕರು ಯಾರೂ ಮಾರಾಟಕ್ಕಿಲ್ಲ’ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಬಿಜೆಪಿಯವರು ಕಾಂಗ್ರೆಸ್‌ ಶಾಸಕರಿಗೆ ತಲಾ ₹ 50 ಕೋಟಿ ಆಮಿಷ ಒಡ್ಡಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಮುಖ್ಯಮಂತ್ರಿಯವರು ಹೀಗೆ ಹೇಳಿದ್ದಾರೆಂದರೆ ಅವರ ಬಳಿ ಬಲವಾದ ಸಾಕ್ಷ್ಯ ಇರಬಹುದು. ಅದಕ್ಕೆ …

Read More »

JOB ALERT : ‘KPTCL’ ನಲ್ಲಿ ‘ಪವರ್ ಮ್ಯಾನ್’ ಸೇರಿ 2975 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನ.20 ಲಾಸ್ಟ್ ಡೇಟ್!

ಬೆಂಗಳೂರು: ಕರ್ನಾಟಕ ಪವರ್ ಟ್ರಾನ್ಸ್ ಮಿಷನ್ ಕಾರ್ಪೊರೇಷನ್ ಲಿಮಿಟೆಡ್ ಅಂದರೆ ಕೆಪಿಟಿಸಿಎಲ್ ನಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಹತೆ ಮೇಲೆ ಉದ್ಯೋಗಕ್ಕೆ ಅರ್ಜಿ ಕರೆಯಲಾಗಿದೆ. ಬರೋಬ್ಬರಿ 2975 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭಗೊಂಡಿದ್ದು, ನೀವು ಎಸ್ ಎಸ್ ಎಲ್ ಸಿ ಪಾಸ್ ಆಗಿದ್ದರೇ ತಪ್ಪದೇ ಅರ್ಜಿ ಸಲ್ಲಿಸಿ.   ಈ ಕುರಿತಂತೆ ಕೆಪಿಟಿಸಿಎಲ್ ನಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 411 ಕಿರಿಯ ಸ್ಟೇಷನ್ ಪರಿಚಾರಕ ಮತ್ತು 81 …

Read More »

ಅಭಿಷೇಕ್‌ ಬಚ್ಚನ್‌ – ಐಶ್ವರ್ಯಾ ರೈ ಮದುವೆ ಕುರಿತು ಮಾತನಾಡಿದ್ದ ಸಲ್ಮಾನ್‌ ಹಳೆ ವಿಡಿಯೋ ವೈರಲ್

ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾಗಿರುವ ಐಶ್ವರ್ಯಾ ರೈ, ಈ ಹಿಂದೆ ಸಲ್ಮಾನ್ ಖಾನ್ ಅವರೊಂದಿಗೆ ಪ್ರಣಯ ಸಂಬಂಧದಲ್ಲಿದ್ದರು ಎಂದು ಹೇಳಲಾಗುತ್ತಿತ್ತು. ಐಶ್ವರ್ಯಾ ಮತ್ತು ಸಲ್ಮಾನ್ ತಮ್ಮ ಸಂಬಂಧವನ್ನು 2002 ರಲ್ಲಿ ಕೊನೆಗೊಳಿಸಿದರು ಎಂಬ ಮಾತುಗಳಿವೆ. ಇಬ್ಬರೂ ತಮ್ಮ ಡೇಟಿಂಗ್ ಜೀವನದ ಬಗ್ಗೆ ಎಂದಿಗೂ ಬಹಿರಂಗವಾಗಿ ಮಾತನಾಡದಿದ್ದರೂ, ಸಲ್ಮಾನ್ ಒಮ್ಮೆ ʼ ಆಪ್ ಕಿ ಅದಾಲತ್‌ʼ ನಲ್ಲಿ ಅಭಿಷೇಕ್ ಜೊತೆ ಐಶ್ವರ್ಯಾ ಅವರ ಮದುವೆಯ ಬಗ್ಗೆ ಮಾತನಾಡಿದ್ದು, ಈ ಹಳೆ ವಿಡಿಯೋ …

Read More »