Breaking News

Monthly Archives: ಜೂನ್ 2023

ನನ್ನ ಝಂಡಾ ಬದಲಾವಣೆ ಆಗಬಹುದು, ಅಜೆಂಡಾ ಬದಲಾಗಲ್ಲ: ಹೆಚ್.ವಿಶ್ವನಾಥ್​

ಬೆಳಗಾವಿ: ನನ್ನ ಝಂಡಾ ಬದಲಾವಣೆ ಆಗಬಹುದು ಆದರೆ, ಅಜೆಂಡಾ ಬದಲಾಗದು ಎಂದು ಬಿಜೆಪಿ ಎಂಎಲ್​ಸಿ ಹೆಚ್. ವಿಶ್ವನಾಥ್​ ಹೇಳಿದ್ದಾರೆ. ನನ್ನ ರಕ್ತದ ಕಣಕಣದಲ್ಲೂ ಕಾಂಗ್ರೆಸ್​ ಇದ್ದು, ಬಿಜೆಪಿ ತೊರೆಯುವ ಕಾಲ ಸನ್ನಿಹಿತವಾಗಿದೆ ಎಂಬ ಅವರ ಹೇಳಿಕೆ ಕುರಿತು ಬೆಳಗಾವಿಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ, ಸಂದರ್ಭಗಳು ಹಾಗು ಹಲವಾರು ಕಾರಣಗಳಿಂದ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಬೇಕಾಯಿತು ಎಂದರು.   ವಲಸಿಗರಿಂದ ಬಿಜೆಪಿ ಹಾಳಾಯ್ತು ಎಂದು ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ ಎಂದು ಮಾಧ್ಯಮಗಳು ಕೇಳಿದ …

Read More »

ರಾಜ್ಯ ಸರ್ಕಾರ ಹಿಂದೂ ವಿರೋಧಿ ನಡೆ ಕೈಬಿಡದಿದ್ದರೆ ಉಪವಾಸ ಸತ್ಯಾಗ್ರಹ: ಸ್ವಾಮೀಜಿಗಳ ಧರ್ಮಸಭೆಯಲ್ಲಿ ನಿರ್ಧಾರ

ಮಂಗಳೂರು: ರಾಜ್ಯ ಸರ್ಕಾರ ಹಿಂದೂ ವಿರೋಧಿ ನಡೆ ಕೈಬಿಡದಿದ್ದರೆ ಸಂತರಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ಮಂಗಳೂರಿನಲ್ಲಿ ನಡೆದ ಸ್ವಾಮೀಜಿಗಳ ಧರ್ಮಸಭೆಯಲ್ಲಿ ‌ನಿರ್ಧರಿಸಲಾಗಿದೆ. ಬಾಳಂಭಟ್ ಸಭಾಂಗಣದಲ್ಲಿ ನಡೆದ ಧರ್ಮಸಭೆಯಲ್ಲಿ ಕರಾವಳಿಯ ಸಂತ ಸಮೂಹದಿಂದ ಈ ಬಗ್ಗೆ ನಿರ್ಣಯ ಅಂಗೀಕರಿಸಲಾಗಿದೆ. ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಮತಾಂತರ ಕಾಯ್ದೆ ವಾಪಸ್​ ನಿರ್ಧಾರ ಕೈಬಿಡುವಂತೆ ಸ್ವಾಮೀಜಿಗಳು ಆಗ್ರಹಿಸಿದ್ದಾರೆ. ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಒಡಿಯೂರು ಮಠದ ಗುರುದೇವಾನಂದ ಸ್ವಾಮೀಜಿ, ಮಾಣಿಲ ಮಠದ ಮೋಹನದಾಸ ಸ್ವಾಮೀಜಿ, …

Read More »

ಅಲ್ಪಸಂಖ್ಯಾತರಿಗೆ ರೂಪಿಸಿದ್ದ ಕಾರ್ಯಕ್ರಮಗಳು ಪುನರಾರಂಭ: ಸಿಎಂ ಸಿದ್ದರಾಮಯ್ಯ ಭರವಸೆ

ಬೆಂಗಳೂರು: ಈ ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರಿಗೆ ರೂಪಿಸಿದ್ದ ಕಾರ್ಯಕ್ರಮಗಳನ್ನು ಪುನರಾರಂಭ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಇಂದು ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತರ ಮುಸ್ಲಿಂ ಚಿಂತಕರ ಚಾವಡಿಯ ಕೇಂದ್ರ ಮಂಡಳಿಯ ನಿಯೋಗದ ಭೇಟಿ ವೇಳೆ ಮಾತನಾಡಿದ ಅವರು, ಸರ್ಕಾರ ಘೋಷಿಸಿದ್ದಂತೆ ಐದು ಗ್ಯಾರಂಟಿಗಳನ್ನು ಈಗಲೇ ಅನುಷ್ಠಾನಕ್ಕೆ ತರುತ್ತಿದ್ದು, ಮುಂದಿನ ವರ್ಷದಿಂದ ಅಲ್ಪಸಂಖ್ಯಾತರಿಗೆ ಹೆಚ್ಚಿನ ಅನುದಾನ ನಿಗದಿಪಡಿಸಲಾಗುವುದು ಎಂದು ಸಿಎಂ ತಿಳಿಸಿದರು. ಚಾವಡಿಯು ಒಂದು ದಶಕದಿಂದ ಕರ್ನಾಟಕದ ಜನಪರ …

Read More »

ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿ ಜುಲೈ3 ವರೆಗೆ ವಿಸ್ತರಿಸಿ ಸರ್ಕಾರ ಆದೇಶ

ಬೆಂಗಳೂರು: ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ಮತ್ತೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ಜುಲೈ 3ರ ವರೆಗೆ ವರ್ಗಾವಣೆ ಅವಧಿಯನ್ನು ಸರ್ಕಾರ ವಿಸ್ತರಿಸಿದೆ. 2023-24ನೇ ಸಾಲಿನ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ಮೂರನೇ ಬಾರಿಗೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಮೊದಲು 2023-24ನೇ ಸಾಲಿನ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗಳನ್ನು ಜೂನ್​ 15ರವರೆಗೆ ಕೈಗೊಳ್ಳಲು ಆದೇಶಿಸಲಾಗಿತ್ತು. ಬಳಿಕ ಜೂನ್ 30ರವರೆಗೆ ಸಾರ್ವತ್ರಿಕ ವರ್ಗಾವಣೆ ವಿಸ್ತರಿಸಿ ಆದೇಶ ಹೊರಡಿಸಲಾಗಿತ್ತು. ಇದೀಗ ಸಾರ್ವತ್ರಿಕ …

Read More »

ಪಿಬಿ ರಸ್ತೆಯ ನೇಕಾರ ನಗರದಲ್ಲಿ ಗುರಿ ಅಡ್ಡಾ ಗೆ ಆಕಸ್ಮಿಕವಾಗಿ ಬೆಂಕಿ

ಪಿಬಿ ರಸ್ತೆಯ ನೇಕಾರ ನಗರದಲ್ಲಿ ಗುರಿ ಅಡ್ಡಾ ಗೆ ಆಕಸ್ಮಿಕವಾಗಿ ಬೆಂಕಿ ತಗಲಿದ ಪರಿಣಾಮ ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಕರಕಲಾದ ಘಟನೆ ನಡೆದಿದ್ದು, ದೊಡ್ಡ ಅವಘಡ ತಪ್ಪಿದಂತಾಗಿದೆ. ಆಕಸ್ಮಿಕವಾಗಿ ಬೆಂಕಿ ತಗಲಿದ್ದು, ಪಕ್ಕದಲ್ಲಿಯೇ ವಿದ್ಯುತ್ ಹೈಪರ್ ಲೈನ್ ಇದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಅಗ್ನಿ ಅವಘಡದಿಂದಾಗಿ ಕೆಲ ಕಾಲ ಬಿಗುವಿನ ವಾತಾವರಣ ಮನೆಮಾಡಿತ್ತು, ನಂತರ ಅಗ್ನಿಶಾಮಕ ಸಿಬ್ಬಂದಿಗಳು ಬಂದು ಬೆಂಕಿ ನಂದಿಸುವಲ್ಲಿ ಮುಂದಾಗಿದ್ದಾರೆಂದು ತಿಳಿದು ಬಂದಿದೆ.

Read More »

ಪೆಟ್ರೋಲ್ ಪಂಪಿಗೆ ಆಗಮಿಸಿ, ಸಾವಿರ ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡು, ಪರಾರಿ

ದ್ವಿಚಕ್ರ ವಾಹನ ಸವಾರನು ಪೆಟ್ರೋಲ್ ಪಂಪಿಗೆ ಆಗಮಿಸಿ, ಸಾವಿರ ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡು, ಪರಾರಿ ಆಗುತ್ತಿರುವ ಘಟನೆಯೊಂದು ಶಿರುಗುಪ್ಪಿ ಗ್ರಾಮದ ಪಂಪುಗಳಲ್ಲಿ ಸಂಭವಿಸುತ್ತಿದ್ದು, ಪಂಪ್ ಕಾರ್ಮಿಕರು ಹೈರಾಣಾಗಿದ್ದಾರೆ. ಶಿರುಗುಪ್ಪಿ ಗ್ರಾಮದಲ್ಲಿ ಸುಮಾರು ಮೂರು ಪೆಟ್ರೋಲ್ ಪಂಪ್‌ಗಳಿದ್ದು, ಉಗಾರ್ ರಸ್ತೆಯಲ್ಲಿರುವ ಪೆಟ್ರೋಲ್ ಪಂಪಿನಲ್ಲಿ ಸತತ ಮೂರನೇ ಬಾರಿಗೆ ಇಂಥದೊಂದು ಘಟನೆ ಸಂಭವಿಸಿದೆ. ಇದಲ್ಲದೆ ಜುಗೂಳ ರಸ್ತೆಯಲ್ಲಿರುವ ಪಂಪ್‌ನಲ್ಲಿಯೂ ಸಹ ಇಂಥದೇ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ . ಈ ಕುರಿತು …

Read More »

ರೈತ ಸಾವನ್ನಪ್ಪಿದ ಕೆಲವೇ ಗಂಟೆಯಲ್ಲಿ ಪ್ರಾಣಬಿಟ್ಟ ಎತ್ತು.

ಗದಗ: ಎತ್ತು ಮತ್ತು ಅದರ ಮಾಲೀಕ ಒಂದೇ ದಿನ ಮೃತಪಟ್ಟ ಘಟನೆ ಗದಗ ತಾಲೂಕಿನ ಬೆನಕನಕೊಪ್ಪದಲ್ಲಿ‌ ಗುರುವಾರ ನಡೆದಿದೆ. ಅಕಾಲಿಕವಾಗಿ ಮಾಲೀಕ ಭೀಮಪ್ಪ‌ ಕಣಗಿನಹಾಳ (90) ಮರಣ ಹೊಂದಿದ್ದರು. ಬಳಿಕ ಕೆಲವೇ ಗಂಟೆಗಳಲ್ಲಿ ಕೃಷಿ ಕಾರ್ಯ‌ದಲ್ಲಿ ರೈತನ ಜೊತೆಗಿದ್ದ ಪ್ರೀತಿಯ ಎತ್ತು ಕೂಡ ಕೊನೆಯುಸಿರೆಳೆದಿದೆ. ಮಾಲೀಕನ‌ ಸಾವಿನ‌ ಬೆನ್ನಲ್ಲೇ ಎತ್ತು ಸಾವನ್ನಪ್ಪಿರುವ ಘಟನೆ ಕಂಡು ಗ್ರಾಮಸ್ಥರು ಮಮ್ಮಲ‌ ಮರುಗಿದರು. ಮನಕಲಕುವ ಘಟನೆ ಕಂಡು ಸುತ್ತಮುತ್ತಲಿನ ಗ್ರಾಮಸ್ಥರು ಕೂಡ ಕಣ್ನೀರಿಟ್ಟರು. ಭೀಮಪ್ಪನ ಜಮೀನಿನಲ್ಲಿ …

Read More »

ಎರಡನೇ ಆಷಾಢ ಶುಕ್ರವಾರ: ಸಿಂಹವಾಹಿನಿ ಅಲಂಕಾರದಲ್ಲಿ ಚಾಮುಂಡೇಶ್ವರಿ ದೇವಿ, ದರ್ಶನಕ್ಕೆ ಭಕ್ತರ ದಂಡು

ಮೈಸೂರು : ಇಂದು ಎರಡನೇ ಆಷಾಢ ಶುಕ್ರವಾರವಾದ ಪ್ರಯುಕ್ತ ನಾಡ ಅಧಿದೇವತೆ ಚಾಮುಂಡಿ ತಾಯಿಯ ಮೂಲ ಮೂರ್ತಿಗೆ ವಿಶೇಷ ಸಿಂಹವಾಹಿನಿ ಅಲಂಕಾರ ಮಾಡಲಾಗಿದ್ದು, ಬೆಳಗ್ಗೆಯಿಂದಲೇ ನಾಡಿನ ವಿವಿಧ ಕಡೆಗಳಿಂದ ಆಗಮಿಸಿದ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಿದ್ದಾರೆ. ಆಷಾಢ ಶುಕ್ರವಾರದ ನಿಮಿತ್ತ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ. ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆಯಲು ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಭಕ್ತರು ಅನುಕೂಲಕ್ಕಾಗಿ ನಗರದ …

Read More »

ಬೇರೆಯವರಿಗೆ ಹೊರೆಯಾಗಬಾರದೆಂದು 15 ವರ್ಷದ ಹಿಂದೆಯೇ ಸಮಾಧಿ ಮಾಡಿಕೊಟ್ಟುಕೊಂಡಿದ್ದ ಅಜ್ಜ…

ಕಲಬುರಗಿ: ತನ್ನ ಸಾವಿನ ಬಳಿಕ ಯಾರಿಗೂ ಹೊರೆಯಾಗಬಾರದೆಂಬ ಉದ್ದೇಶದಿಂದ ಹಾವು ಕಚ್ಚಿದಾಗ ಸಾವಿಗೂ ಮುನ್ನ ಅಜ್ಜಿಯೊಬ್ಬಳು ತನ್ನ ಕೊರಳಲ್ಲಿನ ತಾಳಿ ಬಿಚ್ಚಿಕೊಟ್ಟು ಅಂತ್ಯ ಸಂಸ್ಕಾರಕ್ಕೆ ಬಳಕೆ ಮಾಡಿಕೊಳ್ಳುವಂತೆ ಹೇಳಿದ್ದ ಸುದ್ದಿಯೊಂದು ವರದಿಯಾಗಿತ್ತು. ಇದೀಗ ಅದೇ ರೀತಿಯ ಮತ್ತೊಂದು ಸುದ್ದಿ ಜನರ ಗಮನ ಸೆಳೆಯುತ್ತಿದೆ. ತೀರಿಕೊಂಡ ಬಳಿಕ ಯಾರಿಗೂ ಹೊರೆ ಆಗೋದು ಬೇಡ ಅಂತ ಅಜ್ಜನೋರ್ವ ಬರೋಬ್ಬರಿ 15 ವರ್ಷಗಳ ಹಿಂದೆಯೇ ಗುಂಡಿ ತೆಗೆದಿದ್ದು, ಈಗ ಅವರನ್ನು ಅದೇ ಗುಂಡಿಯಲ್ಲಿ ಸಮಾಧಿ‌ ಮಾಡಲಾಗಿದೆ. …

Read More »

30 ವರ್ಷಗಳ ಬಳಿಕ‌ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆ ಕೈ ಕೊಟ್ಟಿದೆ.

ಚಿಕ್ಕಮಗಳೂರು: 30 ವರ್ಷಗಳ ಬಳಿಕ‌ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆ ಕೈ ಕೊಟ್ಟಿದೆ. ಪ್ರತಿ ವರ್ಷ ಸುರಿಯುತ್ತಿದ್ದ ವಾಡಿಕೆ ಮಳೆಯೂ ಆಗದೆ ಮಲೆನಾಡು ಸೇರಿದಂತೆ ಬಯಲುಸೀಮೆ ಭಾಗದಲ್ಲಿ ‌ಬರದ ವಾತಾವರಣ ಸೃಷ್ಟಿಯಾಗುವ ಆತಂಕ ಮೂಡಿದೆ. ಚಿಕ್ಕಮಗಳೂರು ಜಿಲ್ಲೆಯ ಮೇಲೆ ಮುನಿಸಿಕೊಂಡಿರುವ ವರುಣ ದೇವನಿಗಾಗಿ ಜನತೆ ದೇವರ ಮೊರೆ ಹೋಗುತ್ತಿದ್ದಾರೆ. ಹೌದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುನಿಸಿಕೊಂಡಿರುವ ವರುಣನಿಗಾಗಿ ಮಲೆನಾಡಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತಿದ್ದು, 3 ದಶಕದ ಬಳಿಕ‌ ಕಾಫಿನಾಡಿನಲ್ಲಿ ಬರದ ಆತಂಕ ಮನೆ ಮಾಡಿದೆ. …

Read More »