Breaking News

Yearly Archives: 2022

ಸಿದ್ದರಾಮಯ್ಯಗೆ ಸಡ್ಡು ಹೊಡೆದ ವರ್ತೂರು ಪ್ರಕಾಶ್‌

ವೇಮಗಲ್‌/ಕೋಲಾರ: ಕೋಲಾರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ನನ್ನ ವಿರುದ್ಧ ಸಿದ್ದರಾಮಯ್ಯ ಕಣಕ್ಕಿಳಿಯುವ ದುಸ್ಸಾಹಸ ಮಾಡುವುದಿಲ್ಲ. ನಾನೂ ಕುರುಬ ಸಮಾಜದವನೇ. ಇಲ್ಲಿಗೆ ಬಂದರೆ ಇಡೀ ಕುರುಬ ಸಮಾಜ ಅವರಿಗೆ ಛೀಮಾರಿ ಹಾಕುತ್ತದೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್‌ ಎಚ್ಚರಿಸಿದರು.   ಸಿದ್ದರಾಮಯ್ಯ ಕೋಲಾರ ಭೇಟಿ ಸಂದರ್ಭದಲ್ಲೇ ಮಾಜಿ ಸಿಎಂ ಸಂಚರಿಸುವ ಮಾರ್ಗದಲ್ಲೇ ವೇಮಗಲ್‌ ಮೂಲಕ ಸೀತಿ -ಮದ್ದೇರಿ-ರಾಜಕಲ್ಲಹಳ್ಳಿವರೆಗೂ ಬೃಹತ್‌ ಬೈಕ್‌ ರ್‍ಯಾಲಿ ಮೂಲಕ ಶಕ್ತಿ ಪ್ರದರ್ಶನ ನಡೆಸಿ, ಸಿದ್ದರಾಮಯ್ಯ ಅವರಿಗೆ ಸಡ್ಡು ಹೊಡೆದು …

Read More »

ಕುರಿಗಾಹಿಗಳಿಗೆ ಸಿಹಿ ಸುದ್ದಿ: ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಜಾರಿ

ಬೆಂಗಳೂರು: ಮುಂದಿನ ಚುನಾವಣೆಯಲ್ಲಿ 150 ಸ್ಥಾನದ ಗುರಿಯೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೇರುವ ನಿಟ್ಟಿನಲ್ಲಿ ರಣತಂತ್ರ ರೂಪಿಸಿರುವ ಬಿಜೆಪಿ ಸರ್ಕಾರ ಕುರಿಗಾಹಿಗಳನ್ನು ವಿಶ್ವಾಸಕ್ಕೆ ಪಡೆಯಲು ಮುಂದಾಗಿದೆ. ಕುರಿಗಾಹಿಗಳಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟು ಆರ್ಥಿಕವಾಗಿ ಬಲವರ್ಧನೆ ಮಾಡುವ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಜಾರಿಗೊಳಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕುರಿದೊಡ್ಡಿಗೆ ಶೆಡ್ ನಿರ್ಮಿಸಿಕೊಳ್ಳಲು ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಕುರಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ. ಮಾರುಕಟ್ಟೆ ಮೇಲಿನ ಮಾಫಿಯಾದ ಹಿಡಿತ ತಪ್ಪಿಸಲು ಕುರಿ …

Read More »

ತಂದೆಯ ಪ್ರಾಣ ಉಳಿಸಿದ್ದ ಮಗಳಿಗೆ ಶೌರ್ಯ ಪ್ರಶಸ್ತಿ..

ಕಾರವಾರ: ಆಕೆಗೆ ಕೇವಲ 11 ವರ್ಷ ಮಾತ್ರ. ಆದರೆ ಆಕೆ ಮಾಡಿರುವ ಕೆಲಸ ಇಡೀ ಜಗತ್ತು ಮೆಚ್ಚಿಸುವಂತದ್ದು. ತಂದೆಯ ಜೀವವನ್ನು ಕಾಪಾಡುವ ಮೂಲಕ‌ ಅನೇಕರಿಗೆ ಮಾದರಿಯಾಗಿದ್ದಾಳೆ. ಅಂದ ಹಾಗೆ ಇವಳ ಹೆಸರು ಕೌಸಲ್ಯ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರಿನವಳು. ಇದೀಗ ರಾಜ್ಯ ಸಮಾಜ ಕಲ್ಯಾಣ ಇಲಾಖೆಯಿಂದ ಕೊಡುವ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾಳೆ. ಹೌದು, ಈಕೆಯ ತಂದೆ ಕಾರ್ಯಕ್ರಮದಲ್ಲಿ ಅಡುಗೆ ಮಾಡುವವರು. 2021ರ ಮಾರ್ಚ್ 15ರಂದು ಮಾವಿನಗುಂಡಿ ಸಮೀಪದ ಹಳ್ಳಿಯೊಂದಕ್ಕೆ …

Read More »

ಅಸಂಘಟಿತ ಕಾರ್ಮಿಕರಿಗೆ ಗುಡ್ ನ್ಯೂಸ್: ವಿವಿಧ ಸೌಲಭ್ಯ ಯೋಜನೆಗಳ ಜಾರಿಗೆ ಹೊಸ ನೀತಿ

ಬೆಂಗಳೂರು: ಅಸಂಘಟಿತ ಕಾರ್ಮಿಕರಿಗೆ ವಿವಿಧ ಸೌಲಭ್ಯ ಕಲ್ಪಿಸಲು ಯೋಜನೆಗಳ ಜಾರಿಗೆ ಹೊಸ ನೀತಿ ಜಾರಿಗೆ ತರಲಾಗುವುದು. ಕನಿಷ್ಠ ಸೌಲಭ್ಯಗಳನ್ನು ನೀಡದೆ ಅಸಂಘಟಿತ ಕಾರ್ಮಿಕರನ್ನು ದುಡಿಸಿಕೊಳ್ಳಲಾಗುತ್ತಿದೆ. ಹೀಗಾಗಿ ಸಂಕಷ್ಟದಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ವಿವಿಧ ಯೋಜನೆಗಳ ಸೌಲಭ್ಯ ದೊರಕಿಸಿಕೊಡಲು ಹೊಸ ನೀತಿ ಜಾರಿಗೊಳಿಸಲಾಗುವುದು ಎಂದು ಹೇಳಲಾಗಿದೆ.   ರೆಡಿಮೇಡ್ ಗಾರ್ಮೆಂಟ್ಸ್, ಆಪ್ ಆಧಾರಿತ ವಾಹನಗಳ ಚಾಲಕರು, ಆಹಾರ ಹಾಗೂ ಇತರೆ ವಸ್ತುಗಳ ಡೆಲಿವರಿ ನೀಡುವವರು, ನಿರ್ಮಾಣ ಕ್ಷೇತ್ರ ಮೊದಲಾದ ವಲಯಗಳ ಕೆಲಸ ಮಾಡುತ್ತಿರುವ ಅಸಂಘಟಿತ …

Read More »

ಲಾರಿ, ಟ್ರ್ಯಾಕ್ಟರ್, ಬೈಕುಗಳ ಮಧ್ಯೆ ಡಿಕ್ಕಿ; ಮೂವರಿಗೆ ಗಂಭೀರ ಗಾಯ

ಹಿರೇಬಾಗೇವಾಡಿ (ಬೆಳಗಾವಿ ಜಿಲ್ಲೆ): ಹಿರೇಬಾಗೇವಾಡಿ ಹೊರವಲಯದ ಘಾಟ್ ರಸ್ತೆಯಲ್ಲಿ ಭಾನುವಾರ ಲಾರಿ, ಟ್ರ್ಯಾಕ್ಟರ್ ಹಾಗೂ ಎರಡು ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿ ಮೂವರು ತೀವ್ರ ಗಾಯಗೊಂಡಿದ್ದಾರೆ. ಬೆಳಗಾವಿ ಕಡೆಯಿಂದ ಧಾರವಾಡ ಕಡೆಗೆ ಹೊರಟಿದ್ದ ಲಾರಿಯು ಖಡಿ ತುಂಬಿಕೊಂಡು ಹೊರಟಿದ್ದ ಟ್ರ್ಯಾಕ್ಟರಿಗೆ ಹಿಂದಿನಿಂದ ಡಿಕ್ಕಿ ಹೊಡೆಯಿತು. ಈ ಎರಡೂ ವಾಹನಗಳು ರಸ್ತೆ ಪಕ್ಕದ ಎರಡು ಬೈಕುಗಳಿಗೆ ಡಿಕ್ಕಿ ಹೊಡೆದವು. ಒಂದಕ್ಕೂಂದು ಗುದ್ದಿದ ರಭಸಕ್ಕೆ ನಾಲ್ಕೂ ವಾಹನಗಳು ರಸ್ತೆ ಬದಿಗೆ ಉರುಳಿ ಬಿದ್ದವು. …

Read More »

ತಂದೆಯನ್ನು ಸೋಲಿಸಿದಂತೆ ಮಗನನ್ನೂ ಸೋಲಿಸುತ್ತೇವೆ: ಬಾಬುರಾವ್ ಚಿಂಚನಸೂರು

ಯಾದಗಿರಿ : ನಿಮ್ಮ ತಂದೆಗೆ ಸೋಲಿಸಿದಂಗ ಮುಂದಿನ ಚುನಾವಣೆಯಲ್ಲಿ ನಿಮ್ಮನ್ನೂ ಸೋಲಿಸುತ್ತೇವೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಪ್ರಿಯಾಂಕ್ ಖರ್ಗೆ ವಿರುದ್ದ ಗುಡುಗಿದ್ದಾರೆ. ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಕಾರ್ಯಕ್ರಮ ಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿ, ಮನಸ್ಸು ಮಾಡಿದ್ರೆ ಬಿಜೆಪಿ ಲೀಡರ್ ಓಡಾವುದಿಲ್ಲ ಎಂಬ ಪ್ರಿಯಾಂಕ ಖರ್ಗೆ ಹೇಳಿಕೆ ನೀಡಿದ್ದಾರಲ್ಲ ಅವರಿಗೆ ಮನಸ್ಸು ಸ್ಥಿಮಿತದಲ್ಲಿ ಇಲ್ಲ ಶಾಸಕರಾಗಿ ಧಮ್ಕಿ ಮಾತು ಆಡಬಾರದಿತ್ತು. ಧಮ್ಕಿ ಮಾತನಾಡಿದ್ದು ಆತನ …

Read More »

ವಿಧಾನಸಭೆ ಚುನಾವಣೆಗೆ ‘ಕೈ’ ಟಿಕೆಟ್‌: 200 ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಬಯಸಿ ₹ 5 ಸಾವಿರ ಶುಲ್ಕ ಪಾವತಿಸಿ ಕೆಪಿಸಿಸಿಯಿಂದ ಅರ್ಜಿ ಪಡೆದುಕೊಂಡಿದ್ದ 800 ಆಕಾಂಕ್ಷಿಗಳ ಪೈಕಿ 200 ಮಂದಿ ಅರ್ಜಿ ಸಲ್ಲಿಸಿದ್ದಾರೆ.   ‘ಈವರೆಗೆ ಅರ್ಜಿ ಸಲ್ಲಿಸಿದವರಲ್ಲಿ ಕೆ.ಆರ್‌. ನಗರದಿಂದ ಕಣಕ್ಕಿಳಿಯಲು ಬಯಸಿರುವ ಐಶ್ವರ್ಯಾ ಮಹದೇವ್‌ (27) ಅತಿ ಕಿರಿಯ, ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಲು ಇಚ್ಛಿಸಿರುವ ಶಾಮನೂರು ಶಿವಶಂಕರಪ್ಪ (92) ಅತಿ ಹಿರಿಯ ಆಕಾಂಕ್ಷಿ’ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. …

Read More »

ಚುನಾವಣೆ ಕ್ಷೇತ್ರದ ಹುಡುಕಾಟ: ಕೋಲಾರಕ್ಕೆ ಸಿದ್ದರಾಮಯ್ಯ

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸೂಕ್ತ ಕ್ಷೇತ್ರದ ಹುಡುಕಾಟದಲ್ಲಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಭಾನುವಾರ ಬೆಳಿಗ್ಗೆ ಕೋಲಾರಕ್ಕೆ ಪ್ರಯಾಣ ಬೆಳೆಸಿದರು. ರಾಜ್ಯದಾದ್ಯಂತ ಚುನಾವಣಾ ಪ್ರಚಾರಕ್ಕೆ ಕೈಗೊಳ್ಳಲು ವಿಶೇಷವಾಗಿ ಸಿದ್ದಪಡಿಸಿರುವ ಬಸ್‌ನಲ್ಲಿ ಅವರು ಪ್ರಯಾಣ ಬೆಳೆಸಿದರು. ಕೋಲಾರ ಜಿಲ್ಲೆಯ ಪಕ್ಷದ ಮುಖಂಡರೂ ಅವರ ಜೊತೆಗೆ ಇದ್ದರು. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, ‘ಎಲ್ಲರು ಒಟ್ಟಾಗಿ ಹೋಗಬೇಕು. ಆ ಕಾರಣಕ್ಕೆ ಬಸ್ಸಿನಲ್ಲಿ ಹೋಗುತ್ತಿದ್ದೇವೆ. ಕೋಲಾರದವರು ನನ್ನನ್ನು ಕರೆಯುತ್ತಿದ್ದಾರೆ. …

Read More »

ರಾಯಬಾಗ ಜನಸಂಕಲ್ಪ ಯಾತ್ರೆಗೆ ಐಹೊಳೆಸೀರೆ,ಹಣ ನೀಡಿ ಜನರನ್ನು ಕರೆತಂದಿದ್ದಾರೆ: ಗಂಗಾಧರ ದೇವರುಷಿ

ಬೆಳಗಾವಿ ಜಿಲ್ಲೆಯ ರಾಯಬಾಗದಲ್ಲಿ ನಡೆದ‌ ಜನಸಂಕಲ್ಪಯಾತ್ರೆಗೆ ಶಾಸಕ ದುರ್ಯೋಧನ ಐಹೊಳೆ ಜನರಿಗೆ ಸೀರೆ ಹಾಗೂ ಹಣವನ್ನು ನೀಡಿ ಜನರನ್ನು ಕರೆತಂದಿದ್ದಾರೆಂದು ಸಾಮಾಜಿಕ ಕಾರ್ಯಕರ್ತ ಗಂಗಾಧರ ದೇವರುಷಿ ಆರೋಪಿಸಿದರು… ರಾಯಬಾಗ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ಬಿಜೆಪಿ ಪಕ್ಷದ ಜನಸಂಕಲ್ಪ ಯಾತ್ರೆಯ ಯಶಸ್ವಿಯಾಗಿ ಶಾಸಕ ದುರ್ಯೊಧನ ಐಹೊಳೆಯವರು ಜನರಿಗೆ ಸೀರೆ,ಹಣವನ್ನು ನೀಡಿ ಜನರನ್ನು ಕರೆತಂದಿದ್ದಾರೆ.ಕೊರೊನಾ ಸಂಧರ್ಭದಲ್ಲಿ ಕ್ಷೇತ್ರದ ಎಲ್ಲ ಜನರಿಗೆ ಸಹಾಯ ಮಾಡಲು ಆಗುವುದಿಲ್ಲ ‌ಎಂದು ಹೇಳಿದ್ದ ಶಾಸಕ …

Read More »

ಹೆಸ್ಕಾಂ ಬೆಜವಾಬ್ದಾರಿ??? ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಇಬ್ಬರು ಕಾರ್ಮಿಕರು ದುರ್ಮರಣ

ವಿದ್ಯುತ್ ಇಲಾಖೆಯ ತುರ್ತು ನಿರ್ವಹಣೆಯ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಇಬ್ಬರು ಕಾರ್ಮಿಕರು ದುರ್ಮರಣ ಹೊಂದಿರುವ ಘಟನೆ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಹೊರವಲಯದಲ್ಲಿ ಕೆಇಬಿ ಕೆಲಸಕ್ಕೆ ದಿನಗೂಲಿ ಆಧಾರದ ಮೇಲೆ ಬಂದಿದ್ದ ರಾಯಭಾಗ ತಾಲೂಕಿನ ಹಿಡಕಲ್ ಗ್ರಾಮದ ಹಣಮಂತ ಹಾಲಪ್ಪ ಮಗದುಮ್(೩೦) ಹಾಗೂ ಅಶೋಕ ಮಾಳಿ (೩೫) ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ. ವಿದ್ಯುತ್ ತಗುಲಿದ …

Read More »