ಬೆಳಗಾವಿ: ಈ ಬಾಲಕನ ವಯಸ್ಸು ಹದಿಮೂರು. ಈಗಾಗಲೇ ಆತನಿಗೆ ಹನ್ನೆರಡು ಶಸ್ತ್ರಚಿಕಿತ್ಸೆಗಳಾಗಿವೆ. ಆದರೆ, ಈ ಬಾಲಕನ ಸಾಧನೆಗೆ ಯಾವುದೂ ಅಡ್ಡಿಬಂದಿಲ್ಲ. ಅಂಗ ವೈಕಲ್ಯದ ಮಧ್ಯೆಯೂ ರಾಷ್ಟ್ರಮಟ್ಟದ ಈಜು ಟೂರ್ನಿಗಳಲ್ಲಿ ಮಿಂಚುತ್ತಿದ್ದಾರೆ. ನಗರದ ಅನಗೋಳ ಬಡಾವಣೆಯ ಈಜುಪಟು ಅನಿಕೇತ್ ಚಿದಂಬರ ಪಿಲನಕರ್ ಯಶೋಗಾಥೆ ಇದು. ಹುಟ್ಟಿನಿಂದಲೂ ಆರೋಗ್ಯ ಸಮಸ್ಯೆ ಎದುರಿಸುತ್ತಲೇ ಬೆಳೆದ ಬಾಲಕ, ಇದೀಗ ಈಜಿನಲ್ಲಿ ಸಾಧನೆ ಮೆರೆಯುತ್ತಿದ್ದಾರೆ. ರಾಷ್ಟ್ರೀಯ ಟೂರ್ನಿಗಳಲ್ಲಿ 6, ರಾಜ್ಯಮಟ್ಟದ ಟೂರ್ನಿ ಗಳಲ್ಲಿ 3 ಚಿನ್ನದ …
Read More »Yearly Archives: 2022
ಅವತ್ತು ನನ್ನ ಮಾತು ಕೇಳಿದ್ದರೆ ಮಗಳು ಉಳಿಯುತ್ತಿದ್ದಳು. ಶ್ರದ್ದಾ ತಂದೆಯ ಕಣ್ಣಿರೀನ ಮಾತು
ಮುಂಬಯಿ : ದೆಹಲಿಯಲ್ಲಿ ಸಂಚಲನ ಮೂಡಿಸಿದ ಶ್ರದ್ದಾ ಹತ್ಯೆ ಪ್ರಕರಣ ಹಿಂದೆ ಒಂದರ ಹಿಂದೆ ಒಂದರಂತೆ ಭಯಾನಕ ವಿಚಾರಗಳು ಬೆಳಕಿಗೆ ಬರುತ್ತಿವೆ. ಇದೆಲ್ಲದರ ನಡುವೆ ತನ್ನ ಮಗಳನ್ನು ಕಳೆದುಕೊಂಡ ತಂದೆ ದುಖ್ಖದ ಮಡುವಿನಲ್ಲಿ ಮರುಗುತಿದ್ದಾರೆ, ಶ್ರದ್ದಾ ಹಾಗೂ ಅಫ್ತಾಬ್ ಅಮೀನ್ ಪೂನಾವಾಲ ಪ್ರೀತಿಸುವ ವಿಚಾರ ಮನೆಯಲ್ಲಿ ಗೊತ್ತಾಗುತ್ತಿದ್ದಂತೆ ಶ್ರದ್ದಾ ಮನೆಯಲ್ಲಿ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು, ಆದರೆ ಶ್ರದ್ದಾ ಪೋಷಕರ ಮಾತನ್ನು ಕೇಳುವ ಹಂತದಲ್ಲಿ ಇರಲಿಲ್ಲ ಯಾಕೆಂದರೆ ಆಕೆಯೂ ಅಫ್ತಾಬ್ ನನ್ನ …
Read More »ಯಕ್ಷಗಾನಕ್ಕೆ ಅವಮಾನ ಮಾಡಿದ್ರಾ ಸಿದ್ದರಾಮಯ್ಯ..? ಕ್ಷಮೆ ಕೇಳಿ ಅಂತಿದೆ ಬಿಜೆಪಿ!
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಟೀಕಿಸುವ ಭರದಲ್ಲಿ ಕರಾವಳಿಯ ಆರಾಧನಾ ಕಲೆ ಯಕ್ಷಗಾನಕ್ಕೆ ಅವಮಾನ ಮಾಡಿದ್ದಾರೆ. ಈ ಕೂಡಲೇ ಕ್ಷಮೆ ಕೇಳಬೇಕು ಎಂದು ರಾಜ್ಯ ಬಿಜೆಪಿ ಆಗ್ರಹಿಸಿದೆ. ಸದಾ ಹಿಂದೂಗಳನ್ನು ಅವಮಾನಿಸುತ್ತಲೇ ಬಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿನ ಹೆಮ್ಮೆಯ ಕೆಲೆಯಾದ ಯಕ್ಷಗಾನಕ್ಕೆ ಅವಮಾನ ಮಾಡಿದ್ದಾರೆ. ಯಕ್ಷಗಾನ ನಮ್ಮ ರಾಜ್ಯದ ಅಧಿಕೃತ ಕಲೆ. ಕಲೆಯ ಬಗ್ಗೆ ನೀವು ಹೀನಾಯವಾಗಿ ಮಾತನಾಡಿದ್ದೀರಿ. ಇದೀಗ …
Read More »ರೋಗ ತಡೆಗೆ ನೀಡಿದ್ದ ಮಾತ್ರೆ ತಿಂದ ಮಕ್ಕಳು ಅಸ್ವಸ್ಥ!; 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲ
ಯಾದಗಿರಿ: ಕಲುಷಿತ ನೀರು ಕುಡಿದು, ಬಿಸಿಯೂಟ ತಿಂದು ಶಾಲಾ ಮಕ್ಕಳು ಅಸ್ವಸ್ಥಗೊಂಡ ಪ್ರಕರಣಗಳು ನಡೆದಿವೆ. ಇದೀಗ ಇಲ್ಲೊಂದು ಕಡೆ ರೋಗ ತಡೆಗೆ ನೀಡಿದ್ದ ಮಾತ್ರೆಗಳನ್ನು ತಿಂದ ಮಕ್ಕಳು ಅಸ್ವಸ್ಥಗೊಂಡಂಥ ಪ್ರಕರಣವೂ ವರದಿಯಾಗಿದೆ. ಈ ಘಟನೆಯಲ್ಲಿ 20ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಯಾದಗಿರಿ ತಾಲೂಕಿನ ಶೆಟ್ಟಿಗೆರೆ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಆನೆಕಾಲು ರೋಗ ತಡೆಗೆ ಮಾತ್ರೆಗಳನ್ನು ಸೇವಿಸಿ ಈ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಆನೆಕಾಲು ರೋಗ ಮುಕ್ತ ಮಾಡಲು ಇಂದು …
Read More »ಕಲಬುರಗಿಯಲ್ಲಿ ಬಿಜೆಪಿ ಮುಖಂಡನ ಬರ್ಬರ ಹತ್ಯೆ
ಕಲಬುರಗಿ: ಸೇಡಂ ಪಟ್ಟಣದಲ್ಲಿ ಬಿಜೆಪಿ ಮುಖಂಡರೊಬ್ಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಮಲ್ಲಿಕಾರ್ಜುನ್ ಮುತ್ಯಾಲ(64) ಕೊಲೆಯಾದವರು. ಬಿಜೆಪಿ ಮುಖಂಡರೂ ಆಗಿದ್ದ ಮಲ್ಲಿಕಾರ್ಜುನ್ ಅವರು ಸೇಡಂ ಪಟ್ಟಣದಲ್ಲಿ ಎಲೆಕ್ಟ್ರಾನಿಕ್ ಅಂಗಡಿ ಮತ್ತು ಟಿವಿ ಶಾಪ್ ಇಟ್ಟುಕೊಂಡಿದ್ದರು. ಎಲೆಕ್ಟ್ರಾನಿಕ್ ಅಂಗಡಿಯಲ್ಲೇ ಇಂದು(ಮಂಗಳವಾರ) ಮಲ್ಲಿಕಾರ್ಜುನ್ ಅವರನ್ನ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಮರ್ಮಾಂಗಕ್ಕೆ ಚಾಕು ಇರಿದು, ಕತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸೇಡಂ …
Read More »ಪ್ರೇಮ ವಿವಾಹಕ್ಕೆ ಅಡ್ಡಿಯಾದ ಪೋಷಕರು; ಮುಂದೆ ನಿಂತು ಮದುವೆ ಮಾಡಿಸಿದ ಪೊಲೀಸರು!
ನೆಲಮಂಗಲ: ಪ್ರೇಮಿಗಳ ಮದುವೆಗೆ ಪೋಷಕರು ಅಡ್ಡಿಯಾದ ಹಿನ್ನೆಲೆಯಲ್ಲಿ ಪೊಲೀಸರೇ ಮುಂದೆ ನಿಂತು ಮದುವೆ ಮಾಡಿದ ಘಟನೆ ನೆಲಮಂಗಲ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಮೂಲತಃ ಹಾವೇರಿಯ, ಪ್ರಸ್ತುತ ಕೆ.ಆರ್.ಪುರ ನಿವಾಸಿ ಕರಬಸಪ್ಪ (24) ಹಾಗೂ ಕಾರವಾರ ಮೂಲದ, ಪ್ರಸ್ತುತ ನೆಲಮಂಗಲ ನಿವಾಸಿ ಬಿಂದು (19) ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರು ಪ್ರೀತಿಯ ವಿಚಾರವನ್ನು ಮನೆಯಲ್ಲಿ ತಿಳಿಸಿದ್ದಾರೆ. ಆದರೆ ಪೋಷಕರು ಮಾತ್ರ ಇವರಿಬ್ಬರ ಪ್ರೀತಿಯನ್ನು ಬೆಂಬಲಿಸಿಲ್ಲ. ಪೋಷಕರ ಬೆಂಬಲ ವ್ಯಕ್ತವಾಗದ ಹಿನ್ನೆಲೆ …
Read More »ಮುಖ್ಯಮಂತ್ರಿಯನ್ನೇ ಅಂಕಲ್ ಮಾಡಿ ಅಣಕಿಸಿದ ಕಾಂಗ್ರೆಸ್; ಪೇಸಿಎಂ ರೀತಿ ಸಿಎಂಅಂಕಲ್ ಅಭಿಯಾನ?
ಬೆಂಗಳೂರು: ಶಾಲಾ ಮಕ್ಕಳಿಗೆ ಇನ್ನೂ ಪಠ್ಯಪುಸ್ತಕ ವಿತರಣೆ ಆಗದೆ ಇರುವ ಬಗ್ಗೆ ದನಿ ಎತ್ತಿರುವ ಕಾಂಗ್ರೆಸ್ ಈಗ ಮುಖ್ಯಂತ್ರಿ ಬಸವರಾಜ ಬೊಮ್ಮಾಯಿಯನ್ನು ‘ಅಂಕಲ್’ ಎಂದು ಕರೆದು ಅಣಕವಾಡಿದೆ. ಈ ಹಿಂದೆ ಪೇಸಿಎಂ ಅಭಿಯಾನ ವೈರಲ್ ಆಗಿತ್ತು. ಅದರಂತೆಯೇ ಸಿಎಂ ಅಂಕಲ್ ಕೂಡ ಭಾರಿ ವೈರಲ್ ಆಗುತ್ತಿದೆ. ಇತ್ತೀಚೆಗೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ‘ಕೇಸರಿ ಬಣ್ಣದಿಂದ ಮಕ್ಕಳ ಮಾನಸಿಕ ವಿಕಾಸ ಆಗುತ್ತೆ ಅಂತ ಪರಿಣಿತರು ವರದಿ ನೀಡಿದರೆ ನಾವು ಹಿಂದೇಟು …
Read More »ಮಕ್ಕಳ ದಿನಾಚರಣೆ ನಿಮಿತ್ಯವಾಗಿ 50 ಲಕ್ಷ ರೂ ವೆಚ್ಚದಲ್ಲಿ ಶಾಲಾ ಕೊನೆಗಳು ನಿರ್ಮಿಸಲು ಅಡಿಗಲು ಪೂಜೆ: ಶ್ರೀಮಂತ ಪಾಟೀಲ
ದೇಶದ ಮೊದಲನೆಯ ಪ್ರಧಾನೀ ಪಂಡಿತ್ ಜವಾಹರ್ಲಾಲ್ ನೆಹರು ಇವರು ಜನ್ಮ ಜಯಂತಿ ನಿಮಿತ್ಯವಾಗಿ ಕಾಗವಾಡದ ಉರ್ದು ಶಾಲೆ ಹಾಗೂ ಶಡಬಾಳ ಸ್ಟೇಷನ್ ಗ್ರಾಮದ ಕನ್ನಡ ಹಾಗೂ ಮರಾಠಿ ಶಾಲೆಯ ವಿದ್ಯಾರ್ಥಿಗಳಿಗಾಗಿ 50 ಲಕ್ಷ ರೂ ವೆಚ್ಚದಲ್ಲಿ ಶಾಲಾ ಕೊನೆಗಳು ಕಟ್ಟಿಸುವ ಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲರು ಅಡಿಗಲು ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಸೋಮವಾರರಂದು ಕಾಗವಾಡದ ಉರ್ದು ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಶಾಸಕರಿಂದ ಹೂಗಳು ನೀಡಿ ಮಕ್ಕಳಿಗೆ ಸನ್ಮಾನಿಸಲಾಯಿತು. ಶ್ರೀಮಂತ …
Read More »ಮನೆಯ ವರ್ಕ್ ಆರ್ಡರ್ ನೀಡಲು ಇಪ್ಪತ್ತು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ P.D.O.ಲೋಕಾಯುಕ್ತ ಬಲೆಗೆ
ಅತಿವೃಷ್ಟಿಯಿಂದ ಹಾನಿಗೊಳಗಾಗಿದ್ದ ಮನೆಯ ವರ್ಕ್ ಆರ್ಡರ್ ನೀಡಲು ಇಪ್ಪತ್ತು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಪಿಡಿಒ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ಸ್ವಕ್ಷೇತ್ರದಲ್ಲಿಯೇ ನಡೆದಿದೆ. ಹೌದು ಶಿಗ್ಗಾಂವಿ ತಾಲೂಕಿನ ನಾರಾಯಣಪೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಈರಣ್ಣ ಗಾಣಿಗಿ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ. ಕಳೆದ ಸೆಪ್ಟೆಂಬರನಲ್ಲಿ ಅತಿವೃಷ್ಟಿಯಿಂದ ಮನೆ ಹಾನಿಯಾದ ಮುನವಳ್ಳಿ ಗ್ರಾಮದ ಸಂಗಪ್ಪ ವೀರಭದ್ರಪ್ಪ ಕಿವುಡನವರ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಮನೆ ಪರಿಶೀಲನೆ …
Read More »ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಹತ್ಯೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಹುಕ್ಕೇರಿ ಪೊಲೀಸರು ಯಶಸ್ವಿ
ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಓರ್ವ ಅಜ್ಜಿಯನ್ನು ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಹುಕ್ಕೇರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌದು ಅಕ್ಟೋಬರ್ 7ರಂದು ಬೆಲ್ಲದಬಾಗೇವಾಡಿಯ ಮನೆಯೊಂದರಲ್ಲಿ 75 ವರ್ಷದ ಮಲ್ಲವ್ವ ಜೀವಪ್ಪ ಕಮತೆ ಎಂಬ ವೃದ್ಧ ಮಹಿಳೆ ಸಾವನ್ನಪ್ಪಿದ್ದರು. ಈ ವೇಳೆ ಸ್ಥಳಕ್ಕೆ ಭೇಟಿ ಕೊಟ್ಟಿದ್ದ ಹುಕ್ಕೇರಿ ಪೊಲೀಸರು ಆರಂಭದಲ್ಲಿ ಅನೈಸರ್ಗಿಕ ಸಾವು ಎಂದು ಕೇಸ್ ದಾಖಲಿಸಿಕೊಂಡಿದ್ದರು. ಆದರೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಈ ಅಜ್ಜಿಯನ್ನು ಕತ್ತು …
Read More »