Breaking News

Yearly Archives: 2022

ಆರ್​ಟಿಸಿ ಎಂಟ್ರಿಯಲ್ಲಿ ತಪ್ಪುಗಳಾದರೆ ಅಧಿಕಾರಿಗಳೇ ಹೊಣೆ!

ಇನ್ಮುಂದೆ ತಾಲೂಕು ಕಚೇರಿಗಳ ‘ಭೂಮಿ’ ಕೇಂದ್ರಗಳಲ್ಲಿ ಪಹಣಿ(ಆರ್​ಟಿಸಿ) ಎಂಟ್ರಿಯಲ್ಲಿ ತಪುಪಗಳಾದಲ್ಲಿ ಅದಕ್ಕೆ ಅಧಿಕಾರಿಗಳೇ ಹೊಣೆಯಾಗುತ್ತಾರೆ! ಜ.14ರಂದು ರಾಜ್ಯ ಭೂಮಾಪನ ಇಲಾಖೆ ಮತ್ತು ಭೂಮಿ ಉಸ್ತುವಾರಿ ಕೋಶದಿಂದ ಜಿಲ್ಲಾಧಿಕಾರಿಗಳಿಗೆ ಹೊರಡಿಸಲಾಗಿರುವ ಮಹತ್ವದ ಸುತ್ತೋಲೆಯಲ್ಲಿ ಇಂಥದ್ದೊಂದು ಆದೇಶ ಪ್ರಕಟವಾಗಿದೆ. ಅಧಿಕಾರಿಗಳ ಕಣ್ತಪ್ಪು ಹಾಗೂ ಬೇಜವಾಬ್ದಾರಿಯಿಂದ ಪಹಣಿಯಲ್ಲಿ ಸಾಗುವಳಿದಾರರ ಹೆಸರು ಇನ್ನಿತರ ಅಂಶಗಳ ತಪ್ಪು ದಾಖಲಾತಿ ಅಥವಾ ರದ್ದು ಸಾಮಾನ್ಯ. ಈ ತಪ್ಪನ್ನು ಸರಿಪಡಿಸಲು ಸಾರ್ವಜನಿಕರು ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಕಾಲಹರಣ ಮಾಡುತ್ತಿರುವ ಪ್ರಕರಣಗಳೇ …

Read More »

ಪಾಕಿಸ್ತಾನ-ಚೀನಾ ಒಟ್ಟಿಗೆ ತಂದಿದ್ದು ಮೋದಿ ಸರ್ಕಾರ: ರಾಹುಲ್ ಗಾಂಧಿ

ನವದೆಹಲಿ, ಫೆಬ್ರವರಿ 3: ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂಸತ್‌ನಲ್ಲಿ ಬಜೆಟ್ ಅಧಿವೇಶನದಲ್ಲಿ ಮಾತನಾಡಿ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಚೀನಾ ಮತ್ತು ಪಾಕಿಸ್ತಾನವನ್ನು ಒಟ್ಟಿಗೆ ತರುವ ಅಪರಾಧವನ್ನು ಕೇಂದ್ರ ಮಾಡಿದೆ. “ದೊಡ್ಡ ವ್ಯೂಹಾತ್ಮಕ ತಪ್ಪು” ಮಾಡಿದೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ ಅವರು ಬಿಜೆಪಿ ಸರ್ಕಾರದ ವಿದೇಶಾಂಗ ನೀತಿಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಅಧ್ಯಕ್ಷರ ಭಾಷಣದ …

Read More »

ರಮೇಶ ಬಂದಿದ್ರು-ನಾನೂ ಹೋಗಿದ್ದೆ, ಯುಗಾದಿ ಹೊತ್ತಿಗೆ ಬದಲಾವಣೆ ನಿಶ್ಚಿತ: ಯತ್ನಾಳ್‌

ಬೆಳಗಾವಿ ಸದ್ಯ ರಾಜ್ಯದಲ್ಲಿ ಪರ್ಯಾಯ ನಾಯಕತ್ವ ಆವಶ್ಯಕತೆ ಇದೆ. ಯುಗಾದಿ ಅನಂತರ ಹೊಸ ವರ್ಷಕ್ಕೆ ಬದಲಾವಣೆ ಆಗುವುದು ನಿಶ್ಚಿತ. ರಾಜ್ಯದಲ್ಲಿ ಒಳ್ಳೆಯ ಬದಲಾವಣೆ ಆಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರಿಯಾಶೀಲ ಇದ್ದವರು ಮಂತ್ರಿ ಆಗುತ್ತಾರೆ. ಕೆಲವರು ಪಕ್ಷದ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಕೆಲವರನ್ನು ಮಂತ್ರಿ ಸ್ಥಾನದಿಂದ ಮುಕ್ತಗೊಳಿಸಿ ಪಕ್ಷದ ಜವಾಬ್ದಾರಿ ಕೊಡಲಾಗುತ್ತದೆ. ನಾನಂತೂ ಮಂತ್ರಿ ಮಾಡುವಂತೆ ಮನವಿ ಮಾಡಿಲ್ಲ ಎಂದು ಹೇಳಿದರು. …

Read More »

ಸೋಮಾರಿ ಮಂತ್ರಿಗಳನ್ನ ಕೈಬಿಡಿ -ತಮ್ಮದೇ ಸರ್ಕಾರಕ್ಕೆ ವಿಶ್ವನಾಥ್ ಆಗ್ರಹ

ಬೆಂಗಳೂರು: ಸೋಮಾರಿ ಮಂತ್ರಿಗಳನ್ನ ಕೈಬಿಡಬೇಕು ಎಂದು ಪರಿಷತ್ ಸದಸ್ಯರಾದ ಹೆಚ್​​​.ವಿಶ್ವನಾಥ್ ಒತ್ತಾಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ವಿಶ್ವನಾಥ್​​.. ಕೇವಲ ವಿಧಾನಸಭಾ ಕ್ಷೇತ್ರವನ್ನೇ ರಾಜ್ಯ ಅಂದುಕೊಂಡಿರುವ, ರಾಜ್ಯ ಪರ್ಯಟನೆ ಮಾಡದ ಸಚಿವರನ್ನ ಕೈಬಿಡಬೇಕು. ರಾಜ್ಯದ ಅಭಿವೃದ್ಧಿಗೆ ಬದಲಾವಣೆ ಅಗತ್ಯ ಇದೆ. ಸರಿಯಾದ ರೀತಿಯಲ್ಲಿ ಸಂಪುಟ ಪುನಾರಚಿಸಿ, ಆಡಳಿತಕ್ಕೆ ಚುರುಕು ಮುಟ್ಟಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಹಿರಿಯ ಸಚಿವರು ಪಕ್ಷದ ಕೆಲಸ ಮಾಡ್ಲಿ, ಯುವ ಶಾಸಕರಿಗೆ ಸಂಪುಟದಲ್ಲಿ ಅವಕಾಶ ನೀಡಲಿ ಎಂದು ಸಲಹೆ ನೀಡಿದ್ದಾರೆ.

Read More »

ಕಾಂಗ್ರೆಸ್‌ಗೆ ನೋಟಿಸ್‌ ಬಿಕ್ಕಟ್ಟು; ಅಶೋಕ್‌ ಪಟ್ಟಣ್‌ಗೆ ನೋಟಿಸ್‌ ನೀಡಿದ್ದಕ್ಕೆ ಗುದ್ದಾಟ

ಬೆಂಗಳೂರು: ಮಾಜಿ ಶಾಸಕ ಅಶೋಕ್‌ ಪಟ್ಟಣ್‌ ಅವರಿಗೆ ನೋಟಿಸ್‌ ನೀಡಿದ ವಿಚಾರದಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಆ ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ಬಣ ರಾಜಕೀಯ ಸದ್ದು ಮಾಡುತ್ತಿದೆ. ಮೇಕೆದಾಟು ಪಾದಯಾತ್ರೆಯಲ್ಲಿ ಪ್ರದರ್ಶಿಸಿದ್ದ ಒಗ್ಗಟ್ಟು ಈಗ ನೋಟಿಸ್‌ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ನಡುವೆ ಗುದ್ದಾಟಕ್ಕೆ ಕಾರಣವಾದಂತಿದೆ. ಅಶೋಕ್‌ ಪಟ್ಟಣ್‌ ವಿರುದ್ಧ ಪರಾಮರ್ಶಿಸಿ ಕ್ರಮ ಕೈಗೊಳ್ಳಬಹುದಾಗಿತ್ತು. ದಿಢೀರ್‌ ನೋಟಿಸ್‌ ನೀಡಿರುವುದು ಸಿದ್ದರಾಮಯ್ಯನವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ …

Read More »

ಸೈಬರ್ ಖದೀಮರ ಹೆಡೆಮುರಿ ಕಟ್ಟಲು ಪೊಲೀಸ್ ಇಲಾಖೆ ತಯಾರಿ

ಬೆಂಗಳೂರು: ಸೈಬರ್ ಖದೀಮರ ಹೆಡೆಮುರಿ ಕಟ್ಟಲು ಪೊಲೀಸ್ ಇಲಾಖೆ ತಯಾರಿ ನಡೆಸಿದ್ದು, ನಗರದ ಎಂಟು ಸಿಇಎನ್ ಠಾಣೆಗೆ ಇಬ್ಬರು ಸೈಬರ್​ ​ಎಕ್ಸ್​ಪರ್ಟ್ಸ್​ಗಳನ್ನು ನೇಮಿಸಿಕೊಳ್ಳಲು ಪ್ರಕಟಣೆ ಹೊರಡಿಸಲಾಗಿದೆ. ನಗರದಲ್ಲಿ ಇತ್ತೀಚೆಗೆ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಎಕ್ಸ್​ಪರ್ಟ್ಸ್ ನೇಮಕಕ್ಕೆ ಜಾಹೀರಾತು ನೀಡಲಾಗಿದೆ. ಕೇಸ್​ ಪತ್ತೆ ಹಚ್ಚಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಪ್ರಕರಣ ಭೇದಿಸುವಲ್ಲಿ ಪರದಾಡುತ್ತಿದ್ದಾರೆ. ಕೌಶಲ್ಯತೆಯ ಕೊರತೆ ಕಂಡು ಬರುತ್ತಿದೆ. ಜೊತೆಗೆ ವರ್ಷದಿಂದ ವರ್ಷಕ್ಕೆ ಸಾವಿರಾರು …

Read More »

ರಾಜ್ಯಕ್ಕೆ ಮತ್ತೆ ಅನ್ಯಾಯ ಮಾಡಿದ ಕೇಂದ್ರ:‌ ಸತೀಶ್‌ ಜಾರಕಿಹೊಳಿ ಟೀಕೆ

    ಬೆಳಗಾವಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದ 2022-23ನೇ ಸಾಲಿನ ಬಜೆಟ್ ಶೂನ್ಯ ಬಜೆಟ್ ಆಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.   ಬಜೆಟ್‌ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ 25 ಜನ ಬಿಜೆಪಿ ಸಂಸದರಿದ್ದರೂ, ರಾಜ್ಯವನ್ನೇ ಪ್ರತಿನಿಧಿಸಿದ್ದರೂ ಹಣಕಾಸು ಸಚಿವರು, ರಾಜ್ಯದ ಜನರ ನಿರೀಕ್ಷೆ ಹುಸಿಗೊಳಿಸಿದ್ದಾರೆ ಎಂದು ಟೀಕಿಸಿದ್ದಾರೆ.   ದೇಶದ ಜನರು ಏಳು ವರ್ಷಗಳಿಂದ …

Read More »

ಶೀಘ್ರದಲ್ಲಿಯೇ ಆರಂಭವಾಗಲಿದೆ ಕಛೇರಿ ತಾಲೂಕಿನ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಅಸ್ಥೆ, ಕಾಳಜಿಯಿಂದ ಮೂಡಲಗಿ ತಾಲೂಕಿಗೆ ಹೊಸ ಉಪ ನೋಂದಣಿ ಕಛೇರಿಯನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ. ಈ ಮೂಲಕ ಶೀಘ್ರದಲ್ಲಿಯೇ ಮೂಡಲಗಿ ತಾಲೂಕಿನಲ್ಲಿ ಉಪ ನೋಂದಣಿ ಕಛೇರಿ ಆರಂಭಗೊಳ್ಳಲಿದೆ. ಹೊಸದಾಗಿ ಈ ಉಪ ನೋಂದಣಿ ಕಛೇರಿಯನ್ನು ಆರಂಭವಾಗಿರುವುದರಿಂದ ಮೂಡಲಗಿ, ಅರಭಾವಿ ಸೇರಿದಂತೆ ಸುತ್ತಮುತ್ತಲಿನ ಹೋಬಳಿ ಮತ್ತು ಗ್ರಾಮಗಳಲ್ಲಿರುವ ಸಾರ್ವಜನಿಕರಿಗೆ ಬಹಳ ಅನುಕೂಲವಾಗಲಿದೆ. ಈ ಮೊದಲು ಗೋಕಾಕ …

Read More »

ಎಂಟು ಮಂದಿಗೆ ಒಬ್ಬನೇ ಗಂಡ..!ಎಲ್ಲರೂ ಒಟ್ಟಿಗೆ ಬಾಳೋ ಈತನ ಸಂಸಾರದಲ್ಲಿ ಇಲ್ಲಿವರೆಗೂ ಕಿತ್ತಾಟ ನಡೆದಿಲ್ಲ

ಬಹುಪತ್ನಿತ್ವವನ್ನು ಹೊಂದಿರುವ ಹೆಚ್ಚಿನ ಪುರುಷರು ಒಂದೇ ಮನೆಯಲ್ಲಿ ಇಬ್ಬರು ಹೆಂಡತಿಯರೊಂದಿಗೆ ಸಹಬಾಳ್ವೆಯಿಂದ ಬದುಕಲು ಕಷ್ಟಪಡುತ್ತಾರೆ, ಆದರೆ ಥೈಲ್ಯಾಂಡ್‌ನ ವ್ಯಕ್ತಿಯೊಬ್ಬರು ಒಂದೇ ಸೂರಿನಡಿ ಎಂಟು ಯುವತಿಯರೊಂದಿಗೆ ವಾಸಿಸುವ ಕಥೆಯು ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯವಾಗಿದ್ದು ಅನೇಕ ನೆಟಿಜನ್‌ಗಳನ್ನು ಬೆಚ್ಚಿಬೀಳಿಸಿದೆ. ಆಡಿಟಿ ಸೆಂಟ್ರಲ್‌ನಿಂದ ಓಂಗ್ ಡ್ಯಾಮ್ ಸೊರೊಟ್ ಎಂದು ಹೆಸರಿಸಲಾದ ವ್ಯಕ್ತಿ, ವ್ಯಾಪಾರದಲ್ಲಿ ಹಚ್ಚೆ ಕಲಾವಿದ. ಟಿವಿ ಶೋನಲ್ಲಿ ಕಾಣಿಸಿಕೊಂಡು ತಮ್ಮ ಅನುಭವವನ್ನು ಹೇಳಿಕೊಂಡ ನಂತರ ಅವರು ಎತ್ತರಕ್ಕೆ ಏರಿದರು. ಲೇಖನದ ಪ್ರಕಾರ, ಸಂದರ್ಶನದ …

Read More »

ಹಿರಿಯ ನಟಿ, ಬಿಜೆಪಿ ಮುಖಂಡೆ ಜಯಪ್ರದಾ ಮನೆಯಲ್ಲಿ ಸಂಭವಿಸಿದ ದುರಂತ

ನವದೆಹಲಿ: ಹಿರಿಯ ನಟಿ ಹಾಗೂ ಬಿಜೆಪಿ ಮುಖಂಡೆ ಜಯಪ್ರದಾ ಅವರಿಗೆ ಮಾತೃ ವಿಯೋಗವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರ ತಾಯಿ ನೀಲವೇಣಿ (85) ಮಂಗಳವಾರ (ಫೆ. 01) ಮೃತಪಟ್ಟಿದ್ದಾರೆ. ಅನಾರೋಗ್ಯ ಹಿನ್ನೆಲೆಯಲ್ಲಿ ನೀಲವೇಣಿ ಅವರನ್ನು ಹೈದರಾಬಾದ್​ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಇದೇ ಸಮಯದಲ್ಲಿ ದೆಹಲಿಯಲ್ಲಿದ್ದ ಜಯಪ್ರದಾ ತಾಯಿ ಮೃತಪಟ್ಟಿರುವ ಸುದ್ದಿ ಕೇಳಿ ತಕ್ಷಣ ಹೈದರಾಬಾದ್​ ಕಡೆ ಪ್ರಯಾಣ ಬೆಳೆಸಿದರು. ಜಯಪ್ರದಾ ತಾಯಿಯ ಸಾವಿಗೆ ಚಿತ್ರರಂಗದ ಗಣ್ಯರು …

Read More »