Breaking News

Yearly Archives: 2022

ಬೆಳಗಾವಿ; ಮತ್ತೆ 3 ನಗರಗಳಿಗೆ ವಿಮಾನ ಸಂಚಾರ

ಬೆಳಗಾವಿ, ಫೆಬ್ರವರಿ 04;ಬೆಳಗಾವಿವಿಮಾನ ನಿಲ್ದಾಣದಿಂದ ಮತ್ತೆ ಮೂರು ನಗರಗಳಿಗೆ ವಿಮಾನ ಸಂಚಾರ ಆರಂಭಿಸಲಾಗುತ್ತದೆ. ಸ್ಟಾರ್ ಏರ್ ಈ ಕುರಿತು ಚರ್ಚೆ ನಡೆಸಿದ್ದು, ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಮಹಾರಾಷ್ಟ್ರದ ನಾಗ್ಪುರ, ರಾಜಸ್ಥಾನದ ಜೈಪುರ ಮತ್ತು ಬೆಂಗಳೂರಿಗೆ 3 ಹೊಸ ವಿಮಾನಗಳ ಸಂಚಾರ ಆರಂಭವಾಗಲಿದೆ. ನವದೆಹಲಿಗೆ ಸಹ ಬೆಳಗಾವಿಯಿಂದ ವಿಮಾನ ಸೇವೆ ಆರಂಭವಾಗಿದೆ. ಸ್ಟಾರ್ ಏರ್ ಸಂಸ್ಥೆ ಈ ಕುರಿತು ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕ …

Read More »

ಚಲಿಸುತ್ತಿದ್ದ ಬಸ್ ಹತ್ತಲು ಹೋಗಿ ಕೆಳಗೆ ಬಿದ್ದ ವಿದ್ಯಾರ್ಥಿ – ಮೈ ಝುಮ್ಮೆನಿಸುವ ದೃಶ್ಯ ಸೆರೆ!

ಶಿವಮೊಗ್ಗ: ಚಲಿಸುತ್ತಿದ್ದ ಬಸ್‍ನ್ನು ಓಡಿ ಹೋಗಿ ಹತ್ತಲು ಯತ್ನಿಸಿದ ವಿದ್ಯಾರ್ಥಿಯೋರ್ವ ಬಸ್‍ನಿಂದ ಕೆಳಗೆ ಬಿದ್ದ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್‍ನಲ್ಲಿ ನಡೆದಿದೆ. ಸಾಗರ ತಾಲೂಕಿನ ಇಡುವಾಣಿಯ ಚಿಪ್ಪಲಮಕ್ಕಿ ಗ್ರಾಮದ 9ನೇ ತರಗತಿ ವಿದ್ಯಾರ್ಥಿ ವೈಭವ್ ಬಸ್‍ನಿಂದ ಕೆಳಗೆ ಬಿದ್ದ ವಿದ್ಯಾರ್ಥಿ. ವೈಭವ್ ಬಸ್ ಹತ್ತಲು ಬಸ್ ನಿಲ್ದಾಣದ ಕಡೆ ಹೋಗುತ್ತಿದ್ದ. ಅಷ್ಟರಲ್ಲಾಗಲೇ ಬಸ್ ನಿಲ್ದಾಣದಿಂದ ಹೊರಟಿದೆ. ಹೀಗಾಗಿ ವಿದ್ಯಾರ್ಥಿ ವೈಭವ್ ಚಲಿಸುತ್ತಿದ್ದ ಬಸ್ ಹತ್ತಲು ಪ್ರಯತ್ನಿಸಿ, ಸಾಧ್ಯವಾಗದೇ ಬಸ್‍ನಿಂದ ಕೆಳಗೆ …

Read More »

ಬ್ರೇಕ್ ಕೆಳಗೆ ವಾಟರ್ ಬಾಟ್ಲಿ ಸಿಲುಕಿ ಬೈಕ್‍ಗೆ ಡಿಕ್ಕಿ ಹೊಡೆದ ಕಾರು!

ಮಂಗಳೂರು: ಕಾರಿನ ಬ್ರೇಕ್ ಕೆಳಗೆ ವಾಟರ್ ಬಾಟ್ಲಿ ಸಿಕ್ಕಿ ಬೈಕ್‍ಗೆ ಡಿಕ್ಕಿ ಹೊಡೆದ ಘಟನೆ ಮಂಗಳೂರಿನ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉರ್ವಾದ ಚಿಲಿಂಬಿ- ಮಠದಕಣಿ ಕ್ರಾಸ್ ರೋಡ್ ನಲ್ಲಿ ಈ ಅವಘಡ ಸಂಭವಿಸಿದ್ದು, ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರನ್ನು ವಿವೇಕಾನಂದ ಶೆಣೈ (63) ಎಂಬವರು ಚಲಾಯಿಸುತ್ತಿದ್ದರು. ಕಾರಿನ ಬ್ರೇಕ್ ಪೆಡಲ್ ಅಡಿ ನೀರಿನ ಬಾಟ್ಲಿ ಸಿಲುಕಿದ್ದರಿಂದ ಬ್ರೇಕ್ ಪೆಡಲ್ ವರ್ಕ್ ಆಗದೆ ನಿಯಂತ್ರಣ ಕಳೆದುಕೊಂಡು ಅಪಘಾತ …

Read More »

ನಾಳೆಯಿಂದ ಥಿಯೇಟರ್‌ ಹೌಸ್‌ ಫುಲ್‌- ಸರ್ಕಾರದಿಂದ ಅನುಮತಿ

ಬೆಂಗಳೂರು: ಕೊರೊನಾ, ಒಮಿಕ್ರಾನ್ ಸೋಂಕು ಹಿನ್ನೆಲೆಯಲ್ಲಿ ಸಿನಿಮಾ ಥಿಯೇಟರ್ ಮೇಲೆ ಹೇರಲಾಗಿದ್ದ ನಿಯಮವನ್ನು ಸಡಿಲ ಗೊಳಿಸಿದ್ದು, ನಾಳೆಯಿಂದ ಥಿಯೇಟರ್‌ ಹೌಸ್ ಫುಲ್‌ಗೆ ಸರ್ಕಾರ ಅನುಮತಿ ನೀಡಿದೆ. ಕಾರಿನಲ್ಲಿ ಏಕಾಂಗಿಯಾಗಿ ಓಡಾಡುವಾಗ ಮಾಸ್ಕ್ ಅಗತ್ಯ ಇಲ್ಲ – ದೆಹಲಿಯಲ್ಲಿ ವಿನಾಯಿತಿ 3 seconds ago ಚೀನಾ ಕಾನೂನು ವಿರುದ್ಧ ಹೇಳಿಕೆ ನೀಡಿದರೆ ಮಾನ್ಯತೆ ರದ್ದು: ಅಥ್ಲೀಟ್‌ಗಳಿಗೆ ಎಚ್ಚರಿಕೆ 46 seconds ago ಸಿಎಂ ನೇತೃತ್ವದಲ್ಲಿ ಕೋವಿಡ್ ಸಂಬಂಧಿತ ಸಭೆ ನಡೆಸಿದ್ದಾರೆ. ಚಲನಚಿತ್ರ …

Read More »

ರಮೇಶ್‌ ಜಾರಕಿಹೊಳಿ ಅವರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಕ್ಲೀನ್‌ ಚಿಟ್‌ ಕೊಟ್ಟಿದೆ.

ಬೆಂಗಳೂರು: ಅತ್ಯಾಚಾರದ ಆರೋಪ ಹೊತ್ತಿದ್ದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಕ್ಲೀನ್‌ ಚಿಟ್‌ ಕೊಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ 1ನೇ ಎಸಿಎಂಎಂ ಕೋರ್ಟ್‌ಗೆ ಬಿ ರಿಪೋರ್ಟ್‌ ಪ್ರತಿ ಸಲ್ಲಿಸಿದೆ. 150 ಪುಟಗಳ ಬಿ ರಿಪೋರ್ಟ್‌ ಅನ್ನು 1ನೇ ಎಸಿಎಂಎಂ ಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿದೆ. ಇದರಿಂದ ರಮೇಶ್ ಜಾರಕಿಹೊಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ರಮೇಶ್‌ ಜಾರಕಿಹೊಳಿಗೆ ಎಸ್‌ಐಟಿ ಕ್ಲೀನ್ …

Read More »

ದಾನ ನೀಡಿರುವುದು ಪೀಠಕ್ಕೆ ಹೊರತು ಸ್ವಾಮೀಜಿಗೆ ಅಲ್ಲ: ಮುರುಗೇಶ್‌ ನಿರಾಣಿ

ಮೈಸೂರು: ‘ದಾನ ನೀಡಿರುವುದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ಹೊರತು ಅದರ ಸ್ವಾಮೀಜಿಗೆ ಅಲ್ಲ. ಪೀಠಕ್ಕೆ ನೀಡಿರುವ ಕಾಣಿಕೆಯನ್ನು ವಾಪಸ್ ಕೇಳುವಷ್ಟು ಸಣ್ಣವ ನಾನಲ್ಲ. ಅಂತಹ ಮನಸ್ಥಿತಿಯೂ ನನ್ನದ್ದಲ್ಲ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಇಲ್ಲಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.   ‘ನಾನು ವಾಪಸ್ಸು ಕೇಳಿದ್ದೇನೆ ಎಂಬುದು ಸುಳ್ಳು. ಸ್ವಾಮೀಜಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ದೂರವಾಣಿ ಮೂಲಕ ಸ್ವಾಮೀಜಿ ಜತೆ ಮಾತನಾಡಿಯಾದರೂ ಸ್ಪಷ್ಟನೆ …

Read More »

ಅಟ್ಟಾಡಿಸಿ ಜೀಪ್ ಹರಿಸಿ ಕೊಲೆ

ವಿಜಯಪುರ: ಕೊಟ್ಟ ಹಣ ವಾಪಸ್​ ಕೇಳಿದ್ದಕ್ಕೆ ಮಹಿಳೆಯೊಬ್ಬಳ ಮೇಲೆ ಜೀಪ್​ ಹರಿಸಿ ಕೊಲೆ ಮಾಡಿರುವ ಅಮಾನವೀಯ ಘಟನೆ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ನಡೆದಿದೆ. ಶೋಭಾ ಸೋಮನಿಂಗ ಮೊಗದರೆ (45) ಕೊಲೆಯಾದ ಮಹಿಳೆ. ಸಾಗರ ಖತಾರ ಮತ್ತು ಮಾರುತಿ ಥೋರತ ಕೊಲೆ ಮಾಡಿದ ಆರೋಪಿಗಳು. ಕಬ್ಬು ಕಟಾವು ಮಾಡಲು ಒಂದು ತಂಡವನ್ನು ಕರೆತರುತ್ತೇವೆ ಎಂದು ಕೊಲೆಯಾದ ಮಹಿಳೆಯ ಪತಿ ಸೋಮನಿಂಗನಿಂದ ಆರೋಪಿಗಳು 45 ಲಕ್ಷ ರೂ. ಹಣ ಪಡೆದಿದ್ದರು. ಆರೋಪಿ ಮಾರುತಿ …

Read More »

ಯಾದಗಿರಿ | ಶೇಂಗಾ ಬೆಲೆ ಕುಸಿತ; ರೈತ ಕಂಗಾಲು

ಯಾದಗಿರಿ: ಜಿಲ್ಲೆಯ ಹಿಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ಶೇಂಗಾ ದರ ಕುಸಿತ ಕಂಡಿದ್ದು, ರೈತರು ಕಂಗಾಲಾಗಿದ್ದಾರೆ. ಯಾದಗಿರಿ ಮತ್ತು ಗುರುಮಠಕಲ್ ತಾಲ್ಲೂಕಿನಲ್ಲಿ ಅತಿ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದ್ದು, ಈಗ ಉತ್ತಮ ಬೆಳೆ ಬಂದಿದೆ. ಆದರೆ, ಸೂಕ್ತ ಬೆಲೆ ಇಲ್ಲದೆ ರೈತರು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಜಮೀನುಗಳಿಂದ ಆಟೊ, ಟಂಟಂ, ಟ್ರ್ಯಾಕ್ಟರ್ ಗಳ ಮೂಲಕ ಶೇಂಗಾ ಆವಕವನ್ನು ಯಾದಗಿರಿ ಎಪಿಎಂಸಿಗೆ ತರಲಾಗುತ್ತಿದೆ. ಆದರೆ, ಬೆಲೆ ಕುಸಿತದಿಂದ …

Read More »

ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಎರಡು ದಿನ ಮುಂಚೆ ದುಡ್ಡು ಕೊಟ್ಟಿದ್ದರಿಂದ ನಮಗೆ ಸೋಲಾಯಿತು

ಮಂಡ್ಯ: ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಎರಡು ದಿನ ಮುಂಚೆ ದುಡ್ಡು ಕೊಟ್ಟಿದ್ದರಿಂದ ನಮಗೆ ಸೋಲಾಯಿತು ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ. ಬಿಜೆಪಿ ಸೋಲಿನ ಬಗ್ಗೆ ಗುರುವಾರ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪರಾಮರ್ಶೆ ನಡೆಸುತ್ತಿದ್ದ ಬಗ್ಗೆ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡುವಾಗ, ಬಿಜೆಪಿ ಅಭ್ಯರ್ಥಿ ಎರಡು ದಿನ ಮುಂಚೆ ದುಡ್ಡುಕೊಟ್ಟರು. ಇದರಿಂದ ನಮಗೆ ಸೋಲಾಯಿತು ಎಂದು ವಿಶ್ಲೇಷಿಸಿದರು. ತಕ್ಷಣ ಪಕ್ಕದಲ್ಲಿದ್ದ ಸಚಿವ ಕೆ.ಗೋಪಾಲಯ್ಯ …

Read More »

ವಿದ್ಯಾರ್ಥಿನಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ: ಇಬ್ಬರು ಮಹಿಳೆಯರು ಸೇರಿ ಮೂವರ ಬಂಧನ

ಮಂಗಳೂರು: ಕಾಲೇಜು ವಿದ್ಯಾರ್ಥಿನಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಓರ್ವ ಪುರುಷ, ಇಬ್ಬರು ಮಹಿಳೆಯರನ್ನು ಮಂಗಳೂರು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಪಿಯುಸಿ ಓದುತ್ತಿದ್ದ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು ನಾಲ್ವರನ್ನು ರಕ್ಷಿಸಲಾಗಿದೆ. ಇವರು ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿನಿಯರು. ಮಂಗಳೂರಿನ ಪೆಂಟ್ ಹೌಸ್ ಒಂದರಲ್ಲಿ ಈ ಹೈಟೆಕ್ ವೇಶ್ಯಾವಾಟಿಕೆ ನಡೆಯುತ್ತಿತ್ತು. ಬಂಧಿತರನ್ನು ಶಮೀನಾ, ಆಯಿಷಮ್ಮ ಮತ್ತು ಸಿದ್ಧಿಕ್​ ಎಂದು ಗುರುತಿಸಲಾಗಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಸಿ ವಿಡಿಯೋ ರೆಕಾರ್ಡ್​ ಮಾಡಿ ಯುವತಿಯರು ಮತ್ತು …

Read More »