ಚಿತ್ರದುರ್ಗ): ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ನೀಡಲು ಕೇಂದ್ರ ಸರ್ಕಾರ ಬುಧವಾರ ಅನುಮೋದನೆ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಲ್ಲಿನ ತರಳಬಾಳು ಮಠದ ಆವರಣದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆಯ ಅಂತಿಮ ದಿನದಂದು ನಡೆದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಸದ್ಧರ್ಮ ಸಿಂಹಾಸನಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಕೇಂದ್ರ ಸರ್ಕಾರದ ಜಲಶಕ್ತಿ ಮಂತ್ರಾಲಯದ ಉನ್ನತ ಸಮಿತಿ ಭದ್ರಾ ಮೇಲ್ದಂಡೆಗೆ ಸಮ್ಮತಿ ನೀಡಿದೆ. ಇದು ರಾಜ್ಯದ ಮೊದಲ …
Read More »Yearly Archives: 2022
ವಿಧಾನಪರಿಷತ್ ಕಲಾಪ: ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಧರಣಿ
ಬೆಂಗಳೂರು: ವಿಧಾನಪರಿಷತ್ ಕಲಾಪದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಸಭಾಪತಿ ಪೀಠದ ಮುಂದೆ ಧರಣಿ ನಡೆಸಿದರು. ‘ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ’ ಎಂಬುದಾಗಿ ಈಶ್ವರಪ್ಪ ನೀಡಿದ ಹೇಳಿಕೆ ವಿರುದ್ಧವಾಗಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು.
Read More »7 ನೇ ವೇತನ ಆಯೋಗ ಬಜೆಟ್ ಅಧಿವೇಶನಕ್ಕೂ ಮೊದಲು ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ :c.m
ಬೆಂಗಳೂರು: ‘ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ 7 ನೇ ವೇತನ ಆಯೋಗ ರಚಿಸುವ ಕುರಿತು ಬಜೆಟ್ ಅಧಿವೇಶನಕ್ಕೂ ಮೊದಲು ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ತಿಳಿಸಿದರು. ವಿಧಾನ ಪರಿಷತ್ ನಲ್ಲಿ ಜೆಡಿಎಸ್ ನ ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ‘ಸರ್ಕಾರಿ ನೌಕರರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನದಲ್ಲಿ ತಾರತಮ್ಯ ಇದೆ’ ಎಂದರು. ತಿಪ್ಪೇಸ್ವಾಮಿ …
Read More »ಸ್ಮಾರ್ಟ್ ಕಾರ್ಡ್ ಆರ್ಮ್ಸ್ ಲೈಸೆನ್ಸ್ ಪರಿಚಯಿಸಿದ ದೆಹಲಿ ಪೊಲೀಸರು
ನವದೆಹಲಿ: ರಾಷ್ಟ್ರ ರಾಜಧಾನಿಯ ನಾಗರಿಕರಿಗೆ ಟೆಕ್ನೋ ಫ್ರೆಂಡ್ಲಿ ಡಿಜಿಟಲ್ ಸೇವೆಗಳನ್ನು ಒದಗಿಸುವ ಸಲುವಾಗಿ ದೆಹಲಿ ಪೊಲೀಸರು ಸ್ಮಾರ್ಟ್ ಕಾರ್ಡ್ ಆರ್ಮ್ಸ್ ಲೈಸೆನ್ಸ್ ಅನ್ನು ಪರಿಚಯಿಸಿದ್ದಾರೆ. ಈ ಮೂಲಕ ದೇಶದಲ್ಲೇ ಸ್ಮಾರ್ಟ್ ಕಾರ್ಡ್ ಆರ್ಮ್ಸ್ ಲೈಸೆನ್ಸ್ ಅನ್ನು ಪರಿಚಯಿಸಿದ ಮೊದಲ ಪೊಲೀಸ್ ಪಡೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಬುಧವಾರ ದೆಹಲಿ ಪೊಲೀಸರ 75ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಮಾರ್ಟ್ ಕಾರ್ಡ್ ಹಾಗೂ ಶಾಸ್ತ್ರ ಅಪ್ಲಿಕೇಶನ್ ಅನ್ನು ಔಪಚಾರಿಕವಾಗಿ …
Read More »ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ ಜಯರಾಜ್ ಸಿಂಗ್ ಪರ್ಮಾರ್
ಗಾಂಧೀನಗರ: ಗುಜರಾತ್ ಕಾಂಗ್ರೆಸ್ ಮಾಜಿ ಮುಖ್ಯ ವಕ್ತಾರ ಜಯರಾಜ್ ಸಿಂಗ್ ಪರ್ಮಾರ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಘೋಷಿಸಿದ್ದಾರೆ. ಈ ಕುರಿತಂತೆ ಫೇಸ್‍ಬುಕ್‍ನಲ್ಲಿ ಪರ್ಮಾರ್ ಅವರು ಕಾಂಗ್ರೆಸ್‍ನ ಹಿರಿಯ ನಾಯಕರ ನಿರ್ಲಕ್ಷಕ್ಕೆ ಬೇಸತ್ತಿದ್ದು, ಪಕ್ಷದಲ್ಲಿ ಕೆಲವರಿಗೆ ಮಾತ್ರ ಜವಾಬ್ದಾರಿಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ. ಮೂರು ವರ್ಷಗಳಿಂದಲೂ ಪಕ್ಷದಲ್ಲಿದ್ದರೂ ಯಾವುದೇ ಸ್ಥಾನವನ್ನು ನೀಡಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಯರಾಜ್ ಸಿಂಗ್ ಪರ್ಮಾರ್ ಅವರು ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷವನ್ನು …
Read More »ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಆರು ಯುವಕರು,ಬೆಳಗಾವಿಯಲ್ಲಿ ಹಿಜಬ್ ಹೈಡ್ರಾಮಾ
ಬೆಳಗಾವಿ: ನಗರದ ವಿಜಯ್ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಹಿಜಬ್‍ಗೆ ಅವಕಾಶ ನೀಡುವಂತೆ ವಿದ್ಯಾರ್ಥಿನಿಯರು ಪಟ್ಟುಹಿಡಿದು ಪ್ರತಿಭಟನೆಗೆ ಮುಂದಾದಾಗ ಅಲ್ಲಾಹು ಅಕ್ಬರ್ ಅಂತಾ ಘೋಷಣೆ ಕೂಗಿದ ಆರು ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಳಗಾವಿಯ ಸದಾಶಿವ ನಗರದ ವಿಜಯ್ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿನಲ್ಲಿದ್ದು ಆ ಪೈಕಿ 50ರಷ್ಟು ವಿದ್ಯಾರ್ಥಿನಿಯರು ಮುಸ್ಲಿಂ ಸಮಾಜದವರಿದ್ದಾರೆ. ಅದರಲ್ಲಿ ಇಂದು 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತರಗತಿಯಲ್ಲಿ ಹಿಜಬ್‍ಗೆ …
Read More »ಕಾಡಿನಿಂದ ನಾಡಿಗೆ ಬಂದ ಚಿರತೆ ಮರಿ
ಥಾಣೆ( ಮಹಾರಾಷ್ಟ್ರ): ಕಾಡಿನಿಂದ ನಾಡಿಗೆ ಬಂದ ಚಿರತೆ ಮರಿಯೊಂದು ನೀರು ಕುಡಿಯಲು ಹೋಗಿ ಪ್ಲಾಸ್ಟಿಕ್ ನೀರಿನ ಕೊಡದಲ್ಲಿ ತೆಲೆ ಸಿಕ್ಕಿಸಿಕೊಂಡು ಪರದಾಡಿದ ಘಟನೆ ಬದ್ಲಾಪುರ – ಕರ್ಜಾತ್ ರಸ್ತೆಯ ಗೋರೆಗಾಂವ್ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಚಿರತೆ ಮರಿ ಹೀಗೆ ತಲೆಯನ್ನು ಸಿಕ್ಕಿಸಿಕೊಂಡು ಒದ್ದಾಡುವ ಪರಿಯನ್ನ ನೋಡಿದ ಗ್ರಾಮಸ್ಥರು, ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಧಿಕಾರಿಗಳು ಚಿರತೆಯನ್ನ ಹಿಡಿದು ಪ್ಲಾಸ್ಟಿಕ್ ಕೊಡವನ್ನು ಕತ್ತರಿಸಿ ತೆಗೆದಿದ್ದಾರೆ. ನಂತರ ಚಿರತೆ …
Read More »ದೇಗುಲಗಳಲ್ಲಿ ಜಾಗಟೆ, ಗಂಟೆ ಶಬ್ದ ಮಾಲಿನ್ಯವೆಂದು ನೀಡಿದ್ದ ನೋಟಿಸ್ ವಾಪಸ್
ಬೆಂಗಳೂರು: ದೇವಾಲಯಗಳಲ್ಲಿ ಜಾಗಟೆ, ಗಂಟೆಯಿಂದ ಶಬ್ದ ಮಾಲಿನ್ಯವಾಗುತ್ತದೆ ಎಂದು ನೀಡಲಾಗಿದ್ದ ನೋಟಿಸ್ ವಾಪಸ್ ಪಡೆಯಲಾಗಿದೆ. ಗೃಹಸಚಿವ ಆರಗ ಜ್ಞಾನೇಂದ್ರ ಅವರು ವಿಧಾವರುನಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ದೇವಾಲಯಗಳಲ್ಲಿ ಜಾಗಟೆ, ಗಂಟೆ ಬಳಕೆಯಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ ಎನ್ನುವ ಕಾರಣಕ್ಕೆ ನೀಡಿದ್ದ ಸುತ್ತೋಲೆಯನ್ನು ಧಾರ್ಮಿಕ ದತ್ತಿ ಇಲಾಖೆ ಪಡೆದುಕೊಂಡಿದೆ ಎಂದು ಅವರು ಹೇಳಿದ್ದಾರೆ. ಶೂನ್ಯ ವೇಳೆಯಲ್ಲಿ ಬಿಜೆಪಿಯ ಸಿ.ಟಿ. ರವಿ ಮತ್ತು ರವಿಸುಬ್ರಹ್ಮಣ್ಯ ಅವರು ಈ ಬಗ್ಗೆ ಪ್ರಸ್ತಾಪಿಸಿದ್ದು, ಉತ್ತರ …
Read More »ಲಘು ವಾಹನಗಳ ಸಂಚಾರಕ್ಕೆ ಪೀಣ್ಯ ಫ್ಲೈ ಓವರ್ ಮುಕ್ತ
ನಗರದ ವಾಹನ ಸವಾರರಿಗೆ ಸಿಹಿಸುದ್ದಿ. ಸುಮಾರು 56 ದಿನಗಳ ಬಳಿಕ ಡಾ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ ಲಘು ವಾಹನಗಳ ಸಂಚಾರಕ್ಕೆ ಬುಧವಾರ ಮುಕ್ತವಾಗಿದೆ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ ಲಘು ವಾಹನಗಳ ಸಂಚಾರಕ್ಕೆ ಬುಧವಾರ ಮುಕ್ತವಾಗಿದೆ. ಪೀಣ್ಯ ಎಲಿವೇಡೆಡ್ ಮೇಲ್ಸೆತುವೆಯ 102 ಮತ್ತು 103ನೇ ಕಂಬಗಳ ನಡುವೆ ತಾಂತ್ರಿಕ ದೋಷವಿದೆ ಎಂದು ಡಿಸೆಂಬರ್ 26ರಂದು ಫ್ಲೈ ಓವರ್ ಎರಡೂ ಕಡೆ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಎನ್‌ಎಚ್‌ಎಐ ದುರಸ್ತಿ ಕಾಮಗಾರಿ ಪೂರ್ಣಗೊಳಿಸಿದೆ. …
Read More »ಪ್ರಾಣಿ, ಪಕ್ಷಿ ಪ್ರಿಯ ದರ್ಶನ್‌ಗೆ ಸಿಕ್ಕಿತು ವಿಶೇಷ ಬರ್ತ್ ಡೇ ಗಿಫ್ಟ್!
ಮೈಸೂರು: ಪ್ರಾಣಿ, ಪಕ್ಷಿಗಳು ಎಂದರೆ ದರ್ಶನ್‌ಗೆ ಎಲ್ಲಿಲ್ಲದ ಪ್ರೀತಿ. ಆ ಪ್ರೀತಿಗೆ ಗೌರವ ಸೂಚಿಸುವ ಸಲುವಾಗಿ ಕರ್ನಾಟಕ ಮೃಗಾಲಯ ಪ್ರಾಧಿಕಾರವು ದರ್ಶನ್ ಅವರನ್ನು ಅಧಿಕೃತ ರಾಯಭಾರಿಯನ್ನಾಗಿ ನೇಮಕ ಮಾಡಿಕೊಂಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬದ ಅಂಗವಾಗಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಎಲ್.ಆರ್. ಮಹದೇವಸ್ವಾಮಿ ಅವರು ಭೇಟಿ ಮಾಡಿ ಈ ವಿಚಾರ ತಿಳಿಸಿದ್ದಾರೆ. ಹುಟ್ಟುಹಬ್ಬಕ್ಕೆ ಮೃಗಾಲಯ ಪ್ರಾಧಿಕಾರದ ವತಿಯಿಂದ ಶುಭಾಶಯ ಕೋರುವುದರ ಜೊತೆಗೆ ದರ್ಶನ್ ಅವರಿಗೆ ಒಳ್ಳೆಯ ಗೌರವ ಒದಗಿಸಲಾಗಿದೆ …
Read More »