ಹುಬ್ಬಳ್ಳಿ: ನೀರಿನ ವಿಷಯಕ್ಕೆ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಮತ್ತು ಪಕ್ಕದ ಮನೆಯವರ ಜೊತೆ ಮಾರಾಮಾರಿ ನಡೆದಿದ್ದು, ಎರಡು ಕುಟುಂಬಗಳು ಪರಸ್ಪರ ಮಾರಾಣಾಂತಿಕವಾಗಿ ಹಲ್ಲೆ ಮಾಡಿಕೊಂಡಿದ್ದಾರೆ. ಹಳೇ ಹುಬ್ಬಳ್ಳಿಯ ಸಹದೇವನಗರದಲ್ಲಿ ಈ ಘಟನೆ ನಡೆದಿದೆ. ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪುರಾಣಿಕಮಠ್ ಹೆಡ್ ಕಾನ್ಸ್‍ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪುರಾಣಿಕಮಠ್ ಅವರ ಮನೆಯ ಪಕ್ಕದಲ್ಲಿರುವ ಭರತೇಶ್ ಅವರ ಜೊತೆಗೆ ಕುಡಿಯುವ ನೀರಿನ ಸಲುವಾಗಿ ಜಗಳ ಆರಂಭವಾಗಿದೆ. ಜಗಳ ತಾರಕ್ಕೇರಿ ಇಬ್ಬರು ಇಟ್ಟಿಗೆ ಮತ್ತು …
Read More »Yearly Archives: 2022
ಮದ್ವೆಯಾದ ಹತ್ತೇ ತಿಂಗಳಲ್ಲಿ ದುರಂತ; ಪತ್ನಿಯ ಶವ ನೋಡಿ ಪತಿಯೂ ಆತ್ಮಹತ್ಯೆ.
ಕೊಡಗು: ಇವರಿಬ್ಬರು ಮದುವೆಯಾಗಿ ಬರೀ ಹತ್ತು ತಿಂಗಳುಗಳಷ್ಟೇ ಆಗಿದ್ದವು. ಆದರೆ ಅಷ್ಟರಲ್ಲಾಗಲೇ ದುರಂತ ಸಂಭವಿಸಿದ್ದು, ಒಬ್ಬರ ಹಿಂದೊಬ್ಬರಂತೆ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ. ಕೊಡಗು ಜಿಲ್ಲೆಯ ಬಿರುನಾಣಿಯಲ್ಲಿ ಈ ಪ್ರಕರಣ ನಡೆದಿದ್ದು, ಯುವರಾಜ್ (25), ಪತ್ನಿ ಶಿಲ್ಪಾ (22) ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗ ಮೂಲದ ಯುವರಾಜ್ ದಂಪತಿ, ಹತ್ತು ತಿಂಗಳ ಹಿಂದೆ ಶಿಲ್ಪಾಳನ್ನು ಮದುವೆಯಾಗಿದ್ದರು. ಆ ಬಳಿಕ ಇಬ್ಬರೂ ಪೊನ್ನಂಪೇಟೆಯ ಬಿರುನಾಣಿ ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಫಾರೆಸ್ಟ್ ಗಾರ್ಡ್ ಆಗಿರುವ …
Read More »ಮಾರ್ಚ್ ನಲ್ಲಿ 13 ದಿನ ರಜೆ, RBI ನಿಂದ ಪಟ್ಟಿ ಬಿಡುಗಡೆ
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಮಾರ್ಚ್ 2022 ರ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನೀವು ಮಾರ್ಚ್ ತಿಂಗಳಲ್ಲಿ ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಲು ಬಯಸಿದರೆ, ನಂತರ ಶಾಖೆಗೆ ಹೋಗುವ ಮೊದಲು, ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಪರಿಶೀಲಿಸಿ. ಆರ್‌ಬಿಐ ಬಿಡುಗಡೆ ಮಾಡಿರುವ ಈ ಪಟ್ಟಿಯ ಪ್ರಕಾರ, ಮಾರ್ಚ್ 2022 ರಲ್ಲಿ ಒಟ್ಟು 13 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಒಟ್ಟು 13 ದಿನಗಳಲ್ಲಿ ಎಂದಿನಂತೆ 4 …
Read More »ಕೊಪ್ಪಳ ಜಿಲ್ಲೆಯ ಅಂಜನಾದ್ರಿಯೇ ಹನುಮ ಹುಟ್ಟಿದ ಸ್ಥಳ. ಶೀಘ್ರವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತ ಘೋಷಣೆ ಮಾಡಲಿದ್ದಾರೆ: ಜೊಲ್ಲೆ
ಹೊಸಪೇಟೆ: ಕೊಪ್ಪಳ ಜಿಲ್ಲೆಯ ಅಂಜನಾದ್ರಿಯೇ ಹನುಮ ಹುಟ್ಟಿದ ಸ್ಥಳ. ಶೀಘ್ರವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಮುಜರಾಯಿ ಮತ್ತು ವಕ್ಫ್ ಸಚಿವೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ಮುಜರಾಯಿ ಇಲಾಖೆಯಿಂದ ದಾಖಲೆ, ಪುರಾವೆ ಸಂಗ್ರಹಿಸಲಾಗುತ್ತಿದೆ. ರಾಮಾಯಣದಲ್ಲಿ ಇಲ್ಲಿನ ಕಿಷ್ಕಿಂಧೆ ಬಗ್ಗೆ ಉಲ್ಲೇಖವಿದೆ. ಆದರೆ, ತಿರುಪತಿಯಲ್ಲಿ ಹನುಮನ ಜನ್ಮಸ್ಥಳವಿದೆ ಎನ್ನಲು ಐತಿಹಾಸಿಕ ಪುರಾವಿಯಿಲ್ಲ ಎಂದು ಭಾನುವಾರ ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಅಯೋಧ್ಯೆಯ ಶ್ರೀರಾಮ ಮಂದಿರ ಮಾದರಿಯಲ್ಲಿ ಅಂಜನಾದ್ರಿ ಬೆಟ್ಟ …
Read More »ಈಶ್ವರಪ್ಪ ರಾಜೀನಾಮೆಗೆ ಪಟ್ಟು : 5ನೇ ದಿನವೂ ಸದನದಲ್ಲಿ ಕೈ ನಾಯಕರ ಅಹೋರಾತ್ರಿ ಧರಣಿ
ಬೆಂಗಳೂರು: ಭವಿಷ್ಯದಲ್ಲಿ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಾಡಬಹುದು ಎಂಬುದಾಗಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ, ರಾಷ್ಟ್ರಧ್ವಜಕ್ಕೆ ( National Flag) ಅವಮಾನ ಮಾಡಿದಂತ ಸಚಿವ ಈಶ್ವರಪ್ಪ ( Minister K S Eshwarappa) ಅವರನ್ನು ಸಂಪುಟದಿಂದ ಕೈ ಬಿಡುವಂತೆ ಒತ್ತಾಯಿಸಿ, ಕಾಂಗ್ರೆಸ್ ನಾಯಕರ ಅಹೋರಾತ್ರಿ ಧರಣಿ ಮುಂದುವರೆಸಿದ್ದಾರೆ. ರಾಷ್ಟ್ರಧ್ವಜ ಕುರಿತು ಸಚಿವ ಕೆ.ಎಸ್.ಈಶ್ವರಪ್ಪ ಅವರ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ …
Read More »ಚನ್ನಪಟ್ಟಣದ 50ಕ್ಕೂ ಹೆಚ್ಚು ಜೆಡಿಎಸ್ ಮುಖಂಡರು ಇಂದು ಬಿಜೆಪಿ ಸೇರ್ಪಡೆ; ಎಚ್‌ಡಿಕೆಗೆ ಸಿಪಿವೈ ಟಕ್ಕರ್
ರಾಮನಗರ, ಫೆಬ್ರವರಿ 21: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಪಕ್ಷಾಂತರ ಪರ್ವ ಆರಂಭಗೊಂಡಿದೆ. ಚುನಾವಣೆಗೆ ವರ್ಷ ಇರುವಾಗಲೇ ಪಕ್ಷಾಂತರ ಜಿಗಿತ ಬಲು ಜೋರಾಗಿದೆ. ತೆನೆ ಇಳಿಸಿ ನೂರಾರು ಮುಖಂಡರು ಕಮಲ ಹಿಡಿಯುತ್ತಿದ್ದಾರೆ. ಇಷ್ಟಾದರೂ ದಳಪತಿ ಎಚ್‌ಡಿಕೆ ಮಾತ್ರ ಕೂಲ್ ಆಗಿದ್ದಾರೆ. ರೇಷ್ಮೆ ನಗರಿ ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ತನ್ನದೇ ಆದ ನೆಲೆ ಉಳಿಸಿಕೊಂಡಿದೆ. ರಾಮನಗರ, ಚನ್ನಪಟ್ಟಣ ಹಾಗೂ ಮಾಗಡಿ ತಾಲೂಕಿನಲ್ಲಿ ಜೆಡಿಎಸ್ ಜೆಡಿಎಸ್ ಶಾಸಕರಿದ್ದಾರೆ. …
Read More »ನಷ್ಟದ ಭೀತಿ ತಪ್ಪಿಸಲು ಕೆಎಂಎಫ್ನಿಂದ ಹೊಸ ಪ್ಲಾನ್; ರಾಬಕೋ ಒಕ್ಕೂಟದಿಂದ ಸಿಬ್ಬಂದಿಗಳಿಗೆ ತುಪ್ಪದ ಟಾರ್ಗೆಟ್
ಬಳ್ಳಾರಿ: ಪ್ರಮುಖ ಜಿಲ್ಲೆಗಳಾದ ಬಳ್ಳಾರಿ, ರಾಯಚೂರು, ಕೊಪ್ಪಳದ ಹಾಲು ಒಕ್ಕೂಟ ನಷ್ಟದತ್ತ ಸಾಗಿದೆ. ಸದ್ಯ ನಾಲ್ಕೂವರೆ ಕೋಟಿ ರೂಪಾಯಿ ನಷ್ಟದಲ್ಲಿರುವ ರಾಬಕೋ ಸಂಸ್ಥೆ ನಷ್ಟದಿಂದ ಹೊರಬರಲು ಹೊಸ ಯೋಜನೆಯೊಂದನ್ನು ಮಾಡಿದೆ. ತುಪ್ಪ ಮಾರಾಟ ಹೆಚ್ಚಳ ಮಾಡಲು ಸಿಬ್ಬಂದಿಗಳಿಗೆ ಹೊಸ ಟಾರ್ಗೆಟ್ ನೀಡಲಾಗಿದೆ. ಆದರೆ ಹೆಚ್ಚು ಹೆಚ್ಚು ತುಪ್ಪ(Ghee) ಮಾರಿ ಸಂಸ್ಥೆಗೆ ಲಾಭ ತರಬೇಕಾದ ಸಿಬ್ಬಂದಿಗಳಿಗೆ ಇದೀಗ ಕಡಿಮೆ ದರಕ್ಕೆ ಹೆಚ್ಚು ತುಪ್ಪ ಸಿಗುತ್ತಿರುವುದು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ ಕೆಎಂಎಫ್ನ(KMF) …
Read More »ಎಪಿಎಮ್‍ಸಿ ಮಾರುಕಟ್ಟೆ ಕಾಯ್ದೆಯನ್ನು ಮರಳಿ ಪಡೆಯುವರೆಗೆ ನಿರಂತರ ಹೋರಾಟ ಮಾಡುತ್ತೇವೆ: ಸಿದ್ದಗೌಡ
ಎಪಿಎಮ್‍ಸಿ ಮಾರುಕಟ್ಟೆ ಕಾಯ್ದೆಯನ್ನು ಮರಳಿ ಪಡೆಯುವರೆಗೆ ನಿರಂತರ ಹೋರಾಟ ಮಾಡುತ್ತೇವೆ ಎಂದು ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದ್ದಗೌಡ ಮೋದಗಿ ಹೇಳಿದರು.ಕಳೆದ ಎರಡು ತಿಂಗಳಿನಿಂದ ಎಪಿಎಮ್‍ಸಿ ಮಾರುಕಟ್ಟೆಯು ಸಂಪೂರ್ಣವಾಗಿ ಬಂದ್ ಆಗಿದ್ದರಿಂದ ರೈತರು ಸರ್ಕಾರದಿಂದ ಟೆಂಡರ್ ಮೂಲಕ ಸುಮಾರು 20 ಲಕ್ಷದಿಂದು 1 ಕೋಟಿ ರೂಪಾಯಿ ಆದಾಯ ನೀಡಿ ಪಡೆದ ಅಂಗಡಿಗಳು ಬಂದ್ ಆಗಿದ್ದರಿಂದ ವ್ಯಾಪಾರಿಗಳು ಸಂಪೂರ್ಣ ಲಾಸ್ ನಲ್ಲಿ ಇದ್ದಾರೆ. ಈ ಕೂಡಲೇ ಎಪಿಎಮ್‍ಸಿ ಕಾಯ್ದೆಯನ್ನು ಪಡೆಯಬೇಕು ಎಂದು …
Read More »ಉಂಡು ಗೊರಕೆ ಹೊಡೆದ್ರು ಎಂದ ಅಶೋಕ್ ವಿರುದ್ಧ ಕಾಂಗ್ರೆಸ್ ಕಿಡಿ.. ಊಟದ ವೆಚ್ಚ ವಾಪಸ್ಗೆ ನಿರ್ಧಾರ
ಬೆಂಗಳೂರು: ಕಾಂಗ್ರೆಸ್ ನಾಯಕರು ವಿಧಾನಸಭೆಯಲ್ಲಿ ಉಂಡು ಗೊರಕೆ ಹೊಡೆಯುತ್ತಿದ್ದಾರೆ ಎಂದು ಸಚಿವ ಆರ್ ಅಶೋಕ್ ನೀಡಿದ್ದ ಹೇಳಿಕೆಯೀಗ ರಾಜ್ಯ ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಕಾರಣವಾಗಿದೆ. ವಿಧಾನಸೌಧದಲ್ಲಿ ಧರಣಿ ವೇಳೆ ಊಟದ ವೆಚ್ಚವನ್ನ ಸ್ವತಃ ಭರಿಸಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ಈ ಬಗ್ಗೆ ವಿಧಾನಸಭೆ ಮೊಗಸಾಲೆಯಲ್ಲಿ ಸಿದ್ದರಾಮಯ್ಯ ಜೊತೆ ಕಾಂಗ್ರೆಸ್ ಶಾಸಕರಾದ ಡಾ. ರಂಗನಾಥ್, ರಾಜಶೇಖರ ಪಾಟೀಲ್, ಬಿ.ಕೆ. ಸಂಗಮೇಶ್ವರ್, ಪ್ರಕಾಶ್ ರಾಥೋಡ್, ಯಶವಂತರಾಯ ಹಾಗೂ ವೆಂಕಟರಮಣಯ್ಯ ಚರ್ಚೆ ನಡೆಸಿದ್ದಾರೆ. ಮಾನ ಮರ್ಯಾದೆ ಇದೆಯಾ …
Read More »ಸಿದ್ದರಾಮಯ್ಯ, ಡಿಕೆಶಿ ಅವಹೇಳನ ಆರೋಪ.. ಸಚಿವ ಸೋಮಣ್ಣ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ವಸತಿ ಸಚಿವ ವಿ ಸೋಮಣ್ಣ ಸುಡುಗಾಡು ಸಿದ್ಧ ಎಂದು ಸಂಬೋಧಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಇಂದು ಪ್ರತಿಭಟನೆ ನಡೆಸಿದರು. ಮಾಗಡಿರಸ್ತೆಯ ಟೋಲ್ಗೇಟ್ ವೃತ್ತದ ಶನೇಶ್ವರ ದೇವಸ್ಥಾನ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ಸಚಿವ ಸೋಮಣ್ಣ ಪ್ರತಿಕೃತಿ ದಹಿಸಿದ್ದಾರೆ. ಫೆ.12ರಂದು ಮೈಸೂರಿನಲ್ಲಿ ಸಂಸದ ನಿವಾಸ್ ಪ್ರಸಾದ್ ಅವರ ಮನೆಗೆ ಭೇಟಿ ನೀಡಿದಾಗ ಸೋಮಣ್ಣ ಅವರು ಸಿದ್ದರಾಮಯ್ಯ ಅವರನ್ನು ಸುಡುಗಾಡು ಸಿದ್ಧ ಎಂಬ ಹೇಳಿಕೆ ನೀಡಿದ್ದರು ಎನ್ನಲಾಗ್ತಿದೆ. …
Read More »