Breaking News

Yearly Archives: 2022

ರಾಷ್ಟ್ರಗೀತೆ ಹಾಡಿದ ಉಕ್ರೇನ್ ಮಹಿಳೆಯ ವೀಡಿಯೋ ವೈರಲ್

ಕೀವ್: ರಷ್ಯಾ ರಣೋತ್ಸಾಹ 4ನೇ ದಿನಕ್ಕೆ ಕಾಲಿಟ್ಟಿದ್ದು, ರಷ್ಯಾ ದಾಳಿಗೆ ಪುಟ್ಟ ದೇಶವಾಗಿರುವ ಉಕ್ರೇನ್ ತತ್ತರಿಸಿದೆ. ಇದರ ಮಧ್ಯೆ ಉಕ್ರೇನ್ ಪ್ರಜೆಗಳು ರಾಷ್ಟ್ರಗೀತೆಯನ್ನು ಹಾಡಿ ತಮ್ಮ ರಾಷ್ಟ್ರಭಕ್ತಿಯನ್ನು ತೋರಿಸುತ್ತಿರವ ವೀಡಿಯೋ ಇದೀಗ ವೈರಲ್ ಆಗುತ್ತಿದೆ. ರಷ್ಯಾ, ಉಕ್ರೇನ್‍ನ ಮೇಲೆ ಕ್ಷೀಪಣಿ ದಾಳಿ ನಡೆಸಿದ ಪರಿಣಾಮ ಉಕ್ರೇನಿನ ಕಟ್ಟಡಕ್ಕೆ ಹಾನಿಯಾಗಿತ್ತು. ಈ ವೇಳೆ ಮಹಿಳೆಯೊಬ್ಬಳು ಉಕ್ರೇನ್‍ನ ರಾಷ್ಟ್ರಗೀತೆ ಹಾಡುತ್ತಾ ಮನೆ ಸ್ವಚ್ಛಗೊಳಿಸುತ್ತಿರುವ ಮನಮಿಡಿಯುವ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ಮಹಿಳೆಯು …

Read More »

ವಿಶ್ವಸಂಸ್ಥೆಯಲ್ಲಿ ಭಾರತದ ನಡೆಯನ್ನು ಶ್ಲಾಘಿಸಿದ ರಷ್ಯಾ

ನವದೆಹಲಿ: ಉಕ್ರೇನ್ ಮೇಲಿನ ದಾಳಿ ವಿಚಾರವಾಗಿ ವಿಶ್ವಸಂಸ್ಥೆಯಲ್ಲಿ ರಷ್ಯಾದ ವಿರುದ್ಧ ಅಮೇರಿಕಾ ಮಂಡಿಸಿದ್ದ ನಿರ್ಣಯದಿಂದ ದೂರ ಉಳಿದಿರುವ ಭಾರತದ ನಡೆಯನ್ನು ರಷ್ಯಾ ದೇಶವು ಶ್ಲಾಘಿಸಿದೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಭಾರತದಲ್ಲಿನ ರಷ್ಯಾದ ಮಿಶನ್ “ಫೆಬ್ರವರಿ 25, 2022 ರಂದುಭದ್ರತಾ ಮಂಡಳಿಯ ಮತದಾನದಲ್ಲಿ ಭಾರತದ ಸ್ವತಂತ್ರ ಮತ್ತು ಸಮತೋಲಿತ ಸ್ಥಾನವನ್ನು ಹೆಚ್ಚು ಪ್ರಶಂಸಿಸುತ್ತೇವೆ.ವಿಶೇಷವಾದ ಕಾರ್ಯತಂತ್ರದ ಪಾಲುದಾರಿಕೆಯ ಉತ್ಸಾಹದಲ್ಲಿ ಉಕ್ರೇನ್ ಸುತ್ತಲಿನ ಪರಿಸ್ಥಿತಿಯ ಬಗ್ಗೆ ಭಾರತದೊಂದಿಗೆ ನಿಕಟ ಮಾತುಕತೆ ನಡೆಸಲು ರಷ್ಯಾ ಬದ್ಧವಾಗಿದೆ” …

Read More »

ಮುಸ್ಲಿಂ ಪಕ್ಷವೆಂದು ಕಾಂಗ್ರೆಸ್‌ ಘೋಷಿಸಿಕೊಳ್ಳಲಿ: ಜಗದೀಶ ಶೆಟ್ಟರ್‌

ಹುಬ್ಬಳ್ಳಿ: ಮತ ಬ್ಯಾಂಕ್‌ಗಾಗಿ ಮುಸ್ಲಿಮರನ್ನು ಓಲೈಸುತ್ತಿರುವ ಕಾಂಗ್ರೆಸ್‌ ಮುಸ್ಲಿಮರ ಪಕ್ಷವೆಂದು ಬಹಿರಂಗವಾಗಿ ಘೋಷಣೆ ಮಾಡಲಿ ಎಂದು ಶಾಸಕ ಜಗದೀಶ ಶೆಟ್ಟರ್‌ ಸವಾಲು ಹಾಕಿದರು. ಕಾಂಗ್ರೆಸ್‌ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಶನಿವಾರ ನಗರದಲ್ಲಿ ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು ‘ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯಾದರೂ ಯಾವೊಬ್ಬ ಕಾಂಗ್ರೆಸ್‌ ನಾಯಕರೂ ಮಾನವೀಯ ದೃಷ್ಟಿಯಿಂದಲೂ ಅವರ ಮನೆಗೆ ತೆರಳಿ ಸಾಂತ್ವನ ಹೇಳಲಿಲ್ಲ.ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳಿಗೆ ಕಾಂಗ್ರೆಸ್ ಕುಮ್ಮಕ್ಕು …

Read More »

ವಿದ್ಯಾರ್ಥಿನಿಯೊಬ್ಬಳ ಫೇಕ್ ಕಿಡ್ನಾಪ್‌ ಹಾಗೂ ರೇಪ್‌ ಪ್ರಕರಣವನ್ನು ಕೇವಲ 24 ಗಂಟೆಯೊಳಗೆ ಭೇದಿಸಿದ ಖಾಕಿ ಪಡೆ

ದಾವಣಗೆರೆ: ಪೊಲೀಸರ ನಿದ್ದೆಗೆಡಿಸಿದ್ದ ಡಿಪ್ಲೋಮಾ ಓದುತ್ತಿದ್ದ ಅಪ್ತಾಪ್ತ ವಿದ್ಯಾರ್ಥಿನಿಯೋರ್ವಳ ಫೇಕ್ ಕಿಡ್ನಾಪ್‌ ಹಾಗೂ ರೇಪ್‌ ಪ್ರಕರಣವನ್ನು ಕೇವಲ 24 ಗಂಟೆಯೊಳಗೆ ಖಾಕಿ ಪಡೆ ಭೇದಿಸಿದ್ದು, ಸುಳ್ಳು ಎಂಬುದನ್ನು ಸಾಬೀತು ಮಾಡಿದ್ದಾರೆ. ಅನಗತ್ಯವಾಗಿ ಗೊಂದಲಕ್ಕೀಡು ಮಾಡುವ ಸಾಧ್ಯತೆಯಿದ್ದ ಪ್ರಕರಣಕ್ಕೆ ಪೊಲೀಸರಿಂದ ಸುಖಾಂತ್ಯ ಕಂಡಿದೆ. ಶಿವಮೊಗ್ಗ ಮೂಲದ 16 ವರ್ಷದ ಬಾಲಕಿಯೊಬ್ಬಳು ಬೆಣ್ಣೆನಗರಿ ದಾವಣಗೆರೆಯಲ್ಲಿ ಹಾಸ್ಟೆಲ್‌ನಲ್ಲಿದ್ದುಕೊಂಡು ಡಿಪ್ಲೋಮಾ ಓದುತ್ತಿದ್ದಳು. ಇದೇ ತಿಂಗಳ 21ರಂದು ಅವಳು ಕಾಲೇಜಿಗೆ ಹೋಗುವ ವೇಳೆ ಮೂವರು ಕಿಡ್ನಾಪ್‌ ಮಾಡಿದ್ದಾರೆ. ಬಳಿಕ …

Read More »

ಯುವಕರಲ್ಲಿ ಹೆಚ್ಚುತ್ತಿದೆ ಹೃದಯಾಘಾತ?

ಇಂದಿನ ಆಧುನಿಕ ಜೀವನ ಶೈಲಿ (Life style) ಯಿಂದಾಗಿ ಜನರು ಚಿಕ್ಕವಯಸ್ಸಿನಲ್ಲಿ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ (Heart Attack) ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದೆ. ಹಾಗೇ ಯುವಕರಲ್ಲಿ ಹೃದ್ರೋಗ ಸಮಸ್ಯೆ(Heart disease) ಕೂಡ ಹೆಚ್ಚಾಗಿದೆ. ಜೀವನಶೈಲಿಯಲ್ಲಾದ ಬದಲಾವಣೆಯಿಂದಾಗಿ ಪ್ರಸ್ತುತ ಪೀಳಿಗೆ ಹೃದಯರೋಗದಂತಹ ಅನೇಕ ಅಪಾಯಕಾರಿ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ಹಿಂದೆ 65ಕ್ಕಿಂತ ಹೆಚ್ಚಿನ ವಯೋಮಾನದ ಮೇಲ್ಪಟ್ಟ ಜನರಲ್ಲಿ ಹೃದಯ ರೋಗದಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ, ಈಗೀಗ ಹೃದಯರೋಗ 25 ರಿಂದ 30 ವರ್ಷ ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಇದಕ್ಕೆಲ್ಲ ಕಾರಣ ಆಹಾರ ಪದ್ಧತಿಯಲ್ಲಾದ (Dieting) ಬದಲಾವಣೆ, ಪಾಶ್ಚಿಮಾತ್ಯ ಶೈಲಿಯ ಅನುಕರಣೆ, ಹೊತ್ತಲ್ಲದ ಹೊತ್ತಲ್ಲಿ ಊಟ ಮಾಡುವುದು. ಹೀಗೆ ನಾನಾ ಕಾರಣಗಳಿಂದ ಹೃದಯಾಘಾತದ ಪ್ರಮಾಣ ಹೆಚ್ಚುತ್ತಿದೆ ಎನ್ನುತ್ತಿದ್ದಾರೆ ವೈದ್ಯರು. ಒಂದು ಅಂಕಿ ಅಂಶದ ಪ್ರಕಾರ ಮಾದಾಪುರದ ಕಾರ್ಪೋರೇಟ್​​ ಆಸ್ಪತ್ರೆಗೆ ಈ ವರ್ಷ 6,731 ಜನರು ಹೃದಯ ಸಂಬಂಧಿ ಕಾಯಿಲೆಗಳಿಗಾಗಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಅವರಲ್ಲಿ 22 ಪ್ರತಿಶತ 30 ಮತ್ತು 45 …

Read More »

ಅಕ್ರಮ ಸಂಬಂಧ’ವನ್ನು ವಿರೋಧಿಸಿದ ಪತ್ನಿಯ ತಲೆ ಕಡಿದ ಪತಿ!

ಪಾಟ್ನಾ(ಬಿಹಾರ): ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯ ಮಿರ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ತಿಗೆಯೊಂದಿಗಿನ ಅಕ್ರಮ ಸಂಬಂಧವನ್ನು ವಿರೋಧಿಸಿದ ಪತ್ನಿಯ ತಲೆ ಕಡಿದು ಕೊಲೆ ಮಾಡಿದ್ದಲ್ಲದೇ, ಸಾಕ್ಷ್ಯ ನಾಶಪಡಿಸಲು ಶವವನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದಿರುವ ಘಟನೆ ನಡೆದಿದೆ.   ಸಂಜು ದೇವಿ ಮೃತ ಮಹಿಳೆ. ಸಂಜು ದೇವಿಯನ್ನು ಮಿರ್‌ಗಂಜ್‌ನ ಕಾಸಿ ಸಮೈಲ್ ಗ್ರಾಮದಲ್ಲಿ ವಿಜಯ್ ಗೊಂಡ್ ಅವರನ್ನು ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳೂ ಇದ್ದಾರೆ. ಹೀಗಿದ್ದರೂ ಪತಿಯು ತನ್ನ ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ …

Read More »

ಸಹಾಯಕ ಪ್ರಾಧ್ಯಾಪಕರ ಹುದ್ದೆ ಪರೀಕ್ಷೆಗೆ ಡ್ರೆಸ್ ಕೋಡ್ ಕಡ್ಡಾಯ!

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅಗತ್ಯವಿರುವ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಹಾಕಿರುವ ಅಭ್ಯರ್ಥಿಗಳು, ಮಾರ್ಚ್ ಮಧ್ಯಭಾಗದಲ್ಲಿ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಿರುವ ಪ್ರವೇಶ ಪತ್ರವನ್ನು ಫೆ.28ರಿಂದ hಣಣಠಿ://ಞeಚಿ.ಞಚಿಡಿ.ಟಿiಛಿ.iಟಿ ಜಾಲತಾಣದಲ್ಲಿ ಡೌನ್-ಲೋಡ್ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ರಮ್ಯಾ ತಿಳಿಸಿದ್ದಾರೆ. ಅಲ್ಲದೆ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ವಸ್ತ್ರಸಂಹಿತೆಯನ್ನೂ ನಿಗಧಿಪಡಿಸಿದ್ದು, ನಿಷೇಧಿತ ವಸ್ತುಗಳ ಪಟ್ಟಿಯನ್ನೂ ತಿಳಿಸಲಾಗಿದೆ. ಪರೀಕ್ಷೆಯು ಮಾರ್ಚ್ 12 ರಿಂದ 16ರವರೆಗೆ ನಡೆಯಲಿದೆ. …

Read More »

ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಬಂಕ್ ಮಾಲೀಕನಿಗೆ ಬರೋಬ್ಬರಿ 44 ಲಕ್ಷ ರೂ. ವಂಚನೆ

ಬೆಳಗಾವಿ: ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಪೆಟ್ರೋಲ್ ಬಂಕ್ ಮಾಲೀಕನಿಗೆ ಬರೋಬ್ಬರಿ 44 ಲಕ್ಷ ರೂ. ವಂಚನೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಬೆಳಗಾವಿಯ ಮಚ್ಚೆಯಲ್ಲಿರುವ ಸೋಮನಾಥ್ ಪೆಟ್ರೋಲ್ ಬಂಕ್‌ನ ಮಾಲೀಕ ಸುನೀಲ್ ಶಿಂಧೆ ಮೋಸ ಹೋದವರು. ಬೆಳಗಾವಿಯ ನಿವಾಸಿ ರೋಹಿತ್ ರಾಜು ಎಂಬಾತ ಕಳೆದ ಮೂರು ವರ್ಷದಿಂದ ಸುನೀಲ್ ಶಿಂಧೆಯ ಪೆಟ್ರೋಲ್ ಬಂಕ್‍ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ಒಂದೂವರೆ ವರ್ಷದಲ್ಲಿ ಮಾಲೀಕರಿಗೆ 44 ಲಕ್ಷ ರೂ. ಹಣವನ್ನು …

Read More »

ಬಿಜೆಟ್ ನಲ್ಲಿ ಏನಿದೆ ಅನ್ನೋದನ್ನ ಹೇಳೋದು ತಪ್ಪಾಗುತ್ತೆ ಅದರ ಬಗ್ಗೆ 4 ರಂದು ನೋಡಿ: ಬೊಮ್ಮಾಯಿ

ರಾಜ್ಯ ಬಜೆಟ್ ಮಾ.4 ರಂದು ನಡೆಯುತ್ತೆ. ಎಲ್ಲೆಲ್ಲಿ ಯಾವ ಪ್ರದೇಶಕ್ಕೆ ಏನಾಗುತ್ತೆ ಗೊತ್ತಾಗುತ್ತೆ. ಬಿಜೆಟ್ ನಲ್ಲಿ ಏನಿದೆ ಅನ್ನೋದನ್ನ ಹೇಳೋದು ತಪ್ಪಾಗುತ್ತೆ ಅದರ ಬಗ್ಗೆ 4 ರಂದು ನೋಡಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ಹುಬ್ಬಳ್ಳಿ ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಅವರು ಎಸ್ ಡಿ ಪಿ ಐ, ಪಿಎಫ್ಐ ಬ್ಯಾನ್ ವಿಚಾರಕ್ಕೆ ಪ್ರತಿಕ್ರಿಯಿಸಿ,‌ ಎಲ್ಲ ಘಟನೆಗಳನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಬಹಳ ಕೂಲಂಕುಷವಾಗಿ ಪರಿಶೀಲನೆ …

Read More »

35 ಬಣವಿಗೆ ಬೆಂಕಿ ತಗುಲಿ ಅಪಾರ ಹಾನಿಗೊಳಗಾದ ಕುಟುಂಬಸ್ಥರಿಗೆ ತಲಾ 10 ಸಾವಿರ ರೂ. ಪರಿಹಾರ ನೀಡುವುದಾಗಿ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಅವರ ಘೋಷಣೆ

ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದಲ್ಲಿ 35 ಬಣವಿಗೆ ಬೆಂಕಿ ತಗುಲಿ ಅಪಾರ ಹಾನಿಗೊಳಗಾದ ಕುಟುಂಬಸ್ಥರಿಗೆ ತಲಾ 10 ಸಾವಿರ ರೂ. ಪರಿಹಾರ ನೀಡುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಅವರು ಘೋಷಣೆ ಮಾಡಿದ್ದಾರೆ.ಶುಕ್ರವಾರ ಹೊಸ ವಂಟಮುರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಭೂತರಾಮನಹಟ್ಟಿ ಗ್ರಾಮದಲ್ಲಿ 35 ಬಣವಿಗೆ ಆಕಸ್ಮಿಕ ಬೆಂಕಿ ತಗುಲಿದ್ದು, ಅಪಾರ ಪ್ರಮಾಣದ ಮೇವು ಹಾನಿಯಾಗಿತ್ತು. ಈ ಹಿನ್ನೆಲೆಯಲ್ಲಿ ಹಾನಿಗೊಳಗಾದ ಕುಟುಂಬಸ್ಥರಿಗೆ ತಲಾ 10 ಸಾವಿರ ರೂ. …

Read More »