Breaking News

Yearly Archives: 2022

ಉಕ್ರೇನ್​ನಿಂದ ಸುರಕ್ಷಿತವಾಗಿ ಹಿಂದಿರುಗಿದ ಬೆಳಗಾವಿಯ ವಿದ್ಯಾರ್ಥಿನಿ ಬ್ರಾಹ್ಮಿ..

ಬೆಳಗಾವಿ : ಉಕ್ರೇನ್​​ನ ಯುದ್ಧ ಭೂಮಿಯಿಂದ ಸುರಕ್ಷಿತವಾಗಿ ಬೆಳಗಾವಿಗೆ ಆಗಮಿಸಿದ ವಿದ್ಯಾರ್ಥಿನಿ ಬ್ರಾಹ್ಮಿ ಮನೋಜ ಪಾಟೀಲ್ ಅವರನ್ನು, ಸಚಿವ ಉಮೇಶ ಕತ್ತಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಚಿಕ್ಕೋಡಿ ತಾಲೂಕಿನ ಬ್ರಾಹ್ಮಿ ದೆಹಲಿ, ಬೆಂಗಳೂರು ಮಾರ್ಗವಾಗಿ ಬೆಳಗಾವಿಗೆ ಆಗಮಿಸಿದರು. ಎಂಬಿಬಿಎಸ್ ಪ್ರಥಮ ವರ್ಷದ ವಿದ್ಯಾರ್ಥಿನಿ ಆಗಿರುವ ಬ್ರಾಹ್ಮಿ ಪಾಟೀಲ್, ಉಕ್ರೇನ್ ದೇಶದ ಚರ್ನಿವೇಸ್ಟ್ ನ ಬೊಕೊ ಯುನಿಯನ್ ಸ್ಟೇಟ್ ಮೆಡಿಕಲ್ ವಿವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಯುದ್ಧ ಘೋಷಣೆಯಾದ …

Read More »

ರಷ್ಯಾ ಪಡೆಗಳಿಂದ ಮತ್ತೊಂದು ಪರಮಾಣು ಸ್ಥಾವರ ವಶಪಡಿಸಿಕೊಳ್ಳಲು ಯತ್ನ

ಕೀವ್‌(ಉಕ್ರೇನ್​): ಉಕ್ರೇನ್‌ನಲ್ಲಿ ಕಳೆದ ವಾರ ಜಪೋರಿಜ್ಜ್ಯಾ ಪರಮಾಣು ಸ್ಥಾವರವನ್ನು ವಶಪಡಿಸಿಕೊಂಡ ನಂತರ ರಷ್ಯಾದ ಪಡೆಗಳು ಮತ್ತೊಂದು ಪರಮಾಣು ಸ್ಥಾವರವನ್ನು ವಶಪಡಿಸಿಕೊಳ್ಳುವ ಪ್ಲಾನ್​ ಹೊಂದಿವೆ ಎಂದು ಕೀವ್‌ನ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆಉಕ್ರೇನಿಯನ್ ಅಧ್ಯಕ್ಷರ ಕಚೇರಿಯ ಮುಖ್ಯಸ್ಥರ ಸಲಹೆಗಾರ ಅಲೆಕ್ಸಿ ಅರೆಸ್ಟೋವಿಚ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ರಷ್ಯಾದ ಪಡೆಗಳು ನಿಕೋಲೇವ್‌ನ ಉತ್ತರಕ್ಕೆ ದಾಳಿ ಇಡಲು ಪ್ರಯತ್ನಿಸುತ್ತಿವೆ. ಹಾಗೆ ಇದರ ಭಾಗವಾಗಿ ದಕ್ಷಿಣ ಉಕ್ರೇನಿಯನ್ ಪರಮಾಣು ವಿದ್ಯುತ್ ಸ್ಥಾವರವನ್ನು ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿವೆ …

Read More »

ಸಂಪೂರ್ಣ ʻಮಹಿಳಾ ಸಿಬ್ಬಂದಿʼಯನ್ನೇ ಹೊಂದಿದ ʻರೈಲ್ವೆ ನಿಲ್ದಾಣʼವಿದು. ಯಾವುದು ಗೊತ್ತಾ?

ಬೆಳಗಾವಿ: ಬೆಳಗಾವಿಯ ಬಿಡಿಸಿಸಿ ಬ್ಯಾಂಕ್ ಮುರಗೋಡ ಶಾಖೆಯಲ್ಲಿ ಕಳ್ಳರು ಕೈಚಳಕ ತೋರಿದ್ದು, ಬರೋಬ್ಬರಿ 5 ಕೋಟಿಗೂ ಅಧಿಕ ಮೌಲ್ಯದ ಹಣ, ಚಿನ್ನಾಭರಣ ಲೂಟಿ ಮಾಡಿರುವುದು ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುರಗೋಡದ ಬಿಡಿಸಿಸಿ ಬ್ಯಾಂಕ್ ಗೆ ನುಗ್ಗಿರುವ ದರೋಡೆಕೋರರು, ಬ್ಯಾಂಕ್ ಬಾಗಿಲು ಮುರಿದು ನಕಲಿ ಕೀ ಬಳಸಿ ಹಣ, ಚಿಭಾರಣ ದೋಚಿ ಪರಾರಿಯಾಗಿದ್ದಾರೆ.

Read More »

ಗೃಹ ಸಚಿವರ ಜಿಲ್ಲೆಯಲ್ಲಿ ಪಿಎಸ್‌ಐ ಸಮ್ಮುಖ ಪೊಲೀಸರಿಂದ ವ್ಯಕ್ತಿಯ ಮೇಲೆ ಅಮಾನವೀಯ ಹಲ್ಲೆ

ಶಿವಮೊಗ್ಗ ಜಿಲ್ಲೆ ಅನಪೇಕ್ಷಿತ ಸುದ್ದಿಗಳಿಗೆ ಕಾರಣವಾಗುತ್ತಿದೆ. ಇತ್ತೀಚಿಗೆ ಬಜರಂಗ ದಳದ ಕಾರ್ಯಕರ್ತ ಹರ್ಷನ ಕೊಲೆ (Harsha murder) ನಡೆದು ಶಿವಮೊಗ್ಗ ನಗರ (Shivamogga city) ಎರಡು ವಾರಗಳ ಕಾಲ ಸುದ್ದಿಯಲ್ಲಿತ್ತು. ಕೊಲೆಗೆ ಸಂಬಂಧಿಸಿದಂತೆ ಆಡಳಿತ ಮತ್ತು ವಿರೋಧ ಪಕ್ಷಗಳು ಪರಸ್ಪರ ಕೆಸರೆರಚಾಟ ನಡೆಸಿದವು. ನಗರದಲ್ಲಿ ಕರ್ಫ್ಯೂ, ನಿಷೇಧಾಜ್ಞೆಗಳನ್ನು ಹೇರಲಾಗಿತ್ತು ಮತ್ತು ಶಾಲಾ ಕಾಲೇಜುಗಳು ಒಂದು ವಾರದವರೆಗೆ ಮುಚ್ಚಲ್ಪಟ್ಟಿದ್ದವು. ಶಿಕ್ಷಣ ಸಂಸ್ಥೆಗಳು ಪುನರಾರಂಭಗೊಂಡ ಬಳಿಕ ಕೆಲವು ಕಡೆ ಪುನಃ ಹಿಜಾಬ್ ವಿವಾದ …

Read More »

ಟವೆಲ್​ನಿಂದ ಕತ್ತು ಹಿಸುಕಿ ಸ್ನೇಹಿತನ ಹತ್ಯೆಗೈದು (Murder) ಬಣವೆಯಲ್ಲಿ ಸುಟ್ಟು ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ: ಟವೆಲ್​ನಿಂದ ಕತ್ತು ಹಿಸುಕಿ ಸ್ನೇಹಿತನ ಹತ್ಯೆಗೈದು (Murder) ಬಣವೆಯಲ್ಲಿ ಸುಟ್ಟು ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿ ಜೊತೆ ಅನೈತಿಕ (Immoral Relationship) ಸಂಬಂಧದ ಬಗ್ಗೆ ಪ್ರಶ್ನಿಸಿದ್ದಕ್ಕೆ ಸ್ನೇಹಿತ ಸಂತೋಷ ಫರೀಟ್​​ನನ್ನು ಪರಶುರಾಮ ಕುರುಬರ ಕೊಲೆ ಮಾಡಿದ್ದಾನೆ. ಸಂತೋಷ್ ಫರೀಟ್(36) ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆ ಚಂದಗಡ ನಿವಾಸಿ. ಆರೋಪಿ ಪರಶುರಾಮ ಬೆಳಗಾವಿ ತಾಲೂಕಿನ ಕಣಬರಗಿ ನಿವಾಸಿ. ಕೊಲೆಯಾದ ಸಂತೋಷ್ ಪತ್ನಿ ಜೊತೆ ಪರಶುರಾಮ ಕುರಬರ ಅನೈತಿಕ ಸಂಬಂಧ ಹೊಂದಿದ್ದ. …

Read More »

ಶಿಕ್ಷಕಿ ಮೇಲೆ ಬಸ್ ನಲ್ಲಿ ಲೈಂಗಿಕ ಕಿರುಕುಳ: ಮೂಕ ಪ್ರೇಕ್ಷಕರಾದ ಸಹ ಪ್ರಯಾಣಿಕರು

ಕೋಝಿಕ್ಕೋಡ್: ಕೇರಳ ಸರ್ಕಾರಿ ಬಸ್ ನಲ್ಲಿ ರಾತ್ರಿ ಪ್ರಯಾಣದ ವೇಳೆ ಶಿಕ್ಷಕಿಯೊಬ್ಬರ ಮೇಲೆ ಸಹ ಪ್ರಯಾಣಿಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ಇದೀಗ ಸಂಚಲನ ಮೂಡಿಸಿದೆ. ಕೋಝಿಕ್ಕೋಡ್ ಗೆ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಸಂಚರಿಸುತ್ತಿದ್ದ ಅಧ್ಯಾಪಿಕೆ ಮೇಲೆ ಹಿಂದೆ ಕುಳಿತಿದ್ದ ಸಹ ಪ್ರಯಾಣಿಕ ಅಸಭ್ಯವಾಗಿ ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ್ದ. ಇದನ್ನು ಶಿಕ್ಷಕಿ ಪ್ರಶ್ನಿಸಿದಾಗ ಆತ ಕ್ಷಮೆ ಕೇಳುವವನಂತೆ ನಾಟಕವಾಡಿದ್ದ. ಈ ಬಗ್ಗೆ ಶಿಕ್ಷಕಿ ಮತ್ತು ಕಾಮುಕನ …

Read More »

ಜೈಲಿಗೆ ಹೋಗುವ ದಿನಗಳು ಹತ್ತಿರವಾಗುತ್ತಿವೆ: ಅಧಿಕಾರಿಗಳಿಗೆ ಹೈಕೋರ್ಚ್ ಎಚ್ಚರಿಕೆ

ಬೆಂಗಳೂರು : ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಎಲ್ಲವೂ ಸರಿಯಾಗಿಲ್ಲ ಎಂಬುದು ದಿನೇ ದಿನೇ ಮನದಟ್ಟಾಗುತ್ತಿದೆ. ಇಲ್ಲಿರುವ ಅಧಿಕಾರಿಗಳು ಕಾನೂನಿಗಿಂತ ಮೇಲಿದ್ದೇವೆ ಎಂದು ಭಾವಿಸಿದಂತಿದೆ. ಇವರಿಗೆಲ್ಲಾ ಕಾನೂನು ಎಂದರೆ ಏನು ಎಂಬುದನ್ನು ಅರ್ಥ ಮಾಡಿಸುವ ಸಮಯ ಹತ್ತಿರ ಬಂದಿದೆ’ ಎಂದು ಹೈಕೋರ್ಟ್‌ ಗುಡುಗಿದೆ. ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಲ್ಲಿ ಬಿಬಿಎಂಪಿ ವಿಫಲವಾಗಿದೆ’ ಎಂದು ಆಕ್ಷೇಪಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ …

Read More »

ಮದ್ಯಪಾನ ಮಾಡೋದು ಮೆದುಳಿಗೆ ಒಳ್ಳೆಯದಾ.? ಸಂಶೋಧನೆಯಲ್ಲಿ ಬಯಲಾಗಿದೆ ‌ʼಶಾಕಿಂಗ್ʼ ಸತ್ಯ

ಮದ್ಯಪಾನ ಮಾಡೋದು ನಿಮ್ಮ ಹೃದಯ ಹಾಗೂ ಕಿಡ್ನಿಗೆ ಒಳ್ಳೆಯದು ಅನ್ನೋ ವಿಚಿತ್ರ ಮೆಸೇಜ್‌ ಗಳನ್ನು ವಾಟ್ಸಾಪ್‌ ನಲ್ಲಿ ನೋಡಿರ್ತೀರಾ. ಆದ್ರೆ ಇದರಲ್ಲಿ ಎಳ್ಳಷ್ಟೂ ಸತ್ಯವಿಲ್ಲ. ಮದ್ಯಪಾನದಿಂದ ಮೆದುಳಿಗೂ ಹಾನಿಯಾಗುತ್ತದೆ ಎಂಬ ಆಘಾತಕಾರಿ ಅಂಶವೀಗ ಹೊಸದೊಂದು ಸಂಶೋಧನೆಯಲ್ಲಿ ಬಹಿರಂಗವಾಗಿದೆ.   36,000 ಜನರನ್ನು ಸಂಶೋಧನೆಗೆ ಒಳಪಡಿಸಿ ಈ ವರದಿಯನ್ನು ತಯಾರಿಸಲಾಗಿದೆ. ಪ್ರತಿದಿನ ಒಂದರಿಂದ ಎರಡು ಪೆಗ್‌ ಕುಡಿಯುವವರ ಮೆದುಳಿನಲ್ಲೂ ಬದಲಾವಣೆಗಳಾಗಿರೋದು ಸಾಬೀತಾಗಿದೆ. ಇನ್ನು ವಿಪರೀತ ಕುಡಿತದ ಚಟವಿರುವವರ ಮೆದುಳಿನ ರಚನೆ ಮತ್ತು …

Read More »

ಟ್ಯಾಟೂʼ ಹಾಕುವ ನೆಪದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರಕ್ಕೆ ಯತ್ನ

ಕೊಚ್ಚಿ (ಕೇರಳ) : ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಕೇರಳ ಪೊಲೀಸರು ಟ್ಯಾಟೂ(Tattoo)ಕಲಾವಿದನೊಬ್ಬನನ್ನು ಶನಿವಾರ ಕೊಚ್ಚಿಯಲ್ಲಿ ಬಂಧಿಸಿದ್ದಾರೆ. ಕೊಚ್ಚಿಯ ಎಡಪಲ್ಲಿಯಲ್ಲಿ ಟ್ಯಾಟೂ ಸ್ಟುಡಿಯೋ ನಡೆಸುತ್ತಿರುವ ಆರೋಪಿ ಸುಜೀಶ್ ಪಿಎಸ್ ವಿರುದ್ಧ ಆರು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.   ಟ್ಯಾಟೂ ಸ್ಟುಡಿಯೋದಲ್ಲಿ, ಟ್ಯಾಟೂ ಹಾಕಿಸಿಕೊಳ್ಳುವ ವೇಳೆ ಸುಜೀಶ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು 18 ವರ್ಷದ ಯುವತಿಯೊಬ್ಬಳು ಆರೋಪಿಸಿದ್ದಾರೆ. ಸುಜೀಶ್‌ನನ್ನು ಚೇರನಲ್ಲೂರು …

Read More »

ಬಸಪ್ಪನಿಗೆ ಚಮಚದಲ್ಲಿ ಹಾಲು ಕುಡಿಸಿದ ಭಕ್ತರು!

ಬಾಗಲಕೋಟೆ: ಜನ ಮರುಳೊ, ಜಾತ್ರೆ ಮರುಳೊ ಎಂಬ ಘಟನೆ ನಿನ್ನೆ ರಾತ್ರಿ ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ನಡೆದಿದೆ. ಬಸಪ್ಪನಿಗೆ ಭಕ್ತರು ಚಮಚದಲ್ಲಿ ಹಾಲು ಕುಡಿಸಿದ್ದಾರೆ. ಪಟ್ಟಣದ ಅರಳಿಕಟ್ಟೆ ಬಸಪ್ಪನಿಗೆ ಭಕ್ತರು ಚಮಚದಲ್ಲಿ ಹಾಲು ಕುಡಿಸಲು ಶುರು ಮಾಡಿದ್ದಾರೆ. ಚಮಚದಲ್ಲಿನ ಹಾಲು ಕೆಳಗೆ ಬಿದ್ದರೇ ಬಸವಣ್ಣ ಹಾಲು ಕುಡಿದ ಅಂತ ನಂಬಿಕೆ. ಈ ಸುದ್ದಿ ಪಟ್ಟಣದ ತುಂಬ ಹರಡಿದ್ದು, ಬಸಪ್ಪನನ್ನು ನೋಡಲು ಜನರು ಮುಗಿಬಿದ್ದಿದ್ದಾರೆ. ನಿನ್ನೆ ರಾತ್ರಿ ಜನರು ಬಸಪ್ಪನ ಪವಾಡ ನೋಡಬೇಕು …

Read More »