ಬೆಂಗಳೂರು: ನಾಲ್ಕು ಲಕ್ಷ ಮಹಿಳೆಯರಿಗೆ ಉದ್ಯೋಗ ನೀಡಲು ಯೋಜನೆ ರೂಪಿಸಲಾಗಿದ್ದು, ಈ ಬಗ್ಗೆ ಬಜೆಟ್ ನಲ್ಲಿ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಗರದ ಮಹಾಲಕ್ಷ್ಮಿ ಲೇಔಟ್ ಶಂಕರಮಠ ಬಡಾವಣೆಯಲ್ಲಿ ಮಹಾಲಕ್ಷ್ಮೀ ಎಜುಕೇಷನಲ್ ಟ್ರಸ್ಟ್ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣಿಲ್ಲದೆ ಈ ಜಗತ್ತು ಇಲ್ಲ. ಇಂದು ಎಲ್ಲಾ ರಂಗದಲ್ಲಿ ಮಹಿಳೆಯರಿದ್ದಾರೆ. ಮುಂದಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ರಂಗದಲ್ಲಿ ಮುಂಚೂಣಿಯಲ್ಲಿರಲಿದ್ದಾರೆ ಎಂದರು. ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ …
Read More »Yearly Archives: 2022
ನಾಲ್ಕೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ- ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಂತಸ.
ಬೆಂಗಳೂರು-ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಗಳಲ್ಲಿ ಭಾರತೀಯ ಜನತಾ ಪಾರ್ಟಿ ಅಭೂತಪೂರ್ವ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಕಹಾಮ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಹಾಗೂ ಗೋವಾ ವಿಧಾನ ಸಭಾ ಚುನಾವಣೆಗಳಲ್ಲಿ ಪಂಜಾಬ್ ಹೊರತುಪಡಿಸಿ ನಾಲ್ಕು ರಾಜ್ಯಗಳಲ್ಲಿ ಭಾರತೀಯ ಜನತಾ ಪಾರ್ಟಿಯು ನಿಚ್ಚಳ ಬಹುಮತದತ್ತ ಸಾಗುತ್ತಿದೆ. ಅಂತಿಮ ಫಲಿತಾಂಶ ನಮ್ಮ ಪಾರ್ಟಿಯದ್ದೆ. ಸ್ಪಷ್ಡ ಬಹುಮತ ಪಡೆಯಲಿದೆ. ದೇಶದ ಸಮಗ್ರ ಅಭಿವೃದ್ಧಿ …
Read More »ಅಧಿಕಾರ ಇರುವ ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ, ಜಂಬ ಪಡುವ ಅಗತ್ಯ ಇಲ್ಲ: ಸಿದ್ದರಾಮಯ್ಯ
ಬೆಂಗಳೂರು: ಅಧಿಕಾರ ಇರುವ ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ ಅಷ್ಟೇ. ಇದರಿಂದ ಬಹಳ ಜಂಬ ಪಡುವ ಹಾಗಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು. ವಿಧಾನಸೌಧದಲ್ಲಿ ಪಂಚ ರಾಜ್ಯ ಚುನಾವಣೆಯ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ಇನ್ನೂ ಪೂರ್ಣ ಫಲಿತಾಂಶ ಪ್ರಕಟವಾಗಿಲ್ಲ. ಪಂಜಾಬ್ನಲ್ಲಿ ಮಾತ್ರ ನಾವು ಅಧಿಕಾರದಲ್ಲಿದ್ದೆವು. ಬೇರೆ ರಾಜ್ಯಗಳಲ್ಲಿ ನಾವು ಅಧಿಕಾರದಲ್ಲಿರಲಿಲ್ಲ. ಉತ್ತರಾಖಂಡ, ಗೋವಾದಲ್ಲಿ ಗೆಲುವಿನ ನಿರೀಕ್ಷೆ ಇತ್ತು. ನಮ್ಮ ತಪ್ಪಿನಿಂದ ಪಂಜಾಬ್ನಲ್ಲಿ ಅಧಿಕಾರ ಕಳೆದುಕೊಂಡಿದ್ದೇವೆ ಎಂದರು. ಈ ಚುನಾವಣೆಗಳಿಂದ ನಾನೇನು …
Read More »A.A.P. ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಗೆಲುವು
ಚಂಡೀಗಢ(ಪಂಜಾಬ್): ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಮತ್ತು ಧುರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಭಗವಂತ್ ಮಾನ್ ಗೆಲುವು ಸಾಧಿಸಿದ್ದು, ಇವರ ವಿರುದ್ಧ ಕಾಂಗ್ರೆಸ್ ಶಾಸಕ ದಲ್ಬೀರ್ ಗೋಲ್ಡಿ ಸ್ಪರ್ಧಿಸಿದ್ದರು. ಈ ಮೊದಲು ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಭಗವಂತ್ ಮಾನ್, ಈಗ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಈ ಹಿಂದೆ ಅವರು ದೇಶದಲ್ಲಿ ಆಪ್ ಪಕ್ಷದ ಪರವಾಗಿ ಸಂಸತ್ ಸ್ಥಾನವನ್ನು ಗೆದ್ದ ಏಕೈಕ ಸಂಸದರು ಎಂಬ ಕೀರ್ತಿಗೆ ಪಾತ್ರರಾಗಿದ್ದರು.ಈ …
Read More »ಪಂಜಾಬ್ನಲ್ಲೊಬ್ಬ ಸಿಧು, ರಾಜ್ಯದಲ್ಲೊಬ್ಬ ಸಿದ್ದು – ಇಲ್ಲೂ ಕಾಂಗ್ರೆಸ್ ಅವನತಿಯಾಗುತ್ತೆ: ಜಗದೀಶ್ ಶೆಟ್ಟರ್ ಲೇವಡಿ
ಬೆಂಗಳೂರು: ಪಂಜಾಬ್ನಲ್ಲಿ ಒಬ್ಬ ಸಿದ್ದು, ರಾಜ್ಯದಲ್ಲಿ ಒಬ್ಬ ಸಿದ್ದು ಇದ್ದಾರೆ. ಪಂಜಾಬ್ ಸಿಧುರಿಂದ ಅಲ್ಲಿ ಕಾಂಗ್ರೆಸ್ ನಾಶವಾಗಿದೆ. ಇಲ್ಲಿನ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ರಿಂದ ಕಾಂಗ್ರೆಸ್ಗೆ ಇತಿಶ್ರೀ ಬೀಳಲಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಟಾಂಗ್ ನೀಡಿದರು. ವಿಧಾನಸೌಧದಲ್ಲಿ ಪಂಚ ರಾಜ್ಯಗಳ ಫಲಿತಾಂಶ ಬಗ್ಗೆ ಮಾತನಾಡಿದ ಅವರು, ನಾವು ನಿರೀಕ್ಷಿಸಿದಂತೆ ಫಲಿತಾಂಶ ಬಂದಿದೆ. ಚುನಾವಣಾ ಸಮೀಕ್ಷೆ ಕೂಡ ನಿಜವಾಗಿದೆ. ಉತ್ತರಾಖಂಡ್ನಲ್ಲಿ ಅಭೂತಪೂರ್ವ ಫಲಿತಾಂಶ ಬಂದಿದೆ. 4 ರಾಜ್ಯಗಳ ಮತದಾರರಿಗೆ, …
Read More »ಲಂವವನ್ನು ಪೇಟಿಯಮ್ ಮಾಡಿಸಿಕೊಂಡ ಇಬ್ಬರು ಎಸಿಬಿ ಬಲೆಗೆ
ಬೆಳಗಾವಿ: ಈಗ ಏನಿದ್ದರೂ ಡಿಜಿಟಲ್ ಪರ್ವ ಹೀಗಾಗಿ ಈಗ ಕ್ಯಾಶ್ ಲೆಸ್ ರೋಗ ಬ್ರಷ್ಟಾಚಾರದ ಕ್ಷೇತ್ರಕ್ಕೂ ಹರಡಿದ್ದು ,ಲಂವವನ್ನು ಪೇಟಿಯಮ್ ಮಾಡಿಸಿಕೊಂಡ ಇಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ. ಈ ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯಲ್ಲಿ ಅನ್ನೋದು ವಿಶೇಷ ಪಿತ್ರಾರ್ಜಿತ ಆಸ್ತಿ ಪರಭಾರೆಗೆ ಸಂಬಂಧಪಟ್ಟ ದಾಖಲಾತಿಗಳನ್ನು ನೀಡಲು ರೂ.4,000 ಲಂಚ ಕೇಳಿದ ಸವದತ್ತಿ ತಾಲೂಕು ಮುರಗೋಡದ ಸಬ್ ರಿಜಿಸ್ಟ್ರಾರ್ ಮತ್ತು ಸಬ್ ರಿಜಿಸ್ಟ್ರಾರ್ ಪರವಾಗಿ ಲಂಚವನ್ನು ಸ್ವೀಕರಿಸಿದ ಬಾಂಡ್ ರೈಟರ್ ಬುಧವಾರ …
Read More »ಒಬ್ಬ ಹುಡ್ಗಿಗಾಗಿ ಇಬ್ಬರ ಫೈಟ್ – ನಡುರಾತ್ರಿ ಲವ್‍ಗಾಗಿ ನಡೀತು ಮರ್ಡರ್
ಬೆಂಗಳೂರು: ಒಂದೇ ಹುಡುಗಿಯ ಮೇಲೆ ಇಬ್ಬರು ಹುಡುಗರು ಕಣ್ ಹಾಕಿದ್ರು. ಆ ಹುಡುಗಿಯನ್ನ ಮನವೊಲಿಸಿಕೊಳ್ಳೋ ಪೈಪೋಟಿಯಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಆರೋಪಿಗಳ ಬೆನ್ನುಬಿದ್ದ ಪೊಲೀಸರು, ಕೊಲೆಯಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳ ಕಾಲಿಗೆ ಗುಂಡು ಹೊಡೆದು ಬಂಧಿಸಿದ ಘಟನೆ ನಡೆದಿದೆ. ಕೆಜಿ ಹಳ್ಳಿ ನಿವಾಸಿ ಉಸ್ಮಾನ್ ಹಾಗೂ ಮೋಹಿನ್ ಇಬ್ಬರೂ ಅದೇ ಏರಿಯಾದ ಹುಡುಗಿಯನ್ನು ಇಷ್ಟಪಡುತ್ತಿದ್ದರಂತೆ. ಇಬ್ಬರ ನಡುವೆ ಇದೇ ವಿಚಾರಕ್ಕೆ ಕಿರಿಕ್ ನಡೀತಾನೇ ಇತ್ತು. ಇಬ್ಬರು ಸಿನಿಮಾ ಸ್ಟೈಲ್‍ನಲ್ಲಿ ಒಬ್ಬರಿಗೊಬ್ಬರು …
Read More »ಉತ್ತರ ಪ್ರದೇಶ ಅಂಚೆ ಮತ ಎಣಿಕೆ: ಆರಂಭದಲ್ಲಿ ಬಿಜೆಪಿ ಮುನ್ನಡೆ
ಲಕ್ನೋ: ಉತ್ತರ ಪ್ರದೇಶ ಚುನಾವಣೆಯ ಮತ ಎಣಿಕೆ ಆರಂಭಗೊಂಡಿದ್ದು ಆರಂಭದ ಅಂಚೆ ಮತ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಬಿಜೆಪಿ 25, ಎಸ್‌ಪಿ 18 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಅಂಚೆ ಮತ ಎಣಿಕೆಯಲ್ಲಿ ಮುನ್ನಡೆ ಪಡೆದರೂ ಮಧ್ಯಾಹ್ನದ ವೇಳೆ ಫಲಿತಾಂಶ ಸ್ಪಷ್ಟವಾಗಲಿದೆ. 2024ರ ಲೋಕಸಭಾ ಚುನಾವಣೆ ಮತ್ತು ರಾಷ್ಟ್ರಪತಿ ಚುನಾವಣೆಯಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಲಿದೆ. ಚುನಾವಣೋತ್ತರ ಸಮೀಕ್ಷೆಗಳು ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು …
Read More »ಪರಿಷತ್‌ನಲ್ಲಿ ನಿವೃತ್ತ ಶಾಸಕರ ಸಂಕಷ್ಟ ವಿವರಿಸಿದ ಎಚ್.ವಿಶ್ವನಾಥ್
ಬೆಂಗಳೂರು: ವಿಧಾನಪರಿಷತ್ನಲ್ಲಿ ಶಾಸಕರಾಗಿ ನಿವೃತ್ತಿ ಹೊಂದುವ ಪ್ರಾಮಾಣಿಕ ರಾಜಕಾರಣಿಗಳಿಗೆ ಎದುರಾಗುವ ಸಮಸ್ಯೆಯನ್ನು ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ಸವಿಸ್ತಾರವಾಗಿ ವಿವರಿಸಿದರು. ವಿಧಾನಪರಿಷತ್ನಲ್ಲಿ ಜೆಡಿಎಸ್ ಸದಸ್ಯ ಭೋಜೇಗೌಡ ಅವರು ಶಾಸಕರ ವೇತನ ವಿಚಾರ ಮಾತನಾಡಿದಾಗ, ವಿಶ್ವನಾಥ್ ಹಳೆಯ ಘಟನೆ ವಿವರಿಸಿದರು. 1978ರಲ್ಲಿ ನಮ್ಮ ಗೌರವಧನ 600 ರೂ. ಇತ್ತು. ಪ್ರತಿದಿನ ಹಾಜರಾಗಿ ಸಹಿ ಹಾಕಿದರೆ 50 ರೂ.ಕೊಡ್ತಿದ್ದರು. ನಾನು ಶಾಸಕನಾಗಿದ್ದಾಗ ಒಬ್ಬ ಹುಡುಗ ಕಾರು ತೊಳೀತಿದ್ದ. ಒಮ್ಮೆ ಹೊಡೆದುಬಿಟ್ಟೆ. ದಿನಕ್ಕೆ ಎರಡು ರೂ. ಕೇಳಿದ್ದಕ್ಕೆ …
Read More »ಶೀಘ್ರದಲ್ಲೇ ಕಡಬ ತಾಲೂಕು ಕಛೇರಿಗೆ ಸಿಸಿ ಕ್ಯಾಮರಾ ಅಳವಡಿಕೆ: ಜಿಲ್ಲಾಧಿಕಾರಿ
ಕಡಬ: ತಾಲೂಕು ಕಛೇರಿಯಲ್ಲಿ ಅಧಿಕಾರಿಗಳ ಅವ್ಯವಹಾರಗಳ ಸಮಗ್ರ ತನಿಖೆ ನಡೆಸುತ್ತೇನೆ, ಕೇವಲ ಎಚ್ಚರಿಕೆ ಕೊಟ್ಟು ಅಲ್ಲಿಗೆ ಬಿಡುವುದಿಲ್ಲ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದ್ದಾರೆ. ಇಂದು ಕಡಬ ತಾಲೂಕು ಕಛೇರಿಗೆ ಭೇಟಿ ನೀಡಿದ ಅವರು ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿಚಾರಣೆ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಕಡಬ ಕಂದಾಯ ಇಲಾಖೆಯಲ್ಲಿ ಅಕ್ರಮ-ಸಕ್ರಮ ಹಾಗೂ ಪ್ಲಾಟಿಂಗ್ಗೆ ಸಂಬಂಧಪಟ್ಟ ಫೈಲ್ಗಳ ವಿಲೇವಾರಿಯಲ್ಲಿ ಅವ್ಯವಹಾರಗಳು ನಡೆಯುತ್ತಿದೆ …
Read More »