ಬೆಂಗಳೂರು: ಕುಡಿದ ಮತ್ತಿನಲ್ಲಿ ಬೀದಿಯಲ್ಲಿ ಮಲಗಿದ್ದ ವೃದ್ಧನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮಾರ್ಚ್ 15ರ ನಸುಕಿನ ಜಾವ ಹೆಗ್ಗನಹಳ್ಳಿಯಲ್ಲಿ ಘಟನೆ ನಡೆದಿದೆ. ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದ ಕೃಷ್ಣಪ್ಪ ಕೊಲೆಯಾದವ. ಅಂದು ರಾತ್ರಿ ಬಾರ್ವೊಂದರಲ್ಲಿ ಕಂಠಪೂರ್ತಿ ಕುಡಿದಿದ್ದ ಹಿನ್ನೆಲೆಯಲ್ಲಿ ಕೃಷ್ಣಪ್ಪನನ್ನು ಸ್ಥಳೀಯರು ಅಂಗಡಿಯೊಂದರ ಮುಂದೆ ಮಲಗಿಸಿ ಹೋಗಿದ್ದರು. ಕುಡಿದು ಮಲಗಿದ್ದ ಈ ಜಾಗಕ್ಕೆ ಸೈಕೋ ಮನಸ್ಥಿತಿಯ …
Read More »Yearly Archives: 2022
ಮಾ.28 ರಿಂದ ಏಪ್ರಿಲ್ 11ರವರೆಗೆ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತಪ್ರಯಾಣ
ಬೆಂಗಳೂರು: ಪ್ರತಿವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುವ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕೆಎಸ್ಆರ್ಟಿಸಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುತ್ತಿದೆ. 2021-22ನೇ ಸಾಲಿನ ಪರೀಕ್ಷೆಗಳು ಮಾ.28 ರಿಂದ ಏಪ್ರಿಲ್ 11ರವರೆಗೆ ನಡೆಯಲಿವೆ. ಪರೀಕ್ಷೆಗೆ ಹಾಜರಾಗುವ ರಾಜ್ಯದ ಎಲ್ಲಾ 10ನೇ ತರಗತಿ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಹೋಗುವಾಗ ಮತ್ತು ಹಿಂದಿರುಗುವಾಗ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಒದಗಿಸಲಾಗಿದೆ. …
Read More »ಕಾಕತಿಯ ಸುಪ್ರಸಿದ್ಧ ಹೋಟಲ್ ಮೇರಿಯಟ್‍ನಲ್ಲಿ ನಡೆದ ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರದ ಬಳೆಗಳ ಕಳ್ಳತನ : ಓರ್ವ ಮಹಿಳೆ ಅರೆಸ್ಟ್..!
ಕಾಕತಿಯ ಸುಪ್ರಸಿದ್ಧ ಹೋಟಲ್ ಮೇರಿಯಟ್‍ನಲ್ಲಿ ನಡೆದ ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರದ ಬಳೆಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಕತಿಯ ಸುಪ್ರಸಿದ್ಧ ಹೋಟಲ್ ಮೇರಿಯಟ್‍ನಲ್ಲಿ ಹರಿಯಾಣಾ ರಾಜ್ಯದ ಗುಡಗಾಂವ್‍ನ ಶಿಪ್ರಾ ಬಿಜಾವತ್ ಎಂಬವರು ಹೊಟೆಲ್ ಮೆರಿಯಟ್‍ನಲ್ಲಿ ರೂಮ್ ಮಾಡಿಕೊಂಡಿದ್ದರು. ಬೆಳಗಾವಿ ಹತ್ತಿರದ ರಾಜಾಗೋಳಿ ಯಲ್ಲಿರುವ ಸಕ್ಕರೆ ಕಾರ್ಖಾನೆಯಲ್ಲಿ ಎಚ್‍ಆರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.ಇವರು ವಜ್ರದ ಬಳೆಗಳನ್ನು ಬ್ಯಾಗ್‍ನಲ್ಲಿ ಹಾಕಿ ತೆಗೆದಿಟ್ಟಿದ್ದರು. ಬೆಳಿಗ್ಗೆ 10 ಗಂಟೆಗೆ …
Read More »ಮುಂದಿನ ವಾರ ‘ಸಪ್ಲಿಮೆಂಟರಿ ಬಜೆಟ್’ ಮಂಡನೆ – ಸಿಎಂ ಬೊಮ್ಮಾಯಿ
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ನಂತ್ರ, ಆರ್ಥಿಕ ಸ್ಥಿತಿ ಸುಧಾರಿಸಿದ್ದು, ಇದಕ್ಕೆ ಅನುಗುಣವಾಗಿ ಸಂಪನ್ಮೂಲ ಕ್ರೂಢೀಕರಣವನ್ನು ಗಮನಿಸಿ, ಮುಂದಿನ ವಾರ ಹೆಚ್ಚುವರಿ ಬಜೆಟ್ ( Supplementary Budget ) ಮಂಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಘೋಷಿಸಿದ್ದಾರೆ. ರಾಜ್ಯದ ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ. ತೆರಿಗೆ ವಸೂಲಾತಿ ಗಣನೀಯವಾಗಿ ಹೆಚ್ಚಿದೆ. ಆಧಾಯದ ಪ್ರಮಾಣದಲ್ಲೂ ಏರಿಕೆಯಾಗಿದೆ. ಆದ್ದರಿಂದ ಈಗಾಗಲೇ ಘೋಷಿಸಿರುವ ಬಜೆಟ್ ಗಾತ್ರ ಕುಗ್ಗುವ ಭೀತಿ …
Read More »ಪೊಲೀಸರಿಂದ ಅನ್ಯಾಯವಾಗಿದೆ ಎಂದು ಸಿಎಂ ಎದುರೇ ಆತ್ಮಹತ್ಯೆಗೆ ಯತ್ನಿಸಿದ ವೃದ್ಧ!
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎದುರೇ ವೃದ್ಧನೊಬ್ಬ, ತನಗೆ ಪೊಲೀಸರಿಂದ ಅನ್ಯಾಯವಾಗಿದೆ ಎಂದು ಅಳಲು ತೋಡಿಕೊಂಡಿದ್ದಲ್ಲದೇ ಆತ್ಮಹತ್ಯೆಗೂ ಯತ್ನಿಸಿದ ಘಟನೆ ಸಿಎಂ ನಿವಾಸ ಆರ್.ಟಿ.ನಗರದಲ್ಲಿ ನಡೆದಿದೆ. ಅನ್ನಪೂರ್ಣೇಶ್ವರಿ ನಗರ ಠಾಣೆ ಇನ್ಸ್ ಪೆಕ್ಟರ್ ನಿಂದ ಅನ್ಯಾಯವಾಗಿದೆ, ನನಗೆ ನ್ಯಾಯ ಕೊಡಿಸಿ ಎಂದು ಸಿಎಂ ಬಳಿ ವೃದ್ಧ ಕಣ್ಣೀರಿಟ್ಟಿದ್ದಾನೆ. ಪೊಲೀಸರು ಕೆಲವರೊಂದಿಗೆ ಸೇರಿ ಸೈಟ್ ವಿಚಾರವಾಗಿ ತನಗೆ ಮೋಸ ಮಾಡಿದ್ದಾರೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ನ್ಯಾಯ …
Read More »ಪುನೀತ್ ಗೆ ಮರಣೋತ್ತರ ‘ ಸಹಕಾರ ರತ್ನ’ ಪ್ರಶಸ್ತಿ
ಕರ್ನಾಟಕ ಸರಕಾರ ‘ಕರ್ನಾಟಕ ರತ್ನ’ ಪ್ರಶಸ್ತಿ ಕೊಟ್ಟ ಬೆನ್ನಲ್ಲೇ, ಸರಕಾರದ ಮತ್ತೊಂದು ಪ್ರಶಸ್ತಿ ಘೋಷಣೆಯಾಗಿದೆ. ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಕೊಡಮಾಡುವ ‘ ಸಹಕಾರ ರತ್ನ’ ಪ್ರಶಸ್ತಿಯನ್ನು ಪುನೀತ್ ಅವರಿಗೆ ಘೋಷಿಸಲಾಗಿದ್ದು, ನಂದಿನಿ ಹಾಲು ಉತ್ಪನ್ನಗಳಿಗೆ ಉಚಿತವಾಗಿ ಜಾಹೀರಾತು ನೀಡಿರುವ ಸೇವೆಯನ್ನು ಪರಿಗಣಿಸಲಾಗಿದೆ. ಈ ಕುರಿತು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಹಕಾರಿ ಸಚಿವ ಎಸ್.ಟಿ ಸೋಮಶೇಖರ್, ‘ನಟ ಪುನೀತ್ ರಾಜ್ ಕುಮಾರ್ ಅವರು ನಂದಿನಿ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. …
Read More »ಹೋಳಿ ಹಬ್ಬದ ನಿಮಿತ್ತ ಬಣ್ಣ ಆಡುವ ನೆಪದಲ್ಲಿ ಕೆಲ ಯುವಕರು ವಸೂಲಿ ದಂಧೆಗೆ ಇಳಿದಿದ್ದಾರೆ.
ಚಿಕ್ಕೊಡಿ: ಹೋಳಿ ಹಬ್ಬದ ನಿಮಿತ್ತ ಬಣ್ಣ ಆಡುವ ನೆಪದಲ್ಲಿ ಕೆಲ ಯುವಕರು ವಸೂಲಿ ದಂಧೆಗೆ ಇಳಿದಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಕ್ಕೋಡಿ ರೋಡ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ತಡೆದು ವಸೂಲಿಗೆ ಇಳಿದಿರುವ ಖದೀಮರು ಹೆದ್ದಾರಿಯ ಮೇಲೆ ಮರದ ದಿಂಬುಗಳನ್ನ ಅಳವಡಿಸಿ ಹಣ ವಸೂಲಿ ಮಾಡುತ್ತಿದ್ದರು. ಪ್ರತಿ ವಾಹನದಿಂದ 30 ರಿಂದ 50 ರೂಪಾಯಿವರೆಗೆ ವಸೂಲಿ ಮಾಡುತ್ತಿದ್ದಾರೆ. ಹಣ ನೀಡಿದರೇ ಮಾತ್ರ ಮುಂದೆ …
Read More »ಭೂ ಸರ್ವೆ ಮಾಡುವ ಅಧಿಕಾರ ತಹಶಿಲ್ದಾರ್‌ಗಿದೆʼ : ಹೈಕೋರ್ಟ್
ಬೆಂಗಳೂರು : ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 140(2)ರಡಿಯಲ್ಲಿ ಮುನ್ಸಿಪಲ್ ಕಾರ್ಪೊರೇಶನ್ ವ್ಯಾಪ್ತಿಯೊಳಗೆ(Municipal Corporation Coverage) ಬರುವ ಭೂಮಿಯ ಸರ್ವೆ(land Survey) ಮಾಡಿ ಗಡಿಯನ್ನ ನಿಗದಿಪಡಿಸುವ ಅಧಿಕಾರ ತಹಶಿಲ್ದಾರ್(Tehsildar)ಗಿದೆ ಎಂದು ರಾಜ್ಯ ಹೈಕೋರ್ಟ್ ಹೇಳಿದೆ. ಬೆಂಗಳೂರು ಬಸವನಗುಡಿಯ ನಿವಾಸಿ ಸುನಿಲ್ ಚಜೆಡ್ ಅನ್ನೋರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದ್ದು, ‘ಭೂಮಿಯ ಸರ್ವೆ ಮಾಡಿ ಗಡಿಯನ್ನ ನಿಗದಿಪಡಿಸುವ ಅಧಿಕಾರ ತಹಶಿಲ್ದಾರ್‌ಗಿದೆ’ ಎಂದಿದೆ. ‘ಕಾಯಿದೆಯ …
Read More »ಪೊಲೀಸರ ಗಮನ ಬೇರೆಡೆ ಸೆಳೆದು ಚಾರಣಾಧೀನ ಖೈದಿ ಒಬ್ಬ ಕಾರಾಗೃಹದಿಂದಲೇ ಪರಾರಿ
ಗಲಾಟೆ, ಜಾತಿನಿಂದನೆ ಸೇರಿದಂತೆ ಒಟ್ಟು 6 ಪ್ರಕರಣದಲ್ಲಿ ಆತ ಭಾಗಿಯಾಗಿದ್ದ. ಇದೀಗ ಜೈಲು ಸೇರಿ 15 ದಿನಗಳಲ್ಲೇ ಆರೋಪಿ ಪರಾರಿ ಆಗಿದ್ದಾನೆ. ಪೊಲೀಸರ ಗಮನ ಬೇರೆಡೆ ಸೆಳೆದು ತಪ್ಪಿಸಿಕೊಂಡಿದ್ದಾನೆ.ಬೆಳಗಾವಿ: ವಿಚಾರಣಾಧೀನ ಖೈದಿ ಒಬ್ಬ ಕಾರಾಗೃಹದಿಂದಲೇ ಪರಾರಿ ಆದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಕಾರಾಗೃಹದಲ್ಲಿ ನಡೆದಿದೆ. ಖೈದಿ ಖಾದಿರಸಾಬ್ ರಾಜೇಖಾನ್ (34) ಎಂಬಾತ ಜೈಲಿನಿಂದಲೇ ಪರಾರಿ ಆಗಿದ್ದಾನೆ. ಜೈಲು ಸಿಬ್ಬಂದಿ ಗಮನ ಬೇರೆಡೆ ಸೆಳೆದು ಸಬ್ ಜೈಲಿನ ಮುಖ್ಯ ದ್ವಾರದಿಂದಲೇ ಆರೋಪಿ …
Read More »ರೈಲ್ವೆ ಎಂಜಿನ್ ನಲ್ಲಿ ತಾಂತ್ರಿಕ ದೋಷ: ನೆಲಮಂಗಲ ಬಳಿ ಎರಡು ಗಂಟೆಗೂ ಅಧಿಕ ಕಾಲ ನಿಂತ ಜನ ಶತಾಬ್ದಿ ಎಕ್ಸ್‌ಪ್ರೆಸ್
ಬೆಂಗಳೂರು: ಸುಮಾರು 2 ಸಾವಿರ ಪ್ರಯಾಣಿಕರಿದ್ದ ಬೆಂಗಳೂರು-ಹುಬ್ಬಳ್ಳಿ ಜನಶತಾಬ್ದಿ ಎಕ್ಸ್‌ಪ್ರೆಸ್ ನಿನ್ನೆ ಗುರುವಾರ ಬೆಳಗ್ಗೆ 6.40 ರ ಸುಮಾರಿಗೆ ನೆಲಮಂಗಲದ ಗೋಲಹಳ್ಳಿ ಮತ್ತು ದೊಡ್ಡಬೆಲೆ ರೈಲು ನಿಲ್ದಾಣಗಳ ನಡುವೆ ಎಂಜಿನ್ ಕೆಟ್ಟುಹೋಗಿ ನಿಂತಿತು. ನಂತರ ಡೀಸೆಲ್ ಲೊಕೊವನ್ನು ಬದಲಾಯಿಸಿ ರೈಲು ಕೊನೆಗೆ 2.20 ಗಂಟೆ ತಡವಾಗಿ ಹೊರಟಿತು. ಡೀಸೆಲ್ ಎಂಜಿನ್ ರೈಲು ಸಂಖ್ಯೆ 12079ರಲ್ಲಿ ನಿನ್ನೆ ದೋಷ ಕಂಡುಬಂದು ಲೊಕೊ-ಪೈಲಟ್‌ನ ಪುನರಾವರ್ತಿತ ಪ್ರಯತ್ನಗಳ ಹೊರತಾಗಿಯೂ ಸ್ಟಾರ್ಟ್ ಆಗಲೇ ಇಲ್ಲ. ಎರಡು …
Read More »