ಮೈಸೂರು, ಮಾರ್ಚ್ 18: ಪ್ರಧಾನಿ ನರೇಂದ್ರ ಮೋದಿಯವರು ಒಳ್ಳೆಯ ಕೆಲಸ ಮಾಡಿದಾಗ ನಾನು ಅವರನ್ನು ಬೆಂಬಲಿಸಿರುವುದು ನಿಜ. ಹಾಗಾಗಿ, ‘ದಿ ಕಾಶ್ಮೀರ ಫೈಲ್ಸ್’ ಸಿನಿಮಾ ಬಂದ ಬಳಿಕವೂ ನನ್ನನ್ನು ಮೋದಿ ಚಮಚಾ ಎನ್ನುತ್ತಿದ್ದಾರೆ. ಇದಕ್ಕೆ ನಾನು ಕೇರ್ ಮಾಡುವುದಿಲ್ಲ ಎಂದು ನಟ ಕಂ ನಿರ್ದೇಶಕ ಪ್ರಕಾಶ್ ಬೆಳವಾಡಿ ತಿಳಿಸಿದ್ದಾರೆ. ಮೈಸೂರಿನ ಡಿಆರ್‌ಸಿಯಲ್ಲಿ ವಿವಿಧ ಕ್ಷೇತ್ರದ ಪ್ರಮುಖರ ಜತೆ ಆಯೋಜಿಸಿದ್ದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಣೆ ಬಳಿಕ ಮಾತನಾಡಿದ …
Read More »Yearly Archives: 2022
ರಾಜ್ಯ ಸರ್ಕಾರಿ ನೌಕರರ ವೇತನದ ವಿಚಾರದಲ್ಲಿ ಸರ್ಕಾರ ಐತಿಹಾಸಿಕ ನಿರ್ಣಯವೊಂದನ್ನು ಕೈಗೊಂಡಿದ್ದು, ಕರ್ನಾಟಕದ ಲಕ್ಷಾಂತರ ನೌಕರರಿಗೆ ಸಂತೋಷವನ್ನು ಉಂಟುಮಾಡಿದೆ.
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನದ ವಿಚಾರದಲ್ಲಿ ಸರ್ಕಾರ ಐತಿಹಾಸಿಕ ನಿರ್ಣಯವೊಂದನ್ನು ಕೈಗೊಂಡಿದ್ದು, ಕರ್ನಾಟಕದ ಲಕ್ಷಾಂತರ ನೌಕರರಿಗೆ ಸಂತೋಷವನ್ನು ಉಂಟುಮಾಡಿದೆ. ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಂತೆ ಕೇಂದ್ರ ಸರ್ಕಾರಿ ನೌಕರರಿಗೆ ಸಮಾನಾಂತರವಾಗಿ ವೇತನ ಪರಿಷ್ಕರಿಸಲು ಮುಂದಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಆ ನಿಟ್ಟಿನಲ್ಲಿ ಆಯೋಗವೊಂದನ್ನು ರಚಿಸುವುದಾಗಿ ತಿಳಿಸಿದ್ದಾರೆ. ಬುಧವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುತ್ತ ಮುಖ್ಯಮಂತ್ರಿಯವರು ಈ ಘೋಷಣೆಯನ್ನು ಮಾಡಿದ್ದು, ಬೊಮ್ಮಾಯಿಯವರ ಈ ನಿರ್ಧಾರಕ್ಕೆ ಕರ್ನಾಟಕ …
Read More »20 ವರ್ಷಗಳಿಂದ ಸಿಗದ ಪರಿಹಾರ; ಡಿ.ಸಿ ಬರದಂತೆ ರಸ್ತೆ ಅಗೆದ ರೈತರು
ಭೀಮಳ್ಳಿ (ಕಲಬುರಗಿ ತಾ.): ರಸ್ತೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ 20 ವರ್ಷವಾದರೂ ಪರಿಹಾರ ನೀಡದ ಕಾರಣ, ರೋಸಿಹೋದ ಕೆಲ ರೈತರು ರಸ್ತೆ ಅಗೆದು ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ವಿರೋಧಿಸಿದರು. ಭೀಮಳ್ಳಿಯಲ್ಲಿ ಶನಿವಾರ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದನ್ನು ತಿಳಿದು ಭೂಮಿ ಕಳೆದುಕೊಂಡ ರೈತರು, ಜಿಲ್ಲಾಧಿಕಾರಿ ಬರುವ ಮುನ್ನವೇ ಬುಲ್ಡೋಜರ್ ನೆರವಿನಿಂದ ಗ್ರಾಮದ ಮುಖ್ಯರಸ್ತೆ ಅಗೆದು ಗ್ರಾಮ ವಾಸ್ತವ್ಯ ಧಿಕ್ಕರಿಸಿದರು. ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್, ಕಂದಾಯ ಅಧಿಕಾರಿಗಳು, …
Read More »ಬೇಜವಾಬ್ದಾರಿಯಿಂದಾಗಿ ಪರಿಹಾರ ಸಿಗದೆ ಕಳೆದ ಮೂರು ವರ್ಷಗಳಿಂದ ನೆರೆ ಸಂತ್ರಸ್ತರು ಬಯಲಲ್ಲೇ ವಾಸಿಸುವಂತಾಗಿದೆ..
ಅಥಣಿ : 2019ರಲ್ಲಿ ಕೃಷ್ಣಾ ನದಿಯಲ್ಲಾದ ಪ್ರವಾಹದಿಂದ ಅಥಣಿ ತಾಲೂಕಿನ ದರೂರು ಗ್ರಾಮದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ಆದೇಶ ಮಾಡಿತ್ತು. ಆದರೆ, ಜಿಲ್ಲಾಡಳಿತದ ಬೇಜವಾಬ್ದಾರಿಯಿಂದಾಗಿ ಪರಿಹಾರ ಸಿಗದೆ ಕಳೆದ ಮೂರು ವರ್ಷಗಳಿಂದ ನೆರೆ ಸಂತ್ರಸ್ತರು ಬಯಲಲ್ಲೇ ವಾಸಿಸುವಂತಾಗಿದೆ. ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದರೂರು ಗ್ರಾಮಕ್ಕೆ ಬಂದು ನೆರೆ ಸಂತ್ರಸ್ತರಿಗೆ 5 ಲಕ್ಷ ರೂಪಾಯಿ ವೆಚ್ಚದ ಮನೆ ಮಂಜೂರಾತಿ ಪತ್ರವನ್ನು …
Read More »ಪತಿಗೆ ಪರಸ್ತ್ರೀಯರೊಂದಿಗೆ ಅಕ್ರಮ ಸಂಬಂಧ ಆರೋಪ: ಡೆತ್ನೋಟ್ ಬರೆದಿಟ್ಟು ಪತ್ನಿ ಆತ್ಮಹತ್ಯೆ
ಬೆಂಗಳೂರು: ಪ್ರೀತಿಸಿ ಕೈಹಿಡಿದ ಗಂಡ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಾಯತ್ರಿ ನಗರದಲ್ಲಿ ನಡೆದಿದೆ. ಇಂದುಶ್ರೀ (28) ಮೃತ ದುರ್ದೈವಿ. ಎರಡು ವರ್ಷದಿಂದ ಈಕೆ ರಾಕೇಶ್ ಎಂಬುವವರನ್ನು ಪ್ರೀತಿಸುತ್ತಿದ್ದರು. 9 ತಿಂಗಳ ಹಿಂದೆಯಷ್ಟೇ ಮನೆಯವರನ್ನು ಒಪ್ಪಿಸಿ ರಾಕೇಶ್ ಜೊತೆ ವಿವಾಹವಾಗಿದ್ದರು. ಆದರೆ, ಮದುವೆಯಾದ ಬಳಿಕ ಗಂಡ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ನೊಂದ ಮಹಿಳೆ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಡೆತ್ನೋಟ್ ಬರೆದಿಟ್ಟು ನೇಣಿಗೆ …
Read More »ಭಗವದ್ಗೀತೆ ಪಾಠ ಮಾಡಿದ್ರೆ ಹೊಟ್ಟೆ ತುಂಬಲಿದೆಯೇ!?.H.D.K.
ರಾಮನಗರ : ಸರ್ಕಾರದ ಮುಂದೆ ಟನ್‌ಗಟ್ಟಲೇ ಸಮಸ್ಯೆಗಳ ಸರಮಾಲೆಯೇ ಇದೆ. ಮೊದಲು ಅವುಗಳನ್ನ ಸರಿಪಡಿಸಲಿ. ಭಗವದ್ಗೀತೆ ಪಾಠ ಮಾಡಿದರೆ ಅದರಿಂದ ಹೊಟ್ಟೆ ತುಂಬುತ್ತದೆಯೇ ಎಂದು ಶಾಲಾ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರವಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಸರ್ಕಾರದ ಮುಂದೆ ರಾಜ್ಯದಲ್ಲಿ ಬಗೆಹರಿಸುವ ಸಮಸ್ಯೆಗಳೇ ಸಾವಿರ ಸಂಖ್ಯೆಯಲ್ಲಿ ಇದ್ದಾವೆ. ಮೊದಲಿಗೆ ಆ ಸಮಸ್ಯೆಗಳನ್ನು ಬಗೆಹರಿಸುವ ಕಡೆ ಹೆಚ್ಚು ಗಮನ ಹರಿಸಬೇಕಿದೆ. ಭಗವದ್ಗೀತೆ ಪಾಠ …
Read More »ತುಮಕೂರು ಅಪಘಾತದ ಎಲ್ಲಾ ವಿವರ ಪಡೆದು ಕ್ರಮ ಕೈಗೊಳ್ಳುತ್ತೇನೆ : ಸಿಎಂ
ಯಾದಗಿರಿ : ತುಮಕೂರಿನಲ್ಲಿ ಖಾಸಗಿ ಬಸ್ ಅಪಘಾತದ ಕುರಿತಂತೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಈಗಷ್ಟೇ ಯಾದಗಿರಿ ಆಗಮಿಸಿರುವೆ. ಅಪಘಾತದ ಕುರಿತಂತೆ ಎಲ್ಲಾ ವಿವರವನ್ನು ತಕ್ಷಣ ಪಡೆದುಕೊಳ್ಳುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಮಾತನಾಡಿದ ಅವರು, ಅಪಘಾತಕ್ಕೆ ಕಾರಣವೇನು ಎಂಬುದನ್ನು ವಿಚಾರಣೆ ಮಾಡಿ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ. ಈ ಅಪಘಾತದಲ್ಲಿ ಐವರು ಸಾವನ್ನಪ್ಪಿ, 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರದ …
Read More »ಲೋಕಸಭೆ, ರಾಜ್ಯಸಭೆಗೆ ಉಪಚುನಾವಣೆ : ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ನವದೆಹಲಿ : ಒಂದು ಲೋಕಸಭೆ ಹಾಗೂ ನಾಲ್ಕು ರಾಜ್ಯ ಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಚುನಾವಣೆ ಏಪ್ರಿಲ್ 12 ರಂದು ನಡೆಯಲಿದೆ. ಚುನಾವಣಾ ಆಯೋಗವು ಇತ್ತೀಚೆಗೆ ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ಉಪಚುನಾವಣೆಯ ದಿನಾಂಕವನ್ನು ಪ್ರಕಟಿಸಿತ್ತು. ಇದೀಗ ಬಿಜೆಪಿಯು ಪಶ್ಚಿಮ ಬಂಗಾಳ, ಬಿಹಾರ ಮತ್ತು ಮಹಾರಾಷ್ಟ್ರದ ಮುಂಬರುವ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ …
Read More »ಗೋವಾ ಸಮಸ್ಯೆ ಇತ್ಯರ್ಥ, ಪ್ರಮೋದ್ ಸಾವಂತ್ ಮುಂದಿನ ಸಿಎಂ : ಬಿಜೆಪಿ ಶಾಸಕ ಸುಭಾಷ್ ಫಲ್ ದೇಸಾಯಿ
ಪಣಜಿ : ಪ್ರಮೋದ್ ಸಾವಂತ್ ಗೋವಾ ಮುಖ್ಯಮಂತ್ರಿಯಾಗುತ್ತಾರೆ ಎಂಬ ವದಂತಿಗಳ ನಡುವೆ ಬಿಜೆಪಿ ಶಾಸಕ ಸುಭಾಷ್ ಫಲ್ ದೇಸಾಯಿ ಅವರು ಶನಿವಾರ ಈ ವಿವಾದವನ್ನು ಇತ್ಯರ್ಥಗೊಳಿಸಿದ್ದು, ಸಾವಂತ್ ಅವರು ಮತ್ತೆ ಉನ್ನತ ಹುದ್ದೆಯನ್ನು ಅಲಂಕರಿಸಲಿದ್ದಾರೆ ಎಂದು ಹೇಳಿದ್ದಾರೆ. ‘ಪ್ರಮೋದ್ ಸಾವಂತ್ ಅವರು ರಾಜ್ಯದಲ್ಲಿ ಸರ್ಕಾರವನ್ನು ಮುನ್ನಡೆಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿರುವುದರಿಂದ ಮುಂದಿನ ಗೋವಾ ಮುಖ್ಯಮಂತ್ರಿ ವಿಷಯದ ಬಗ್ಗೆ ಹೆಚ್ಚಿನ ಚರ್ಚೆ ಅಗತ್ಯವಿಲ್ಲ’ ಎಂದು ದೇಸಾಯಿ ಅವರನ್ನು …
Read More »ತುಮಕೂರಿನಲ್ಲಿ ಖಾಸಗಿ ಬಸ್ ಪಲ್ಟಿ : ಮೃತಪಟ್ಟ 8 ಜನರಲ್ಲಿ ನಾಲ್ವರು ವಿದ್ಯಾರ್ಥಿಗಳು!
ತುಮಕೂರು: ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿಕಟ್ಟೆ ಬಳಿ ಇಂದು ಬೆಳಗ್ಗೆ ಖಾಸಗಿ ಬಸ್ ಪಲ್ಟಿಯಾಗಿ 8 ಜನರು ಮೃತಪಟ್ಟಿದ್ದು, ಇವರಲ್ಲಿ ನಾಲ್ವರು ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಪಳವಳ್ಳಿ ಕಟ್ಟೆ ಬಳಿ ತಿರುವಿನಲ್ಲಿ ಎಸ್ ವಿಟಿ ಟ್ರಾವಲ್ ಗೆ ಸೇರಿದ ಖಾಸಗಿ ಬಸ್ ಪಲ್ಟಿಯಾಗಿ ನಾಲ್ವರು ವಿದ್ಯಾರ್ಥಿಗಳು ಸೇರಿದಂತೆ 8 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.25 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗೊಂಡಿದ್ದಾರೆ. ಮೃತ ವಿದ್ಯಾರ್ಥಿಗಳನ್ನು ವೈ.ಎ.ಹೊಸಕೋಟೆ ಮೂಲದ …
Read More »