2021-22ರಲ್ಲಿ 5 ಸಾವಿರ ಕೋಟಿ ಕಡಿಮೆ ಇತ್ತು. 2022-23ರ ಬಜೆಟ್‍ನ ಒಟ್ಟು ಗಾತ್ರ 2 ಲಕ್ಷ 65 ಸಾವಿರದ 720 ಕೋಟಿ. ಇದು ಹಿಂದಿನ ಬಜೆಟ್‍ಗಿಂತ ಶೇ.7.9ರಷ್ಟು ಹೆಚ್ಚಾಗಿದೆ ಎಂದು ವಿಧಾನಸಭೆ ಸದನದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದರು.ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಈ ಬಾರಿ ಬಜೆಟ್ ಗಾತ್ರ ಕಡಿಮೆ ಮಾಡಬೇಕಾಗುತ್ತದೆ ಎಂದು ನಮ್ಮ ಅಧಿಕಾರಿಗಳು ಹೇಳಿದ್ದರು. ಆದರೆ ಬಜೆಟ್ ಗಾತ್ರ ಕಡಿಮೆ ಮಾಡಿದ್ರೆ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ನಾವು …
Read More »Yearly Archives: 2022
ಮಗುವಿನಂಥ ಮನಸ್ಸು.. ತೊಟ್ಟಿಲಲ್ಲಿ ಮಲಗಿ ಮಗುವಾದ ‘ದೊಡ್ಮನೆ’ ಶಿವಣ್ಣ..!
ಸರಳ, ಸಜ್ಜನಿಕೆ, ಸ್ನೇಹ ಜೀವಿ, ಮಗು ಥರಾ ಮನಸ್ಸಿನ ಶಿವಣ್ಣ ಮಕ್ಕಳ ಜೊತೆ ಅಕ್ಷರಶಃ ಮಗುವಾಗಿ ಬಿಡ್ತಾರೆ.. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಶಿವಣ್ಣರಿಗೆ ಸಂಬಂಧಿಸಿದ ವಿಡಿಯೋ ಒಂದು ಭಾರೀ ವೈರಲ್ ಆಗ್ತಿದೆ. ಸಂಬಂಧಿಕರ ಮಕ್ಕಳ ನಾಮಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ತೆಗೆದ ಫೋಟೋ ಹಾಗೂ ವಿಡಿಯೋಗಳು ಇವು ಎನ್ನಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಶಿವಣ್ಣ, ತೊಟ್ಟಿಲಲ್ಲಿ ಮಲಗಿಕೊಂಡಿದ್ದಾರೆ. ಕಾಲು ಮೇಲೆ ಕಾಲು ಹಾಕಿ ಮಲಗಿ, ಒಂದು ಕೈಯನ್ನ ತಲೆ ದಿಂಬಾಗಿ ಇಟ್ಟುಕೊಂಡು …
Read More »ಕೈಕೊಟ್ಟ ಹುಡುಗಿ.. ಜೀವ ತೆಗೆದುಕೊಂಡ ಪ್ರಿಯತಮ
ಬೆಂಗಳೂರು: ಪ್ರೀತಿ ನಿರಾಕರಿಸಿದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡು ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಬೆಂಗಳೂರಿನ ರಾಮಮೂರ್ತಿ ನಗರದ ನಿವಾಸಿ 25 ವರ್ಷದ ಅರುಣ್ ಎಂಬ ಯುವಕ ಈ ರೀತಿ ನೇಣಿಗೆ ಶರಣಾಗಿದ್ದಾನೆ. ಮದುವೆ ಆಗುವಂತೆ ಅರುಣ್ ಯುವತಿಯ ಬೆನ್ನು ಬಿದ್ದಿದ್ದ, ಆದ್ರೆ ಯುವತಿ ವಿವಾಹವಾಗಲು ನಿರಾಕರಿಸಿದ್ದಾಳೆ. ಇದರಿಂದ ಮನನೊಂದು ಮನೆಯಲ್ಲಿಯೇ ಅರುಣ್ ನೇಣಿಗೆ ಶರಣಾಗಿದ್ದಾನೆ. ಇನ್ನು ರಾಮಮೂರ್ತಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆಯನ್ನ ನಡೆಸಿದ್ದಾರೆ.
Read More »ಕೊಂಡೋತ್ಸವದ ವೇಳೆ ಅವಘಡ; ಮಹಿಳೆ ಸಾವು, 45ಕ್ಕೂ ಹೆಚ್ಚು ಮಂದಿಗೆ ಗಾಯ
ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಹುಲಗೆರೆಪುರದಲ್ಲಿ ಕೊಂಡೋತ್ಸವ ನಡೆಯುತ್ತಿದ್ದ ವೇಳೆ ಅವಘಡ ನಡೆದಿದೆ. ಕಟ್ಟಡ ಒಂದರ ಸಜ್ಜ ಕುಸಿದು ಬಿದ್ದು ಮಹಿಳೆ ಸಾವನ್ನಪ್ಪಿದ್ದಾಳೆ. ಪುಟ್ಟಲಿಂಗಮ್ಮ ಮೃತ ಮಹಿಳೆ. ಗ್ರಾಮದ ಬಸವೇಶ್ವರ ದೇವಾಲಯದ ಕೊಂಡೋತ್ಸವ ಇತ್ತು. ಈ ಕೊಂಡೋತ್ಸವ ನೋಡಲು ಹಳೆಯ ಕಟ್ಟಡದ ಮೇಲೆ ಜನರು ನಿಂತಿದ್ದರು. ಹಳೆ ಕಟ್ಟಡವಾದ್ದರಿಂದ ಮನೆಯ ಸಜ್ಜ ಕುಸಿದು ಮಹಿಳೆ ಸಾವನ್ನಪ್ಪಿದ್ದಾಳೆ. ದುರ್ಘಟನೆಯಲ್ಲಿ ಸುಮಾರು 30 ರಿಂದ 40 ಜನರಿಗೆ ಗಾಯವಾಗಿದೆ. ಗಾಯಳುಗಳಿಗೆ ಮದ್ದೂರಿನ ಸರ್ಕಾರಿ …
Read More »ಡೆತ್ನೋಟ್ ಬರೆದಿಟ್ಟು ಶಂಕರಪ್ಪ ಆತ್ಮಹತ್ಯೆ! ಮದ್ವೆಯಾದ 5 ತಿಂಗಳಲ್ಲೇ ದುರಂತ, ಪತ್ನಿ ಮೇಘನಾಳ ಗೋಳಾಟ ನೋಡಲಾಗ್ತಿಲ್ಲ.
ಕುಣಿಗಲ್: ವಯಸ್ಸಿನಲ್ಲಿ ತನಗಿಂತ 20 ವರ್ಷ ದೊಡ್ಡವನ ಜತೆ ಯುವತಿಯೇ ಇಷ್ಟಪಟ್ಟು ಸರಳವಾಗಿ ಮದುವೆ ಆಗಿದ್ದರು. ಈ ಜೋಡಿಯ ಫೊಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು ಕೂಡ. ‘ಒಲವಿನ ಬದುಕಿಗೆ ಪ್ರೀತಿಯೊಂದಿದ್ದರೆ ಸಾಕು ಬೇರೇನೂ ಬೇಡ. ಶುಭವಾಗಲಿ’ ಎಂದು ನೂರಾರು ಜನ ಹರಸಿದ್ದರು ಕೂಡ. ಆದರೀಗ ಈ ಜೋಡಿಯ ಬಾಳಲ್ಲಿ ದುರಂತ ಸಂಭವಿಸಿದೆ. ಯುವತಿ ಜತೆ ಸಪ್ತಪದಿ ತುಳಿದಿದ್ದ ರೈತ ಶಂಕರಪ್ಪ ಇಂದು (ಮಂಗಳವಾರ) ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳದಲ್ಲಿ …
Read More »ನಾಲ್ಕು ಲಕ್ಷ ಹೊಸ ಬಿಪಿಎಲ್ ಕಾರ್ಡ್, ತಿಂಗಳೊಳಗೆ ವಿತರಣೆ: ಸಚಿವ ಉಮೇಶ್ ಕತ್ತಿ ಭರವಸೆ
ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಆದ್ಯತಾ ಪಡಿತರ ಚೀಟಿ (ಬಿಪಿಎಲ್ ಕಾರ್ಡ್) ಬಯಸಿ ಅರ್ಜಿ ಸಲ್ಲಿಸಿದವರ ಪೈಕಿ ಮನೆ ಮನೆ ಸಮೀಕ್ಷೆ ಪೂರ್ಣಗೊಂಡ 4.25 ಲಕ್ಷ ಅರ್ಜಿದಾರರ ಜೈವಿಕ ದತ್ತಾಂಶ ಸಂಗ್ರಹಿಸಿ, ಒಂದು ತಿಂಗಳೊಳಗೆ ಪಡಿತರ ಚೀಟಿ ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಭರವಸೆ ನೀಡಿದರು. ವಿಧಾನಪರಿಷತ್ನಲ್ಲಿ ಸೋಮವಾರ ಕಾಂಗ್ರೆಸ್ನ ಯು.ಬಿ.ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿ, ಕಳೆದ ಮೂರು ವರ್ಷ (2022ರ ಫೆಬ್ರವರಿ ಅಂತ್ಯ)ಗಳಲ್ಲಿ ಆದ್ಯತಾ ಪಡಿತರ …
Read More »53.79 ಟನ್ ಕಬ್ಬು ಸಾಗಿಸಿ ದಾಖಲೆ
ಮುಧೋಳ: ಜಮಖಂಡಿ ತಾಲ್ಲೂಕು ನಾವಲಗಿ ಗ್ರಾಮದ ಪ್ರಗತಿಪರ ರೈತ ಬಸಪ್ಪ ಸದಪ್ಪ ಮುಗಳಖೋಡ ತಮ್ಮ ಜಮೀನಿನಲ್ಲಿ ಬೆಳೆದ 53.79 ಟನ್ ಕಬ್ಬನ್ನು ತಮ್ಮ ಟ್ರ್ಯಾಕ್ಟರ್ ನಲ್ಲಿ ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆಗೆ ಸಾಗಿಸಿ ದಾಖಲೆ ಮಾಡಿದರು. ನಿರಾಣಿ ಸಕ್ಕರೆ ಕಾರ್ಖಾನೆಯ ಕಬ್ಬು ವಿಭಾಗದ ನಿರ್ದೇಶಕ ಎನ್.ವಿ ಪಡಿಯಾರ ಮತ್ತು ಡಿ.ಬಿ.ನಾಯಕ, ಕೆ. ದ್ವಾರಕೀಶ್, ಅವರು ಪ್ರಗತಿಪರ ರೈತ ಬಸಪ್ಪ ಅವರನ್ನು ಸನ್ಮಾನಿಸಿದರು. ‘53.79 ಟನ್ ಕಬ್ಬು ಸಾಗಿಸಿರುವುದು ಸಾರ್ವಕಾಲಿಕ ದಾಖಲೆಯಾಗಿದೆ’ ಎಂದು …
Read More »40 ಕ್ಕೂ ಹೆಚ್ಚು ಕೃಷಿ ಸಾಧನಗಳ ಆವಿಷ್ಕಾರ: ಧಾರವಾಡದ ರೈತ ಅಬ್ದುಲ್ ಖಾದರ್ ನಡಕಟ್ಟಿನ್‌ಗೆ ‘ಪದ್ಮಶ್ರಿ’
ನವದೆಹಲಿ: ಧಾರವಾಡದ ಕೃಷಿ ಸಂಶೋಧಕ ಅಬ್ದುಲ್ ಖಾದರ್ ನಡಕಟ್ಟಿನ್ ಸೋಮವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದರು. ಭಾರತದಾದ್ಯಂತ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಹಾಯ ಮಾಡುವ 40 ಕ್ಕೂ ಹೆಚ್ಚು ಆವಿಷ್ಕಾರಗಳಿಗೆ ಅವರು ಈ ವಿಶೇಷ ಮನ್ನಣೆ ಪಡೆದಿದ್ದಾರೆ. ನಾನೊಬ್ಬ ಸಾಮಾನ್ಯ ರೈತ. ಆದರೆ, ಕಳೆದ 35 ವರ್ಷಗಳಲ್ಲಿ ಕೃಷಿಯಲ್ಲಿ ಬಳಸುವ ಯಂತ್ರಗಳ ಕುರಿತು ನಾನು ನಡೆಸಿದ ಸಂಶೋಧನೆಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ …
Read More »ಹೋಮ್ ಮಿನಿಸ್ಟರ್‌ಗೆ ಹೇಳ್ತೀಯಾ ಹೇಳ್ಕೋ ಹೋಗು. ಆಡಿಯೋ ವೈರಲ್ ಆಗ್ತಿದ್ದಂತೆ PSI ಎತ್ತಂಗಡಿ
ಶಿವಮೊಗ್ಗ: ಹೋಮ್ ಮಿನಿಸ್ಟರ್‌ಗೆ ಹೇಳ್ತೀಯಾ ಹೇಳ್ಕೋ ಹೋಗು ಎಂದು ಲಾರಿ ಮಾಲೀಕರಿಗೆ ಬೆದರಿಕೆ ಹಾಕಿದ್ದರು ಎನ್ನಲಾದ ತೀರ್ಥಹಳ್ಳಿ ತಾಲೂಕು ಮಾಳೂರು ಠಾಣೆ ಪಿಎಸ್‌ಐ ಜಯಪ್ಪ ನಾಯ್ಕ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಜಯಪ್ಪ ನಾಯ್ಕ್ ವಿರುದ್ಧ ಇತ್ತೀಚಿಗೆ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು. ತೀರ್ಥಹಳ್ಳಿ ತಾಲೂಕಲ್ಲಿ ಮರಳು ದಂಧೆ ಅತಿಹೆಚ್ಚಾಗಿ ನಡೆಯುತ್ತಿದ್ದು, ಕೆಲ ಲಾರಿ ಮಾಲೀಕರು ಮತ್ತು ಚಾಲಕರು ಮಾಳೂರು ಪಿಎಸ್‌ಐ ವಿರುದ್ಧ ಎಸ್ಪಿಗೆ ದೂರು ನೀಡಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ಪಿಎಸ್‌ಐ ಜಯಪ್ಪ ನಾಯ್ಕ, …
Read More »ಏಪ್ರಿಲ್ 1 ರಿಂದ ಬದಲಾಗಲಿವೆ ಈ 5 ನಿಯಮಗಳು: ತಪ್ಪದೇ ಈ ಮಾಹಿತಿ ತಿಳಿದುಕೊಳ್ಳಿ
ದೆಹಲಿ: ಹಣಕಾಸು ವರ್ಷವು ಮಾರ್ಚ್ 31 ರಂದು ಕೊನೆಗೊಳ್ಳಲಿದೆ. ಹಣಕಾಸು ವರ್ಷ ಏಪ್ರಿಲ್ 1 ರಿಂದ ಅನೇಕ ದೊಡ್ಡ ಬದಲಾವಣೆಗಳು ಸಂಭವಿಸಲಿವೆ. ಇದು ಸಾಮಾನ್ಯ ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಗಳಿವೆ. ಏಪ್ರಿಲ್ 1 ರಿಂದ ಟ್ರ್ಯಾಕ್‌ಗಳು, ಜಿಎಸ್‌ಟಿ, ಪ್ಯಾನ್-ಆಧಾರ್ ಲಿಂಕ್, ಎಫ್‌ಡಿ ಸೇರಿದಂತೆ ಬ್ಯಾಂಕ್‌ನ ನಿಯಮಗಳು ಬದಲಾಗುತ್ತವೆ. ಹೀಗಾಗಿ ಅಂತಹ ಬದಲಾವಣೆಗಳ ಬಗ್ಗೆ ಅರಿತುಕೊಳ್ಳುವುದು ತುಂಬಾ ಅತ್ಯಗತ್ಯ. ಅವುಗಳು ಯಾವುವು ಎಂದು ಎಲ್ಲರೂ ತಿಳಿದುಕೊಂಡರೆ ಮುಂದಾಗುವ …
Read More »