Breaking News

Yearly Archives: 2022

ಮುಸ್ಲಿಂ ಮಗುವಿಗೆ ‘ಶಿವಮಣಿ’ ಎಂದು ನಾಮಕರಣ! ಸಿದ್ಧಗಂಗಾ ಮಠದಲ್ಲಿ 115 ಮಕ್ಕಳಿಗೆ ಶಿವಕುಮಾರ ಸ್ವಾಮೀಜಿ ಹೆಸರು

ತುಮಕೂರು: ಸಿದ್ಧಗಂಗೆಯ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯುತ್ಸವ ಪ್ರಯುಕ್ತ ಸಿದ್ದಗಂಗಾ ಮಠದ ಆವರಣದಲ್ಲಿ ಶುಕ್ರವಾರ ಬೆಳಗ್ಗೆ 115 ಮಕ್ಕಳಿಗೆ ಶಿವಕುಮಾರ ಸ್ವಾಮೀಜಿಗಳ ಹೆಸರು ನಾಮಕರಣ ಮಾಡಲಾಯಿತು. ಮುಸ್ಲಿಂ ಮಗುವಿಗೆ ಶಿವಮಣಿ ಎಂದು ಹೆಸರು ಇಡಲಾಯಿತು.   ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತುಮಕೂರು ತಾಲೂಕಿನ ಕ್ಯಾತ್ಸಂದ್ರದ ನಿವಾಸಿ ಶಾಹಿಸ್ತಾ ಹಾಗೂ ಜಮೀರ್ ದಂಪತಿ ತಮ್ಮ ಮಗಳಿಗೆ ಶಿವಮಣಿ ಎಂದು ಹೆಸರಿಟ್ಟರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡದ್ದು ನಮಗೆ ಖುಷಿಯಾಗ್ತಿದೆ. ಸ್ವಾಮೀಜಿ ಅವರ …

Read More »

RTE ಪ್ರವೇಶ : ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಮಹತ್ವದ ಮಾಹಿತಿ

ಬೆಂಗಳೂರು: 2022-23ನೇ ಸಾಲಿನ ಶಿಕ್ಷಣ ಹಕ್ಕು ಕಾಯಿದೆಯಡಿ ( The Right to Education Act ) ಪ್ರಥಮ ಸುತ್ತಿನ ಲಾಟರಿ ಪ್ರಕ್ರಿಯೆಯನ್ನು ದಿನಾಂಕ 04-04-2022ರಂದು ಆಯೋಜಿಸಿರೋದಾಗಿ ಶಿಕ್ಷಣ ಇಲಾಖೆ ( Education Department ) ತಿಳಿಸಿದೆ. ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಿಕ್ಷಣದ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 2022-23ನೇ ಸಾಲಿನಲ್ಲಿ ಉಚಿತ ಮಕ್ಕು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ-2009ರ ಅಡಿಯಲ್ಲಿ ಅನುದಾನಿತ …

Read More »

ಬೆಳಗಾವಿ: ಎರಡು ಗುಂಪುಗಳ ನಡುವೆ ಮಾರಾಮಾರಿ: ಒಬ್ಬ ಸಾವು, 6 ಮಂದಿಗೆ ಗಾಯ

ಬೆಳಗಾವಿ: ತಾಲ್ಲೂಕಿನ ಕರಡಿಗುದ್ದಿ ಗ್ರಾಮದ ಹೊರವಲಯದಲ್ಲಿ ಎರಡು ಗುಂಪುಗಳ ನಡುವೆ ಗುರುವಾರ ಸಂಜೆ ನಡೆದ ಮಾರಾಮಾರಿಯಲ್ಲಿ ಒಬ್ಬ ಸಾವಿಗೀಡಾಗಿದ್ದು, 6 ಮಂದಿ ಗಾಯಗೊಂಡಿದ್ದಾರೆ. ಮೃತರನ್ನು ಸುಣಕುಂಪಿ ಗ್ರಾಮದ ಮುದಕಪ್ಪ ಚನ್ನಪ್ಪ ಅಂಗಡಿ (28) ಎಂದು ಗುರುತಿಸಲಾಗಿದೆ.   ಕರಡಿಗುದ್ದಿ ಗ್ರಾಮದ ಸುನೀಲ್ ಅರಬಳ್ಳಿ, ಬಸವರಾಜ ಅರಬಳ್ಳಿ, ವಿಠ್ಠಲ ಅರಬಳ್ಳಿ, ಮಾರಿಹಾಳದ ಲಕ್ಕಪ್ಪ ಅರಬಳ್ಳಿ ಮತ್ತು ಮಾರಿಹಾಳದ ಇಬ್ಬರು ಯುವಕರು ಗಾಯಗೊಂಡಿದ್ದಾರೆ. ಕರಡಿಗುದ್ದಿ ಗ್ರಾಮದಲ್ಲಿ ಗುರುವಾರ ಜಡಿಸಿದ್ದೇಶ್ವರ ಜಾತ್ರಾ ಮಹೋತ್ಸವವಿತ್ತು. ಗ್ರಾಮದ ಹೊರವಲಯದ …

Read More »

ನಂಬರ್​ಪ್ಲೇಟ್ ನಿರಾಳ; ಹಳೇ ವಾಹನಕ್ಕೂ ಹೈ ಸೆಕ್ಯುರಿಟಿ ಸಂಖ್ಯಾಫಲಕ ಅಳವಡಿಕೆ

ಬೆಂಗಳೂರು :ಹಳೇ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ (ಎಚ್​ಎಸ್​ಆರ್​ಪಿ) ನಂಬರ್ ಅಳವಡಿಸುವಲ್ಲಿ ನಡೆಯುತ್ತಿರುವ ಗೋಲ್ಮಾಲ್​ಗೆ ಕೊನೆಗೂ ಸರ್ಕಾರವೇ ಬ್ರೇಕ್ ಹಾಕಿದೆ. 2019ರ ಏ.1ಕ್ಕಿಂತ ಮೊದಲು ರಸ್ತೆಗಿಳಿದಿರುವ ಹಳೇ ವಾಹನಗಳ ನಂಬರ್ ಪ್ಲೇಟ್​ಗಳನ್ನು ಎಚ್​ಎಸ್​ಆರ್​ಪಿ ಫಲಕಗಳಾಗಿ ಪರಿವರ್ತಿಸಲು ತೀರ್ವನಿಸಿದೆ. ಜತೆಗೆ ಸರ್ಕಾರವೇ ಗರಿಷ್ಠ ದರ ನಿಗದಿಪಡಿಸಲಿದೆ. ಇದರೊಂದಿಗೆ ಹಳೇ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಕೆ ನಿಯಮ ಕಡ್ಡಾಯವೋ ಅಲ್ಲವೋ ಎಂಬ ಗೊಂದಲಕ್ಕೂ ತೆರೆಬಿದ್ದಂತಾಗಿದೆ. ಹೊಸ ವ್ಯವಸ್ಥೆ ಜಾರಿ ವಿಚಾರದ …

Read More »

ಹರ್ಷ ಹತ್ಯೆ ಪ್ರಕರಣ: ಸಚಿವ ಈಶ್ವರಪ್ಪ ವಿರುದ್ಧ ದೇಶದ್ರೋಹ ಆರೋಪ; ತನಿಖೆಗೆ ಕೋರ್ಟ್‌ ಆದೇಶ

ಬೆಂಗಳೂರು: ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇರೆಗೆ ಸಚಿವ ಈಶ್ವರಪ್ಪ ವಿರುದ್ಧ ದೇಶದ್ರೋಹ ಪ್ರಕರಣ ತನಿಖೆ ನಡೆಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‌ ಆದೇಶ ನೀಡಿದೆ. ಶಿವಮೊಗ್ಗದಲ್ಲಿ ಕಳೆದ ತಿಂಗಳ 20ರಂದು ನಡೆದಿದ್ದ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ತನಿಖೆಯ ಹಂತದಲ್ಲಿರುವಾಗಲೇ ಈ ಸಂಬಂಧ ಪ್ರಚೋದನಕಾರಿ, ಸಾರ್ವಜನಿಕ ಹೇಳಿಕೆ ನೀಡಿ ಹಿಂದೂ-ಮುಸ್ಲಿಂ ಸಮುದಾಯದ ನಡುವೆ ವೈರತ್ವ ಉಂಟಾಗುವಂತೆ ಮಾಡಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ …

Read More »

ಹಲಾಲ್‌ ದಂಗಲ್‌ : ಸಸ್ಯಹಾರಿಗಳಿಗೆ ಯಾಕೆ ಬೇಕು ಮಾಂಸದ ‘ಉಸಾಬರಿ’?

ರಾಜ್ಯದಲ್ಲಿ ಹಲಾಲ್‌ ದಂಗಲ್‌ ಜೋರಾಗಿ ಬೀಸುತ್ತಿದೆ, ಈ ನಡುವೆ ಮಾಂಸವನ್ನೇ ತಿನ್ನದ ಸ್ವಾಮೀಜಿಗಳು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಮಾಂಸಹಾರಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಈ ಹಿಂದೆ ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ಮೊಟ್ಟೆ ನೀಡಲು ಮುಂದಾದ ವೇಳೆಯಲ್ಲಿ ಮೊಟ್ಟೆ ನೀಡದಂತೆ ರಾಜ್ಯ ಸರ್ಕಾರದ ವಿರುದ್ದ ತೀವ್ರ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿ ಮೊಟ್ಟೆ ಮಾಂಸಹಾರ ಎನ್ನುವಂತೆ ಬಿಂಬಿಸಿದರು. ಅಂದು ಮೊಟ್ಟೆ ಬೇಡ ಅಂತ ಹೇಳಿದವರು ಇಂದು ಇಂತದೇ ಮಾಂಸ ತಿನ್ನಿ ಅಂತ …

Read More »

ಕರ್ನಾಟಕದಲ್ಲೇ ತಲೆಎತ್ತಲಿದೆ ದೇಶದ ಲೀಥಿಯಂ ಬ್ಯಾಟರಿ ತಯಾರಿಕೆಯ ಅತಿದೊಡ್ಡ ಕಾರ್ಖಾನೆ

ರಾಜ್ಯದಲ್ಲಿ ಲಿಥಿಯಂ-ಐಯಾನ್ ಸೆಲ್ ಉತ್ಪಾದನೆಗಾಗಿ ₹6,000 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲು ‌ಎಕ್ಸೈಡ್ ಇಂಡಸ್ಟ್ರೀಸ್ ಮುಂದೆ ಬಂದಿದೆ. ಈ ನಿಟ್ಟಿನಲ್ಲಿ ಗುರುವಾರ ಎಕ್ಸೈಡ್ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿದೇರ್ಶಕ ಮತ್ತು ಸಿಇಒ ಸುಬೀರ್ ಚಕ್ರವರ್ತಿ ಅವರು, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರುಗೇಶ್ ಆರ್ ನಿರಾಣಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.   ಇದು ದೇಶದಲ್ಲೇ ಅತಿದೊಡ್ಡ ಲಿಥಿಯಂ ಆಧರಿತ ಬ್ಯಾಟರಿ ಕೋಶಗಳನ್ನು ಉತ್ಪಾದಿಸುವ ಗಿಗಾ ಫ್ಯಾಕ್ಟರಿ …

Read More »

ಯುಗಾದಿ ಹಬ್ಬಕ್ಕೆ ದೇಶದ ಜನತೆಗೆ ಬಿಗ್ ಶಾಕ್ : `LPG’ ಗ್ಯಾಸ್ ಸಿಲಿಂಡರ್ ಬೆಲೆ 250 ರೂ.ಏರಿಕೆ

ನವದೆಹಲಿ : ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು (OMC) ಏಪ್ರಿಲ್ ತಿಂಗಳ ಇಂದು ಎಲ್ ಪಿಜಿ ಅನಿಲ ಸಿಲಿಂಡರ್ ಬೆಲೆಗಳನ್ನು ಬಿಡುಗಡೆ ಮಾಡಿವೆ . ತೈಲ ಕಂಪನಿಗಳು ವಾಣಿಜ್ಯ ಅನಿಲ ಸಿಲಿಂಡರ್ ಗಳ ಬೆಲೆಯನ್ನು ಹೆಚ್ಚಿಸಿವೆ . ದೇಶದ ಅತಿದೊಡ್ಡ ತೈಲ ಕಂಪನಿಯಾದ ಇಂಡಿಯನ್ ಆಯಿಲ್ ( ಐಒಸಿ ) 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯನ್ನು ಬರೋಬ್ಬರಿ 250 ರೂ. ಗಳಷ್ಟು ಹೆಚ್ಚಿಸಿದೆ . ಎಲ್ ಪಿಜಿ ಸಿಲಿಂಡರ್ ಗಳ ಹೊಸ ದರಗಳನ್ನು ಇಂದು ಬಿಡುಗಡೆ ಮಾಡಲಾಗಿದೆ. ಈ ಬಾರಿ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಒಂದೇ ಬಾರಿಗೆ 250 ರೂ. ಹೆಚ್ಚಳವಾಗಿದೆ. ಪೆಟ್ರೋಲ್-ಡೀಸೆಲ್ ಮತ್ತು ಎಲ್ಪಿಜಿ ಗ್ರಾಹಕರ ಬೆಲೆ ಮಾರ್ಚ್ 22 ರಿಂದ ಪ್ರಾರಂಭವಾಯಿತು. ಈ ದಿನದಂದು, ಸಬ್ಸಿಡಿ ರಹಿತ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ನಲ್ಲಿ 50 ರೂ.ಗಳ ಹೆಚ್ಚಳ ಕಂಡುಬಂದಿದೆ. ಏಕೆಂದರೆ ಅಕ್ಟೋಬರ್ 6, 2021 ರಿಂದ …

Read More »

ನಾಳೆಯಿಂದ ಬದಲಾಗಲಿದೆ PF ಖಾತೆ ಈ ನಿಯಮ : 6 ಕೋಟಿ ಉದ್ಯೋಗಿಗಳು ಕಟ್ಟಬೇಕು ತೆರಿಗೆ

ನವದೆಹಲಿ : ನೀವು ಎಲ್ಲೋ ಕೆಲಸ ಮಾಡುತ್ತಿದ್ದರೆ ಮತ್ತು ನಿಮ್ಮ ಪಿಎಫ್ ಠೇವಣಿ ಆಗಿದ್ದರೆ, ಈ ಸುದ್ದಿ ನಿಮಗೆ ತುಂಬಾ ಮುಖ್ಯವಾಗಿದೆ. ಪಿಎಫ್‌ಗೆ ಸಂಬಂಧಿಸಿದ ನಿಯಮಗಳಲ್ಲಿ ಸರ್ಕಾರ ಬದಲಾವಣೆ ಮಾಡಿದೆ. ಇಲ್ಲಿಯವರೆಗೆ ಪಿಎಫ್ ಕೊಡುಗೆ ಅಥವಾ ಅದರಿಂದ ಬರುವ ಬಡ್ಡಿಗೆ ಯಾವುದೇ ತೆರಿಗೆ ಇರಲಿಲ್ಲ. ಆದರೆ ಈಗ 2.5 ಲಕ್ಷಕ್ಕಿಂತ ಹೆಚ್ಚಿನ ಕೊಡುಗೆಯ ಮೇಲೆ ಗಳಿಸಿದ ಬಡ್ಡಿಯು ತೆರಿಗೆಯ ವ್ಯಾಪ್ತಿಗೆ ಬರುತ್ತದೆ. ಈ ನಿಯಮವು ಏಪ್ರಿಲ್ 1, 2022 ರಿಂದ ಜಾರಿಗೆ …

Read More »

ಎಐಸಿಸಿ ನಿಕಟಪೂರ್ವ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪವರ್ ಸ್ಟಾರ್ ದಿವಂಗತ ಪುನೀತ್ ರಾಜಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಗುರುವಾರ ರಾತ್ರಿ ಭೇಟಿ

ಬೆಂಗಳೂರು: ಎಐಸಿಸಿ ನಿಕಟಪೂರ್ವ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪವರ್ ಸ್ಟಾರ್ ದಿವಂಗತ ಪುನೀತ್ ರಾಜಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಗುರುವಾರ ರಾತ್ರಿ ಭೇಟಿ ನೀಡಿ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್, ಪುತ್ರಿ ವಂದಿತಾ ಪುನೀತ್ ರಾಜಕುಮಾರ್ ಅವರಿಗೆ ಸಾಂತ್ವನ ಹೇಳಿದರು. ಅಪ್ಪು ಮನೆ ಭೇಟಿ ನೀಡಿ ಸಾಂತ್ವಾನ ಹೇಳಿದ ಬಳಿಕ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ (Rahul Gandhi) “ಕನ್ನಡದ ಖ್ಯಾತ ನಟರಾಗಿದ್ದ ಶ್ರೀ ಪುನೀತ್ ರಾಜಕುಮಾರ್ (Puneeth Rajkumar) …

Read More »