Breaking News

Yearly Archives: 2022

ಹಾವೇರಿ: ಡಿಡಿಪಿಐ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ನಡೆಸಿದ್ದಾರೆ.

ಹಾವೇರಿ: ಡಿಡಿಪಿಐ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ನಡೆಸಿದ್ದಾರೆ. ಈ ವೇಳೆ ಡಿಡಿಪಿಐ ಸೇರಿದಂತೆ ಕಚೇರಿ ಸಿಬ್ಬಂದಿ ಬಳಿ 1 ಲಕ್ಷ 69 ಸಾವಿರ ರೂಪಾಯಿ ಅನಧಿಕೃತ ನಗದು ಹಣ ಪತ್ತೆಯಾಗಿದೆ. ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಡಿಡಿಪಿಐ ಜಗದೀಶ್ವರ ಅವರ ಬಳಿ 50,900 ರೂಪಾಯಿ ನಗದು ಹಾಗೂ ಇತರ ಸಿಬ್ಬಂದಿ ಬಳಿ 1,18,100 ರೂಪಾಯಿ ಹಣ …

Read More »

ರಾಡ್‌ನಿಂದ ಹೊಡೆದು ಪತಿ ಕೊಲೆ

ಬೆಂಗಳೂರು: ಬ್ಯಾಡರಹಳ್ಳಿ ಠಾಣೆಯ ವ್ಯಾಪ್ತಿಯಲ್ಲಿ ಫೈನಾನ್ಸಿಯರ್ ಉಮೇಶ್ (52) ಕೊಲೆ ನಡೆದಿದ್ದು, ಈ ಸಂಬಂಧ ಪತ್ನಿ ವರಲಕ್ಷ್ಮಿ (48) ಅವರನ್ನು ಪೊಲೀಸರು ಬಂಧಿಸಿದ್ದಾರೆ. ‘ಅಂದ್ರಹಳ್ಳಿಯ ಸಾಯಿಬಾಬಾ ನಗರದ ನಿವಾಸಿ ಉಮೇಶ್, ರಿಯಲ್ ಎಸ್ಟೇಟ್ ಏಜೆಂಟ್ ಹಾಗೂ ಫೈನಾನ್ಸಿಯರ್ ಆಗಿದ್ದರು. ಸೋಮವಾರ ನಸುಕಿನಲ್ಲಿ ನಡೆದಿರುವ ಅವರ ಕೊಲೆ ಬಗ್ಗೆ ತಮ್ಮ ಜೆ.ಎಂ. ಸತೀಶ್ ದೂರು ನೀಡಿದ್ದಾರೆ. ಆರೋಪಿಯಾದ ಪತ್ನಿ ವರಲಕ್ಷ್ಮಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು. ದಂಪತಿ ನಡುವೆ ಜಗಳ: ‘ಉಮೇಶ್ …

Read More »

ಕೇಂದ್ರೀಯ ವಿ.ವಿಯಲ್ಲಿ ರಾಮನವಮಿ ಸಂಘರ್ಷ: ವಿದ್ಯಾರ್ಥಿಗಳ ಮೇಲೆ ಹಲ್ಲೆ

ಕಲಬುರಗಿ: ಜಿಲ್ಲೆಯ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ಸಂಜೆ ವಿದ್ಯಾರ್ಥಿಗಳ ಮಧ್ಯೆ ಗಲಾಟೆ ನಡೆದಿದ್ದು, ಜೇವರ್ಗಿ ತಾಲ್ಲೂಕು ಶಖಾಪುರ ಗ್ರಾಮದ ವಿಶ್ವನಾಥ ದಿವಾಣ ಮತ್ತು ರಾಜಸ್ಥಾನದ ನರೇಂದ್ರಕುಮಾರ್ ಧರಿಯಾ ಎಂಬ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.   ‘ವಿಶ್ವವಿದ್ಯಾಲಯದ ಆವರಣದಲ್ಲಿರುವ ಲಕ್ಷ್ಮಿ ಮಂದಿರದಲ್ಲಿ ನಾವು ರಾಮನವಮಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿದೆವು. ಈ ಕಾರಣಕ್ಕಾಗಿಯೇ ಎಡಪಂಥೀಯ ವಿಚಾರಧಾರೆಯ ವಿದ್ಯಾರ್ಥಿಗಳು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಗಾಯಗೊಂಡಿರುವ ವಿಶ್ವನಾಥ ಆರೋಪಿಸಿದ್ದಾರೆ. ‘ಗೂಂಡಾಗಿರಿ …

Read More »

ಜಗನ್‌ ಹೊಸ ಸಂಪುಟ ಅಸ್ತಿತ್ವಕ್ಕೆ : ರೋಜಾಗೆ ಸಚಿವ ಪಟ್ಟ

ಹೈದರಾಬಾದ್‌: ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿಯವರ ಸಂಪುಟ ಪುನರಾಚನೆಗೊಂಡಿದ್ದು ಒಟ್ಟು 25 ಸಚಿವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜಾತಿ, ಸಮುದಾಯಗಳ ಆಧಾರದಲ್ಲಿ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಲಾಗಿದ್ದು, 25 ಸ್ಥಾನಗಳಲ್ಲಿ ಸಿಂಹಪಾಲು (10 ಸ್ಥಾನ) ಹಿಂದುಳಿದ ವರ್ಗಗಳಿಗೆ ಮೀಸಲಿಡಲಾಗಿದೆ.   ಮುಖ್ಯಮಂತ್ರಿ ಜಗನ್‌ ಸೇರಿದಂತೆ 2 ಸ್ಥಾನಗಳು ಅಲ್ಪಸಂಖ್ಯಾಕರಿಗೆ ಮೀಸಲಾಗಿದ್ದರೆ, 5 ಸ್ಥಾನಗಳು ಪರಿಶಿಷ್ಟ ಜಾತಿ, ಒಂದು ಸ್ಥಾನ ಪರಿಶಿಷ್ಟ ಪಂಗಡ, ರೆಡ್ಡಿ, ಕಾಪು ಜನಾಂಗಗಳಿಗೆ ತಲಾ ನಾಲ್ಕು ಸ್ಥಾನ …

Read More »

‘ಮುರುಘಾ ಶರಣರ ಜನ್ಮದಿನ’ ‘ಸಮಾನತಾ ದಿನ’ವಾಗಿ ಆಚರಣೆ – ಸಿಎಂ ಬೊಮ್ಮಾಯಿ ಘೋಷಣೆ

ಬೆಂಗಳೂರು : ಮುರುಘಾ ಶರಣರ ಜನ್ಮದಿನವನ್ನು ಸಮಾನತಾ ದಿನವೆಂದು ಸರ್ಕಾರದ ವತಿಯಿಂದ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಅವರು ಸೋಮವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಚಿತ್ರದುರ್ಗದ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರ ಜನ್ಮದಿನಾಚರಣೆ ಬದಲಾಗಿ ಹಮ್ಮಿಕೊಂಡಿದ್ದ ಸಮಾನತ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದರು. ಬಸವಣ್ಣನವರ ವೈಚಾರಿಕತೆ ತತ್ವ ಆದರ್ಶಗಳನ್ನು ಪುನ: ಬಿತ್ತುವಂಥ ಸಾಹಸಕ್ಕೆ ಕೈ ಹಾಕಿರುವ ಸೃಜನಶೀಲ ಚಿಂತಕರೂ ಆಗಿರುವ ಡಾ: …

Read More »

ದೆಹಲಿಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಮೂರು ಪಟ್ಟು ಹೆಚ್ಚಳ; ಶಾಲೆ ಬಂದ್

ಹೊಸದಿಲ್ಲಿ : ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿದ್ದು, ದೆಹಲಿ ಎನ್‍ಸಿಆರ್ ಪ್ರದೇಶದ ಒಂದು ಶಾಲೆಯಲ್ಲಿ 18 ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಶಾಲೆಯನ್ನು ತಕ್ಷಣದಿಂದ ಮುಚ್ಚಲಾಗಿದೆ. ಹೊಸ ಪ್ರಬೇಧದ ಸೋಂಕು ಪತ್ತೆಯಾಗುವವರೆಗೆ ನಾಗರಿಕರು ಆತಂಕಪಡುವ ಅಗತ್ಯವಿಲ್ಲ ಎಂದು ದೆಹಲಿ ಸರ್ಕಾರ ಅಭಯ ನೀಡಿದೆ. ಕಳೆದ ಐದು ದಿನಗಳಿಂದ ದೆಹಲಿಯಲ್ಲಿ ಪಾಸಿಟಿವಿಟಿ ದರ ಹೆಚ್ಚುತ್ತಿದ್ದು, ಪ್ರತಿ ಶತ ಒಂದಕ್ಕಿಂತ ಅಧಿಕವಾಗಿರುವುದನ್ನು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ದೃಢಪಡಿಸಿದ್ದಾರೆ. …

Read More »

ಜಿಎಸ್‌ಟಿ, ಇಂಧನ ದರ ಏರಿಕೆಯ ಪರಿಣಾಮ: ಕಬ್ಬಿಣ, ಸಿಮೆಂಟ್‌ ಮತ್ತಷ್ಟು ದುಬಾರಿ

ಬೆಂಗಳೂರು: ಕಬ್ಬಿಣ, ಸಿಮೆಂಟ್, ಸ್ಯಾನಿಟರಿ, ಬಣ್ಣ, ಎಲೆಕ್ಟ್ರಿಕಲ್, ಅಲ್ಯುಮಿನಿಯಂ ಸೇರಿ ಎಲ್ಲ ವಸ್ತುಗಳ ಬೆಲೆ ನಿರ್ಮಾಣ ಕ್ಷೇತ್ರವೇ ಬೆರಗಾಗುವಷ್ಟು ಗಗನಮುಖಿಯಾಗಿದೆ. ಇದು ಸ್ವಂತ ಮನೆ ಕಟ್ಟಿಕೊಳ್ಳುವ ಜನರ ಕನಸಿಗೆ ನುಚ್ಚುನೂರು ಮಾಡಿದ್ದರೆ, ಸರ್ಕಾರಿ ಕಾಮಗಾರಿಗಳ ಮೇಲೂ ಪರಿಣಾಮ ಬೀರಿದೆ.   ಜಿಎಸ್‌ಟಿ ಮತ್ತು ಇಂಧನ ದರ ಏರಿಕೆಯಿಂದ ನಿರ್ಮಾಣ ಪರಿಕರಗಳ ಬೆಲೆಯೂ ಏರುಗತಿಯಲ್ಲೇ ಮುಂದುವರಿದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಳೆದ ನವೆಂಬರ್ ವೇಳೆಗೆ ಶೇ 40ರಿಂದ ಶೇ 50ರಷ್ಟು ಹೆಚ್ಚಳವಾಗಿದ್ದ …

Read More »

ಕಾಂಗ್ರೆಸ್ ಬಣ ರಾಜಕೀಯಕ್ಕೆ ಹೈಕಮಾಂಡ್​ನಿಂದಲೇ ಮದ್ದು

ಬೆಂಗಳೂರು :ಬೇರೆ ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ಆಂತರಿಕ ಕಲಹದಿಂದ ಸರ್ಕಾರವನ್ನೂ ಕಳೆದುಕೊಂಡಿ ದ್ದಲ್ಲದೆ, ಪಕ್ಷಕ್ಕೂ ಅಪಾರ ಹಾನಿಯಾದುದ್ದನ್ನು ಅರಿತ ಹೈಕಮಾಂಡ್ ಕರ್ನಾಟಕವನ್ನು ಗಂಭೀರವಾಗಿ ಪರಿಗಣಿಸಿದೆ. ಚುನಾವಣೆ ಎದುರಿಗಿರುವಾಗ ರಾಜ್ಯ ಕಾಂಗ್ರೆಸ್​ನಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಗ್ರಹಿಸಿರುವ ಹೈಕಮಾಂಡ್, ಇಡೀ ಸಂಘಟನೆಯ ಮೇಲೆ, ಅಷ್ಟೂ ಕ್ಷೇತ್ರದ ಪೂರ್ಣ ಹಿಡಿತ ತೆಗೆದುಕೊಳ್ಳಲು ಬಯಸಿದೆ. ಇದೇ ಕಾರಣಕ್ಕೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಚುನಾವಣೆವರೆಗೂ ಪ್ರತಿ ತಿಂಗಳಲ್ಲಿ 15 ದಿನವನ್ನು ಕರ್ನಾಟಕಕ್ಕೆ ಮೀಸಲಿಡಲಿದ್ದಾರೆ. ಹಾಗೆಯೇ …

Read More »

ಅಪ್ಪು ಮಗಳ ಶಾಲೆಯಲ್ಲಿ ಅಶ್ವಿನಿ ಪುನೀತ್ ಅವ್ರಿಗೆ ಸನ್ಮಾನ; ವಿಡಿಯೋ ವೈರಲ್

ಬೆಂಗಳೂರು : ಕನ್ನಡದ ಪವರ್‌ ಸ್ಟಾರ್ ನಟ ಪುನೀತ್ ರಾಜ್‌ಕುಮಾರ್ ಅವರು ತೀವ್ರ ಹೃದಯ ಸ್ತಂಭನದಿಂದ ಬಳಲಿದ ನಂತರ ನಿಧನರಾಗಿದ್ದರು . ಅವರ ನಿಧನವು ಅವರ ಅನೇಕ ಅಭಿಮಾನಿಗಳಿಗೆ ಇಂದಿಗೂ ನಂಬಲಾಗದ ಸತ್ಯವಾಗಿದೆ . ಇನ್ನು , ನಟ ಪುನೀತ್ ರಾಜ್​ಕುಮಾರ್ ಅವರು ನಿಧನರಾದ ಬಳಿಕ ಅವರಿಗೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ . ನಟ ಪುನೀತ್ ರಾಜ್​ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ನಟನಿಗೆ ಸಿಕ್ಕ ಹಲವು ಪ್ರಶಸ್ತಿಗಳನ್ನು …

Read More »

ಕಾರು ನಿಲ್ಲಿಸಿ ಹೋಗುತ್ತಿದ್ದೀರಾ, ಎಚ್ಚರ!; ಒಂದೇ ದಿನ ಒಂದೇ ಥರದ ಎರಡು ಪ್ರಕರಣ.

ವಿಜಯಪುರ: ರಾಜ್ಯದಲ್ಲೀಗ ಕಾರು ನಿಲ್ಲಿಸಿ ಹೋಗುವುದಕ್ಕೂ ಭಯ ಎನಿಸುವಂಥ ವಾತಾವರಣ ಉಂಟಾದಂತಿದೆ. ಅದರಲ್ಲೂ ಒಂದೇ ದಿನ ಒಂದೇ ಥರದ ಎರಡು ಪ್ರಕರಣಗಳು ನಡೆದಿರುವುದು ಕಾರುಗಳ ಮಾಲೀಕರಲ್ಲಿ ಆತಂಕ ಉಂಟುಮಾಡಿದ್ದು, ಎಚ್ಚರ ವಹಿಸಬೇಕಾದ ಸೂಚನೆಯನ್ನೂ ಪರೋಕ್ಷವಾಗಿ ನೀಡಿದೆ.   ಬೆಳಗಾವಿಯ ಗೋಕಾಕ್​ನ ಸಬ್​ ಜೈಲ್ ಮುಂದೆ ನಿಲ್ಲಿಸಿದ್ದ ಇನ್ನೋವಾ ಕಾರಿನ ಗಾಜು ಒಡೆದ ಕಳ್ಳರು, ಮುತ್ತುನಂದಿ ಎಂಬವರ 10 ಲಕ್ಷ ರೂ. ದೋಚಿಕೊಂಡು ಹೋದ ಬೆನ್ನಿಗೆ ರಾಜ್ಯದಲ್ಲಿ ಅಂಥದ್ದೇ ಮತ್ತೊಂದು ಪ್ರಕರಣ ನಡೆದಿದೆ. …

Read More »