ಉಡುಪಿ: ಕುಡಚಿ ಬಿಜೆಪಿ ಶಾಸಕ ಪಿ.ರಾಜೀವ್ ವಿರುದ್ಧ ದಾಖಲಾಗಿರುವ ಹಲ್ಲೆ ಮತ್ತು ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಗೆ ಸಂಬಂಧಿಸಿದಂತೆ ಆಧಾರವಿದ್ದು, ಪ್ರಕರಣ ಕೈ ಬಿಡಲು ಸಾಧ್ಯವಿಲ್ಲ ಎಂದು ನಗರ ವಿಶೇಷ ನ್ಯಾಯಾಲಯ ಹೇಳಿದೆ. ರಾಜೀವ್ ಮತ್ತು ಇತರ ಆರು ಮಂದಿ, ಜನವರಿ 13, 2016 ರಂದು ಮಾಜಿ ಶಾಸಕ ಎಸ್‌ಬಿ ಘಾಟ್ಗೆ ಅವರ ಮನೆಗೆ ಅವರು ಇಲ್ಲದಿದ್ದಾಗ ಅಕ್ರಮವಾಗಿ ನುಗ್ಗಿ ಕೆಲಸಗಾರನ ಮೇಲೆ ಹಲ್ಲೆ ನಡೆಸಿದ್ದರು. ಗ್ಯಾಂಗ್ …
Read More »Yearly Archives: 2022
ಸಂತೋಷ್ ಪಾಟೀಲ ಆತ್ಮಹತ್ಯೆ ಹಿಂದೆ ರಾಜಕೀಯ ಬಣ್ಣ: H.D.D.
ಬೆಂಗಳೂರು : ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಹಿಂದೆ ರಾಜಕೀಯ ಬಣ್ಣವಿದ್ದಂತೆ ಕಾಣುತ್ತಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು. ಪಕ್ಷದ ರಾಜ್ಯ ಕಚೇರಿಯಲ್ಲಿ ಗುರುವಾರ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,’ಈ ಪ್ರಕರಣದ ವಿಚಾರದಲ್ಲಿ ಯಾರೆಲ್ಲ ಏನೇನು ಹೇಳಿದ್ದಾರೆ ಎಂಬುದು ಗೊತ್ತಿದೆ. ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡುವುದಿಲ್ಲ’ ಎಂದರು. ‘ನಾನು ಕೂಡ ಆಡಳಿತ ನಡೆಸಿದ್ದೇನೆ. ಯಾರ ಕಾಲದಲ್ಲಿ ಏನಾಗಿದೆ, ಎಷ್ಟು ಲಂಚ ಪಡೆದು ಸರ್ಕಾರ ನಡೆಸಿದ್ದಾರೆ …
Read More »ಪಂಚಮಸಾಲಿ ಗಡುವು ಕೊನೆ ( ನಾಳೆ ) *ಏಪ್ರಿಲ್ 15 ಕ್ಕೆ
ಪಂಚಮಸಾಲಿ ಗಡುವು ಕೊನೆ ( ನಾಳೆ ) *ಏಪ್ರಿಲ್ 15 ಕ್ಕೆ ಕೂಡಲಸಂಗಮ ಪಂಚಮಸಾಲಿ ಪೀಠದಲ್ಲಿ ಅಂತಿಮ ಹೋರಾಟದ ಅಂತಿಮ ಸುತ್ತಿನ ಸಭೆ….. …..ಪಂಚಮಸಾಲಿ ಮೀಸಲಾತಿಗಾಗಿ ಏಪ್ರಿಲ್ 14 ಸರ್ಕಾರಕ್ಕೆ ಕೊಟ್ಟ ಗಡುವು ಮುಗಿದಿರುವುದರಿಂದ ಹಾಗೂ ಏಪ್ರಿಲ್ 21 ರಿಂದ ಆರಂಭವಾಗುವ ಹೋರಾಟದ ಕುರಿತು ಚರ್ಚಿಸಲು….. ….ಏಪ್ರಿಲ್ 15 ಶುಕ್ರವಾರ ಮಧ್ಯಾಹ್ನ 3 ಕ್ಕೆ ಕೂಡಲಸಂಗಮ ಪಂಚಮಸಾಲಿ ಜಗದ್ಗುರು ಮಹಾಪೀಠದಲ್ಲಿ…. ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸಾನಿಧ್ಯದಲ್ಲಿ …
Read More »ರೈತನಿಗೆ ಸಿಡಿಲು ಬಡಿದು ಆ ರೈತ ಮತ್ತು ಎಮ್ಮೆ ಸಾವನ್ನಪ್ಪಿರುವ ಧಾರುಣ ಘಟನೆ ಬೆಳಗಾವಿ ತಾಲೂಕಿನ ತುಮ್ಮರಗುದ್ದಿ ನಡೆದಿದೆ.
ಎಮ್ಮೆ ಮೇಯಿಸಲು ಹೋಗಿದ್ದ ರೈತನಿಗೆ ಸಿಡಿಲು ಬಡಿದು ಆ ರೈತ ಮತ್ತು ಎಮ್ಮೆ ಸಾವನ್ನಪ್ಪಿರುವ ಧಾರುಣ ಘಟನೆ ಬೆಳಗಾವಿ ತಾಲೂಕಿನ ತುಮ್ಮರಗುದ್ದಿ ನಡೆದಿದೆ. ತುಮ್ಮರಗುದ್ದಿ ಗ್ರಾಮದ 25 ವರ್ಷದ ಭೀಮಪ್ಪ ಅಡಿವೆಪ್ಪ ಬಸರಿಮರದ ಸಿಡಿಲು ಬಡಿದು ಸಾವನ್ನಪ್ಪಿರುವ ದುರ್ದೈವಿ. ಸಿಡಿಲಿನ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಈತನನ್ನು ಬೆಳಗಾವಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ಎಮ್ಮೆ ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಕಾಕತಿ ಪೊಲೀಸ್ …
Read More »ಮಿನಿ ಬಸ್ವೊಂದು ನಿಯಂತ್ರಣ ತಪ್ಪಿ ಪಲ್ಟಿ
ಕೊಡಗು: ಜಿಲ್ಲೆಯಾದ್ಯಂತ ಭಾರೀ ಪ್ರಮಾಣದ ಮಳೆಯಾದ ಹಿನ್ನೆಲೆಯಲ್ಲಿ ಮಿನಿ ಬಸ್ವೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ರಾಷ್ಟ್ರೀಯ ಹೆದ್ದಾರಿ 275 ಮಡಿಕೇರಿ ಸಮೀಪದ ಬೋಯಿಕೇರಿ ಗ್ರಾಮದ ಬಳಿ ದುರ್ಘಟನೆ ನಡೆದಿದೆ. ಸದ್ಯ ಯಾವುದೇ ರೀತಿಯ ಸಾವು, ನೋವುಗಳು ಸಂಭವಿಸಿಲ್ಲ. ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಯಾಣಿಕರು ಪಾರಾಗಿದ್ದಾರೆ. ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಘಟನಾ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Read More »ಈಶ್ವರಪ್ಪ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ಒತ್ತಡ ಇತ್ತು: ಸತೀಶ್ ಜಾರಕಿಹೊಳಿ
ಘಟಪ್ರಭ: ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾದ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ಒತ್ತಡ ಇತ್ತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾರೆ. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡದಿದ್ದರೆ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷ ಪ್ರತಿಭಟನೆ ಮುಂದೆವರಿಸುತ್ತಿತ್ತು. ಈಗ ಅವರು ರಾಜೀನಾಮೆ ನೀಡಿರುವುದು ಒಳ್ಳೆಯದು, ಮೊದಲೇ ರಾಜೀನಾಮೆ ನೀಡಬೇಕಾಗಿತ್ತು. ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ಮುಖಂಡರು …
Read More »ಹೈಕಮಾಂಡ್ ಎಂತೆಂತವರನ್ನೆ ಮನೆಯಲ್ಲಿ ಕೂಡಿಸಿದೆ. ಇನ್ನು ವಿಜಯೇಂದ್ರ ಯಾವ ಗಿಡದ ತಪ್ಪಲು..?: ಯತ್ನಾಳ್
ಹೈಕಮಾಂಡ್ ಎಂತೆಂತವರನ್ನೆ ಮನೆಯಲ್ಲಿ ಕೂಡಿಸಿದೆ. ಇನ್ನು ವಿಜಯೇಂದ್ರ ಯಾವ ಗಿಡದ ತಪ್ಪಲು..? ನನ್ನಿಂದಲೇ ಬಿಜೆಪಿ ಎನ್ನುವವರನ್ನೇ ಮನೆಯಲ್ಲಿ ಕೂಡಿಸಿದ್ದಾರೆ. ವಿಜಯೇಂದ್ರ ಮೊನ್ನೆ ಮೊನ್ನೆ ನಮ್ಮ ಮುಂದೆಯೇ ಹುಟ್ಟಿದ ಹುಡುಗ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದ್ದಾರೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಗ್ರಾಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮಾಜಿ ಮೂರ್ತಿ ಅನಾವರಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮಾಧ್ಯಮಗಳು ತಾವು ಸಚಿವನಾಗಲು ವಿಜಯೇಂದ್ರ ಅಡ್ಡಗಾಲು …
Read More »ನಾಳೆ ಈಶ್ವರಪ್ಪ ರಾಜೀನಾಮೆ ನೀಡಲಿದ್ದಾರೆ: ಸಿಎಂ ಬೊಮ್ಮಾಯಿ
ಬೆಂಗಳೂರು: ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ ಸಂಬಂಧ ಆರೋಪಮುಕ್ತನಾಗಿ ಹೊರಬರುವವರೆಗೂ ಸಂಪುಟದಿಂದ ಹೊರಗಿರುವುದಾಗಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದು, ನಾಳೆ ಸಂಜೆ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಈಶ್ವರಪ್ಪ ರಾಜೀನಾಮೆ ನೀಡುವ ಬಗ್ಗೆ ಘೋಷಣೆ ಮಾಡಿದ ಬೆನ್ನಲ್ಲೇ ಸುದ್ದಿಗಾರರಿಗೆ ಸಿಎಂ ಪ್ರತಿಕ್ರಿಯೆ ನೀಡಿದರು. ಇದು ಸಂಜೆ ಸಚಿವ ಕೆ.ಎಸ್ ಈಶ್ವರಪ್ಪ ನನಗೆ ದೂರವಾಣಿ ಕರೆ ಮಾಡಿದ್ದರು, ಆ ವೇಳೆ ರಾಜೀನಾಮೆ ಕೊಡುತ್ತೇನೆ …
Read More »ನಾಳೆ ಸಂಜೆ ಸಿಎಂ ಭೇಟಿಯಾಗಿ ರಾಜೀನಾಮೆ ಸಲ್ಲಿಸುವೆ – ಈಶ್ವರಪ್ಪ
ಶಿವಮೊಗ್ಗ: ನನಗೆ ತಪ್ಪು ಮಾಡಿಲ್ಲ ಎನ್ನುವಂತ ನಂಬಿಕೆ ಇದೆ. ನನ್ನ ಮನೆದೇವರು ಚೌಡೇಶ್ವರಿಯವರು ನನ್ನ ಕಾಯುತ್ತಾಳೆ ಎಂಬುದಾಗಿ ನನಗೆ ನಂಬಿಕೆ ಇದೆ. ನಾನು ನಾಳೆ ಸಂಜೆ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕೆ. ಎಸ್ ಈಶ್ವರಪ್ಪ ಘೋಷಣೆ ಮಾಡಿದ್ದಾರೆ. ಈ ಕುರಿತು ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಯಾವುದೇ ತಪ್ಪು ಮಾಡಿಲ್ಲ. ಆ ಬಗ್ಗೆ ತನಿಖೆಯಿಂದ ಎಲ್ಲಾ ಸತ್ಯಾಸತ್ಯತೆ …
Read More »ಸಚಿವ ಈಶ್ವರಪ್ಪರನ್ನ ಸಂತೋಷ್ ಪಾಟೀಲ್ ಭೇಟಿಯಾಗಿದ್ದು ನಿಜ ಎಂದ ಬೈಲಹೊಂಗಲ ಆರಾದಿಮಠದ ಮಹಾಂತೇಶ ಶಾಸ್ತ್ರಿ
ಬೆಂಗಳೂರು : ಗುತ್ತಿಗೆದಾರ ಸಂತೋಷ್ ಅತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸ್ಪೋಟಕ ವಿಚಾರ ಬಯಲಾಗಿದ್ದು, ಸಚಿವ ಈಶ್ವರಪ್ಪರನ್ನ ಸಂತೋಷ್ ಪಾಟೀಲ್ ಭೇಟಿಯಾಗಿದ್ದು ನಿಜ ಎಂದು ಬೈಲಹೊಂಗಲ ಆರಾದಿಮಠದ ಮಹಾಂತೇಶ ಶಾಸ್ತ್ರಿ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವ್ರು, ‘ಸಚಿವ ಈಶ್ವರಪ್ಪರನ್ನ ಸಂತೋಷ್ ಪಾಟೀಲ್ ಭೇಟಿಯಾಗಿದ್ದು ನಿಜ. ಆದ್ರೆ, ಸಂತೋಷ್ ಪಾಟೀಲ್ ಯಾರೆಂದು ನನಗೆ ಗೊತ್ತಿಲ್ಲ. 2021ರ ಫೆ.21ರಂದು ಸಚಿವ ಈಶ್ವರಪ್ಪರನ್ನು ಭೇಟಿಯಾಗಿದ್ದೆ. ದುರ್ಗಾದೇವಿ ಜಾತ್ರಾ ಮಹೋತ್ಸವಕ್ಕೆ ಆಹ್ವಾನಿಸಲು ಕೆಲ …
Read More »