Breaking News

Yearly Archives: 2022

ಧರ್ಮಗಳ ನಡುವೆ ಬೆಂಕಿ ಹಾಕಿ ಬೇಳೆ ಬೇಯಿಸಿಕೊಳ್ಳುವ ಕೆಟ್ಟ ಪ್ರವೃತ್ತಿ ಸರಿಯಲ್ಲ: ಕುಮಾರಸ್ವಾಮಿ

ಬೆಂಗಳೂರು: ತಡರಾತ್ರಿ ಹುಬ್ಬಳ್ಳಿಯಲ್ಲಿ ನಡೆದ ಘಟನೆಯ ಬಗ್ಗೆ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿ ಕಳವಳ ವ್ಯಕ್ತಪಡಿಸಿದ್ದಾರೆ. ಕಹಿ ಘಟನೆಗಳು ನನಗೆ ತೀವ್ರ ಆಘಾತ ಉಂಟು ಮಾಡಿವೆ. ಕರ್ನಾಟಕದ ಶಾಂತಿ, ಸಾಮರಸ್ಯ ಹಾಳು ಮಾಡುವ ದುಷ್ಪ್ರಯತ್ನಗಳು ಕಳವಳಕಾರಿ. ಧರ್ಮ ಧರ್ಮಗಳ ನಡುವೆ ಬೆಂಕಿ ಹಾಕಿ ಬೇಳೆ ಬೇಯಿಸಿಕೊಳ್ಳುವ ಕೆಟ್ಟ ಪ್ರವೃತ್ತಿ ಸರಿಯಲ್ಲ. ಈದ್ಗಾ ಮೈದಾನದ ವಿವಾದಕ್ಕೆ ತೆರೆಬಿದ್ದ ನಂತರ ನೆಮ್ಮದಿಯಾಗಿದ್ದ ಹುಬ್ಬಳ್ಳಿಯ ಶಾಂತ ವಾತಾವರಣ ಕದಡುವ …

Read More »

ಬಿಜೆಪಿ ಟೋಪಿ ಧರಿಸದ ಬಿಎಸ್‌ವೈ, ವೇದಿಕೆಗೆ ಬಾರದ ಸಂಘಟನಾ ಕಾರ್ಯದರ್ಶಿ ಸಂತೋಷ್‌

ಹೊಸಪೇಟೆ: ವಿಜಯನಗರದ ನೆಲದಲ್ಲಿ ಆರಂಭಗೊಂಡ ಬಿಜೆಪಿ ರಾಜ್ಯ ಕಾರ್ಯಕಾರಿಣಿಗೂ ಮುನ್ನ ನಡೆದ ಪಕ್ಷದ ಬಾವುಟ ಹಾರಿಸುವ ಕಾರ್ಯಕ್ರಮದಲ್ಲಿ ಮುಖಂಡರೊಬ್ಬರು ಶಾಸಕ ಬಿ.ಎಸ್‌. ಯಡಿಯೂರಪ್ಪನವರಿಗೆ ಬಿಜೆಪಿ ಟೋಪಿ ಹಾಕಲು ಮುಂದಾದರು. ಆದರೆ, ಅವರು ಅದನ್ನು ನಿರಾಕರಿಸಿದರು. ಎಲ್ಲ ಮುಖಂಡರು ಟೋಪಿ ಧರಿಸಿದ್ದರು. ಆದರೆ, ಬಿಎಸ್‌ವೈ ಮಾತ್ರ ಧರಿಸಿರಲಿಲ್ಲ. ಸಭಾ ಕಾರ್ಯಕ್ರಮದಲ್ಲೂ ಟೋಪಿ ಧರಿಸದೇ ಪಾಲ್ಗೊಂಡಿದ್ದರು. ಇನ್ನು, ಬೆಳಿಗ್ಗೆಯಿಂದ ಎಲ್ಲೆಡೆ ಓಡಾಡಿಕೊಂಡಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು ಎಲ್ಲ ಕಾರ್ಯಕ್ರಮಗಳಲ್ಲಿ …

Read More »

ಈ ನಾಲ್ಕು ಇಲಾಖೆಗಳಲ್ಲೇ ಹೆಚ್ಚು ಎಸಿಬಿ ರೇಡ್!

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಳೆದ 5 ವರ್ಷಗಳಲ್ಲಿ ಕೈಗೊಂಡ ದಾಳಿಗಳ ಪೈಕಿ ಶೇ.51 ದಾಳಿಗಳು ಕಂದಾಯ, ನಗರಾಭಿವೃದ್ಧಿ, ಸಾರಿಗೆ, ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗಳಿಗೆ ಸಂಬಂಧಿಸಿದ್ದಾಗಿವೆ. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಕಳೆದ 5 ವರ್ಷಗಳಲ್ಲಿ ಎಸಿಬಿ 58 ದಾಳಿಗಳನ್ನು ನಡೆಸಿ ಕೋಟ್ಯಂತರ ರೂ. ಭ್ರಷ್ಟಾಚಾರ ಬಯಲಿಗೆಳೆದಿದೆ. ನಗರಾಭಿವೃದ್ಧಿ-40, ಸಾರಿಗೆ-33 ಹಾಗೂ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಮೇಲೆ 29 ದಾಳಿಗಳನ್ನು ನಡೆಸಿದೆ. ಕಳೆದ …

Read More »

ತಿಹಾರ್ ಜೈಲು ಸೇರಿ ಗಡ್ಡ ಬೆಳೆಸಿದ ಮಾತ್ರಕ್ಕೆ ಪಾಪಕರ್ಮಗಳು ಬತ್ತಿ ಹೋಗುವುದೇ? ಅರ್ಕಾವತಿ ರೀಡು ಪ್ರಕರಣದಲ್ಲಿ ನೂರಾರು ಕೋಟಿ ನುಂಗಿದಾಗ ಎಲ್ಲಿ ಅಡಗಿತ್ತೋ ಆ ನಿಮ್ಮ ಶೌರ್ಯ?

ಬೆಂಗಳೂರು: ಭ್ರಷ್ಟಾಚಾರದ ಬಗ್ಗೆ ದೇಶಕ್ಕೆ ಟ್ಯೂಶನ್ ಕೊಡುವಷ್ಟು ಕಡುಭ್ರಷ್ಟ ಎನ್ನುವವರೊಬ್ಬರಿದ್ದರೆ ಅದು ಡಿಕೆ ಶಿವಕುಮಾರ್ ಮಾತ್ರ ಎಂದು ಬಿಜೆಪಿ ಲೇವಡಿ ಮಾಡಿದೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ತಿಹಾರ್ ಜೈಲು ಸೇರಿ ಗಡ್ಡ ಬೆಳೆಸಿದ ಮಾತ್ರಕ್ಕೆ ಡಿಕೆ ಶಿವಕುಮಾರ್ ಅವರ ಪಾಪಕರ್ಮಗಳು ಬತ್ತಿ ಹೋಗುವುದೇ? ಭ್ರಷ್ಟತೆಯ ಪಾಪಕೂಪದಲ್ಲಿ ಮುಳುಗೇಳುತ್ತಿರುವವರು ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಹಾಸ್ಯಾಸ್ಪದವಲ್ಲವೇ? ಸುಮಾರು 50 ದಿನಗಳ ತಿಹಾರ್ ಜೈಲು ವಾಸ, ಜೈಲಿನಿಂದ ಬಂದ ಕೂಡಲೇ ಕೆಪಿಸಿಸಿ …

Read More »

ಬದುಕಬೇಕೆಂದಿದ್ದರೆ ಕಾಶ್ಮೀರ ಬಿಟ್ಟು ಹೋಗಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸದ್ಯ ವಾಸಿಸುತ್ತಿರುವ ಕಾಶ್ಮೀರಿ ಪಂಡಿತರು ತಕ್ಷಣವೇ ಸ್ಥಳಬಿಟ್ಟು ತೆರಳಬೇಕು. ಬದುಕಬೇಕೆಂದಿದ್ದರೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಎಂದು ಹೇಳುವ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.   ಇದರಿಂದಾಗಿ 1990ರ ದಶಕದಲ್ಲಿ ಉಂಟಾಗಿದ್ದಂತೆ ಕಾಶ್ಮೀರ ಪಂಡಿತರನ್ನು ಉಗ್ರವಾದಿಗಳ ಗುಂಪು ಗುರಿ ಮಾಡಿಕೊಂಡು ಕೊಂದು ಹಾಕುವ ಪರಿಸ್ಥಿತಿ ಮತ್ತೆ ತಲೆದೋರಿತೇ ಎಂಬ ಪ್ರಶ್ನೆ ಎದುರಾಗಿದೆ. ಬಾರಾಮುಲ್ಲಾ ಜಿಲ್ಲೆಯಲ್ಲಿಯೇ ಸಕ್ರಿಯವಾಗಿರುವ ಸ್ಥಳೀಯ ಉಗ್ರ ಸಂಘಟನೆ ಲಷ್ಕರ್‌-ಇ-ಇಸ್ಲಾಂ ವಲಸಿಗರು …

Read More »

ಕಳಸಾ ಬಂಡೂರಿ’ ಕಾಮಗಾರಿಗೆ ಶೀಘ್ರವೇ ಚಾಲನೆ : C.M. ಬೊಮ್ಮಾಯಿ

ಗದಗ : ಶೀಘ್ರವೇ ಕಳಸಾ ಬಂಡೂರಿ ಯೋಜನೆಗೆ (Kalasa Banduri Project) ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಘೋಷಣೆ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಕಳಸಾ ಬಂಡೂರಿ ಕಾಮಗಾರಿ ಸಂಬಂಧ ಈಗಾಗಲೇ ಕೇಂದ್ರ ಸಚಿವರನ್ನು ಭೇಟಿಯಾಗಿ ಅನುಮತಿಗೆ ವಿನಂತಿಸಲಾಗಿದೆ. ಈ ಯೋಜನೆಯಿಂದ ಹೆಚ್ಚು ಅರಣ್ಯ ಪ್ರದೇಶ ನಾಶವಾಗದಂತೆ ಗಮನ ನೀಡಿ ಡಿಪಿಆರ್ ತಯಾರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇನ್ನು ಪ್ರಸಕ್ತ ಸಾಲಿನಲ್ಲಿಯೇ ಕಳಸಾ …

Read More »

ಹಳೇ ಹುಬ್ಬಳ್ಳಿ ಉದ್ವಿಗ್ನ, ಪೊಲೀಸರ ಮೇಲೆ ಕಲ್ಲು ತೂರಾಟ

ಹುಬ್ಬಳ್ಳಿ: ಮಸೀದಿಯ ಚಿತ್ರದ‌ ಮೇಲೆ ಭಗವಾಧ್ವಜ ಹಾರಿಸಿದ ಚಿತ್ರ ಎಡಿಟ್‌ ಮಾಡಿ ಯುವಕನೊಬ್ಬ ಸ್ಟೇಟಸ್‌ ಹಾಕಿಕೊಂಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಹಳೇ ಹುಬ್ಬಳ್ಳಿಯಲ್ಲಿ ಶನಿವಾರ ತಡರಾತ್ರಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.   ‘ತಲೆ ಕೆಟ್ಟರೆ ಇಲ್ಲೂ ಭಗವಾಧ್ವಜ ಹಾರಿಸುವೆ, ಜೈ ಶ್ರೀರಾಮ್‌, ಹಿಂದೂ ಸಾಮ್ರಾಟ್‌’ ಎಂದು ಚಿತ್ರದ ಮೇಲೆ ಬರೆಯಲಾಗಿತ್ತು. ಇದು ವಿವಾದಕ್ಕೆ ಕಾರಣವಾಗಿದೆ. ಪೋಸ್ಟ್‌ ಮಾಡಿದ್ದ ಆರೋಪದ ಮೇಲೆ ಅಭಿಷೇಕ್‌ ಹಿರೇಮಠ ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆ …

Read More »

40,000 ಸಿಬ್ಬಂದಿ ನೇಮಿಸಿಕೊಳ್ಳಲಿದೆ T.C.S.

ನವದೆಹಲಿ: ಪ್ರಸಿದ್ಧ ಐಟಿ ಸಂಸ್ಥೆಯಾಗಿರುವ ಟಾಟಾ ಕನ್ಸಲ್‌ಟೆನ್ಸಿ ಸರ್ವೀಸ್‌(ಟಿಸಿಎಸ್‌) ಸಂಸ್ಥೆಯು ಈ ಆರ್ಥಿಕ ವರ್ಷದಲ್ಲಿ ಒಟ್ಟು 40,000 ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಯೋಜನೆ ಹಾಕಿಕೊಂಡಿದೆ. ಈ ಬಗ್ಗೆ ಸಂಸ್ಥೆಯು ಮಾಹಿತಿ ಕೊಟ್ಟಿದ್ದು, ಸದ್ಯ 2020, 2021 ಮತ್ತು 2022ನೇ ಬ್ಯಾಚಿನ ಎಂ.ಎಸ್‌ಸಿ ಮತ್ತು ಎಂ.ಎ ಪದವೀಧರರನ್ನು ನೇಮಕ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದೆ. ಅವರಿಗೆ ಲಿಖೀತ ಪರೀಕ್ಷೆ ಮತ್ತು ಸಂದರ್ಶನ ಇರಲಿದ್ದು, ಅದಕ್ಕಾಗಿ ಏ.20ರವರೆಗೆ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಣಿಗೆ ಅವಕಾಶ ಕೊಡಲಾಗಿದೆ.

Read More »

BBMP ಕಚೇರಿಯಲ್ಲಿ AC ಸ್ಪೋಟ : ಕೆಲ ದಾಖಲೆಗಳು ʼಸುಟ್ಟು ಭಸ್ಮʼ

ಬೆಂಗಳೂರು : ನಗರದ ಬ್ಯಾಟರಾಯನಪುರದ ಬಿಬಿಎಂಪಿ ಕಚೇರಿಯಲ್ಲಿ ಎಸಿ ಸ್ಪೋಟಕೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, ಈ ಅಗ್ನಿ ಅವಘಡದಲ್ಲಿ ಕೆಲ ದಾಖಲೆಗಳು ಸುಟ್ಟು ಭಸ್ಮವಾಗಿವೆ. ಬಿಬಿಎಂಪಿ ಮುಖ್ಯ ಇಂಜಿನಿಯರ್‌ ರಂಗನಾಥ್‌ ಕಚೇರಿಯಲ್ಲಿ ಎಸಿ ಸ್ಪೋಟಗೊಂಡು ಬೆಂಕಿ ಅವಘಡ ಸಂಭವಿಸಿದ್ದು, ಇದು 3ನೇ ಮಹಡಿಯಲ್ಲಿದೆ. ಇನ್ನು ಸ್ಥಳಕ್ಕೆ 2 ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಅಮೃತಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿರುವ ಕಚೇರಿಯಲ್ಲಿ ಈ ಅವಘಡ ಸಂಭವಿಸಿದ್ದು, ಅಗ್ನಿ …

Read More »

ಕೆಜಿಎಫ್​-2 ಮಾಡಿದ ನಿಮ್ಗೆ ನಾಚಿಕೆಯಾಗ್ಬೇಕು, ಟಾಪ್ ಕ್ಲಾಸ್ ಲದ್ದಿ ಚಿತ್ರ, 3 ಗಂಟೆಯ ಟಾರ್ಚರ್​ ಎಂದ ವಿಮರ್ಶಕ

ಬೆಂಗಳೂರು​: ಕಳೆದ ಮೂರು ವರ್ಷಗಳಿಂದ ಜಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದ ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಬಹುನಿರೀಕ್ಷಿತ ಕೆಜಿಎಫ್​ ಚಾಪ್ಟರ್​ 2 ಸಿನಿಮಾ ಏಪ್ರಿಲ್​ 14ರಂದು ದೇಶಾದ್ಯಂತ ಬೆಳ್ಳಿತೆರೆಗೆ ಅಪ್ಪಳಿಸಿದ್ದು, ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ಇದರ ನಡುವೆ ಸ್ವಯಂ ಘೋಷಿತ ಸಿನಿಮಾ ವಿಮರ್ಶಕ ಎಂದು ಕರೆಸಿಕೊಳ್ಳುವ ಕಮಲ್​ ಆರ್​ ಖಾನ್​ ಅಲಿಯಾಸ್​ ಕೆಆರ್​ಕೆ ಕೆಜಿಎಫ್​ ಚಾಪ್ಟರ್​ 2 ಚಿತ್ರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು, ನೆಗಿಟಿವ್ ವಿಮರ್ಶೆ ನೀಡಿರುವುದು ಯಶ್​ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. …

Read More »