Breaking News

Yearly Archives: 2022

12 ರಾಜ್ಯಗಳಲ್ಲಿ ವಿದ್ಯುತ್ ಸಮಸ್ಯೆ: ಮಹಾರಾಷ್ಟ್ರ ಸಚಿವ

ಮುಂಬೈ: ಕಲ್ಲಿದ್ದಲು ಕೊರತೆಯಿಂದಾದಾಗಿ 12 ರಾಜ್ಯಗಳು ವಿದ್ಯುತ್ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಮಹಾರಾಷ್ಟ್ರ ಇಂಧನ ಸಚಿವ ನಿತಿನ್ ರಾವತ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸೂಕ್ಷ್ಮ ಮಟ್ಟದ ಯೋಜನೆಯಿಂದಾಗಿ ಕಳೆದ ಐದರಿಂದ ಆರು ದಿನಗಳ ಕಾಲ ಮಹಾರಾಷ್ಟ್ರದಲ್ಲಿ ಯಾವುದೇ ಲೋಡ್ ಶೆಡ್ಡಿಂಗ್ ಇರಲಿಲ್ಲ. ವಿದ್ಯುತ್ ಕೊರತೆಯು ಶೆ.15ರಷ್ಟಿದೆ ಎಂದರು. ರಾಜ್ಯದ ಸ್ವಾಮ್ಯದ ಮಹಾಜೆಂಕೊ 8000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಿದ್ದು, ಕರಾವಳಿ ಪ್ರದೇಶದಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳು ಆಮದು …

Read More »

ದೆಹಲಿಯಲ್ಲೂ ಪ್ರಾರಂಭವಾಯ್ತು ಬುಲ್ಡೋಜರ್ ಸದ್ದು

ನವದೆಹಲಿ: ಇತ್ತೀಚೆಗೆ ಹನುಮ ಜಯಂತಿ ವೇಳೆ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ದೆಹಲಿಯ ಜಹಾಂಗೀರ್‌ಪುರಿಗೂ ಸರ್ಕಾರ ಬುಲ್ಡೋಜರ್ ಶಾಕ್ ನೀಡಿದ್ದು, ದೆಹಲಿಯಲ್ಲಿ ನಿರ್ಮಾಣ ಮಾಡಲಾಗಿರುವ ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್ ಬಳಸಿ ಒಡೆದು ಹಾಕಲು ನಗರ ಪಾಲಿಕೆ ಆದೇಶ ನೀಡಿದೆ. ಹನುಮ ಜಯಂತಿಯಂದು ದೆಹಲಿಯಲ್ಲಿ ನಡೆದ ಜಹಾಂಗೀರ್‌ಪುರಿ ಹಿಂಸಾಚಾರದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಉತ್ತರ ಮಹಾನಗರ ಪಾಲಿಕೆ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದೆ. ಈ ಮನವಿಯಲ್ಲಿ ಏ.20 ಮತ್ತು 21ರಂದು …

Read More »

ಅಪ್ರಾಪ್ತೆ ಮೇಲೆ ತಂದೆ, ಅಣ್ಣನಿಂದ ಅತ್ಯಾಚಾರ , ಕಿರುಕುಳ

ಮುಂಬೈ: ಅಣ್ಣ, ತಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದು, ಆಕೆಯ ಅಜ್ಜ ಹಾಗೂ ಚಿಕ್ಕಪ್ಪ ಕಳೆದ 5 ವರ್ಷಗಳಿಂದ ಕಿರುಕುಳ ನೀಡಿದ ಘಟನೆ ಪುಣೆದಲ್ಲಿ ನಡೆದಿದೆ. 11 ವರ್ಷದ ಬಾಲಕಿಯ ಮೇಲೆ ಅಪ್ರಾಪ್ತ ಸಹೋದರ, ಸಂತ್ರಸ್ತೆಯ ತಂದೆ (45) ಪ್ರತ್ಯೇಕವಾಗಿ ಅತ್ಯಾಚಾರವೆಸಗಿದ್ದಾರೆ. ಇದರ ಜೊತೆಗೆ ಆಕೆಯ ಅಜ್ಜ(60) ಹಾಗೂ ಚಿಕ್ಕಪ್ಪ (25) ಕಳೆದ 5 ವರ್ಷಗಳಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಸಂತ್ರಸ್ತೆ ಹಾಗೂ ಆಕೆಯ ಕುಟುಂಬದವರು ಮೂಲತಃ ಬಿಹಾರದವರಾಗಿದ್ದು, ಸದ್ಯ ಪುಣೆಯಲ್ಲಿ …

Read More »

ಕ್ಷುಲ್ಲಕ ಕಾರಣಕ್ಕಾಗಿ ಪ್ರೇಕ್ಷಕರಿಬ್ಬರ ನಡುವೆ ಜಗಳ ಕೆಜಿಎಫ್‌2 ಸಿನಿಮಾ ವೀಕ್ಷಣೆ ವೇಳೆ ಶೂಟೌಟ್: ಥಿಯೇಟರ್‌ನಲ್ಲೇ ಯುವಕನಿಗೆ ಗುಂಡು!

ಹಾವೇರಿ : ಶಿಗ್ಗಾವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ಮಂಗಳವಾರ ರಾತ್ರಿ 10.30ರ ಸಮಯದಲ್ಲಿ ‘ಕೆಜಿಎಫ್‌-2’ ಸಿನಿಮಾ ನೋಡುವ ಸಂದರ್ಭ ಕ್ಷುಲ್ಲಕ ಕಾರಣಕ್ಕಾಗಿ ಪ್ರೇಕ್ಷಕರಿಬ್ಬರ ನಡುವೆ ಜಗಳ ನಡೆದು, ಪಿಸ್ತೂಲಿನಿಂದ ಗುಂಡು ಹೊಡೆದಿರುವ ಘಟನೆ ನಡೆದಿದೆ. ಶಿಗ್ಗಾವಿ ತಾಲ್ಲೂಕಿನ ಮುಗಳಿ ಗ್ರಾಮದ ವಸಂತಕುಮಾರ ಸಣ್ಣಕಲ್ಲಪ್ಪ ಶಿವಪುರ (28) ಗುಂಡೇಟು ತಿಂದು ಗಾಯಗೊಂಡ ಪ್ರೇಕ್ಷಕ. ಗಂಭೀರವಾಗಿ ಗಾಯಗೊಂಡಿರುವ ಇವರನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗುಂಡು ಹಾರಿಸಿದ ಆರೋಪಿ ಪರಾರಿಯಾಗಿದ್ದು, ಆತನ ಬಗ್ಗೆ ಯಾವುದೇ …

Read More »

ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಲು ನೀವು ಸಿದ್ಧ ಇದ್ದೀರಾ? ‘

ಬೆಂಗಳೂರು: ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಮತ್ತು ವಿಧಾನಸಭಾದ ವಿಪಕ್ಷ ನಾಯಕ ಸಿದ್ದರಾಮಯ್ಯನವರ ನಡುವೆ ಸರಣಿ ಟ್ವೀಟ್ ಸಮರ ಈಗ ತಾರಕಕ್ಕೇರಿದೆ.ಈಗ ಕುಮಾರಸ್ವಾಮಿ ಅವರ ಸರಣಿ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಸಿದ್ಧರಾಮಯ್ಯ ‘ನಿತ್ಯ ನನ್ನ ವಿರುದ್ಧ ನಿತ್ಯ ನನ್ನ ವಿರುದ್ದ ನಂಜುಕಾರುತ್ತಿರುವ ಹೆಚ್.ಡಿ. ಕುಮಾರಸ್ವಾಮಿಯವರೇ ನೀವೆಲ್ಲಿ ನಿಂತಿದ್ದೀರಿ? ಎಂದು ಮೊದಲು ಹೇಳಿ’ ಎಂದು ಪ್ರಶ್ನಿಸಿದ್ದಾರೆ. ‘ದೇಶದಲ್ಲಿ ಇಂದು ನಡೆಯುತ್ತಿರುವ ಜಾತ್ಯತೀತತೆ ಮತ್ತು ಕೋಮುವಾದದ ನಡುವಿನ ನಿರ್ಣಾಯಕ ಹೋರಾಟದಲ್ಲಿ ನಾವೆಲ್ಲಿ ನಿಂತಿದ್ದೇವೆ ಎನ್ನುವುದನ್ನು ಜನತೆಗೆ …

Read More »

ಉಡುಪಿ; ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

ಉಡುಪಿ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಸಾರ್ವಜನಿಕವಾಗಿ ಲೈಂಗಿಕ ಕಿರುಕುಳ ನೀಡಿದ ಯುವಕನೋರ್ವನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಎ.19ರಂದು ಮಧ್ಯಾಹ್ನ ನಗರದ ಅಜ್ಜರಕಾಡು ಎಂಬಲ್ಲಿ ನಡೆದಿದೆ.   ಅಂಬಲಪಾಡಿಯ ನಿವಾಸಿ ನೀಲಗಾಮ (26) ಬಂಧಿತ ಆರೋಪಿ. ಅಜ್ಜರ ಕಾಡು ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆ ಮುಗಿಸಿ ಮನೆಗೆ ಹೋಗಲು ಅಜ್ಜರಕಾಡು ಎಲ್‌ಐಸಿ ಎದುರು ಬಸ್ಸಿಗೆ ಕಾಯುತ್ತಿದ್ದಳು. ಈ ವೇಳೆ ಸ್ಥಳಕ್ಕೆ ಆಗಮಿಸಿದ ನೀಲಗಾಮ, ಏಕಾಏಕಿ ವಿದ್ಯಾರ್ಥಿನಿಯ …

Read More »

ಮನೆಯಲ್ಲಿದ್ದ ಕಪಾಟು ಒಡೆದು ಚಿನ್ನಾಭರಣ ಸಹಿತ ನಗದು ಹಣ ಕಳ್ಳತನ

ಬೆಳ್ತಂಗಡಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಿಂಬಾಗಿಲು ಮುರಿದು ಕಳ್ಳರು ನುಗ್ಗಿ ಮನೆಯಲ್ಲಿದ್ದ ಕಪಾಟು ಒಡೆದು ಚಿನ್ನಾಭರಣ ಸಹಿತ ನಗದು ಹಣ ಕಳ್ಳತನ ಮಾಡಿದ ಘಟನೆ ಚಾರ್ಮಾಡಿ ಗ್ರಾಪಂ ವ್ಯಾಪ್ತಿಯ ಚಿಬಿದ್ರೆ ಗ್ರಾಮದ ಕಕ್ಕಿಂಜೆ ಸಮೀಪದ ಕತ್ತರಿಗುಡ್ಡೆಯಲ್ಲಿ ನಡೆದಿದೆ.   ಇಲ್ಲಿನ ನಿವಾಸಿ ಇಕ್ಬಾಲ್ ಎಂಬವರಿಗೆ ಸೇರಿದ ಮನೆಯಲ್ಲಿ ಅವರ ತಂಗಿ ಝರಿನಾ ಮತ್ತು ಇಬ್ಬರು ಮಕ್ಕಳು ಮಾತ್ರ ವಾಸವಾಗಿದ್ದು, ಗಂಡ ಇಸ್ಮಾಯಿಲ್ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ. ಝರಿನಾ ಮತ್ತು ಮಕ್ಕಳು ಮೂರು …

Read More »

ದಿವ್ಯಾ ಮನೆಯಲ್ಲಿ ತಿಂದ ಕೇಸರಿ ಬಾತ್‌ಗೆ ಇಷ್ಟೊಂದು ನಿಯತ್ತೇ: ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು: ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದು ಒಂದು ವಾರ ಕಳೆದರೂ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಅವರನ್ನು ಬಂಧಿಸದಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದ ಹಲವು ದಿನಗಳವರೆಗೂ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿರಲಿಲ್ಲ. ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಂಧನವಿಲ್ಲ. ಗೃಹ ಸಚಿವ ಅರಗ …

Read More »

DK ಬ್ಯಾಟಿಂಗ್ ನೋಡಿದ್ರೆ, ನಾನು ಮತ್ತೆ ಕ್ರಿಕೆಟ್ ಆಡ್ಬೇಕು ಅನ್ನಿಸ್ತಿದೆ..! A.B.D.

ನಾನು ದಿನೇಶ್ ಕಾರ್ತಿಕ್ ಅವರನ್ನು ಕೊನೆಯ ಬಾರಿಗೆ ನೋಡಿದಾಗ ಯುಕೆಯಲ್ಲಿ ಕಾಮೆಂಟ್ರಿ ಮಾಡುತ್ತಿದ್ದರು. ಆಗ ನಾನು ಅವರು ತಮ್ಮ ವೃತ್ತಿಜೀವನದ ಅಂತ್ಯದಲ್ಲಿದ್ದಾರೆ ಎಂದು ಭಾವಿಸಿದ್ದೆ.IPL 2022: ಇತ್ತೀಚೆಗೆ ಸಂದರ್ಶನವೊಂದರಲ್ಲಿ ದಿನೇಶ್ ಕಾರ್ತಿಕ್​ಗೆ ಒಂದು ಜೋಕ್ ಹೇಳುವಂತೆ ಕೇಳಲಾಗಿತ್ತು…ಡಿಕೆ ಹೇಳಿದ ಜೋಕ್- ಎಬಿ ಡಿವಿಲಿಯರ್ಸ್ ಈ ಸಲ RCB ಯಲ್ಲಿ ಆಡ್ತಿಲ್ಲ. ಇದರಲ್ಲೇನು ತಮಾಷೆಯಿದೆ ಎಂದು ನೀವಂದುಕೊಂಡರೆ, ದಿನೇಶ್ ಕಾರ್ತಿಕ್ ಹಾಗೆ ಹೇಳಲು ಮುಖ್ಯ ಕಾರಣ, ಒಬ್ಬ ಆಟಗಾರ ಅತ್ಯುತ್ತಮವಾಗಿ ಆಡುತ್ತಿದ್ದರೂ …

Read More »

ಹುಬ್ಬಳ್ಳಿ- ಬೆಂಗಳೂರ ರೈಲು ಪ್ರಯಾಣಿಕರಿಗೆ ‘ಗುಡ್ ‌ನ್ಯೂಸ್’

ರಾಜ್ಯ ರಾಜಧಾನಿ ಬೆಂಗಳೂರಿನಿಂದ ಉತ್ತರ ಕರ್ನಾಟದ ಪ್ರಧಾನ ವಾಣಿಜ್ಯ ಕೇಂದ್ರ ಹುಬ್ಬಳ್ಳಿ ನಡುವಿನ ರೈಲ್ವೆ ಪ್ರಯಾಣ ಶೀಘ್ರವೇ ಒಂದು ತಾಸು ಕಡಿಮೆಯಾಗಲಿದೆ. ಸೌತ್ ವೆಸ್ಟ್ರನ್ ರೈಲ್ವೆಯು ಹುಬ್ಬಳ್ಳಿ – ಬೆಂಗಳೂರು ನಡುವಿನ ರೈಲ್ವೆ ಮಾರ್ಗವನ್ನು ಡಬಲಿಂಗ್ ಹಾಗೂ ವಿದ್ಯುದೀಕರಣಗೊಳಿಸುತ್ತಿದ್ದು, ಈ ಕೆಲಸ ಕೊನೆ ಹಂತ ತಲುಪಿದೆ. 2023ರ ಮಾರ್ಚ್ ಒಳಗಾಗಿ ಇದು ಪೂರ್ಣಗೊಳ್ಳುತ್ತದೆ. ಬಳಿಕ ರೈಲು ಸಂಚಾರ ವೇಗ ಹೆಚ್ಚಳಗೊಳ್ಳಲಿದೆ. ಬೆಂಗಳೂರು ಹುಬ್ಬಳ್ಳಿ ನಡುವೆ 469 ಕಿಲೋ ಮೀಟರ್ ಇದ್ದು, …

Read More »