ಗದಗ : ಗದಗ ಜಿಲ್ಲಾ ಬಿಜೆಪಿ ಅಲ್ಪ ಸಂಖ್ಯಾತರ ಮೋರ್ಚಾ ಮಂಡಳಿ ಉಪಾಧ್ಯಕ್ಷ ಸಿಕಂದರ್ ಬಾಪುನವರ್ ವಿರುದ್ಧ ಆತ್ಯಾಚಾರ ಆರೋಪ ಕೇಳಿ ಬಂದಿದೆ. ಗದಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹುಬ್ಬಳ್ಳಿಗೆ ಕರೆದೊಯ್ದು ಸಿಕಂದರ್ ಅತ್ಯಾಚಾರ ಮಾಡಿದ್ದ ಅನ್ನೋ ಆರೋಪ ಇದೆ. 42 ವರ್ಷದ ಸಿಕಂದರ್, ತಮ್ಮ ಜಮೀನಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿ ಮೇಲೆ ಆರು ತಿಂಗಳಿಂದ ನಿರಂತರ ಅತ್ಯಾಚಾರ ಮಾಡಿದ್ದಾನಂತೆ. ಮದ್ವೆಯಾಗೋದಾಗಿಯೂ ಬಾಲಕಿಗೆ ನಂಬಿಸಿದ್ದ ಎನ್ನಲಾಗಿದೆ. ತಂದೆ ತಾಯಿ ಇಲ್ಲದ …
Read More »Yearly Archives: 2022
ರಾಜ್ಯದಲ್ಲಿ ಯುಪಿ ಮಾದರಿ ಚುನಾವಣೆಗೆ ಬಿಜೆಪಿ ಸಿದ್ಧತೆ
ಬೆಂಗಳೂರು: ಇತ್ತೀಚೆಗೆ ನಡೆದ ಪಂಚ ರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಮರಳಿ ಅಧಿಕಾರ ಪಡೆದಿರುವ ಬಿಜೆಪಿ, ದಕ್ಷಿಣದ ಹೆಬ್ಟಾಗಿಲು ಕರ್ನಾಟಕದಲ್ಲೂ ಅಧಿಕಾರ ಉಳಿಸಿಕೊಳ್ಳಲು ಉತ್ತರ ಪ್ರದೇಶ ಮಾದರಿಯನ್ನು ಅಳವಡಿಸಲು ನಿರ್ಧರಿಸಿದೆ. ಅದಕ್ಕಾಗಿ ಅಭಿವೃದ್ಧಿ ಮಂತ್ರವನ್ನೇ ಮುಂದಿಟ್ಟುಕೊಂಡು “ಸೈಲೆಂಟ್ ಓಟರ್’ಗಳನ್ನು ಗಟ್ಟಿಗೊಳಿಸಿಕೊಳ್ಳಲು ಕಾರ್ಯತಂತ್ರ ರೂಪಿಸಿದೆ. ರಾಜ್ಯದ ಈಗಿನ ಪರಿಸ್ಥಿತಿಯಲ್ಲಿ ಬಿಜೆಪಿ ಮೂರಂಕಿ ಮುಟ್ಟುವುದು ಕಷ್ಟ ಎಂಬ ಮಾಹಿತಿ ಪಕ್ಷದ ವರಿಷ್ಠರಿಗೆ ಲಭ್ಯವಾಗಿದ್ದು, 150 ಸ್ಥಾನಗಳ ಗುರಿ ಮುಟ್ಟಲು ಉತ್ತರ ಪ್ರದೇಶ ಮಾದರಿ ಅನುಸರಿಸಲು …
Read More »ರಾಯಚೂರು ಜಿಲ್ಲೆಯ ಹಲವೆಡೆ ಆಲಿಕಲ್ಲು ಸಹಿತ ಮಳೆ- ಧರೆಗುರುಳಿದ ಬೃಹತ್ ಮರ
ರಾಯಚೂರು: ಬಿಸಿಲನಾಡು ರಾಯಚೂರಿನಲ್ಲಿ ಸುರಿದ ಆಲಿಕಲ್ಲು ಸಹಿತ ಮಳೆಯಿಂದ ಬಿಸಿಲಿಗೆ ತತ್ತರಿಸಿರುವ ಜಿಲ್ಲೆ ತಂಪಾಗಿದ್ದರು, ಬೆಳೆ ಕಟಾವು ಮಾಡಿದ್ದ ರೈತರು ಕಂಗಾಲಾಗಿದ್ದಾರೆ.ಜಿಲ್ಲೆಯ ಲಿಂಗಸುಗೂರು, ಹಟ್ಟಿ, ಮುದಗಲ್ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾರೀ ಮಳೆಯಾಗಿದೆ. ಲಿಂಗಸುಗೂರು ತಾಲೂಕಿನ ಆಮದಿಹಾಳ ಗ್ರಾಮದ ಬಳಿಯ ರಾಯಚೂರು-ಬೆಳಗಾವಿ ಹೆದ್ದಾರಿಯಲ್ಲಿ ಬೃಹತ್ ಮರ ಧರೆಗುರುಳಿದೆ. ಗಾಳಿ ಸಹಿತ ಮಳೆ ಜೋರಾಗಿದ್ದರಿಂದ ಬೃಹತ್ ಮರ ಧರೆಗುರುಳಿದೆ. ಮರ ರಸ್ತೆಗೆ ಉರುಳಿ ಬಿದ್ದಿದ್ದರಿಂದ ವಾಹನಗಳ ಸಂಚಾರ ಅಸ್ತವ್ಯಸ್ತವಾಗಿದೆ. ಇನ್ನೂ ಹಟ್ಟಿ ಪಟ್ಟಣದಲ್ಲಿ …
Read More »PSI ನೇಮಕಾತಿ ಕ್ವೀನ್‍ಪಿನ್ ದಿವ್ಯಾ ಹಾಗರಗಿ ಅರೆಸ್ಟ್
ಬೆಳಗಾವಿ: ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣದ ಕ್ವೀನ್‍ಪಿನ್ ಬಿಜೆಪಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ದಿವ್ಯಾ ಹಾಗರಗಿಯನ್ನು ಶುಕ್ರವಾರ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಕಳೆದ 18 ದಿನಗಳಿಂದ ತಲೆ ಮರೆಸಿಕೊಂಡಿದ್ದರು. ಆದರೆ ಇಂದು ಸಿಐಡಿ ಎಸ್‌ಪಿ. ರಾಘವೇಂದ್ರ ಹೆಗಡೆ, ಡಿವೈಎಸ್‍ಪಿ, ಪ್ರಕಾಶ್ ರಾಠೋಡ್, ಡಿವೈಎಸ್‍ಪಿ ಶಂಕರಗೌಡ ನೇತೃತ್ವದ ತಂಡದಿಂದ ಮಹಾರಾಷ್ಟ್ರದ ಪುಣೆಯ ಹೋಟೆಲ್‍ವೊಂದರ ಬಳಿ ದಿವ್ಯಾ ಹಾಗರಗಿಯನ್ನು …
Read More »ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಟಕ್ಕುಂಟು ಲೆಕ್ಕಕ್ಕಿಲ್ಲವೇ ಎಂದು ರಾಜ್ಯ ಬಿಜೆಪಿ ಟಾಂಗ್
ಬೆಂಗಳೂರು: ಕಾಂಗ್ರೆಸ್ ನಲ್ಲಿ ಎಲ್ಲವೂ ಸಿದ್ದರಾಮಯ್ಯ ಹೇಳಿದಂತೆ ನಡೆಯುತ್ತಿದೆ. ಹಾಗಾದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಟಕ್ಕುಂಟು ಲೆಕ್ಕಕ್ಕಿಲ್ಲವೇ ಎಂದು ರಾಜ್ಯ ಬಿಜೆಪಿ ಟಾಂಗ್ ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ಒಂದು ಕಡೆ ಕೆಪಿಸಿಸಿ ಅಧ್ಯಕ್ಷರು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎಂದು ಹೇಳುತ್ತಿದ್ದಾರೆ. ಮತ್ತೊಂದೆಡೆ ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರ ಮೂಲಕ ʼಸಿದ್ದರಾಮಯ್ಯ ನೇತೃತ್ವದಲ್ಲೇ ಚುನಾವಣೆʼ ಎಂದು ಹೇಳಿಸುತ್ತಿದ್ದಾರೆ. ಬುರುಡೆ ರಾಮಯ್ಯ ಅವರೇ, ಜಾಣ …
Read More »ರೈತರಿಗೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತೊಂದು ಗುಡ್ ನ್ಯೂಸ್: 6.5 ಲಕ್ಷ ಎಕರೆ ಡೀಮ್ಡ್ ಫಾರೆಸ್ಟ್ ನಿಂದ ಹೊರಗೆ
ಮಂಗಳೂರು: ಡೀಮ್ಡ್ ಫಾರೆಸ್ಟ್ ನಿಯಮ ಸರಳಗೊಳಿಸಿ ರಾಜ್ಯದ ರೈತರ ಆತಂಕ ದೂರ ಮಾಡಲು ಸರ್ಕಾರ ಕ್ರಮಕೈಗೊಂಡಿದೆ. ಮೂಡಬಿದರೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, 6.5 ಲಕ್ಷ ಎಕರೆ ಭೂಮಿಯನ್ನು ಡೀಮ್ಡ್ ಫಾರೆಸ್ಟ್ ನಿಂದ ಹೊರಗಿಡಲು ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದ್ದಾರೆ. ರಾಜ್ಯದ ರೈತರಿಗೆ ಅನೇಕ ವರ್ಷಗಳಿಂದ ಡೀಮ್ಡ್ ಫಾರೆಸ್ಟ್ ನಿಯಮದಿಂದ ಆತಂಕ ಉಂಟಾಗಿತ್ತು. ಇದನ್ನು ಕೈಬಿಡಬೇಕೆಂದು ರೈತರು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು. ಇದರ ಅನ್ವಯ 6.5 ಲಕ್ಷ …
Read More »ಸುಮಲತಾರನ್ನ ಬಿಜೆಪಿ ಪಕ್ಷಕ್ಕೆ ಆಹ್ವಾನ ಮಾಡಿದ್ದೇವೆ: ಸಿ.ಪಿ ಯೋಗೇಶ್ವರ್
ರಾಮನಗರ: ಮಂಡ್ಯ ಸಂಸದೆ ಸುಮಲತಾರನ್ನ ಪಕ್ಷಕ್ಕೆ ಆಹ್ವಾನ ಮಾಡಿದ್ದೇವೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಮ್ಮ ಪಕ್ಷ ಅವರಿಗೆ ಬೆಂಬಲ ನೀಡಿತ್ತು. ಈ ಹಿನ್ನೆಲೆ ನಮ್ಮ ಪಕ್ಷಕ್ಕೆ ಬನ್ನಿ ಎಂದು ಆಹ್ವಾನ ಮಾಡಿದ್ದೇವೆ. ಮದುವೆ ಸಮಾರಂಭದಲ್ಲಿ ಅವರನ್ನ ಭೇಟಿ ಮಾಡಿದ್ದೆವು, ಸಿಎಂ ಸಹ ಇದ್ದರು. ಅವರು ತಿಳಿಸುತ್ತೇವೆ ಎಂದು ಹೇಳಿದ್ದಾರೆ. ಮುಂದೆ ನೋಡೋಣ ಎಂದರು. ಮದ್ದೂರು ಕ್ಷೇತ್ರದಿಂದ ಅಭಿಷೇಕ್ ಅಂಬರೀಶ್ ಬಿಜೆಪಿಯಿಂದ …
Read More »ಹಿಂದಿಯನ್ನ ರಾಷ್ಟ್ರೀಯ ಭಾಷೆಯನ್ನಾಗಿ ಮಾಡಿದ್ರೆ ತಪ್ಪೇನಿಲ್ಲ: ಮುರುಗೇಶ್ ನಿರಾಣಿ
ಮೈಸೂರು/ಚಿಕ್ಕಮಗಳೂರು/ ವಿಜಯಪುರ: ಹಿದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಿದರೆ ತಪ್ಪೇನಿಲ್ಲ ಎಂದು ಸಚಿವ ಮುರುಗೇಶ್ ನಿರಾಣಿ ಹೇಳುವ ಮೂಲಕ ವಿವಾದಕ್ಕೀಡಾಗಿದ್ದಾರೆ. ಸುದೀಪ್, ಅಜಯ್ ದೇವಗನ್ ಮಧ್ಯೆ ಹಿಂದಿವಾರ್ ಸಂಬಂಧ ಪ್ರತಿಕ್ರಿಯಿಸಿದ ಅವರು, ಕನ್ನಡ ಪ್ರಾದೇಶಿಕ ಭಾಷೆ, ಹಿಂದಿ ರಾಷ್ಟ್ರೀಯ ಭಾಷೆ. ಹಿಂದಿ ಭಾಷೆಯೂ ನಮಗೆ ಬೇಕು. ಬೇರೆ ಭಾಷೆ ಕಲಿಯುವುದರಲ್ಲಿ ತಪ್ಪೇನಿಲ್ಲ. ಹಿಂದಿಯನ್ನ ರಾಷ್ಟ್ರೀಯ ಭಾಷೆಯನ್ನಾಗಿ ಮಾಡಬೇಕು ಎಂಬುದು ಮೊದಲಿನಿಂದಲೂ ಇದೆ, ಇದರಿಂದ ತಪ್ಪೇನಿಲ್ಲ ಎಂದರು.ಹೆಚ್ಚು ಭಾಷೆ ಕಲಿಯೋದ್ರಿಂದ ನಾವು ಶ್ರೀಮಂತರಾಗುತ್ತೇವೆ. ನಾವು …
Read More »ಡೀಲಿಂಗ್ ಸರ್ಕಾರದಲ್ಲಿ ದುಡ್ಡಿದ್ದವನಿಗೆ ಉದ್ಯೋಗ ಎಂದ ಮೇಲೆ ಬಡವರು ಪರೀಕ್ಷೆ ಬರೀಬೇಕು ಯಾಕೆ – ಕಾಂಗ್ರೆಸ್ ಪ್ರಶ್ನೆ
ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಅರ್ಹತಾ ಪರೀಕ್ಷೆಯ ಮೂಲಕ ಸರ್ಕಾರಿ ಉದ್ಯೋಗ ಭರ್ತಿ ಮಾಡುವುದೇಕೆ? ಈ ಸರ್ಕಾರದಲ್ಲಿ ದುಡ್ಡಿದ್ದವನಿಗೆ ಉದ್ಯೋಗ ಎಂದ ಮೇಲೆ ಬಡವರು ಯಾಕೆ ಪರೀಕ್ಷೆ ಬರೆಯಬೇಕು ಎಂದು ಕಾಂಗ್ರೆಸ್ ಟ್ವಿಟ್ಟರ್ ಮೂಲಕ ಪ್ರಶ್ನೆ ಮಾಡಿದೆ. ಟ್ವೀಟ್‍ನಲ್ಲಿ ಏನಿದೆ? ರಾಜ್ಯದ ಬೊಮ್ಮಾಯಿ ನೇತೃತ್ವದ ಸರ್ಕಾರ ಡಬಲ್ ಇಂಜೀನ್ ಸರ್ಕಾರವಲ್ಲ. ಇದು ಡೀಲಿಂಗ್ ಸರ್ಕಾರ. ಈ ಸರ್ಕಾರದಲ್ಲಿ ಪ್ರತಿ ಸರ್ಕಾರಿ ಉದ್ಯೋಗಕ್ಕೂ ಇಂತಿಷ್ಟು ರೇಟ್ ಎಂದು ಫಿಕ್ಸ್ ಆಗಿದೆ. PSI ನೇಮಕಾತಿಯಲ್ಲಿ …
Read More »ಸಂಕಷ್ಟಕ್ಕೆ ಸಿಲುಕಿದ ʼಕಹೋ ನಾ ಪ್ಯಾರ್ ಹೈʼ ನಟಿ ಅಮೀಷಾ
ಎರಡು ದಶಕಗಳ ಹಿಂದೆ ಚಿತ್ರರಂಗದಲ್ಲಿ ಸೆನ್ಸೇಶನ್ ಸೃಷ್ಟಿಸಿದ್ದು ಕಹೋ ನಾ ಪ್ಯಾರ್ ಹೈ ಹಿಂದಿ ಚಿತ್ರ. ಹೃತಿಕ್ ರೋಷನ್ ಈ ಚಿತ್ರದ ಮೂಲಕವೇ ಬಹಳಷ್ಟು ಖ್ಯಾತಿ ಪಡೆದಿದ್ದರು. 22 ವರ್ಷದ ಹಿಂದಿನ ಚಿತ್ರದ ಬಗ್ಗೆ ಈಗೇಕೆ ಪೀಠಿಕೆ ಎಂದಿರಾ? ಈ ಚಿತ್ರದ ನಟಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಹೃತಿಕ್ ರೋಷನ್‌ಗೆ ನಾಯಕಿಯಾಗಿ ನಟಿಸಿ ಜನರ ಮನಗೆದ್ದಿದ್ದ ಖ್ಯಾತ ನಟಿ ಅಮೀಶಾ ಪಟೇಲ್ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. …
Read More »