ಕಾಸರಗೋಡು: ಚಿಕನ್ ಶೋರ್ಮಾ ತಿಂದ ಬಳಿಕ ಫುಡ್ ಪಾಯಿಸನ್ ಆಗಿ 16 ವರ್ಷದ ವಿದ್ಯಾರ್ಥಿನಿ ಮೃತಪಟ್ಟಿರುವ ಆಘಾತಕಾರಿ ಘಟನೆ ಕೇರಳದ ಚೆರ್ವತ್ತೂರಿನಲ್ಲಿ ನಡೆದಿದೆ. ಇದಲ್ಲದೆ, 14 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ವಿದ್ಯಾರ್ಥಿನಿಯನ್ನು ಕರಿವೆಳ್ಳೂರು ಪೆರಳಂ ನಿವಾಸಿ ದೇವಾನಂದಾ (16) ಎಂದು ಗುರುತಿಸಲಾಗಿದೆ. ಚೆರ್ವತ್ತೂರಿನ ಐಡಿಯಲ್ ಫುಡ್ ಪಾಯಿಂಟ್ನಲ್ಲಿ ವಿದ್ಯಾರ್ಥಿಗಳು ಶನಿವಾರ ಶೋರ್ಮಾ ಸೇವಿಸಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ವಿದ್ಯಾರ್ಥಿಗಳಲ್ಲಿ ವಾಂತಿ, ಭೇದಿ, ಹೊಟ್ಟೆನೋವು ಹಾಗೂ ಜ್ವರ ಕಾಣಿಸಿಕೊಂಡಿದೆ. …
Read More »Yearly Archives: 2022
ಬಸ್ ಚಾಲಕನನ್ನು ಪ್ರೀತಿಸಿ ಮದುವೆಯಾದ ಇಂಜಿನಿಯರಿಂಗ್ ವಿದ್ಯಾರ್ಥಿನಿಗೆ ಕಾದಿತ್ತು ಶಾಕ್!
ವೇಮುರು: ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಆಕೆಯ ಕುಟುಂಬಸ್ಥರು ಅಪಹರಿಸಿರುವ ಘಟನೆ ಆಂಧ್ರ ಪ್ರದೇಶದ ಅನಂತವರಂನಲ್ಲಿ ಸೋಮವಾರ ನಡೆದಿದೆ. ಆಂಧ್ರ ಪೊಲೀಸರ ಪ್ರಕಾರ ಗುಂಟೂರು ಜಿಲ್ಲೆಯ ಕೊಲ್ಲಿಪರ ಮಂಡಲದ ಲಕ್ಷ್ಮೀ ಪೂಜಿತ ಎಂಬಾಕೆ ಅನಂತಪುರ ಜಿಲ್ಲೆಯ ಕೊಲ್ಲೂರು ವಲಯದ ವಿಶ್ವನಾಥ್ ಎಂಬಾತನನ್ನು ಪ್ರೀತಿಸಿ ಮದುವೆ ಆಗಿದ್ದಾಳೆ. ಲಕ್ಷ್ಮೀ ಪೂಜಿತಾ ತೆನಾಲಿ ಬಳಿಯ ಇಂಜಿನಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ವಿಶ್ವನಾಥ್ ಅದೇ ಕಾಲೇಜಿನಲ್ಲಿ ಬಸ್ ಚಾಲಕನಾಗಿದ್ದ. ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇಬ್ಬರು ಕಳೆದ ಏಪ್ರಿಲ್ …
Read More »ಶಾಲೆಗಳಿಗೆ ಬೇಸಿಗೆ ರಜೆ ವಿಸ್ತರಣೆ ಸಾಧ್ಯತೆ?
ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ತಾಪಮಾನ ಮುಂದುವರಿದಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಬೇಸಿಗೆ ರಜೆಯನ್ನು ವಿಸ್ತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮೇ 16 ರಿಂದ 2022 -23 ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಕೊರೋನಾ ಕಾರಣದಿಂದ ಎರಡು ವರ್ಷ ಶೈಕ್ಷಣಿಕ ಅವಧಿ ವಿಳಂಬವಾಗಿದೆ. ಈ ಬಾರಿ ಮೇ 16 ರಿಂದ ಶಾಲೆಗಳನ್ನು ಆರಂಭಿಸಲು ತೀರ್ಮಾನಿಸಲಾಗಿತ್ತು. ಆದರೆ, ಬಿಸಿಲ ಬೇಗೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಜೆ ಅವಧಿ ವಿಸ್ತರಿಸಬೇಕೆಂದು ವಿಧಾನಪರಿಷತ್ …
Read More »P.S.I. ಆಗಬೇಕು ಅಂತ ಮನಿ ಪ್ಲಾಟ್ ಮಾರಿ ರೊಕ್ಕಾ ಕೊಟ್ಟವನ ಮನಿಗೆ ಪೋಲಿಸ್ ಬಂದ ಅರೆಸ್ಟ್ ಮಾಡಿಕೊಂಡ ಹೋಗೋ ಹಾಗ್ ಆಗೆತಿ..
ಕಲಬುರಗಿ: ಮಗ ಪಿಎಸ್‌ಐ ಆಗುತ್ತಾನೆಂದು ತಂದೆ ಮನೆ, ಸೈಟು ಮಾರಿ 50 ಲಕ್ಷ ರೂಪಾಯಿ ಲಂಚ ಕೊಟ್ಟು, ದುಡ್ಡೂ ಇಲ್ಲದೇ, ಕೆಲಸವೂ ಇಲ್ಲದೇ ಗೋಳಾಡುವ ಸ್ಥಿತಿ ಶರಣಪ್ಪ ಎನ್ನುವವರಿಗೆ ಬಂದಿದೆ. ಮಗ ಪ್ರಭು ಪಿಎಸ್‌ಐ ಆಗಲಿ ಎನ್ನುವ ಕಾರಣಕ್ಕೆ ಎಲ್ಲವನ್ನೂ ಮಾರಿ ಇದೀಗ ಬೀದಿಗೆ ಬಂದದ್ದೂ ಅಲ್ಲದೇ, ಅಕ್ರಮದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ತಂದೆ-ಮಗನನ್ನು ವಶಕ್ಕೆ ಪಡೆಯಲಾಗಿದೆ. ಆಡಿಟರ್ ಚಂದ್ರಕಾಂತ್ ಕುಲಕರ್ಣಿ ಮುಖಾಂತರ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪಿ ಆರ್.ಡಿ. ಪಾಟೀಲ್ ಅವರಿಗೆ …
Read More »ಮಠದಲ್ಲಿ ರಂಜಾನ್, ಬಸವ ಜಯಂತಿ ಆಚರಣೆ – ಬಸವಣ್ಣ, ಮಹಮ್ಮದ್ ಪೈಗಂಬರ್‌ಗೆ ಜಯಘೋಷ
ಗದಗ: ಜಿಲ್ಲೆಯ ಗಜೇಂದ್ರಗಡ ಪಟ್ಟಣ ಹಾಗೂ ಮುಂಡರಗಿ ಶ್ರೀ ಅನ್ನದಾನೀಶ್ವರ ಮಠದಲ್ಲಿ ವಿಭಿನ್ನವಾಗಿ ರಂಜಾನ್ ಹಾಗೂ 889ನೇ ಬಸವ ಜಯಂತಿ ಆಚರಿಸಲಾಯಿತು. ಗಜೇಂದ್ರಗಡ, ಸೂಡಿಯ ಮೈಸೂರು ಮಠದ ಶ್ರೀ ವಿಜಯ ಮಹಾಂತೇಶ್ವರ ಸ್ವಾಮೀಜಿ ಹಾಗೂ ಮೌಲ್ವಿ ನೇತೃತ್ವದಲ್ಲಿ ʻಭಾವೈಕ್ಯತೆ ನಡಿಗೆ ಸಾಮರಸ್ಯದ ಕಡೆಗೆʼ ಎಂಬ ವಿಭಿನ್ನ ಹಾಗೂ ವಿಶೇಷವಾದ ಪಾದಯಾತ್ರೆ ಮಾಡಲಾಯಿತು. ಈ ವೇಳೆ ಬಸವಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಟ್ರ್ಯಾಕ್ಟರ್ ಮೂಲಕ ಮೆರವಣಿಗೆ ಮಾಡಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಮರಸ್ಯ …
Read More »ಎಂಟಿಬಿಗೆ ಇದೀಗ ಅವರ ತಪ್ಪು ಗೊತ್ತಾಗಿದೆ: ಪರಮೇಶ್ವರ್
ಮಡಿಕೇರಿ: ಎಂಟಿಬಿ ಅವರಿಗೆ ಅವರು ಮಾಡಿದ ತಪ್ಪು ಇದೀಗ ಗೊತ್ತಾಗಿದೆ. ಈಗ ಅವರಿಗೆ ಪಶ್ಚಾತ್ತಾಪ ಆಗಿದೆ ಎಂದು ಕಾಂಗ್ರೆಸ್ ನಾಯಕ ಜಿ. ಪರಮೇಶ್ವರ್ ಹೇಳಿದರು. ಮಡಿಕೇರಿಯ ನಗರ ಸಮೀಪದ ಕರ್ಣಗೇರಿ ಗ್ರಾಮದಲ್ಲಿ ಇರುವ ರಾಜರಾಜೇಶ್ವರಿ ದೇಗುಲಕ್ಕೆ ಪರಮೇಶ್ವರ್ ದಂಪತಿ ಭೇಟಿ ನೀಡಿ ವಾರ್ಷಿಕ ಜಾತ್ರೋತ್ಸವದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಬಿಜೆಪಿಗೆ ಸೇರಿ ತಪ್ಪು ಮಾಡಿದೆವು ಎಂದು ಸಚಿವ ಎಂಟಿಬಿ ನಾಗರಾಜ್ ಬಹಿರಂಗ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, …
Read More »ಮೇ 10 ರಂದು ರಾಜ್ಯ ಸಚಿವ ಸಂಪುಟ ಪುನಾರಚನೆ ಸಾಧ್ಯತೆ ಬಗ್ಗೆ ಮಾಹಿತಿ ಲಭಿಸುತ್ತಿದ್ದು, ಮೂವರು ಡಿಸಿಎಂ ಸೃಷ್ಟಿಯಾಗಲಿದೆ. ಜತೆಗೆ ಇನ್ನು ಕೆಲವೇ ತಿಂಗಳಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೊಸಬರ ನೇಮಕ..
ಬೆಂಗಳೂರು: ಮೇ 10 ರಂದು ರಾಜ್ಯ ಸಚಿವ ಸಂಪುಟ ಪುನಾರಚನೆ ಸಾಧ್ಯತೆ ಬಗ್ಗೆ ಮಾಹಿತಿ ಲಭಿಸುತ್ತಿದ್ದು, ಮೂವರು ಡಿಸಿಎಂ ಸೃಷ್ಟಿಯಾಗಲಿದೆ. ಜತೆಗೆ ಇನ್ನು ಕೆಲವೇ ತಿಂಗಳಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೊಸಬರ ನೇಮಕವಾಗಲಿದೆ. ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ, ಒಕ್ಕಲಿಗ, ಹಿಂದುಳಿದ, ಪರಿಶಿಷ್ಟ ಜಾತಿ/ ಪಂಗಡದ ಪ್ರಭಾವಿ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ವರಿಷ್ಠರು ಚಿಂತನೆ ನಡೆಸಿದ್ದಾರೆ. ಅದೇ ರೀತಿ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಹೊಸಬರ ನೇಮಕ ಸಾಧ್ಯತೆ ಇದೆ. ಅಲ್ಲಿಯೂ ಕೂಡಾ …
Read More »10 ಲಕ್ಷ ರೂಪಾಯಿ ಹಣವನ್ನು ಡಬಲ್ ಮಾಡಿ ಕೊಡಲಾಗುವುದು ಎಂದು ಪುಸಲಾಯಿಸಿ 5 ಲಕ್ಷ ರೂಪಾಯಿ ಹಣವನ್ನು ದೋಚಿಕೊಂಡು ಪರಾರಿ
ಮಂಡ್ಯ :- 5 ಲಕ್ಷ ರೂಪಾಯಿ ಹಣಕೊಟ್ಟರೆ 10 ಲಕ್ಷ ರೂಪಾಯಿ ಹಣವನ್ನು ಡಬಲ್ ಮಾಡಿ ಕೊಡಲಾಗುವುದು ಎಂದು ಪುಸಲಾಯಿಸಿ 5 ಲಕ್ಷ ರೂಪಾಯಿ ಹಣವನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಮಂಗಳವಾರ ಮಧ್ಯಾಹ್ನ ಮದ್ದೂರು ತಾಲ್ಲೂಕಿನ ಉಪ್ಪಿನಕೆರೆ ಗೇಟ್ ಬಳಿ ನಡೆದಿದೆ. ಮದ್ದೂರು ತಾಲ್ಲೂಕಿನ ಉಪ್ಪಿನಕೆರೆ ಗೇಟ್ ಬಳಿಯ ಶ್ರೀ ಕಬ್ಬಾಳಮ್ಮ ಟೀ ಸ್ವಾಲ್ ಬಳಿ ಮಂಗಳವಾರ ಬೆಳಿಗ್ಗೆ ಸುಮಾರು 12 ಗಂಟೆ ವೇಳೆಗೆ ಕುಣಿಗಲ್ ಮೂಲದ ಪುನೀತ್, ಕಿರಣ್ ಎಂಬ …
Read More »ತಾಕತ್ತಿದ್ದರೆ ಮೊಳಕಾಲ್ಮೂರು ಕ್ಷೇತ್ರದಲ್ಲೇ ಸ್ಪರ್ಧಿಸಿ
ಮೊಳಕಾಲ್ಮೂರು: ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳದ ಸಚಿವ ಬಿ. ಶ್ರೀರಾಮುಲು ತಾಕತ್ತಿದ್ದರೆ ಮುಂಬರುವ ಚುನಾವಣೆಯಲ್ಲಿ ನನ್ನ ವಿರುದ್ಧ ಗೆದ್ದು ತೋರಿಸಲಿ ಎಂದು ಕಾಂಗ್ರೆಸ್ ಮುಖಂಡ ಡಾ| ಬಿ. ಯೋಗೇಶ್‌ಬಾಬು ಸವಾಲೆಸೆದರು. ತಾಲೂಕಿನ ಹಾನಗಲ್ ಗ್ರಾಮದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಬಿ. ಶ್ರೀರಾಮುಲು ಕೆಲ ದಿನಗಳ ಹಿಂದೆ ಈ ಕ್ಷೇತ್ರ ಅಭಿವೃದ್ಧಿಯಿಂದ ಹಿಂದುಳಿಯಲು ಕಾಂಗ್ರೆಸ್ ಕಾರಣವಾಗಿದೆ ಎಂದು ಹೇಳಿಕೆ ನೀಡಿರುವುದು ಖಂಡನೀಯ. ತಾಕತ್ತಿದ್ದರೆ ಕಾಂಗ್ರೆಸ್‌ನವರು ನನ್ನ ವಿರುದ್ಧ …
Read More »ಅಶ್ವತ್ಥ ನಾರಾಯಣ್ ಸಹೋದರನ ಪಾತ್ರ ಎಷ್ಟಿದೆ ಅನ್ನೋದನ್ನ ತನಿಖೆ ಮಾಡ್ತಾರೆ: ಶಾಸಕ ಯತ್ನಾಳ್
ವಿಜಯಪುರ : ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಸಚಿವ ಸಿ.ಎನ್.ಅಶ್ವತ್ಥ ನಾರಾಯಣ್ ಸಹೋದರನ ಹೆಸರು ಕೇಳಿಬಂದಿರುವುದರ ಕುರಿತು ತನಿಖೆಯಾಗಬೇಕು. ಇದರಲ್ಲಿ ಯಾರೇ ಇದ್ದರೂ ಮುಲಾಜಿಲ್ಲದೆ ತನಿಖೆಯಾಗಲಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ. ಪಿಎಸ್‌ಐ ನೇಮಕಾತಿ ಅಕ್ರಮದ ಕುರಿತು ಮಾತನಾಡಿದ ಅವರು, ಬಿಜೆಪಿ ಸರ್ಕಾರವೇ ಇದನ್ನು ತನಿಖೆ ಮಾಡಿದೆ. ನಮ್ಮ ಸರ್ಕಾರದಿಂದಲೇ ಈ ಪ್ರಕರಣ ಹೊರಗೆ ಬಂದಿದೆ. ಹಿಂದೆ ಕೂಡ ಇಂತಹ ಡೀಲ್ ನಡೆದಿವೆ, ಇದೆ ಮೊದಲೇನಲ್ಲ. ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ …
Read More »