Breaking News

Yearly Archives: 2022

ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿ ನಿಷೇಧಿಸಲು ಅಗ್ರಹಿಸಿ ಕುಂದಾನಗರಿಯಲ್ಲಿ ಖಡಕ್ ಪ್ರತಿಭಟನೆ

ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿ ನಿಷೇಧಿಸಲು ಅಗ್ರಹಿಸಿ ಕುಂದಾನಗರಿಯಲ್ಲಿ ಖಡಕ್ ಪ್ರತಿಭಟನೆ ನಡೆಸಲಾಯಿತು ಸೋಮವಾರ ಬೀದಿಗಿಳಿದ ಕನ್ನಡ ಪರ ಹೋರಾಟಗಾರರು ಕನ‌್ನಡ ನಾಡಿನಲ್ಲಿ ಕನ್ನಡಕ್ಕೆ ಆಗುತ್ತಿರುವ ನಿರಂತರ ಅವಮಾನಕ್ಕೆ ಅಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನ ಕರ್ನಾಟಕ ಏಕೀಕರಣ ಸಮಿತಿಯ ವತಿಯಿಂದ ರಾಣಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಉರುಳು ಸೇವೆ ಸಲ್ಲಿಸಲಾಯಿತು .ಕನ್ನಡಿಗರಿಗೆ ನ್ಯಾಯ ನೀಡಲು ಅಗ್ರಹಿಸಿ ಘೋಷಣೆ ಕೂಗಲಾಯಿತು‌. ಕರ್ನಾಟಕ ಸರ್ಕಾರ ಕನ್ನಡಿಗರೊಂದಿಗೆ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಆರೋಪಿಸಿದ …

Read More »

ಒಂದೇ ಹುಡುಗನನ್ನು ಮದುವೆಯಾದ ಅವಳಿ ಸಹೋದರಿಯರು!

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಐಟಿ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿರುವ ಅವಳಿ ಸಹೋದರಿಯರು ಒಂದೇ ವ್ಯಕ್ತಿಯನ್ನು ಮದುವೆ ಆಗಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಮಲ್ಶಿರಸ್ ತಾಲೂಕಿನ ಅಕ್ಲುಜ್​ ಎಂಬ ಗ್ರಾಮದಲ್ಲಿ ಶುಕ್ರವಾರ ಶಾಸ್ತ್ರೋಕ್ತವಾಗಿ ಮದುವೆ ನೆರವೇರಿಸಲಾಗಿದೆ.   ಈ ವಿವಾದಾತ್ಮಕ ಮದುವೆಗೆ ಯುವಕ ಮತ್ತು ಅವಳಿ ಸಹೋದರಿಯರ ಕುಟುಂಬವೂ ಒಪ್ಪಿಕೊಂಡಿದೆ. ಮದುವೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಈ ಮದುವೆಯ ಕಾನೂನುಬದ್ಧತೆ ಮತ್ತು ನೈತಿಕತೆಯನ್ನು ನೆಟ್ಟಿಗರು ಪ್ರಶ್ನೆ …

Read More »

ಗುಜರಾತ್ ವಿಧಾನಸಭಾ ಚುನಾವಣೆ: ಇಂದು ಬೆಳಗ್ಗೆ 8 ಗಂಟೆಯಿಂದ 2ನೇ ಹಂತದ ಮತದಾನ

ಗುಜರಾತ್ : ಇಂದು ಗುಜರಾತ್ ವಿಧಾನಸಭಾ ಚುನಾವಣೆ(Gujarat Assembly polls)ಯ 2ನೇ ಹಂತದ ಮತದಾನ ನಡೆಯಲಿದೆ. ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ. ಗುಜರಾತ್‌ನ ಅಹಮದಾಬಾದ್, ಗಾಂಧಿನಗರ, ಮೆಹಸಾನಾ, ಪಟಾನ್, ಬನಸ್ಕಾಂತ, ಸಬರ್ಕಾಂತ, ಅರಾವಳಿ, ಮಹಿಸಾಗರ, ಪಂಚಮಹಲ್, ದಾಹೋದ್, ವಡೋದರಾ, ಆನಂದ್, ಖೇಡಾ ಮತ್ತು ಛೋಟಾ ಉದಯ್‌ಪುರ ಜಿಲ್ಲೆಗಳ 93 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 833 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.   ಕಚ್, ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ನಲ್ಲಿ …

Read More »

ಚುನಾವಣೆ ಸಮೀಪಿಸುತ್ತಿದ್ದಂತೆ ‘ಬಿಜೆಪಿ ರೌಡಿ ಮೋರ್ಚಾ’ ವೆಬ್ ಸೈಟ್ ಓಪನ್…!?

ಬೆಂಗಳೂರು: ಕೆಲ ರೌಡಿಗಳು ಬಿಜೆಪಿ ಸೇರುತ್ತಾರೆ ಎಂಬ ವಿಷಯ ರಾಜಕೀಯ ವಲಯದಲ್ಲಿ ಇತ್ತೀಚೆಗೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ರೌಡಿ ಮೋರ್ಚಾ ಹೆಸರಿನ ವೆಬ್ ಸೈಟ್ ಆರಂಭವಾಗಿದೆ.   ಅನಾಮಿಕರುಈ ವೆಬ್ ಸೈಟ್ ಆರಂಭಿಸಿದ್ದು, ರೌಡಿಗಳಾದ ಸೈಲೆಂಟ್ ಸುನೀಲ್, ವಿಲ್ಸನ್ ಗಾರ್ಡನ್ ನಾಗ, ಫೈಟರ್ ರವಿ ಹಾಗೂ ಬೆತ್ತನಗೆರೆ ಶಂಕರ ಸೇರಿದಂತೆ ಹಲವರ ಹೆಸರು ಬಿಜೆಪಿಯಿಂದ 2023ರಲ್ಲಿ ನಡೆಯುವ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳು ಹಾಗೂ ಅವರ …

Read More »

ಮೀಸಲಾತಿ: ಕೇಂದ್ರದಿಂದ ಒಪ್ಪಿಗೆ ಸಿಗುವವರೆಗೂ ಹೋರಾಟ: ಪ್ರಸನ್ನಾನಂದ ಸ್ವಾಮೀಜಿ

ಚನ್ನಗಿರಿ: ಎಸ್‌ಸಿ, ಎಸ್‌ಟಿ ಮೀಸಲಾತಿ ಸಂಬಂಧ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.   ‘ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯವರಿಗೆ ಶೇ 17 ಹಾಗೂ ಪಂಗಡದವರಿಗೆ ಶೇ 7 ಮೀಸಲಾತಿ ನೀಡಿರುವುದು ಸ್ವಾಗತಾರ್ಹ. ಆದರೆ ಇಷ್ಟಕ್ಕೆ ವಿಜಯೋತ್ಸವ ಆಚರಣೆ ಮಾಡಲು ಆಗುವುದಿಲ್ಲ. ಸದ್ಯ ಸರ್ಕಾರ ಕೇವಲ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಆಗುವವರಿಗೆ ಮಾತ್ರ ಮೀಸಲಾತಿಯನ್ನು ಕಲ್ಪಿಸುತ್ತಿದೆ. ಆದರೆ …

Read More »

ವಿಧಾನ ಪರಿಷತ್​ ಸದಸ್ಯಗೆ ಫುಲ್​ ಕ್ಲಾಸ್​ ತಗೊಂಡ ಸಾರ್ವಜನಿಕರು;

ಕೋಲಾರ: ಆತ‌ ವಿಧಾನಪರಿಷತ್​ ಸದಸ್ಯ. ಗೊತ್ತಿದ್ದೋ ಗೊತ್ತಲ್ಲದೆಯೊ ತಪ್ಪು ನಡೆದು ಹೋಗಿದೆ. ಆಗಿರುವ ತಪ್ಪುನ್ನು ಸಮಾಧಾನವಾಗಿ ಬಗ್ಗೆ ಹರಿಸಿಕೊಳ್ಳದೆ ದರ್ಪ ತೋರಿದ ಎಂಎಲ್​ಸಿಗೆ ಸಾರ್ವಜನಿಕರು ಪುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಾರ್ವಜನಿಕರ ಕ್ಲಾಸ್​ಗೆ ದಂಗಾದ ಎಂಎಲ್​ಸಿ ಕೆಲಕಾಲ ತಬ್ಬಿಬ್ಬರಾಗಿದ್ದಾರೆ.   ಹೌದು, ಕೋಲಾರದ ಲಕ್ಷ್ಮಿ ಸಾಗರ ಗೇಟ್ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕೋಲಾರಕ್ಕೆ ಆಗಮಿಸುತ್ತಿದ್ದ ಎಂ.ಎಲ್.ಸಿ ರವಿ ಕುಮಾರ್ ಇದ್ದ ಕಾರು ಹಿಂಬದಿಯಿಂದ ಬೈಕ್​ಗೆ ಗುದ್ದಿದ ಪರಿಣಾಮ ಬೈಕ್ ಸವಾರ ಗಾಯಗೊಂಡಿದ್ದಾನೆ. …

Read More »

ಬಾಕಿ ಕಾಮಗಾರಿ ತ್ವರಿತ ಪೂರ್ಣಗೊಳಿಸಿ: ಎಲ್‌.ಕೆ.ಅತೀಕ್‌

ಬೆಳಗಾವಿ: ಪ್ರಸಕ್ತ ಆರ್ಥಿಕ ವರ್ಷದ ಅಂತಿಮ ಘಟ್ಟದಲ್ಲಿರುವುದರಿಂದ ಪ್ರತಿಯೊಂದು ಇಲಾಖೆಗಳು ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ಅನುದಾನ ಮರಳಿ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್‌.ಕೆ.ಅತೀಕ್‌ ಹೇಳಿದರು.   ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 15ನೇ ಹಣಕಾಸು ಯೋಜನೆಯಡಿ …

Read More »

ಬೆಳಗಾವಿಯ ಪ್ರಭಾವಿ ರಾಜ ಕಾರಣಿಗಳ ಮೌನ ಮತ್ತು ತಟಸ್ಥ ನಿಲುವು ಈಗ ಅನು ಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿ ಬೆಳಗಾವಿಯ ಪ್ರಭಾವಿ ರಾಜ ಕಾರಣಿಗಳ ಮೌನ ಮತ್ತು ತಟಸ್ಥ ನಿಲುವು ಈಗ ಅನು ಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸದ್ಯದಲ್ಲೇ ಬೆಳಗಾವಿ ಗಡಿ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಹಾಗೆಯೇ ಮಹಾರಾಷ್ಟ್ರದ ಇಬ್ಬರು ಸಚಿವರು ಬೆಳಗಾವಿಗೆ ಬರಲು ತಯಾರಾಗಿದ್ದಾರೆ. ಈ ಅಂಶಗಳಿಂದ ವಿವಾದಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಬೆಳಗಾವಿಯ ಜತೆಗೆ ನಿಕಟ ಸಂಪರ್ಕ ಇರಿಸಿಕೊಂಡಿರುವ ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ ಮತ್ತು …

Read More »

ಜೆಡಿಎಸ್ ಅಧಿಕಾರಕ್ಕೆ ಬಂದರೆ ಕುಮಾರಸ್ವಾಮಿಯೇ ಸಿ.ಎಂ: ಇಬ್ರಾಹಿಂ

ಹುಬ್ಬಳ್ಳಿ: ಜೆಡಿಎಸ್ ಅಧಿಕಾರಕ್ಕೆ ಬಂದರೆ ಎಚ್‌.ಡಿ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ. ಪಂಚರತ್ನ ಯಾತ್ರೆ ಮೂಲಕ ರಾಜ್ಯದ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಅವರೇ ಮುಖ್ಯಮಂತ್ರಿ ಆಗಬೇಕು ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು.   ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ಗೆ ಸಂಪೂರ್ಣ ಬಹುಮತ ಬಂದರೆ ಮುಸ್ಲಿಂ ಸಮುದಾಯದ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಲಾಗುತ್ತದೆ ಎಂಬ ಕುಮಾರಸ್ವಾಮಿ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಚುನಾವಣಾ ಆಮಿಷ ಕೋರ್ಟ್‌ಗೆ ಮೊರೆ: ಚುನಾವಣಾ …

Read More »

ಅಂಗನವಾಡಿಗೆ ಅವಧಿ ಮೀರಿದ ಆಹಾರ ಪದಾರ್ಥ ಪೂರೈಕೆ?

ಬೆಂಗಳೂರು: ಮಕ್ಕಳು ಮತ್ತು ಗರ್ಭಿಣಿಯರಿಗೆ ಪೌಷ್ಠಿಕ ಆಹಾರದ ಹೆಸರಿನಲ್ಲಿ ಬಳಕಗೆ ಯೋಗ್ಯವಲ್ಲದ ಆಹಾರ ಪದಾರ್ಥಗಳನ್ನು ಪೂರೈಸಿದೆಯೇ? ಹೌದು ಎನ್ನುತ್ತಿವೆ ತುಮಕೂರು ಜಿಲ್ಲೆಯ ಅಂಗನವಾಡಿಗಳಿಗೆ ಪೂರೈಕೆಯಾಗಿರುವ ಆಹಾರದ ಪಟ್ಟಣಗಳ ಮೇಲೆ ನಮೂದಾಗಿರುವ ದಿನಾಂಕಗಳು.   ತಿಪಟೂರು, ತುಮಕೂರು ನಗರ ಮತ್ತು ಗ್ರಾಮಾಂತರ ಪ್ರದೇಶದ ಅಂಗನವಾಡಿಗಳಿಗೆ ಪೂರೈಕೆಯಾಗಿರುವ ತೊಗರಿ ಬೇಳೆ, ಹೆಸರು ಕಾಳು ಮತ್ತು ಮಿಶ್ರಿತ ಪೌಷ್ಠಿಕ ಆಹಾರದ ಪೊಟ್ಟಣಗಳ ಮೇಲೆ ಪ್ಯಾಕ್ ಮಾಡಿದ ದಿನಾಂಕವನ್ನು 2022ರ ನವೆಂಬರ್‌ ಎಂದು ಅಚ್ಚು ಹಾಕಲಾಗಿದೆ. ಉಪಯೋಗಿಸಬಹುದಾದ …

Read More »