ಬೆಂಗಳೂರು : ಟ್ಯಾಲೆಂಟ್ ಯಾರಪ್ಪನ ಮನೆಯ ಆಸ್ತಿ ಅಲ್ಲ ಎನ್ನುವ ಮಾತು ಎಷ್ಟು ನಿಜ ಅಲ್ವಾ. ನಿಮ್ಮ ಹತ್ರ ಪ್ರತಿಭೆ ಇತ್ತು ಅಂದ್ರೆ ಸಾಧನೆ ಮಾಡುವುದರಿಂದ ನಿಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸಾಧನೆ ಮಾಡಲು ಬಡತನ, ಶ್ರೀಮಂತಿಕೆ ಅಂತ ಭೇದ ಭಾವ ಇಲ್ಲ. ಆತ್ಮ ವಿಶ್ವಾಸ ಬಹಳ ಮುಖ್ಯ ಅಷ್ಟೆ. ಅದೇ ರೀತಿ ಉತ್ತರ ಕರ್ನಾಟಕ ಪ್ರತಿಭೆ ಶಿವಪುತ್ರಪ್ಪ, ಮಲ್ಲು ಜಮಖಂಡಿ ಕೂಡ. ತಮ್ಮದೆ ಶೈಲಿಯಲ್ಲಿ ವಿಡಿಯೋ ಮಾಡಿ ಇಂದು ಖ್ಯಾತಿ …
Read More »Yearly Archives: 2022
ಸಿದ್ದರಾಮಯ್ಯ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳು ಗರಂ!
ಕಲಬುರಗಿ : ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಕಾಂಗ್ರೆಸ್ ನಲ್ಲಿ ಬಣಬಡಿದಾಟ ಹೆಚ್ಚಾಗಿದ್ದು, ಇದೀಗ ಕಲಬುರಗಿ ಕಾಂಗ್ರೆಸ್ ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳು ಗರಂ ಆಗಿದ್ದಾರೆ. ಡಿಸೆಂಬರ್ 10 ರಂದು ಕಲಬುರಗಿಯಲ್ಲಿ ನಡೆದಿದ್ದ ಕಲ್ಯಾಣ ಕ್ರಾಂತಿ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಬೇಕಂತಲೇ ಸಿದ್ದರಾಮಯ್ಯ ಅವರು ಅಗೌರವ ತೋರಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳು ಅಸಮಾಧಾನ …
Read More »ಮಧ್ಯಾಹ್ನದ ‘ಬಿಸಿಯೂಟ’ ವೇಳಾಪಟ್ಟಿಯಲ್ಲಿ ಮಹತ್ವದ ಮಾರ್ಪಾಡು; ಇಲ್ಲಿದೆ ವಿವರ
ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟ ವೇಳಾಪಟ್ಟಿಯಲ್ಲಿ ಮಹತ್ವದ ಮಾರ್ಪಾಡು ಮಾಡಲಾಗಿದ್ದು, ಇದರ ವಿವರ ಇಲ್ಲಿದೆ. ಏಕಕಾಲದಲ್ಲಿ ಮಕ್ಕಳ ದಟ್ಟಣೆ ಆಗುವುದನ್ನು ತಡೆಗಟ್ಟುವ ಸಲುವಾಗಿ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸಮಯವನ್ನು ನಿಗದಿಪಡಿಸಲಾಗಿದೆ. ಈ ವೇಳಾಪಟ್ಟಿ ಅನ್ವಯ 1ರಿಂದ 5ನೇ ತರಗತಿ ವಿದ್ಯಾರ್ಥಿಗಳು ಮಧ್ಯಾಹ್ನ 1 ಗಂಟೆಯಿಂದ 1.45 ರ ವರೆಗೆ ಬಿಸಿಯೂಟ ಸ್ವೀಕರಿಸಲಿದ್ದರೆ, 6 ರಿಂದ 10 ನೇ …
Read More »ರಾಷ್ಟ್ರ ಧ್ವಜಗಳ ಬಾಕಿ ಪಾವತಿಗೆ ಡಿ.ಸಿ.ಗಳಿಗೆ ಪತ್ರ
ಬಳ್ಳಾರಿ: ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ನಡೆದ ಮೂರು ದಿನಗಳ ‘ಹರ್ ಘರ್ ತಿರಂಗಾ ಅಭಿಯಾನ’ಕ್ಕೆ ಕೇಂದ್ರ ಸರ್ಕಾರ ಪೂರೈಸಿದ್ದ ರಾಷ್ಟ್ರಧ್ವಜಗಳ ₹ 4,39,92,843 ಬಾಕಿಯನ್ನು ತಕ್ಷಣ ಪಾವತಿಸುವಂತೆ ತಾಕೀತು ಮಾಡಿ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಎರಡನೇ ಪತ್ರ ಬರೆದಿದೆ. ಆಗಸ್ಟ್ 13ರಿಂದ 15ರವರೆಗೆ ಮನೆಗಳು, ಕಚೇರಿಗಳು ಹಾಗೂ ವಾಹನಗಳ ಮೇಲೆ ರಾಷ್ಟ್ರ ಧ್ವಜ ಹಾರಾಡಿದ್ದವು. ‘ಏಳು ದಶಕಗಳಿಂದ ಬಳಸುತ್ತಿದ್ದ ಖಾದಿ ಬಟ್ಟೆಯ ತ್ರಿವರ್ಣ ಧ್ವಜಗಳಿಗೆ ಇತಿಶ್ರೀ ಹೇಳಿ, ತೆಳು …
Read More »ವ್ಯಾಪಾರಿ ಅಪಹರಿಸಿ ಹಣ ಲೂಟಿ: ಏಳು ಮಂದಿ ಬಂಧನ
ಬೆಳಗಾವಿ: ಹೋಟೆಲ್ ವ್ಯಾಪಾರಿಯೊಬ್ಬರನ್ನು ಅಪಹರಣ ಮಾಡಿ ₹ 1 ಲಕ್ಷ ವಸೂಲಿ ಮಾಡಿದ್ದ ಏಳು ಆರೋಪಿಗಳನ್ನು ಮುರಗೋಡ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಾಳೇಶ ಹೊಂಡಪ್ಪನವರ, ಶ್ರೀಶೈಲ ಹೊಂಡಪ್ಪನವರ, ಬಂದೇನವಾಜ್ ಅತ್ತಾರ್, ರಮೇಶ ಚಂದರಗಿ, ಮಲ್ಲಪ್ಪ ಕೋಮರ್, ಇಮ್ರಾನ್ ಮುಲ್ಲಾ, ನಾಗಪ್ಪ ರಂಗಣ್ಣನವರ ಬಂಧಿತರು. ಜಿಲ್ಲೆಯ ಯರಗಟ್ಟಿ ತಾಲ್ಲೂಕಿನ ಸೊಪ್ಪಾಡ್ಲ ಗ್ರಾಮದ ಸಾಬಣ್ಣ ಮೆಗಾಡಿ ಅವರನ್ನು ವಾರದ ಹಿಂದೆ ಸಾಬಣ್ಣ ಅವರನ್ನು ಯರಗಟ್ಟಿಯಲ್ಲಿ ಅಪಹರಿಸಿದ ಆರೋಪಿಗಳು, ಬೈಲಹೊಂಗಲ ತಾಲ್ಲೂಕಿನ ನೇಸರಗಿಗೆ …
Read More »ಖಾನಾಪುರ | ಕಾಡಾನೆ ಹಿಂಡು ದಾಳಿ: ಅಪಾರ ಬೆಳೆ ಹಾನಿ
ಖಾನಾಪುರ: ತಾಲ್ಲೂಕಿನ ಭೂರಣಕಿ ಮತ್ತು ಕರೀಕಟ್ಟಿ ಗ್ರಾಮಗಳ ಸುತ್ತಲಿನ ಕೃಷಿ ಜಮೀನುಗಳಲ್ಲಿ ಶನಿವಾರ ನಸುಕಿನಜಾವ 16 ಕಾಡಾನೆಗಳ ಹಿಂಡು ದಾಳಿ ಮಾಡಿದ್ದು, ಅಪಾರ ಪ್ರಮಾಣದ ಬೆಳೆ ತಿಂದು, ತುಳಿದು ನಾಶ ಮಾಡಿವೆ. ಇದರಿಂದ ಗ್ರಾಮಗಳಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ. ಶುಕ್ರವಾರ ರಾತ್ರಿಯೇ ದಾಂಡೇಲಿ ಅರಣ್ಯದಿಂದ ಬಂದ ನಾಲ್ಕು ಮರಿ ಹಾಗೂ 12 ದೊಡ್ಡ ಆನೆಗಳು ತಾವರಗಟ್ಟಿ, ಚುಂಚವಾಡ ಮಾರ್ಗವಾಗಿ ಭೂರಣಕಿ ಗ್ರಾಮದ ಕಡೆ ಬಂದವು. ಮಧ್ಯರಾತ್ರಿಯಿಂದ ಶನಿವಾರ ನಸುಕಿನಜಾವದವರೆಗೆ …
Read More »ಭಕ್ತರ ಅನೂಕೂಲಕ್ಕಾಗಿ ಯಾತ್ರಿ ನಿವಾಸ: ಶಶಿಕಲಾ ಜೊಲ್ಲೆ
ಯಕ್ಸಂಬಾ ಪಟ್ಟಣದ ಆರಾಧ್ಯದೇವ ಬೀರೇಶ್ವರ ದೇವರಿಗೆ ಗಡಿ ಭಾಗದಲ್ಲಿ ಅಪಾರ ಭಕ್ತರಿದ್ದು, ಭಕ್ತರ ಅನೂಕೂಲಕ್ಕಾಗಿ ಯಾತ್ರಿ ನಿವಾಸ ನಿರ್ಮಿಸಲಾಗುತ್ತಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಬೀರೇಶ್ವರ ಮಂದಿರದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಬೀರೇಶ್ವರ ಯಾತ್ರಿ ನಿವಾಸ ಕಟ್ಟಡ ಕಾಮಗಾರಿಗೆ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಮುಜರಾಯಿ ಇಲಾಖೆಯಿಂದ ಬೀರೇಶ್ವರ ಯಾತ್ರಿ ನಿವಾಸ ನಿರ್ಮಿಸಲು ೨೫ ಲಕ್ಷರೂ ಅನುದಾನ ಮಂಜೂರಾಗಿದೆ, …
Read More »ಶಿವಣಗಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಆಹಾರ, ಉಡುಗೆ – ತೋಡುಗೆಯಲ್ಲಿ ವಿನೂತನ ಕಲಿಕಾ ಶೈಲಿ….
ಬೆಳಗಾವಿ ಶನಿವಾರ ದಿನಾಂಕ 10/12/22 ರಂದು ನಗರದ ಪೋರ್ಟ್ ರಸ್ತೆಯಲ್ಲಿ ಇರುವ ವಿಟ್ಟಲಾಚಾರ್ಯ ಶಿವಣಗಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ವಿಶೇಷ ಕಲಿಕಾ ಕಾರ್ಯಕ್ರಮದ ಕೊನೆಯ ದಿನವಾಗಿತ್ತು… ಶಾಲೆಯ ಎಲ್ ಕೆಜಿ ಹಾಗೂ ಯುಕೆಜಿ ವರ್ಗದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಆರು ದಿನಗಳ ಕಾಲ ಆರು ಬಣ್ಣಗಳ ಉಡುಗೆ ತೊಟ್ಟು ಬರುವಂತೆ ಹೇಳಲಾಗಿತ್ತು, ಅದೇರೀತಿ, ಅದೇ ಬಣ್ಣದ ಆಹಾರ ತರುವುದನ್ನು ಹೇಳಲಾಗಿತ್ತು, ಆ ಪ್ರಕಾರ ಪೋಷಕರ ಸಹಾಯದಿಂದ ಮಕ್ಕಳೆಲ್ಲ ಅದೇ ಬಣ್ಣಗಳ …
Read More »ಡಿಸೆಂಬರ್ 19ರ ಒಳಗೆ ಮೀಸಲಾತಿ ಸಿಗದಿದ್ದರೆ, 22 ಕ್ಕೆ ಸುವರ್ಣ ಸೌಧಕ್ಕೆ ಮುತ್ತಿಗೆ
ಬೆಳಗಾವಿ: ಡಿ.19 ರ ಒಳಗಾಗಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮಿಸಲಾತಿ ನೀಡಬೇಕು. ಸರ್ಕಾರ ತಾನೇ ಕೊಟ್ಟ ಗಡುವಿನ ಪ್ರಕಾರ ಮೀಸಲಾತಿ ನೀಡಬೇಕು. ಇಲ್ಲದಿದ್ದರೆ ಡಿ.22 ನೇ ತಾರಿಕು ಸುವರ್ಣಸೌದದ ಎದುರು ಪಂಚಮಸಾಲಿ ವಿರಾಠ ಪಂಚಮ ಶಕ್ತಿ ಪ್ರದರ್ಶನ ಮಾಡಿ 25 ಲಕ್ಷ ಜನ ಸೇರಿಸುತ್ತೇವೆ ಎಂದು ಬಸವ ಶ್ರೀ ಜಯಮೃತ್ಯುಂಜಯ ಸ್ವಾಮಿ ಹೇಳಿದರು. ನಗರದ ಗಾಂಧಿ ಭವನದಲ್ಲಿ 2 ಮೀಸಲಾತಿಗಾಗಿ ನಡೆಸಿದ ಸಭೆ ಬಳಿಕ ಮಾದ್ಯಮಗೋಷ್ಠಿ ನಡೆಸಿ …
Read More »ಗ್ರ್ಯಾಂಡ್ ಫೈನಲ್‌ಗಿಂತ ಸೆಮಿಫೈನಲೇ ಹೆಚ್ಚು ರೋಚಕ
2023 ವಿಧಾನಸಭೆ ಚುನಾವಣೆಗಳ ವರ್ಷ. 2024ರ ಮಹಾ ಚುನಾವಣೆಗೆ ಇದು ಸೆಮಿಫೈನಲ್. ಇದೇ ಹೆಚ್ಚು ರೋಚಕವಾಗಿದೆ. ಬಿಜೆಪಿಯ ತ್ರಿಮೂರ್ತಿಗಳು ಹಾಗೂ ಕಾಂಗ್ರೆಸ್‌ನ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಸೆಮಿಫೈನಲ್ ಮಹಾ ಸವಾಲು. ಕೈಯಲ್ಲಿದ್ದ ಪಕ್ಷಿಗಳನ್ನು ಉಳಿಸಿಕೊಂಡೇ ಮತ್ತಷ್ಟು ಹಕ್ಕಿಗಳಿಗೆ ಪಂಜರ ಹೊಂದಿಸಬೇಕಾದ ಅನಿವಾರ್ಯತೆ. ಖರ್ಗೆಯವರಿಗಂತೂ ತಮ್ಮ ತವರಿನಲ್ಲೇ ವಿಜಯ ಧ್ವಜ ನೆಡುವಂಥ ಬೆಟ್ಟದಂಥ ಸವಾಲಿದೆ. ದಿಲ್ಲಿಯ ಕಡೆಗಿನ ಈ ಪಯಣದಲ್ಲಿ ಎಷ್ಟು ದೂರದವರೆಗೆ ಗುಜರಾತ್ ಮತ್ತು ಹಿಮಾಚಲ …
Read More »