Breaking News

Yearly Archives: 2022

ಮೋದಿ ನಿವೃತ್ತಿ ವದಂತಿ ನಡುವೆ ಮುಂದಿನ ಚುನಾವಣೆ ರಹಸ್ಯ ಬಿಚ್ಚಿಟ್ಟಅಮಿತ್ ಶಾ

ನವದೆಹಲಿ: 2024ರ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ನರೇಂದ್ರ ಮೋದಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಣೆ ಮಾಡಿದ್ದಾರೆ. ಭಾನುವಾರ ಪಾಟ್ನಾದಲ್ಲಿ ಬಿಜೆಪಿಯ ವಿವಿಧ ಮೋರ್ಚಾಗಳ ಎರಡು ದಿನಗಳ ಜಂಟಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2024 ರಲ್ಲಿ ಬಿಜೆಪಿ-ಜೆಡಿಯು ಒಟ್ಟಿಗೆ ಚುನಾವಣೆಯಲ್ಲಿ ಸ್ಪರ್ಧಿಸಲಿದೆ, ನರೇಂದ್ರ ಮೋದಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗುತ್ತಾರೆ ಎಂದರು.   2024 ರ ಲೋಕಸಭೆ …

Read More »

ದೇವೇಗೌಡರ ಬಳಿ 4 ಪಂಚೆ – ಜುಬ್ಬಾ ಬಿಟ್ಟರೆ ಇರಲು ಸ್ವಂತ ಮನೆಯೂ ಇಲ್ಲ: ಸಿ.ಎಂ. ಇಬ್ರಾಹಿಂ

ಮಾಜಿ ಪ್ರಧಾನಿ ದೇವೇಗೌಡರು ಈ ನಾಡಿನ ರೈತರ ಕುರಿತು ಅಪಾರ ಕಾಳಜಿ ಹೊಂದಿದ್ದಾರೆ. ಪ್ರತಿ ದಿನ 4 ಗಂಟೆಗಳ ಕಾಲ ಕಾಲ ಭೈರವನಿಗೆ ಪೂಜೆ ಸಲ್ಲಿಸುವ ಅವರು ರಾಜ್ಯದ ಪ್ರಗತಿಯ ಬಗ್ಗೆಯೇ ಯಾವಾಗಲೂ ಚಿಂತನೆ ನಡೆಸುತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ. ಪ್ರತಿ ದಿನ 4 ಗಂಟೆಗಳ ಕಾಲ ಕಾಲ ಭೈರವನಿಗೆ ಪೂಜೆ ಸಲ್ಲಿಸುವ ಅವರು ರಾಜ್ಯದ ಪ್ರಗತಿಯ ಬಗ್ಗೆಯೇ ಯಾವಾಗಲೂ ಚಿಂತನೆ ನಡೆಸುತ್ತಾರೆ ಎಂದು ಜೆಡಿಎಸ್ …

Read More »

ಸರ್ಕಾರದ ಮೇಲೆ ಒತ್ತಡ ತರಲು ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆ- ಲಕ್ಷ್ಮಣ್ ಸವದಿ

ಅಥಣಿ(ಬೆಳಗಾವಿ) : ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ವಿಶೇಷ ಕಾನೂನು ತರುವ ಅವಶ್ಯಕತೆಯಿದೆ. ಕೆಲವು ದುಷ್ಕ ಶಕ್ತಿಗಳನ್ನು ಮಟ್ಟಹಾಕಲು ಈಗಿರುವ ಕಾನೂನು ಸಾಲದು ಮುಂಬರುವ ಅಧಿವೇಶನದಲ್ಲಿ ವಿಶೇಷ ಕಾನೂನು ರಚನೆ ಮಾಡಿ ತಪ್ಪಿತಸ್ಥರಿಗೆ ತಕ್ಷಣ ಶಿಕ್ಷೆ ನೀಡುವಂತ ಕಾನೂನು ರಚನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚರ್ಚೆ ಮಾಡುತ್ತಿದ್ದಾರೆಂದು ವಿಧಾನಪರಿಷತ್ ಸದಸ್ಯ ಲಕ್ಷ್ಮಣ್ ಸವದಿ ಹೇಳಿದರು. ಅಥಣಿ ಪಟ್ಟಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ ಕದಡುವ, ದೇಶ ವಿರೋಧಿ ಚಟುವಟಿಕೆ …

Read More »

ಮಹಾರಾಷ್ಟ್ರ ಮತ್ತು ಕರ್ನಾಟಕದಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ್

ಚಿಕ್ಕೋಡಿ: ಮಹಾರಾಷ್ಟ್ರ ಮತ್ತು ಕರ್ನಾಟಕದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ ಅವರಿಂದ 24 ಲಕ್ಷ ರೂ. ಮೌಲ್ಯದ 41ಬೈಕ್​ಗಳನ್ನು ನಿಪ್ಪಾಣಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ನಾಲ್ವರು ಆರೋಪಿಗಳು ನಿಪ್ಪಾಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಕಳ್ಳತನ ವೃತ್ತಿಗೆ ಇಳಿದಿದ್ದರು. ಬೈಕ್ ಕಳ್ಳತನವಾಗಿರುವ ಬಗ್ಗೆ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ‌ಕೇಸ್​ ದಾಖಲಿಸಿಕೊಂಡ ಪೊಲೀಸರು, ಸಿಪಿಐ ಸಂಗಮೇಶ ಶಿವಯೋಗಿ …

Read More »

ಉದಯವಾಣಿ ಸಂಸ್ಥಾಪಕ ಮೋಹನ್​ ದಾಸ್ ಪೈ ಅವರು ನಿಧನ

ಬೆಂಗಳೂರು/ಉಡುಪಿ: ಮಣಿಪಾಲದ ಶಿಲ್ಪಿ ಡಾ. ಟಿ ಎಮ್ ಎ ಪೈ ಅವರ ಹಿರಿಯ ಪುತ್ರ ಹಾಗೂ ಉದಯವಾಣಿ ಸಂಸ್ಥಾಪಕ ಟಿ ಮೋಹನ್ ದಾಸ್ ಎಂ ಪೈ (89) ಮಣಿಪಾಲದ ಕೆ ಎಂ ಸಿ ಆಸ್ಪತ್ರೆಯಲ್ಲಿ ಭಾನುವಾರ ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದಾಗಿ ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಇವರು ಡಾ ಟಿ ಎಂ ಎ ಪೈ ಫೌಂಡೇಶನ್, ಎಂಜಿಎಂ ಕಾಲೇಜ್ ಟ್ರಸ್ಟ್​ನ ಅಧ್ಯಕ್ಷರಾಗಿದ್ದರು. ಮೃತರು ತಮ್ಮಂದಿರಾದ ಡಾಟಿ.ರಾಮದಾಸ್ …

Read More »

ಸಿದ್ದರಾಮಯ್ಯ ಜನ್ಮ ದಿನ: 325 ಬಸ್‌ ಬುಕಿಂಗ್‌, ಸಾರಿಗೆ ಸಂಸ್ಥೆಗೆ ₹39 ಲಕ್ಷ ಆದಾಯ

ಬಾಗಲಕೋಟೆ: ದಾವಣಗೆರೆಯಲ್ಲಿ ಆಗಸ್ಟ್‌ 3ರಂದು ನಡೆಯಲಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನ ಕಾರ್ಯಕ್ರಮಕ್ಕೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 325 ಹೆಚ್ಚು ಬಸ್‌ಗಳನ್ನು ಬುಕಿಂಗ್‌ ಮಾಡಲಾಗಿದೆ. ಇನ್ನು ನೂರಾರು ಬಸ್‌ಗಳು ಬುಕಿಂಗ್‌ ಆಗುವ ನಿರೀಕ್ಷೆ ಇದೆ. ಬಾಗಲಕೋಟೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ 50 ಬಸ್‌ಗಳು ಬುಕಿಂಗ್‌ ಆಗಿವೆ. ಹಾವೇರಿಯಲ್ಲಿ 90, ಗದುಗಿನಲ್ಲಿ 85 ಹಾಗೂ ಧಾರವಾಡ ಜಿಲ್ಲೆಯಲ್ಲಿ 90 ಬಸ್‌ಗಳು ಬುಕಿಂಗ್‌ ಆಗಿವೆ. ಇದರಿಂದ …

Read More »

ಸುರತ್ಕಲ್ ಫಾಝಿಲ್ ಕೊಲೆ ಪ್ರಕರಣ: ಕೃತ್ಯಕ್ಕೆ ಬಳಸಿದ ಕಾರು ಮಾಲಕ ಪೊಲೀಸ್ ವಶಕ್ಕೆ

ಮಂಗಳೂರು: ಕರಾವಳಿಯಲ್ಲಿ ಸಂಚಲನ ಮೂಡಿಸಿದ್ದ ಸುರತ್ಕಲ್ ನ ಫಾಝಿಲ್ ಕೊಲೆ ಪ್ರಕರಣದಲ್ಲಿ ಮತ್ತೋರ್ವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಗುರುವಾರ ರಾತ್ರಿ ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿ ಮಂಗಳಪೇಟೆ ನಿವಾಸಿ 23 ವರ್ಷದ ಫಾಝಿಲ್ ನ ಮೇಲೆ ಮಾರಕಾಸ್ತ್ರಗಳಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು.   ಇದೀಗ ಘಟನೆಗೆ ಸಂಬಂಧಿಸಿದಂತೆ ಕೊಲೆ ಆರೋಪಿಗಳಿಗೆ ಸಹಾಯ ಮಾಡಿದ್ದ ಆರೋಪದಡಿ ಕಾರು ಮಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 16 …

Read More »

ಮತದಾರರ ಪಟ್ಟಿಗೆ ಆಧಾರ ಜೋಡಣೆ: ರಾಜಕೀಯ ಮುಖಂಡರ ಸಭೆ

ರಬಕವಿ-ಬನಹಟ್ಟಿ: ಮತದಾರರ ಪಟ್ಟಿಗೆ ಆಧಾರ ಜೋಡಣೆಯ ಕಾರ್ಯಕ್ರಮ ಅಗಸ್ಟ್ 1 ರಿಂದ ನಡೆಯಲಿದ್ದು, ಈ ನಿಟ್ಟಿನಲ್ಲಿ ಮತದಾರರು ತಾವೇ ಖುದ್ದಾಗಿ ಮೊಬೈಲ್ ಆಯಪ್ ಮೂಲಕ ಮಾಡಿಕೊಳ್ಳಬಹುದು ಇಲ್ಲವೆ ತಮ್ಮ ಮನೆಗಳಿಗೆ ಬರುವ ಬಿಎಲ್‌ಓಗಳಿಗೆ ಸೂಕ್ತ ಮಾಹಿತಿ ನೀಡುವುದರ ಮೂಲಕ ಮತದಾರರ ಪಟ್ಟಿಗೆ ಆಧಾರ ಜೋಡಣಿಗೆ ಸಹಕರಿಸಬೇಕು ಎಂದು ರಬಕವಿ ಬನಹಟ್ಟಿ ತಹಶೀಲ್ದಾರ್ ಎಸ್.ಬಿ.ಇಂಗಳೆ ತಿಳಿಸಿದರು.   ಅವರು ಶುಕ್ರವಾರ ಸ್ಥಳೀಯ ತಹಶೀಲ್ದಾರ್ ಕಾರ್ಯಾಲಯದಲ್ಲಿ ನಡೆದ ರಾಜಕೀಯ ಮುಖಂಡರ ಸಭೆಯಲ್ಲಿ ಮಾತನಾಡಿದರು. ಕ್ಷೇತ್ರದಲ್ಲಿ …

Read More »

ನಿಯೋಜನೆಯಲ್ಲಿ ಬಿಮ್ಸ್‌ ವಿವಾದಕ್ಕೆ ಗುರಿ

ಬೆಳಗಾವಿ: ಸುಧಾರಣೆಯ ವಿಷಯದಲ್ಲಿ ದೇಶದಲ್ಲಿ 12ನೇ ಸ್ಥಾನಗಳಿಸಿ ಹೆಮ್ಮೆಯ ಸಾಧನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್‌) ಈಗ ವೈದ್ಯರ ನಿಯೋಜನೆ ವಿಷಯದಲ್ಲಿ ವಿವಾದಕ್ಕೆ ಗುರಿಯಾಗಿದೆ. ತಾಲೂಕು ಆಸ್ಪತ್ರೆಗಳಲ್ಲಿರುವ ತಜ್ಞ ವೈದ್ಯರನ್ನು ಜಿಲ್ಲಾಸ್ಪತ್ರೆಗೆ ನಿಯೋಜನೆ ಮಾಡುತ್ತಿರುವುದು ಹೊಸ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದರೆ, ಆರೋಗ್ಯ ಇಲಾಖೆಯ ಈ ಕ್ರಮ ಸ್ಥಳೀಯ ಶಾಸಕರ ಕಂಗೆಣ್ಣಿಗೆ ಗುರಿಯಾಗಿದೆ. ಇದಕ್ಕೆ ಈಗ ಖಾನಾಪುರ ತಾಲೂಕು ಆಸ್ಪತ್ರೆ ಹೊಸ ಸೇರ್ಪಡೆಯಾಗಿದೆ. …

Read More »

ಕಾಂಗ್ರೆಸ್ ಇದ್ದಾಗ ಇಬ್ಬರು ಗನ್ ಮ್ಯಾನ್ ಇದ್ರು, ಆದ್ರೆ ಬಿಜೆಪಿ ಬಂದ್ಮೇಲೆ ಒಬ್ಬನೇ : ಮುತಾಲಿಕ್

ಹುಬ್ಬಳ್ಳಿ: ರಾಜ್ಯದಲ್ಲಿ ಹಿಂದೂಗಳ ರಕ್ಷಣೆಯಾಗುತ್ತಿಲ್ಲ. ರಕ್ಷಣೆ ಮಾಡಲು ಬಿಜೆಪಿಯಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್‍ನಿಂದಲೂ ಸಾಧ್ಯವಿಲ್ಲ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದರು. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ಸರ್ಕಾರ ಇದ್ದಾಗ ನನಗೆ ಇಬ್ಬರು ಗನ್ ಮ್ಯಾನ್‍ಗಳನ್ನು ಕೊಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಒಬ್ಬ ಗನ್ ಮ್ಯಾನ್ ಅನ್ನು ಕಿತ್ತುಕೊಂಡಿದ್ದಾರೆ. ಇದಕ್ಕೆ ನನ್ನ ಧಿಕ್ಕಾರವಿದೆ. ಜಿಹಾದಿಗಳಿಗೆ ಉತ್ತರ ಕೊಡುವಂತಹ ತಾಕತ್ತು ಕೇವಲ ಹಿಂದೂ ಸಂಘಟನೆಗಳಿಗಿದೆ ಎಂದು …

Read More »