Breaking News

Yearly Archives: 2022

ಬಹಮನಿಯರ ಕೋಟೆ ಮೇಲೆ ಹಾರಾಡಲಿದೆ ರಾಷ್ಟ್ರಧ್ವಜ

ಬೀದರ್‌: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ನಗರದಲ್ಲಿರುವ ಬಹಮನಿ ಸುಲ್ತಾನರ ಕಾಲದ ಕೋಟೆ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದು, ತ್ರಿವರ್ಣ ಬೆಳಕಿನಲ್ಲಿ ಮೈದೆಳೆದ ಕೋಟೆ ವೀಕ್ಷಣೆಗೆ ಅನುಕೂಲವಾಗುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸ್ಮಾರಕಗಳ ವೀಕ್ಷಣೆ ಸಮಯವನ್ನು ರಾತ್ರಿ 9 ಗಂಟೆಯವರೆಗೂ ವಿಸ್ತರಿಸಿದೆ. ಅಷ್ಟೇ ಅಲ್ಲ; ಐತಿಹಾಸಿಕ ಕೋಟೆ ಆವರಣದಲ್ಲಿ ರಾಷ್ಟ್ರ್ರ ಧ್ವಜ ಹಾರಿಸಲು ಸಿದ್ಧತೆ ನಡೆಸಿದೆ. ಕೋಟೆಯೊಳಗಿನ ಗುಂಬಜ್‌ ದರ್ವಾಜಾ, ತರ್ಕಿಶ್‌ ಮಹಲ್‌ ಹಾಗೂ ಸೋಲಾ ಕಂಬಾ ಮಸೀದಿ …

Read More »

ಹೊಂಬಾಳೆ ಫಿಲ್ಸ್ಮ್​ ಮೂಲಕ ರಮ್ಯಾ ಕಮ್​ ಬ್ಯಾಕ್

ರಮ್ಯಾ ದಿವ್ಯ ಸ್ಪಂದನಾ (Ramya Divya Spandana).. ಈ ಹೆಸರು ಕೇಳಿದ ತಕ್ಷಣ ಕನ್ನಡ (Kannada) ಸಿನಿ ರಸಿಕರ ಮನಸ್ಸು ಸಂತೋಷದಿಂದ ಕುಣಿಯುತ್ತದೆ. ಮನಮೋಹಕ ಅಭಿನಯದಿಂದ (Acting) ಕನ್ನಡ ಕಲಾ ರಸಿಕರ ಮನಗೆದ್ದು ಮೋಹಕ ತಾರೆ ಪಟ್ಟವನ್ನು ತಮ್ಮದಾಗಿಸಿಕೊಂಡ ನಟಿ ಇವರು. ಆದರೆ ಕಳೆದ ಕೆಲ ವರ್ಷಗಳಿಂದ ರಮ್ಯಾ ಚಿತ್ರರಂಗದಿಂದ ಕಾಣೆಯಾಗಿದ್ದರು. ಇದೀಗ ಅವರು ಮತ್ತೆ ಸಿನಿಮಾಗೆ ಬರಲು ಸಜ್ಜಾಗಿದ್ದಾರೆ. ಈ ವಿಚಾರ ಹಳೆಯದು, ಹೊಸ ವಿಚಾರ ಎಂದರೆ ರಮ್ಯಾ …

Read More »

ಸಾಹುಕಾರ ರಮೇಶ್‌ ಜಾರಕಿಹೊಳಿ ರಾಜಕೀಯ ನಡೆ ನಿಗೂಢ:

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಸಚಿವ ಸಂಪುಟ ವಿಸ್ತರಣೆಯ ನಿರೀಕ್ಷೆ ಇನ್ನೂ ಜೀವಂತವಾಗಿದ್ದು, ಪಕ್ಷದ ತೀರ್ಮಾವನ್ನು ನೋಡಿಕೊಂಡು ಕೆಲವು ನಾಯಕರು ತಮ್ಮ ರಾಜಕೀಯ ಭವಿಷ್ಯದ ನಿರ್ಧರಿಸುವ ಸಾಧ್ಯತೆ ಇದೆ. ರಾಜ್ಯದಲ್ಲಿ ಮೈತ್ರಿ ಸರಕಾರ ಪತನವಾಗಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೋಕಾಕ್‌ ಶಾಸಕ ಹಾಗೂ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರ ರಾಜಕೀಯ ನಡೆ ನಿಗೂಢವಾಗಿದ್ದು, ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕಾಗಿ …

Read More »

ಅರಣ್ಯ ಅಧಿಕಾರಿಗಳು ಅಳವಡಿಸಿದ್ದ ಕ್ಯಾಮೆರಾ ಕಣ್ಣಿಗೆ ಬಿದ್ದ ಚಿರತೆ

ಬೆಳಗಾವಿ: ನಗರದಲ್ಲಿ ಚಿರತೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಇಂದು ಶಾಲೆಗಳಿಗೆ ರಜೆ ನೀಡಲಾಗಿದೆ. ಗಾಲ್ಫ್ ಮೈದಾನದ ಒಂದು ಕಿಲೋಮೀಟರ್ ವ್ಯಾಪ್ತಿಯ ಶಾಲೆಗಳಿಗೆ ಇಂದು ರಜೆ ನೀಡಲಾಗಿದೆ.   ಬೆಳಗಾವಿಯ 11 ಸರ್ಕಾರಿ, ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಡಿಡಿಪಿಐ ಮೌಖಿಕ ಸೂಚನೆಯಂತೆ ಬೆಳಗಾಗಿವೆ ನಗರದ ಬಿಇಒ ಆದೇಶ ಹೊರಡಿಸಿದ್ದಾರೆ. ಜಾಧವ ನಗರ, ಹನುಮಾನ್ ನಗರ, ಕುವೆಂಪು ನಗರ, ಸಹ್ಯಾದ್ರಿನಗರ, ಕ್ಲಬ್ ರಸ್ತೆ, ಕ್ಯಾಂಪ್ ಪ್ರದೇಶದಲ್ಲಿರುವ ಶಾಲೆಗಳಿಗೆ ರಜೆ ನೀಡಲಾಗಿದೆ. ಆಗಸ್ಟ್ 5 …

Read More »

ಭಾರಿ ಮಳೆ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಸೋಮವಾರ ಶಾಲೆಗಳಿಗೆ ರಜೆ: ಜಿಲ್ಲಾಧಿಕಾರಿ

ಬೆಳಗಾವಿ – ಭಾರಿ ಮಳೆ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಸೋಮವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ ಹಾಗೂ ಖಾನಾಪುರ ತಾಲೂಕಿನ ಶಾಲೆ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಡಿಡಿಪಿಐ ಬಸವರಾಜ ನಾಲತವಾಡ ಪ್ರಗತಿವಾಹಿನಿಗೆ ಮಾಹಿತಿ ನೀಡಿದ್ದಾರೆ. ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಮತ್ತು ಗ್ರಾಮೀಣ ತಾಲೂಕಿನ 22 ಶಾಲೆಗಳಿಗೆ ಈಗಾಗಲೆ ರಜೆ ಘೋಷಿಸಲಾಗಿತ್ತು. ಈಗ ಎಲ್ಲ ಶಾಲೆಗಳಿಗೂ ರಜೆ ಘೋಷಿಸಲಾಗಿದೆ. ಕಳೆದ ರಾತ್ರಿಯಿಂದ …

Read More »

ಮತ್ತೆ ಸಿ ಎಂ ಬದಲಾವಣೆ ಚರ್ಚೆ ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಹೇಳಿದ್ದೇನು?

ಹುಬ್ಬಳ್ಳಿ: ಸದ್ಯ ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ‌ ಇಲ್ಲ. ನನಗೆ ಪಕ್ಷದ ವರಿಷ್ಠರು ಕರೆ ಮಾಡಿ ಸಿಎಂ ಹುದ್ದೆ ಬಗ್ಗೆ ಮಾತನಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಎರಡು ತಿಂಗಳಿಂದ ಈ ರೀತಿಯಾಗಿ ಗಾಳಿ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ ಎಂದರು. ಸಿದ್ದರಾಮೋತ್ಸವದಿಂದ ಬಿಜೆಪಿಗೆ ಏನು ಆಗಿಲ್ಲ. ಆದರೆ, ಆ ಕಾರ್ಯಕ್ರಮದಿಂದ ಕಾಂಗ್ರೆಸ್​​ಗೆ ಸೈಡ್ …

Read More »

ಎಸ್‌ಪಿ ನಾಯಕರ ಕಾರ್​ಗೆ ಡಿಕ್ಕಿ ಹೊಡೆದು 500 ಮೀಟರ್‌ಗಳವರೆಗೆ ಎಳೆದೊಯ್ದ ಟ್ರಕ್!

ಉತ್ತರಪ್ರದೇಶದಲ್ಲಿ ಘೋರ ದುರಂತವೊಂದು ಬೆಳಕಿಗೆ ಬಂದಿದೆ. ಮೈನಪುರಿಯಲ್ಲಿ ಎಸ್‌ಪಿ ನಾಯಕರ ಕಾರ್​ಗೆ ಟ್ರಕ್​ ಡಿಕ್ಕಿ ಹೊಡೆದಿದ್ದಲ್ಲದೇ, ಆ ಕಾರನ್ನು 500 ಮೀಟರ್‌ಗಳವರೆಗೆ ಎಳೆದೊಯ್ದಿರುವುದು ವಿಡಿಯೋವೊಂದರಲ್ಲಿ ಸೆರೆಯಾಗಿದೆ. ಎಸ್‌ಪಿ ಜಿಲ್ಲಾಧ್ಯಕ್ಷ ದೇವೇಂದ್ರ ಸಿಂಗ್ ಯಾದವ್ ಕಾರ್​ಗೆ ಡಿಕ್ಕಿ ಹೊಡೆದ ಲಾರಿ ಸುಮಾರು 500 ಮೀಟರ್‌ಗಳವರೆಗೆ ಎಳೆದೊಯ್ದಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಘಟನೆಗೆ ಸಂಬಂಧಿಸಿದಂತೆ ಇಟಾವಾ ಮೂಲದ ಟ್ರಕ್ ಚಾಲಕನನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಮೈನ್​ಪುರಿ ಎಸ್​ಪಿ ಕಮಲೇಶ್ ದೀಕ್ಷಿತ್ ಹೇಳಿಕೆ ನೀಡಿದ್ದಾರೆ.

Read More »

ದರ್ಶನ್ ಕ್ಷಮೆ ಕೇಳಲೇಬೇಕು ಪುನೀತ್ ಫ್ಯಾನ್ಸ್ ಆಕ್ರೋಶ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್‌ವುಡ್‌ನಲ್ಲಿ ‘ಕ್ರಾಂತಿ’ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ದರ್ಶನ್ ಸಂದರ್ಶನವೊಂದರಲ್ಲಿ ಆಡಿದ ಮಾತು ವಿವಾದಕ್ಕೆ ತಿರುಗಿದೆ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ದರ್ಶನ್ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ದರ್ಶನ್ ಕೊಟ್ಟ ಒಂದೇ ಒಂದು ಹೇಳಿಕೆ ಈಗ ಪುನೀತ್ ಅಭಿಮಾನಿಗಳ ನಿದ್ದೆಕೆಡಿಸಿದೆ. ಅದರಲ್ಲೂ ಪುನೀತ್ ರಾಜ್‌ಕುಮಾರ್ ಸಾವಿನ ಬಗ್ಗೆ ಮಾತಾಡಿದ್ದು, ಅಪ್ಪು ಫ್ಯಾನ್ಸ್ ಆಕ್ರೋಶಕ್ಕೆ ಕಾರಣ. ಇನ್ನೇನು …

Read More »

ಬಬಲೇಶ್ವರ ಪಾಕಿಸ್ತಾನದಲ್ಲಿ ಇದೆಯಾ: ಸವದಿ ಪ್ರಶ್ನೆ

ವಿಜಯಪುರ: ಬಬಲೇಶ್ವರ ವಿಧಾನಸಭಾ ಕ್ಷೇತ್ರವೇನು ಪಾಕಿಸ್ತಾನದಲ್ಲಿ ಇದೆಯಾ? ಅದು ಕರ್ನಾಟಕ ರಾಜ್ಯದಲ್ಲಿ ಇದೆ ತಾನೇ? ಹೀಗೆಂದು ಪ್ರಶ್ನಿಸಿದವರು ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ. ನಾಗಠಾಣದಲ್ಲಿ ಭಾನುವಾರ ನಡೆದ ನೂತನ ಬಸ್‌ ನಿಲ್ದಾಣ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಬಲೇಶ್ವರ ಕ್ಷೇತ್ರದಿಂದ ನೀವು ಸ್ಪರ್ಧಿಸುತ್ತೀರಿ ಎಂಬ ಮಾತು ಕೇಳಿಬರುತ್ತಿದೆ ನಿಜಾನಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದರು.   ‘ನಾನು ಸದ್ಯ ವಿಧಾನ …

Read More »

ನಾನು ಹಾಕಿದ್ದು ಬಟ್ಟೆ ಶೂ, ಮಳೆ ಆಗಿದ್ದರಿಂದ ಶೂ ಬಿಚ್ಚಲಿಲ್ಲ : ಕತ್ತಿ ಪ್ರತಿಕ್ರಿಯೆ

ಹನೂರು: ಇಂದು ಮೈಸೂರಿನ ವೀರನಹೊಸಹಳ್ಳಿಯಲ್ಲಿ ಶೂ ಹಾಕಿಕೊಂಡು ಗಜಪಡೆಗೆ ಪೂಜೆ ಸಲ್ಲಿಸಿ ಸಾಕಷ್ಟು ಟೀಕೆಗೆ ಗುರಿಯಾದ ಕುರಿತು ಅರಣ್ಯ ಸಚಿವ ಉಮೇಶ್ ಕತ್ತಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಹನೂರು ತಾಲೂಕಿನ ಮೇಕೆದಾಟು ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಸಚಿವ ಉಮೇಶ್ ಕತ್ತಿ ತಾನು ಹಾಕಿರುವುದು ಬಟ್ಟೆ ಶೂ ಆಗಿದ್ದು, ಮಳೆ ಆಗಿದ್ದರಿಂದ ಶೂ ಬಿಚ್ಚಲಿಲ್ಲ, ಪೂಜೆ ಮಾಡುವ ಮುನ್ನ ಬಿಚ್ಚಿದ್ದೆ ಬಳಿಕ‌ ಆನೆಗಳಿಗೆ ಸ್ವಾಗತ ಕೋರುವಾಗ ಹಾಕಿಕೊಂಡಿದ್ದೆ, …

Read More »