Breaking News

Yearly Archives: 2022

ಸಹೋದರತೆಯ ಬಂಧ ಇನ್ನಷ್ಟು ಗಟ್ಟಿಯಾಗಲಿ: ಸಂತೋಷ್ ಜಾರಕಿಹೊಳಿ

ಬದುಕಿನುದ್ದಕ್ಕೂ ಭರವಸೆಯಾಗಿ ನಿಲ್ಲುವ, ಅಪ್ಪನಂತೆ ಕಾಳಜಿ ಇಟ್ಟುಕೊಂಡಿರುವ, ಅಮ್ಮನಂತೆ ಪ್ರೀತಿ ತೋರುವ, ಗೆಳೆಯನಂತೆ ಕ್ಷಮಿಸುವ ಔದಾರ್ಯದ ಜೀವ ಹೀಗೆಂದಾಗ ನೆನಪಾಗುವ ಹೆಸರೇ ಅಣ್ಣ. ಅಣ್ಣ – ತಂಗಿ ನಡುವೆ ಇರುವ ಬಾಂಧವ್ಯವೇ ಅಂತಹದ್ದು. ವರ್ಷಪೂರ್ತಿ ಜಗಳವಾಡುತ್ತಲೇ ಕಾಲ ಕಳೆಯುವ ಈ ಸಂಬಂಧ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಅನುಬಂಧದ ಸುತ್ತ ನಿಂತಿದೆ. ಸಹೋದರ ಸಹೋದರಿಯರ ನಡುವಿನ ಭ್ರಾತೃತ್ವವನ್ನು ಗಟ್ಟಿಗೊಳಿಸುವ ನೆಲೆಯಲ್ಲಿಯೂ ರಕ್ಷಾ ಬಂಧನ ಮುಖ್ಯವಾಗುತ್ತದೆ. ಶ್ರಾವಣ ಮಾಸವೆಂಬುದು ಸಂಬಂಧ ಮತ್ತು ಸಂಸ್ಕಾರಗಳಿಗೆ ಮಹತ್ವವನ್ನು …

Read More »

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ರಾಸ್‌ ಬೆಹಾರಿ ಬೋಸ್‌ (1886-1945) 1912ರಲ್ಲಿ ದಿಲ್ಲಿಯಲ್ಲಿ ವೈಸ್‌ರಾಯ್‌ ಲಾರ್ಡ್‌ ಹಾರ್ಡಿಂಗೆ ಅವರನ್ನು ಹತ್ಯೆ ಮಾಡಲು ಯತ್ನಿಸಲಾಯಿತು. ಈ ಪ್ರಯತ್ನದಲ್ಲಿ ಮುಖ್ಯ ಪಾತ್ರ ವಹಿಸಿದ್ದ ರಾಸ್‌ ಬೆಹಾರಿ ಬೋಸ್‌ ಅವರು ತಮ್ಮ ಸರಕಾರಿ ಹುದ್ದೆಯನ್ನು ಬಳಸಿಕೊಂಡು ಬಂಧನದಿಂದ ತಪ್ಪಿಸಿಕೊಂಡರು. ಅನಂತರ ಜಪಾನ್‌ಗೆ ಪರಾರಿಯಾದ ಅವರು ಅಲ್ಲೇ ನೆಲೆಸಿದರು. “ಇಂಡಿಯನ್‌ ನ್ಯಾಶನಲ್‌ ಆರ್ಮಿ’ ನಿರ್ಮಾಣವಾದಾಗ ಅವರು ಅನೇಕ ಸಂಪನ್ಮೂಲ ಗಳನ್ನು ನೀಡುವ ಮೂಲಕ ನೆರವಿಗೆ ಬಂದರು. ಪುಲಿನ್‌ ಬೆಹಾರಿ ದಾಸ್‌(1877-1949) ಪುಲಿನ್‌ …

Read More »

ಆತಂಕ ಬೇಡ; ನಿಮ್ಮ ಜತೆಗಿದ್ದೇವೆ; ಸಿಎಂ ಬೊಮ್ಮಾಯಿಗೆ ವರಿಷ್ಠರ ಅಭಯ

ಬೆಂಗಳೂರು: ನಾಯಕತ್ವ ಬದಲಾವಣೆ ಕುರಿತಾದ ಯಾವುದೇ ವದಂತಿಗೆ ತಲೆಕೆಡಿಸಿಕೊಳ್ಳದೆ ನಿಮ್ಮ ಕೆಲಸ ಮುಂದುವರಿಸಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ವರಿಷ್ಠರು ಅಭಯ ನೀಡಿದ್ದಾರೆಂದು ಮೂಲಗಳು ಹೇಳಿವೆ. ಜತೆಗೆ ಇಂಥ ಸುಳ್ಳುಸುದ್ದಿ ಹಬ್ಬಿಸುವವರ ಪತ್ತೆಗೆ ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸು ವಂತೆಯೂ ಸೂಚಿಸಿದ್ದಾರೆ ಎನ್ನಲಾಗಿದೆ.   ಬುಧವಾರವೂ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಸಹಿತ ಪ್ರಮುಖ ನಾಯಕರು ಮತ್ತು ಸಚಿವರು ಸಿಎಂ ಬೊಮ್ಮಾಯಿ ಪರ ನಿಂತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ …

Read More »

ಪೋಸ್ಟ್‌ ಇಂಡಿಯಾ ಧ್ವಜಕ್ಕೆ ಜಿಎಸ್ಟಿ, ವಿತರಣಾ ಶುಲ್ಕವಿಲ್ಲ

ಹೊಸದಿಲ್ಲಿ: ಭಾರತದ ಸ್ವಾತ್ರಂತ್ಯೋತ್ಸವದ ದಿನಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ಹರ್‌ ಘರ್‌ ತಿರಂಗಾ ಅಭಿಯಾನ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಇಂಡಿಯಾ ಪೋಸ್ಟ್‌ (ಭಾರತೀಯ ಅಂಚೆ ಇಲಾಖೆ) ಹೊಸ ಆಫ‌ರ್‌ ನೀಡಿದೆ. ಇಂಡಿಯಾ ಪೋಸ್ಟ್‌ ಮೂಲಕ ತ್ರಿವರ್ಣ ಧ್ವಜವನ್ನು ಮಾರಾಟ ಮಾಡಲು ಇಲಾಖೆ ಮುಂದಾಗಿದೆ. ಜಿಎಸ್‌ಟಿ ಶುಲ್ಕವಿಲ್ಲದೆ ಈ ಧ್ವಜವನ್ನು ಖರೀದಿಸಬಹುದಾಗಿದೆ. ಅಲ್ಲದೆ, ತಮ್ಮ ವೆಬ್‌ಸೈಟ್‌ನಲ್ಲಿ ಖರೀದಿಸಲಾಗುವ ಈ ಧ್ವಜವನ್ನು ಯಾವುದೇ ವಿತರಣಾ ಶುಲ್ಕ ಇಲ್ಲದೇ (ಡಿಲಿವರಿ ಚಾರ್ಜಸ್‌) ಗ್ರಾಹಕರ ವಿಳಾಸಕ್ಕೆ ತಲುಪಿಸಲಾಗುವುದು …

Read More »

ಗ್ರಾಮ ಪಂಚಾಯಿತಿ ಸಾರಾಪುರ ಇವರ ವತಿಯಿಂದ ಸರಪುರ್ ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಾರಾಪುರ ಗ್ರಾಮದಲ್ಲಿ ನವ ಕರ್ನಾಟಕ ಮಾನವ ಹಕ್ಕುಗಳ ಮತ್ತು ಕಾರ್ಮಿಕರ ಕ್ಷೇಮಾಭಿವೃದ್ಧಿ ಸಮಿತಿ ತಾಲೂಕಾ ಘಟಕ ಹುಕ್ಕೇರಿ ಮತ್ತು ಗ್ರಾಮ ಪಂಚಾಯಿತಿ ಸಾರಾಪುರ ಇವರ ವತಿಯಿಂದ ಸರಪುರ್ ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿತ್ತು ಘಟಪ್ರಭಾದ ಮೆಡಿಕಲ್ ಕಾಲೇಜಿನ ಪ್ರಿನ್ಸಿಪಲ್ರಾದ ಡಾಕ್ಟರ್ ಜೆಕೆ ಶರ್ಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಆಯುರ್ವೇದವು ಪ್ರಾಚೀನ ಕಾಲದಿಂದ ಬಂದಿರುವಂತ ಸಂಗತಿ ಈಗಲೂ ಕೂಡ ಅತ್ಯಂತ ಪ್ರಭಾವ ಶಕ್ತಿಯಾಗಿ ಈ …

Read More »

ಕಾಮಗಾರಿ ಪೂರ್ಣಗೊಂಡ್ರೆ ಹೂವಿನ ಮಾಲೆ ಹಾಕುವೆ, ಇಲ್ಲದಿದ್ದರೆ ಬೂಟ್ ನಲ್ಲಿ ಹೊಡೆಯುವೆ: ಉಮೇಶ್ ಕತ್ತಿ

ವಿಜಯಪುರ: ವಿಜಯಪುರ ತಾಲೂಕಿನ ಬುರಣಾಪುರ ಬಳಿ ಸಚಿವ ಉಮೇಶ್ ಕತ್ತಿ ಅವರು ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ವೀಕ್ಷಿಸಿದ್ದಾರೆ. ಕಾಮಗಾರಿ ವೀಕ್ಷಣೆಯ ವೇಳೆ ಅವರು ಉಡಾಫೆ ಮಾತುಗಳನ್ನಾಡಿದ್ದಾರೆ. ಹಾಸ್ಯ ಮಾಡುವ ಭರದಲ್ಲಿ ಎಡವಟ್ಟಿನ ಮಾತನಾಡಿ ಅಧಿಕಾರಿಗೆ ಬೂಟಿನಲ್ಲಿ ಹೊಡೆಯುತ್ತೇನೆ ಎಂದು ಹೇಳಿದ್ದಾರೆ.   ಕಾಮಗಾರಿ ವೀಕ್ಷಿಸಿದ ಸಚಿವರು, ವಿಮಾನ ನಿಲ್ದಾಣ ಕಾಮಗಾರಿ ಯಾವಾಗ ಮುಗಿಯುತ್ತದೆ ಎಂದು ಲೋಕೋಪಯೋಗಿ ಇಲಾಖೆ ಎಇಇಗೆ ಪ್ರಶ್ನಿಸಿದ್ದಾರೆ. ಡಿಸೆಂಬರ್ ಒಳಗೆ ಕಾಮಗಾರಿ ಮುಗಿಯಲಿದೆ ಎಂದು ಎಇಇ ಹೇಳಿದ್ದಾರೆ. …

Read More »

9 ವರ್ಷಗಳಲ್ಲಿ 6 ಸರ್ಕಾರ, ಇದು ನಮ್ಮ ಬಿಹಾರ: ಪ್ರಶಾಂತ್ ಕಿಶೋರ

ಕಾಂಗ್ರೆಸ್ ಪಕ್ಷದ ಆಫರ್ ತಿರಸ್ಕರಿಸಿದ ಬಳಿಕ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಮುಂದಿನ ನಡೆ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿತ್ತು. ತಮ್ಮ ಮುಂದಿನ ರಾಜಕೀಯ ಹೆಜ್ಜೆ ಬಿಹಾರದಿಂದಲೇ ಆರಂಭ ಎಂಬರ್ಥದಲ್ಲಿ ಈ ಹಿಂದೆ ಟ್ವೀಟ್ ಮಾಡಿದ್ದರು. ಸದ್ಯ ಬಿಹಾರ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರಶಾಂತ್ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ 9 ವರ್ಷಗಳಲ್ಲಿ 6 ಸರ್ಕಾರ, ಇದು ನಮ್ಮ ಬಿಹಾರ, ಇನ್ನಾದರೂ ಸ್ಥಿರ ಸರ್ಕಾರ ಸಿಗುವಂತಾಗಲಿ ಎಂದು ಶುಭ ಹಾರೈಸಿದ್ದಾರೆ. …

Read More »

ಯಶವಂತಪುರದಿಂದ ಬೆಳಗಾವಿಗೆ ಪ್ರತಿದಿನ ವಿಶೇಷ ರೈಲು

ಬೆಂಗಳೂರು,ಆಗಸ್ಟ್‌ 10: ಪ್ರತಿದಿನ ಒಂದು ಬಾರಿ ಬೆಂಗಳೂರಿನಿಂದ ಬೆಳಗಾವಿ ಮಧ್ಯೆ ಸೂಪರ್‌ ಫಾಸ್ಟ್‌ ವಿಶೇಷ ರೈಲನ್ನು ಓಡಿಸಲು ನೈರುತ್ಯ ರೈಲ್ವೆ ಇಲಾಖೆ ನಿರ್ಧರಿಸಿದೆ. ಕೃಷ್ಣಾ ಜನ್ಮಾಷ್ಟಾಮಿ, ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣೇಶ ಚತುರ್ಥಿ ಅಂಗವಾಗಿ ಈ ಸೂಪರ್‌ ಫಾಸ್ಟ್‌ ವಿಶೇಷ ರೈಲುಗಳ ಸೇವೆ ಓದಗಿಸಲು ನೈರುತ್ಯ ರೈಲ್ವೆ ಮುಂದಾಗಿದೆ. ಆಗಸ್ಟ್‌ 12ರಂದು ರಾತ್ರಿ 9.30ಕ್ಕೆ ಯಶವಂತಪುರದಿಂದ ಹೊರಡಲಿರುವ ಈ ರೈಲು ಮಾರನೇ ದಿನ ಬೆಳಗಾವಿಗೆ 8.25ಕ್ಕೆ ತಲುಪಲಿದೆ. ಯಶವಂತಪುರ- ಬೆಳಗಾವಿ …

Read More »

1 ವರ್ಷದಲ್ಲಿ 12 ಬಾರಿ ದೆಹಲಿ ಪ್ರವಾಸ; ಸಂತೋಷ ಕೂಟಕ್ಕೆ ಸಂತೋಷಪಡಿಸುವ ಬೊಮ್ಮಾಯಿ ಪ್ರಯತ್ನ ವಿಫಲ; ಸಿಎಂ ಬದಲಾವಣೆ ಬಗ್ಗೆ ಮತ್ತೆ ಪ್ರಸ್ತಾಪಿಸಿದ ಕಾಂಗ್ರೆಸ್

ಬೆಂಗಳೂರು: ಸಿಎಂ ಬದಲಾವಣೆ ಕುರಿತು ರಾಜ್ಯ ಕಾಂಗ್ರೆಸ್ ಘಟಕ ನಿನ್ನೆ ಮಾಡಿದ್ದ ಟ್ವೀಟ್ ಭಾರಿ ಚರ್ಚೆಗೆ ಗ್ರಾಸವಾಗಿರುವಾಗಲೇ ಕಾಂಗ್ರೆಸ್ ಮತ್ತೆ ಸಿಎಂ ಬದಲಾವಣೆ ಟ್ವೀಟ್ ಮಾಡಿದೆ. ಬಿಜೆಪಿ ಹೈಕಮಾಂಡ್ ಗೆ ಕರ್ನಾಟಕದ ಸಿಎಂಗಳೆಂದರೆ ಗೊಂಬೆಗಳಿದ್ದಂತೆ ಎಂದು ಲೇವಡಿ ಮಾಡಿದೆ.   ಬಿ.ಎಸ್.ಯಡಿಯೂರಪ್ಪ ಅವರನ್ನು ಸರ್ಕಾರದ ಎರಡನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದ ಸಂದರ್ಭದಲ್ಲೇ ಕಣ್ಣೀರು ಹಾಕಿಸಿ ಕಳಿಸಲಾಗಿತ್ತು. ಈಗ ಬೊಮ್ಮಾಯಿ ಅವರನ್ನು 1ನೇ ವಾರ್ಷಿಕೋತ್ಸವದ ಹೊತ್ತಲ್ಲಿ ಕೆಳಗಿಳಿಸುವ ವೇದಿಕೆ ಸಜ್ಜಾಗುತ್ತಿದೆ. 1 ವರ್ಷದಲ್ಲಿ …

Read More »

(ಎಂಜಿಎನ್‌ಆರ್‌ಇಜಿಎಸ್‌)ಗೆ ಹೆಚ್ಚುವರಿಯಾಗಿ 15 ಸಾವಿರ ಕೋಟಿ ರೂ. ನೀಡಲು ಕೇಂದ್ರ ಸರ್ಕಾರ ಚಿಂತನೆ

ನವದೆಹಲಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ಎಂಜಿಎನ್‌ಆರ್‌ಇಜಿಎಸ್‌)ಗೆ ಹೆಚ್ಚುವರಿಯಾಗಿ 15 ಸಾವಿರ ಕೋಟಿ ರೂ. ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಖಾತೆಯಿಂದ ಹೆಚ್ಚುವರಿಯಾಗಿ ಶೇ.20 ಮೊತ್ತ ನೀಡಬೇಕು ಎಂದು ಕೋರಿಕೆ ಸಲ್ಲಿಕೆಯಾಗಿದ್ದು, ಅದಕ್ಕೆ ಸಮ್ಮತಿ ನೀಡುವ ಸಾಧ್ಯತೆಗಳು ಅಧಿಕವಾಗಿವೆ.   ಕರ್ನಾಟಕ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ಸೇರಿದಂತೆ ಹಲವು ಸರ್ಕಾರಗಳಿಂದಲೂ ಕೂಡ ಹೆಚ್ಚುವರಿ ಮೊತ್ತ ನೀಡುವ ಬಗ್ಗೆ ಒತ್ತಡಗಳು ಹೆಚ್ಚುತ್ತಿವೆ. ರಾಜ್ಯಗಳು 5,517.87 …

Read More »